Udayavni Special

ವರ್ಷದಿಂದ ಉದ್ಘಾಟನೆಯಾಗದೆ ಉಳಿದ ಇ-ಗ್ರಂಥಾಲಯ


Team Udayavani, Aug 5, 2021, 3:00 AM IST

ವರ್ಷದಿಂದ ಉದ್ಘಾಟನೆಯಾಗದೆ ಉಳಿದ ಇ-ಗ್ರಂಥಾಲಯ

ಕಾರ್ಕಳ:  ಸಾರ್ವಜನಿಕರ ಓದಿಗೆ ಕಾರ್ಕಳದ ಗಾಂಧಿ ಮೈದಾನ ಬಳಿ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಡಿಜಿಟಲ್‌ ಗ್ರಂಥಾಲಯ ಉದ್ಘಾಟನೆ ಯಾಗದೆ  ಹಾಗೆಯೇ ಉಳಿದುಕೊಂಡಿದೆ.

ಈಗಿರುವ ಗ್ರಂಥಾಲಯ ಕಟ್ಟಡದ ಬಳಿಯಲ್ಲೇ 1 ಕೋ.ರೂ. ವೆಚ್ಚದಲ್ಲಿ   ಸುಸಜ್ಜಿತ ಡಿಜಿಟಲ್‌ ಗ್ರಂಥಾಲಯ ವರ್ಷದ ಹಿಂದೆ ನಿರ್ಮಾಣವಾಗಿದೆ.  ದೇಶವ್ಯಾಪಿ  ಕೊರೊನಾ  ವ್ಯಾಪಿಸಿಕೊಂಡ  ಹಿನ್ನೆಲೆ, ಉಪಚುನಾವಣೆ ಇನ್ನಿತರ ಕಾರಣ ಗಳಿಂದ ಅದರ ಉದ್ಘಾಟನೆ ಈಡೇರಿರಲಿಲ್ಲ. ಅನಂತರ ಉದ್ಘಾಟನೆಗೆ ಸಿದ್ಧವಾಗುವ ಹೊತ್ತಲ್ಲೇ ಕೊರೊನಾ  2ನೇ ಅಲೆ ಕಾಡಿತ್ತು. ಇದರಿಂದ  ಮತ್ತೆ ವಿಘ್ನ ಎದುರಾಗಿತ್ತು. ಈ ಎಲ್ಲ  ಕಾರಣಕ್ಕೆ  ಉದ್ಘಾಟನೆ   ವಿಳಂಬವಾಗುತ್ತಲೇ ಬಂದಿದೆ. ಆದರೇ ಹಳೆ ಕಟ್ಟಡ ಶಿಥಿಲಗೊಂಡಿದ್ದರಿಂದ ಹೊಸ ಕಟ್ಟಡಕ್ಕೆ  ಸ್ಥಳಾಂತರವಾಗುವುದು ಅನಿವಾರ್ಯವಾಗಿದೆ.

ಹೈಟೆಕ್‌  ಮಾದರಿಯಲ್ಲಿ  ಡಿಜಿಟಲ್‌ ಗ್ರಂಥಾಲಯ ಕಟ್ಟಡ ನಿರ್ಮಾಣವಾಗಿದ್ದು,  ಎರಡು ಮಹಡಿ ಹೊಂದಿದೆ. ಮೇಲಿನ ಮಹಡಿಗೆ ಫ‌ರ್ನಿಚರ್‌ ವ್ಯವಸ್ಥೆ ಆಗಬೇಕಿದೆ. ಉಳಿದಂತೆ  ಡಿಜಿಟಲ್‌ ಕಂಪ್ಯೂಟರ್‌ ವ್ಯವಸ್ಥೆ ಸಹಿತ ಓದಿಗೆ ಎಲ್ಲ ರೀತಿಯಲ್ಲಿ ಅನುಕೂಲವಾಗುವ ರೀತಿಯಲ್ಲಿ  ಡಿಜಿಟಲ್‌ ಗ್ರಂಥಾಲಯ ಸಿದ್ಧಗೊಂಡಿದೆ.

ಟಿವಿ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳ ಹಾವಳಿಯಿಂದಾಗಿ ಪುಸ್ತಕ, ನಿಯತಕಾಲಿಕೆಗಳನ್ನು ಓದುವವರ ಸಂಖ್ಯೆ ಗಣನೀಯ ಕುಸಿದಿರುವ ಹೊತ್ತಲ್ಲಿಯೂ ಇಲ್ಲಿನ ಗ್ರಂಥಾಲಯಕ್ಕೆ  ಓದುಗರ ಕೊರತೆ ಕಡಿಮೆಯಾಗಿರಲಿಲ್ಲ.

ಕೆಲವು ಜಾಲತಾಣಗಳಲ್ಲಿ ಪುಸ್ತಕ ಮತ್ತು ನಾನಾ ಮಾಹಿತಿಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಅನುಕೂಲ ಇರುವುದರಿಂದ ಅನೇಕರು ಇ-ಪುಸ್ತಕಗಳನ್ನೇ ಅವಲಂಬಿಸುತ್ತಿದ್ದಾರೆ.

ಅತೀ ಹೆಚ್ಚು ಪುಸ್ತಕ ಸಂಗ್ರಹ :

ರಾಜ್ಯದಲ್ಲೇ ಹೆಚ್ಚು ಪುಸ್ತಕ ಹೊಂದಿ, ಮಾದರಿ  ಗ್ರಂಥಾಯಲಗಳ  ಎನ್ನುವ ಹೆಗ್ಗಳಿಕೆ ಉಡುಪಿ ಜಿಲ್ಲಾ ಗ್ರಂಥಾಲಯದ ಶಾಖೆಯಾದ ಕಾರ್ಕಳ ಗ್ರಂಥಾಲಯಕ್ಕಿದೆ. ಇಲ್ಲಿ ಈಗಿರುವುದು ತೀರಾ ಹಳೆಯ ಗ್ರಂಥಾಲಯ.  ಜಿಲ್ಲಾ ಗ್ರಂಥಾಲಯದ ಕಾರ್ಕಳ ಶಾಖೆಯಲ್ಲಿ ಈಗ  ಬರೋಬ್ಬರಿ  60 ಸಾವಿರ ಪುಸ್ತಕಗಳಿವೆ.  ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಈಗಿನ ಶಾಖಾ ಗ್ರಂಥಾಲಯವನ್ನು  ಮುಖ್ಯಮಂತ್ರಿಯಾಗಿದ್ದ ವೀರಪ್ಪ ಮೊಲಿ  1994ರಲ್ಲಿ  ಉದ್ಘಾಟಿಸಿದ್ದರು.

ಗ್ರಂಥಾಲಯ ಇಲಾಖೆ 3  ಪುಸ್ತಕಕ್ಕೆ 200  ರೂ.; 3 ಪುಸ್ತಕಕ್ಕೆ 250 ರೂ. ಶುಲ್ಕ ನಿಗದಿ  ಮಾಡಿದೆ. ಒಬ್ಬ ಚಂದಾದಾರ 14 ದಿನಗಳವರೆಗೆ ಪುಸ್ತಕ ತನ್ನ ಬಳಿ ಇಟ್ಟುಕೊಂಡು  ಹಿಂದಿರುಗಿಸಿ ಬೇರೆ ಪುಸ್ತಕ ಪಡೆಯ ಬಹುದಾಗಿದೆ.

ಗ್ರಂಥಾಲಯಕ್ಕೆ ಇಲಾಖೆ ಒಬ್ಬ ಖಾಯಂ :

ಗ್ರಂಥಾಲಯ ಅಧಿಕಾರಿ ಇದ್ದು ಇನ್ನಿಬ್ಬರು ಗೌರವಧನ ಆಧಾರದಲ್ಲಿ ಇರುವರು. ಅವರಲೊಬ್ಬರು ಸ್ವತ್ಛತ ಸಿಬಂದಿಯಾಗಿದ್ದು, ಗೌರವಧನ ಪಡೆಯುತ್ತಿರುವ ಸಿಬಂದಿಯ ವೇತನ ತೀರಾ ಕಡಿಮೆಯಿದೆ.  ಸ್ವತ್ಛತ ಸಿಬಂದಿಗೂ  ವೇತನ ಸಿಗುವುದು ಅತ್ಯಲ್ಪ.

ಗ್ರಂಥಾಲಯದಲ್ಲಿ ಹಲವು ಪುಸ್ತಕಗಳಿವೆ. ವಿವಿಧ ಸಂಘ- ಸಂಸ್ಥೆಗಳು ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡುತ್ತಿದ್ದು, ಈಗಿನ  ಕಟ್ಟಡ ಪುಸ್ತಕಗಳಿಂದ ತುಂಬಿ ತುಳುಕುತ್ತಿದೆ. ಕಟ್ಟಡ ಶಿಥಿಲಗೊಳ್ಳುತ್ತ ಬರುತ್ತಿದ್ದು, ಮಳೆ  ಬಂದಾಗ ನೀರು ಕಟ್ಟಡದೊಳಗೆ ಬಂದು ಅಮೂಲ್ಯ ಪುಸ್ತಕಕ್ಕೆ ಹಾನಿಯಾಗುತ್ತಿದೆ.

ಹೊಸ ಗ್ರಂಥಾಲಯ ಕಟ್ಟಡ ಸಹಿತ ಎಲ್ಲ ಕೆಲಸಗಳು ಪೂರ್ಣವಾಗಿ ಉದ್ಘಾಟನೆಯಷ್ಟೇ ಬಾಕಿಯಿದೆ.  ಈ ಹಿಂದೆ ಹಲವು ಬಾರಿ ಉದ್ಘಾಟನೆಗೆ ಸಿದ್ಧತೆ ನಡೆಸಿದರೂ ಒಂದಲ್ಲ ಒಂದು ಕಾರಣಕ್ಕೆ ಅದು ಮುಂದೆ ಹೋಗಿದೆ. -ನಳಿನಿ ಜಿ.ಐ. , ಮುಖ್ಯ ಗ್ರಂಥಾಲಯಾಧಿಕಾರಿ ಜಿಲ್ಲಾ  ಕೇಂದ್ರ ಗ್ರಂಥಾಲಯ ಉಡುಪಿ

 

-ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

ನನ್ನಲ್ಲಿನ ಪ್ರತಿ ರೂಪಾಯಿಯೂ ಅಮೂಲ್ಯ ಜೀವವನ್ನು ರಕ್ಷಿಸಲು ಕಾಯುತ್ತಿದೆ! ಸೋನು ಸೂದ್‌

ನನ್ನಲ್ಲಿನ ಪ್ರತಿ ರೂಪಾಯಿಯೂ ಅಮೂಲ್ಯ ಜೀವವನ್ನು ರಕ್ಷಿಸಲು ಕಾಯುತ್ತಿದೆ : ಸೋನು ಸೂದ್‌

ಡುಕಾಟಿ ಮಾನ್‌ಸ್ಟರ್‌ ಬೈಕ್‌ ಗಳ ಬುಕಿಂಗ್‌ ಶುರು : ಬೆಲೆ ಎಷ್ಟು ಗೊತ್ತಾ ?

ಡುಕಾಟಿ ಮಾನ್‌ಸ್ಟರ್‌ ಬೈಕ್‌ ಗಳ ಬುಕಿಂಗ್‌ ಶುರು : ಬೆಲೆ ಎಷ್ಟು ಗೊತ್ತಾ?

fbdfgtre

ಕೋವಿಡ್ : 8 ಜಿಲ್ಲೆಯಲ್ಲಿ ಶೂನ್ಯ ಪ್ರಕರಣ | ರಾಜ್ಯದಲ್ಲಿಂದು 677 ಹೊಸ ಕೇಸ್ ಪತ್ತೆ

dxfvsfrefe

“Me Too” ಆರೋಪಿ ಚರಣ್‍ಜಿತ್ ಮುಖ್ಯಮಂತ್ರಿ ಸ್ಥಾನಕ್ಕೆ ಅನರ್ಹ| ರಾಷ್ಟ್ರೀಯ ಮಹಿಳಾ ಆಯೋಗ

fgdfgdrt

ನಟಿ ಶಿಲ್ಪಾ ಶೆಟ್ಟಿ ಪತಿ ಕುಂದ್ರಾಗೆ ಸಿಕ್ತು ಜಾಮೀನು

CETಯ ಐದು ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಮೈಸೂರಿನ ಮೇಘನ್ ಗೆ ವೈದ್ಯನಾಗುವ ಅಸೆ

CETಯ ಐದು ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಮೈಸೂರಿನ ಮೇಘನ್ ಗೆ ವೈದ್ಯನಾಗುವ ಆಸೆ

ದಾಖಲೆ ಜಿಗಿತ ಕಂಡ ಬಾಂಬೆ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಮತ್ತೆ ಭಾರೀ ಕುಸಿತ

ದಾಖಲೆ ಜಿಗಿತ ಕಂಡ ಬಾಂಬೆ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಮತ್ತೆ ಭಾರೀ ಕುಸಿತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಢಿಕ್ಕಿ ಹೊಡೆದ ಕಾರು : ಮೂವರಿಗೆ ಗಾಯ

ಕೊಪ್ಪಲಂಗಡಿ : ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಢಿಕ್ಕಿ ಹೊಡೆದ ಕಾರು ; ಮೂವರಿಗೆ ಗಾಯ

Untitled-1

ಜಿಲ್ಲೆಯ ಬಹುತೇಕ ಪಶು ಆಸ್ಪತ್ರೆಗಳಲ್ಲಿ ಸಿಬಂದಿ ಕೊರತೆ

ಪರ್ಕಳ ರಾ.ಹೆ.169 ರಸ್ತೆ ಅವ್ಯವಸ್ಥೆ : ಭೂ ಸಂತ್ರಸ್ತರಿಗೆ ಶೀಘ್ರದಲ್ಲಿ ಪರಿಹಾರ ನೀಡಲು ಆಗ್ರಹ

ಪರ್ಕಳ ರಾ.ಹೆ.169 ರಸ್ತೆ ಅವ್ಯವಸ್ಥೆ : ಭೂ ಸಂತ್ರಸ್ತರಿಗೆ ಶೀಘ್ರದಲ್ಲಿ ಪರಿಹಾರ ನೀಡಲು ಆಗ್ರಹ

ನಾಡಿನ ವಿವಿಧೆಡೆ ಇಂದು ಅನಂತನ ಚತುರ್ದಶಿ ವ್ರತ

ನಾಡಿನ ವಿವಿಧೆಡೆ ಇಂದು ಅನಂತನ ಚತುರ್ದಶಿ ವ್ರತ

ಸಂಪರ್ಕ ರಸ್ತೆಯಿಲ್ಲದೆ ಬಳ‌ಕೆಯಾಗದ ಸೇತುವೆ

ಸಂಪರ್ಕ ರಸ್ತೆಯಿಲ್ಲದೆ ಬಳ‌ಕೆಯಾಗದ ಸೇತುವೆ

MUST WATCH

udayavani youtube

ಅರಮನೆ ಆವರಣದಲ್ಲಿ ಹೆಣ್ಣಾನೆಯ ರಂಪಾಟ, ಆನೆಯನ್ನು ನಿಯಂತ್ರಿಸಿದ ಅಭಿಮನ್ಯು

udayavani youtube

ನಿಮ್ಮ ಅಧಿಕಾರಿಗಳನ್ನು ಸಂಜೆಯೊಳಗೆ ಸಸ್ಪೆಂಡ್ ಮಾಡಿ : ಮಾಜಿ ಸ್ಪೀಕರ್​ ರಮೇಶ್​ ಕುಮಾರ್​

udayavani youtube

48 ಲಕ್ಷ ರೂ.ಗೆ ಗಣಪತಿಯ ‘ಲಡ್ಡು’ ಹರಾಜು

udayavani youtube

ಗಿಫ್ಟ್ ಕೊಡುವ ನೆಪದಲ್ಲಿ ಮಹಿಳಾ ಸಿಬ್ಬಂದಿಗೆ ಮಚ್ಚಿನಿಂದ ಹಲ್ಲೆ

udayavani youtube

ರಸ್ತೆ ದಾಟುವ ವೇಳೆ ಕಾರಿನಡಿ ಬಿದ್ದರೂ ಪವಾಡಸದೃಶವಾಗಿ ಪಾರಾದ ಬಾಲಕ

ಹೊಸ ಸೇರ್ಪಡೆ

ನನ್ನಲ್ಲಿನ ಪ್ರತಿ ರೂಪಾಯಿಯೂ ಅಮೂಲ್ಯ ಜೀವವನ್ನು ರಕ್ಷಿಸಲು ಕಾಯುತ್ತಿದೆ! ಸೋನು ಸೂದ್‌

ನನ್ನಲ್ಲಿನ ಪ್ರತಿ ರೂಪಾಯಿಯೂ ಅಮೂಲ್ಯ ಜೀವವನ್ನು ರಕ್ಷಿಸಲು ಕಾಯುತ್ತಿದೆ : ಸೋನು ಸೂದ್‌

ಡುಕಾಟಿ ಮಾನ್‌ಸ್ಟರ್‌ ಬೈಕ್‌ ಗಳ ಬುಕಿಂಗ್‌ ಶುರು : ಬೆಲೆ ಎಷ್ಟು ಗೊತ್ತಾ ?

ಡುಕಾಟಿ ಮಾನ್‌ಸ್ಟರ್‌ ಬೈಕ್‌ ಗಳ ಬುಕಿಂಗ್‌ ಶುರು : ಬೆಲೆ ಎಷ್ಟು ಗೊತ್ತಾ?

ಅಜ್ಜಿ ಆಪರೇಷನ್‌ ನೆರವಿಗೆ ಮೊಮ್ಮಗನ ಮೊರೆ

ಅಜ್ಜಿ ಆಪರೇಷನ್‌ ನೆರವಿಗೆ ಮೊಮ್ಮಗನ ಮೊರೆ

ಹೃದ್ರೋಗ ಆಸ್ಪತ್ರೆಗಳ ಸುಧಾರಣೆ ಅಗತ್ಯ: ಡಾ| ಜವಳಿ

ಹೃದ್ರೋಗ ಆಸ್ಪತ್ರೆಗಳ ಸುಧಾರಣೆ ಅಗತ್ಯ: ಡಾ| ಜವಳಿ

fbdfgtre

ಕೋವಿಡ್ : 8 ಜಿಲ್ಲೆಯಲ್ಲಿ ಶೂನ್ಯ ಪ್ರಕರಣ | ರಾಜ್ಯದಲ್ಲಿಂದು 677 ಹೊಸ ಕೇಸ್ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.