ಶಿರ್ವದ ಗೂಡ್ಸ್‌ ಟೆಂಪೋಚಾಲಕನ ಪರಿಸರ ಪ್ರೇಮ


Team Udayavani, Jan 21, 2020, 5:15 AM IST

2001SHIRVA3

ಶಿರ್ವ: ಸ್ವಚ್ಛ ಶಿರ್ವ-ಸುಂದರ ಶಿರ್ವ ಪರಿಕಲ್ಪನೆಯಡಿಯದಲ್ಲಿ ಶಿರ್ವದ ಗೂಡ್ಸ್‌ ಟೆಂಪೋ ಚಾಲಕ-ಮಾಲಕ ಜಾಫರ್‌ ಸಾಹೇಬ್‌ಶಿರ್ವ ಮಂಚಕಲ್‌ ಪೇಟೆಯ ಮಧ್ಯಭಾಗದಲ್ಲಿರುವ ರಸ್ತೆ ವಿಭಾಜಕದಲ್ಲಿ ಮಳೆಗಾಲದಲ್ಲಿ ಮಣ್ಣು ತುಂಬಿಸಿ ಸುಮಾರು 300 ಮೀ.ಜಾಗದಲ್ಲಿ ಆಕರ್ಷಕ ಹೂವಿನ ಗಿಡಗಳನ್ನು ಬೆಳೆಸಿ,ನೀರುಣಿಸಿ ಪರಿಸರ ಪ್ರೇಮ ಮೆರೆದಿದ್ದಾರೆ.

ಮಳೆಗಾಲದಲ್ಲಿ ರಸ್ತೆ ವಿಭಾಜಕದ ಮಧ್ಯೆ ಹಾಕಿದ ಮಣ್ಣಿನಲ್ಲಿ ಹುಲ್ಲು ಕಸಕಡ್ಡಿ ಬೆಳೆದಿತ್ತು. ಇದನ್ನು ನೋಡಿದ ಜಾಫರ್‌ ಸಾಹೇಬರು ತನ್ನ ಬಿಡುವಿನ ವೇಳೆಯಲ್ಲಿ ಟೆಂಪೋ ಸ್ಟಾಂಡ್‌ನ‌ ಎದುರುಗಡೆಯ ರಸ್ತೆ ವಿಭಾಜಕದಲ್ಲಿ ಮಣ್ಣು ತುಂಬಿಸಿ ಮಳೆಗಾಲದಲ್ಲಿ ಹೂವಿನ ಗಿಡ ನೆಟ್ಟಿದ್ದಾರೆ. ಅಲ್ಲಲ್ಲಿ ಬಿಸಾಡಿದ ಪ್ಲಾಸ್ಟಿಕ್‌ ಬಾಟಲ್‌ಗ‌ಳನ್ನು ಹೆಕ್ಕಿ ತಂದು ನೀರು ತುಂಬಿಸಿ ಮುಚ್ಚಳಕ್ಕೆ ತೂತು ಕೊರೆದು ಕೋಲಿನ ಸಹಾಯದಿಂದ ಗಿಡಗಳ ಬುಡದಲ್ಲಿ ಕಟ್ಟಿ ಹನಿ ನೀರುಹಾಯಿಸುತ್ತಿದ್ದಾರೆ. ಇದರಿಂದಾಗಿ ಬಿರು ಬಿಸಿಲಿನ ಪೇಟೆಯ ವಾತಾವರಣದಲ್ಲಿ ಡಾಮಾರು ರಸ್ತೆಯ ಬದಿಯಲ್ಲಿಯೂ ಗಿಡಗಳ ಬುಡದಲ್ಲಿ ತೇವಾಂಶ ಕಾಯ್ದುಕೊಂಡಿದ್ದು ಹಸುರಾಗಿವೆ.

ಶಿರ್ವ ಮಂಚಕಲ್‌ ಪೇಟೆಯ ಮಧ್ಯೆ ಹಾದು ಹೋಗುವ ಆತ್ರಾಡಿ-ಶಿರ್ವ-ಬಜ್ಪೆ ರಾಜ್ಯ ಹೆದ್ದಾರಿಯಲ್ಲಿ ಶಿರ್ವ ಸಮುದಾಯ ಆರೋಗ್ಯ ಕೇಂದ್ರದಿಂದ ಪೆಟ್ರೋಲ್‌ ಪಂಪ್‌ನವರೆಗೆ ರಸ್ತೆ ವಿಭಾಜಕದೊಂದಿಗೆ ದ್ವಿಪಥ ರಸ್ತೆ ನಿರ್ಮಾಣಗೊಂಡು ವರುಷಗಳೇ ಕಳೆದಿವೆ.ಆದರೆ ಲೋಕೋಪಯೋಗಿ ಇಲಾಖೆ ರಸ್ತೆ ವಿಭಾಜಕದಲ್ಲಿ ಹಳೆಯ ರಸ್ತೆಯ ಡಾಮರು,ಮಣ್ಣು ತುಂಬಿಸಿ ಕಾಮಗಾರಿಯನ್ನು ಪೂರ್ತಿಗೊಳಿಸದೆ ಅರ್ಧಂಬರ್ಧ ನಡೆಸಿದ್ದು , ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.

ಸುಮಾರು ಒಂದು ಕಿ.ಮೀ. ಉದ್ದದ ರಸ್ತೆ ವಿಭಾಜಕದಲ್ಲಿ ಹಸಿರು ಕಂಗೊಳಿಸಿವುದು ಕೇವಲ 300 ಮೀ.ನಲ್ಲಿ ಮಾತ್ರ.ಮಳೆಗಾಲದಲ್ಲಿ ಶಿರ್ವ ಲಯನ್ಸ್‌ ಕ್ಲಬ್‌ನವರು ಸಮುದಾಯ ಆರೋಗ್ಯ ಕೇಂದ್ರದಿಂದ ಕಾಪು ಸರ್ಕಲ್‌ನವರೆಗೆ ಗಿಡ ನೆಟ್ಟಿದ್ದರು ಆದರೆ ನೀರಿನ ಪೋಷಣೆಯಿಲ್ಲದೆ ಗಿಡಗಳು ಸತ್ತಿವೆ.

ಜಾಫರ್‌ ಸಾಹೇಬರ ಪರಿಸರ ಕಾಳಜಿ ಇತರರಿಗೆ ಮಾದರಿಯಾಗಿದೆ.ಅವರಂತೆ ಸಂಘ ಸಂಸ್ಥೆಗಳು, ಪರಿಸರ ಪ್ರೇಮಿಗಳು,ಸ್ಥಳಿಯಾಡಳಿತ,ರಸ್ತೆಬದಿಯ ಅಂಗಡಿಗಳ ಮಾಲೀಕರು ರಸ್ತೆ ವಿಭಾಜಕದಲ್ಲಿ ಹಸುರು ಗಿಡ ನೆಟ್ಟು ಬೆಳೆಸಿ ಪೋಷಿಸಿದಾಗ ಸ್ವತ್ಛ ಸುಂದರ ಪರಿಸರ ವಾಗುವುದರಲ್ಲಿ ಸಂಶಯವಿಲ್ಲ.
-ಆಲ್ವಿನ್‌ ದಾಂತಿ ಪೆರ್ನಾಲ್‌,ಶಿಕ್ಷಕರು.,

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ ಅಡಿಗೆ ಸಿಲುಕಿದ ಬೈಕ್; ಯಕ್ಷಗಾನ ಕಲಾವಿದ ಸ್ಥಳದಲ್ಲೇ ಮೃತ್ಯು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.