- Tuesday 10 Dec 2019
ಚರಂಡಿಯಲ್ಲಿ ವಿದ್ಯುತ್ ಕಂಬ ಅಳವಡಿಸಿದ ಮೆಸ್ಕಾಂ
Team Udayavani, May 15, 2019, 6:20 AM IST
ಅಜೆಕಾರು: ಕಾರ್ಕಳ ಪುರಸಭೆ ವ್ಯಾಪ್ತಿಯ ಭಾರತ್ ಬೀಡಿ ಕಾಲನಿಯಲ್ಲಿ ಮೆಸ್ಕಾಂ ಇಲಾಖೆಯವರು ನೀರು ಹರಿಯುವ ಚರಂಡಿಯ ನಡುವೆ ವಿದ್ಯುತ್ ಕಂಬ ಅಳವಡಿಸಿದ್ದು, ಇದೀಗ ಸ್ಥಳಿಯರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.
ಕಾಲನಿಯಲ್ಲಿ ಹಳೆ ವಿದ್ಯುತ್ ಕಂಬದ ಹತ್ತಿರ ಕಟ್ಟಡ ನಿರ್ಮಾಣಗೊಂಡಿದೆ. ಆ ಕಟ್ಟಡಕ್ಕೆ ವಿದ್ಯುತ್ ಕಂಬ ತೀರ ಹತ್ತಿರದಲ್ಲಿದ್ದು ಅಪಾಯ ಸಂಭಂವಿಸುವ ಸಾಧ್ಯತೆಗಳನ್ನು ಮನಗಂಡ ಮೆಸ್ಕಾಂ ಇಲಾಖೆಯವರು ಈಗ ಹೊಸ ಕಂಬವನ್ನು ಅಳವಡಿಸಿದ್ದಾರೆ.
ಆದರೆ ಹೊಸ ಕಂಬವನ್ನು ಮಳೆಗಾಲದಲ್ಲಿ ಮಳೆ ನೀರು ಹರಿಯುವ ಚರಂಡಿಯ ನಡುವೆ ಅಳವಡಿಸಿರುವುದರಿಂದ ಆ ಪರಿಸರದ ಮನೆಗಳ ಒಳಗೆ ಮಳೆ ನೀರು ನುಗ್ಗುವ ಸಂಭವ ಹೆಚ್ಚಾಗಿದೆ.
ಮುಂದಿನ ದಿನಗಳಲ್ಲಿ ಸ್ಥಳಿಯರಿಗೆ ಸಮಸ್ಯೆಗಳನ್ನು ತಂದೊಡ್ಡುವ ಸಂಭಾವ್ಯ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ಆದ್ದರಿಂದ ಈ ಕೂಡಲೇ ಅವೈಜ್ಞಾನಿಕವಾಗಿ ಅಳವಡಿಸಲಾಗಿರುವ ವಿದ್ಯುತ್ ಕಂಬವನ್ನು ಚರಂಡಿಯಿಂದ ತೆಗೆದು ಬೇರೆಡೆ ಹಾಕುವಂತೆ ಸ್ಥಳಿಯರು ಒತ್ತಾಯಿಸಿದ್ದಾರೆ.
ಈ ವಿಭಾಗದಿಂದ ಇನ್ನಷ್ಟು
-
ಪಡುಬಿದ್ರಿ:ಇಲ್ಲಿನ ಬೀಡು ಸಮೀಪದ ಜಾಗದಲ್ಲಿ ವಾಸಿಸುತ್ತಿದ್ದು ಅಲ್ಲಿಂದ ಸುಜ್ಲಾನ್ ಪುನರ್ವಸತಿ ಕಾಲೋನಿ ಸಮೀಪಕ್ಕೆ ಸ್ಥಳಾಂತರಗೊಂಡು ಕಳೆದ 6 ವರ್ಷಗಳಿಂದ...
-
ಅಜೆಕಾರು: ಹಿರ್ಗಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕ್ಕುದ ಕಟ್ಟೆಯಿಂದ ಕಾನಂಗಿ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ರಸ್ತೆ ಅಭಿವೃದ್ಧಿಗೆ...
-
ಕುಂದಾಪುರ: ಪುರಸಭೆ ವ್ಯಾಪ್ತಿಯಲ್ಲಿ 42 ಕೋ.ರೂ.ಗಳಲ್ಲಿ ಆರಂಭಿಸಿದ ಒಳಚರಂಡಿ ಯೋಜನೆ ಕಾಮಗಾರಿ ಸ್ಥಗಿತವಾಗಿದೆ. ಚರಂಡಿ ನೀರು ಹರಿಸಿ ಶುಚಿ ಮಾಡಲು ಬಾವಿಗಳಿಲ್ಲದ...
-
ಗಂಗೊಳ್ಳಿ: ಇಲ್ಲಿನ ಬೀಚ್ ಬಳಿ ಚರ್ಚ್ ರಸ್ತೆಗೆ ತಾಗಿಕೊಂಡಿರುವ ಮಡಿವಾಳರ ಕೆರೆ, ಗಂಗೊಳ್ಳಿಯ ಕಡಲ ಕಿನಾರೆಗಳು, ಸೇರಿದಂತೆ ರಸ್ತೆ ಬದಿಯ ಚರಂಡಿಗಳೆಲ್ಲ ಕಸ...
-
ವಿಶೇಷ ವರದಿ-ಉಡುಪಿ: ಅಸಮರ್ಪಕ ಚರಂಡಿ, ಹದಗೆಟ್ಟ ರಸ್ತೆ, ಅಲ್ಲಲ್ಲಿ ಕಾರಂಜಿಯಂತೆ ಉಕ್ಕಿ ಹರಿಯುತ್ತಿರುವ ಕೊಳಚೆ ನೀರಿನ ಮ್ಯಾನ್ಗಳು, ಕಿ.ಮೀ. ಒಂದರಂತೆ ಅಗೆದ ರಸ್ತೆ,...
ಹೊಸ ಸೇರ್ಪಡೆ
-
ಗೋವಾ: ಕೊಂಕಣಿ ಸಾಹಿತಿ, ಪದ್ಮಶ್ರೀ ಡಾ| ಸುರೇಶ ಗುಂಡು ಅಮೋಣಕರ (86) ಡಿ. 8ರಂದು ಗೋವಾದ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರು ಜೈನ ಕಥಾ ಸಂಗ್ರಹ, ಜಾತಕ ಕಥೆ, ಬೌದ್ಧ ಧಮ್ಮಪದ,...
-
ಬೆಳ್ತಂಗಡಿ: ಕಲಾವಿದರು ಮತ್ತು ಸಹೃದಯಿಗಳಿದ್ದಾಗ ಕಲಾಪ್ರಕಾರಗಳು ಜೀವಂತವಾಗಿ ಉಳಿಯಬಲ್ಲವು. ಕುವೆಂಪು, ಕಾರಂತರಂಥ ಮಹಾಕವಿಗಳು ಯುವ ಪೀಳಿಗೆಯ ಮನದಲ್ಲಿ ಉಳಿಯುಂತಾಗಲು...
-
ಮುಂಬಯಿ: ಭಾರತೀಯ ಸ್ಟೇಟ್ ಬ್ಯಾಂಕ್ನ ಸಾಲಗಳ ಮೇಲಿನ ಬಡ್ಡಿ ದರ ಡಿ.10ರಿಂದ ಇಳಿಕೆಯಾಗಲಿದೆ. ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧಾರಿತದಲ್ಲಿ (ಎಂಸಿಎಲ್ಆರ್)...
-
ಮಂಗಳೂರು: ಇಲ್ಲಿನ ಸಗಟು ಮಾರುಕಟ್ಟೆಗೆ ದೇಶೀಯ ಈರುಳ್ಳಿ ಸೋಮವಾರ ಆವಕವಾಗಿದ್ದು, ಬೆಲೆ ತುಸು ಇಳಿದಿದೆ. ಈಜಿಪ್ಟ್ ಈರುಳ್ಳಿಯೂ ಬಂದಿದ್ದು, ಬೆಲೆಯೂ ಕಡಿಮೆಯಿದೆ....
-
ಕಾಸರಗೋಡು: ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾರಂಭಗೊಂಡು ಒಂದು ವರ್ಷವಾಗಿದ್ದು, ಈ ಅವಧಿಯಲ್ಲಿ ವಿಮಾನ ನಿಲ್ದಾಣದ ಮೂಲಕ ಅಕ್ರಮವಾಗಿ ಸಾಗಾಟ...