ಚಿಕ್ಕಲ್‌ಬೆಟ್ಟು : ಭತ್ತದ ಬೆಳೆಗೆ ಕಾಡುಕೋಣ ಹಾವಳಿ
Team Udayavani, Mar 24, 2018, 7:05 AM IST
ಅಜೆಕಾರು: ಹಿರ್ಗಾನ ಗ್ರಾ.ಪಂ. ವ್ಯಾಪ್ತಿಯ ಚಿಕ್ಕಲ್‌ಬೆಟ್ಟು ಪ್ರದೇಶದಲ್ಲಿ ಕಾಡುಕೋಣಗಳ ಹಾವಳಿ ವಿಪರೀತ ವಾಗಿದ್ದು, ಸುಮಾರು 20 ಎಕರೆ ಭತ್ತ ಬೆಳೆ ಸಂಪೂರ್ಣ ಹಾನಿಯಾಗಿದೆ.
ಪೈರು ಕಟಾವು ಮಾಡದೇ ಬಿಟ್ಟ ರೈತರು ಚಿಕ್ಕಲ್‌ಬೆಟ್ಟುವಿನಲ್ಲಿ ಹಿಂದೆ ಸುಮಾರು 200 ಎಕ್ರೆಯಷ್ಟು ಭತ್ತ ಬೆಳೆಯುತ್ತಿದ್ದು, ಈಗ 25 ಎಕ್ರೆ ಗದ್ದೆಯಲ್ಲಿ ಮಾತ್ರ ಕೃಷಿ ಮಾಡಲಾಗುತ್ತದೆ. ಆದರೆ ಗದ್ದೆಯ ಬೆಳೆ ಬಹುತೇಕ ಕಾಡುಕೋಣ ಸೇರಿದಂತೆ ಇತರ ಕಾಡುಪ್ರಾಣಿಗಳ ಪಾಲಾಗಿದೆ. ಎಕರೆಗೆ ಸುಮಾರು 20 ಕ್ವಿಂಟಾಲ್‌ನಷ್ಟು ಬೆಳೆ ಇಲ್ಲಿ ಬರುತ್ತಿದ್ದರೂ, ಕಾಡುಪ್ರಾಣಿಗಳ ಹಾವಳಿಯಿಂದ 2 ಕ್ವಿಂ.ಭತ್ತದ ಆಕಾಂಕ್ಷೆ ಇಲ್ಲದೆ ಪೈರು ಕಟಾವು ಮಾಡದೇ ರೈತರು ಹಾಗೆಯೇ ಬಿಟ್ಟಿದ್ದಾರೆ.
ಹಗಲಲ್ಲೇ ದಾಳಿ
ಬೆಳೆದು ನಿಂತ ಪೈರಿಗೆ ಹಗಲಲ್ಲೇ ದಾಳಿ ಇಡುವ ಕಾಡುಕೋಣಗಳನ್ನು ಓಡಿಸಲು ರೈತರು ಪ್ರಯತ್ನಿಸಿದರೂ ಆಗದೇ ಕೈಚೆಲ್ಲಿ ದ್ದಾರೆ. ಕೊಪ್ಪಳ, ಕುಲೇದು, ನಡಿಮಾರು ಪ್ರದೇಶಗಳಲ್ಲಿ ಹಾನಿ ಮಾಡುತ್ತಿದ್ದ ಕಾಡುಕೋಣಗಳು ಈ ಬಾರಿ ಪ್ರಥಮ ವಾಗಿ ಕೃಷ್ಣಬೆಟ್ಟು ಪ್ರದೇಶಕ್ಕೂ ಲಗ್ಗೆ ಇಟ್ಟು ಭತ್ತದ ಬೆಳೆ ನೆಲಸಮ ಮಾಡಿವೆ. ಗದ್ದೆ ಸಮೀಪದ ತೋಟಕ್ಕೂ ಲಗ್ಗೆ ಇಟ್ಟಿವೆ. ಕಾಡುಕೋಣಗಳ ದಾಳಿ ತಡೆಯಲು 8 ಅಡಿ ಎತ್ತರದ ತಂತಿ ಬೇಲಿ ಅಳವಡಿಸಿದ್ದರೂ ಪ್ರಯೋಜನವಾಗಿಲ್ಲ.
ಎಲ್ಲೆಲ್ಲಿ ಬೆಳೆ ಹಾನಿ?
ಚಿಕ್ಕಲ್‌ಬೆಟ್ಟು ಪ್ರದೇಶದ ಕೃಷ್ಣಬೆಟ್ಟುವಿನ ತಾರಾನಾಥ ಶೆಟ್ಟಿಯವರ 3 ಎಕ್ರೆ, ಕೃಷ್ಣಬೆಟ್ಟುವಿನ ಕುಟ್ಟಿ ಶೆಟ್ಟಿಯವರ 1.50 ಎಕ್ರೆ, ಶಿವರಾಯ ರಾವ್ ಅವರ 1 ಎಕ್ರೆ, ಸಂಜೀವ ಪೂಜಾರಿ ಕೊಪ್ಪಳ 1 ಎಕ್ರೆ, ಸುರೇಶ್ ಪೂಜಾರಿ ಚಿಕ್ಕಲ್‌ಬೆಟ್ಟು 1 ಎಕ್ರೆ, ಸರೋಜಿನಿ ಮಡಿವಾಳ 1 ಎಕ್ರೆ, ಶೀನ ನಾಯ್ಕ ನಡಿಮಾರು 1 ಎಕ್ರೆ, ಶಾಂಭವಿ ಶೆಟ್ಟಿ ಕುಲೇದು 0.50 ಎಕ್ರೆ, ಅಪ್ಪು ನಾಯ್ಕ ಕುಲೇದು 1 ಎಕ್ರೆ, ವಿಟuಲ್ ನಾಯ್ಕ ಕುಲೇದು 0.50 ಎಕ್ರೆ, ಗಣೇಶ್ ನಾಯ್ಕ ನಡಿಮಾರು 1 ಎಕ್ರೆ, ಗುಲಾಬಿ ಪೂಜಾರಿ ಕುಲೇದು 0.50 ಎಕ್ರೆ, ಕಿಟ್ಟಿ ಪೂಜಾರಿ ಕುಲೇದು 1 ಎಕ್ರೆ, ಗೋವಿಂದ ನಾಯ್ಕ ಕುಲೇದು 0.50 ಎಕ್ರೆ, ಸುಂದರ ನಾಯ್ಕ ಕುಲೇದು 0.50 ಎಕ್ರೆ, ಕಣಿಲ ದೇವದಾಸ ಶೆಟ್ಟಿ 0.50 ಎಕ್ರೆ, ಕಣಿಲ ಯೋಗಿಶ್ ಶೆಟ್ಟಿ 0.50 ಎಕ್ರೆ, ನಿತ್ಯಾನಂದ ನಾಯ್ಕ ನಡಿಮಾರು 0.50 ಎಕ್ರೆಯಷ್ಟು ಸಂಪೂರ್ಣ ಹಾನಿಗೀಡಾಗಿವೆ.
ಅಪಾರ ಹಾನಿಗೆ ಅಲ್ಪ ಪರಿಹಾರ
ಪ್ರಾಣಿಗಳ ಹಾವಳಿಯಿಂದ ಅಪಾರ ವಾದ ಬೆಳೆ ಹಾನಿಗೀಡಾದರೂ ಸಹ ಸರಕಾರದಿಂದ ಸಿಗುವ ಪರಿಹಾರ ಅತ್ಯಲ್ಪ. ಕಾಡುಪ್ರಾಣಿಗಳ ಹಾನಿಗೆ 8ರಿಂದ 10 ಸಾವಿರ ರೂ.ಗಳಷ್ಟು ಮಾತ್ರ ಪರಿಹಾರ ಸಿಗುತ್ತದೆ. ಅದೂ ಸಂಪೂರ್ಣ ಹಾನಿಗೀಡಾ ದರೆ ಮಾತ್ರ. ಇಲ್ಲದಿದ್ದರೆ 2, 3 ಸಾವಿರದಷ್ಟು ಮಾತ್ರ ಪರಿಹಾರ ಸಿಗುತ್ತದೆ.
ಶಾಶ್ವತ ಪರಿಹಾರ ಅಗತ್ಯ
ಕಾಡುಪ್ರಾಣಿಗಳ ಹಾವಳಿ ತಡೆಗೆ ಅರಣ್ಯ ಇಲಾಖೆ ಶಾಶ್ವತ ಮಾರ್ಗೋಪಾಯ ಕಂಡುಕೊಳ್ಳಬೇಕು. ರೈತನಿಗೆ ನೀಡುವ ಪರಿಹಾರ ಅತ್ಯಲ್ಪವಾಗಿದ್ದು, ಹಾನಿಗೀಡಾದಷ್ಟೇ ಮೌಲ್ಯದ ಪರಿಹಾರ ನೀಡುವಂತಾಗಬೇಕು.
– ಸಂತೋಷ್ ಕುಮಾರ್ ಶೆಟ್ಟಿ, ಅಧ್ಯಕ್ಷರು, ಹಿರ್ಗಾನ ಗ್ರಾ. ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜನರ ಸಮಸ್ಯೆಗೆ ತತ್ಕ್ಷಣ ಸ್ಪಂದನೆ: ಸ್ಥಳೀಯ ಅಧಿಕಾರಿಗಳಿಗೆ ಕೂರ್ಮಾರಾವ್ ಸೂಚನೆ
ಉದಯವಾಣಿ-ಎಂಐಟಿ ಮಳೆ ನೀರು ಕೊಯ್ಲು ಕಾರ್ಯಾಗಾರ: ಸಮಸ್ಯೆಗೆ ಮೊದಲೇ ಪರಿಹಾರ: ಡಾ| ರಾಣ ಕರೆ
ಮದುವೆ ಹಾಲ್ನಲ್ಲಿ ಕಣ್ಮರೆಯಾದ ಚಿನ್ನದ ಸರ ದೈವ ಸನ್ನಿಧಿಯಲ್ಲಿ ಪತ್ತೆ!
ಅಗರಬತ್ತಿ ಉದ್ಯಮಕ್ಕೆ ಅಗತ್ಯದ ವಿನಾಯಿತಿ: ಶೋಭಾ ಕರಂದ್ಲಾಜೆ
ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ: ಉಜ್ವಲ ಭವಿಷ್ಯಕ್ಕಾಗಿ T.A.T