ಚುನಾವಣೆ: ಸಜ್ಜಾದ ಕಂಡ್ಲೂರು, ಗುಲ್ವಾಡಿ ಮತಗಟ್ಟೆಗಳು
Team Udayavani, Apr 23, 2019, 6:20 AM IST
ಬಸ್ರೂರು: ಇಂದು ನಡೆಯುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಗೆ ಕಂಡ್ಲೂರು, ಗುಲ್ವಾಡಿಯ ಮತಗಟ್ಟೆಗಳು ಸಜ್ಜಾಗಿ ನಿಂತಿವೆ.
ಕಂಡ್ಲೂರಿನಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉರ್ದು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ಕನ್ನಡ), ನೇತಾಜಿ ಹಿರಿಯ ಪ್ರಾಥಮಿಕ ಶಾಲೆ ಕಂಡ್ಲೂರು ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡು ವಾಲೂ¤ರುಗಳಲ್ಲಿ ಮತಗಟ್ಟೆಗಳನ್ನು ತೆರೆಯಲಾಗಿದೆ.
ಗುಲ್ವಾಡಿಯಲ್ಲಿ ಸರ್ವೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಗುಲ್ವಾಡಿ, ಸ. ಕಿರಿಯ ಪ್ರಾಥಮಿಕ ಶಾಲೆ ಸೌಕೂರು ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾವಿನಕಟ್ಟೆಗಳಲ್ಲಿ ಮತಗಟ್ಟೆಗಳನ್ನು ತೆರೆಯಲಾಗಿದೆ.
ಕಂಡ್ಲೂರು ಅತಿ ಸೂಕ್ಷ ಪ್ರದೇಶವಾದ್ದರಿಂದ ಪೋಲೀಸ್ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.