ಶಿರ್ವದ ಫಾದರ್‌ ಆತ್ಮಹತ್ಯೆ ಪ್ರಕರಣ; ಮುದರಂಗಡಿ ಗ್ರಾ.ಪಂ. ಅಧ್ಯಕ್ಷ ಸೆರೆ

ಆರೋಪಿಗೆ ಮುಳುವಾದ ವಿಧಿವಿಜ್ಞಾನ ವರದಿ

Team Udayavani, Feb 27, 2020, 1:38 AM IST

ಶಿರ್ವ: ಸುಮಾರು ನಾಲ್ಕು ತಿಂಗಳ ಹಿಂದೆ ಇಲ್ಲಿನ ಡಾನ್‌ಬಾಸ್ಕೋ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾಗಿದ್ದ ಫಾ| ಮಹೇಶ್‌ ಡಿ’ ಸೋಜಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿ ವಿಧಿವಿಜ್ಞಾನ ವರದಿ ಆಧರಿಸಿ ಓರ್ವನನ್ನು ಬಂಧಿಸುವ ಮೂಲಕ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಇವರಿಗೆ ಜೀವ ಬೆದರಿಕೆ, ಆತ್ಮಹತ್ಯೆಗೆ ದುಷೆøàರಣೆ ನೀಡಿದ ಆರೋಪದಲ್ಲಿ ಪಿಲಾರು ಪೆರ್ನಾಲಿನ ನಿವಾಸಿ, ಮುದರಂಗಡಿ ಗ್ರಾಮ ಪಂಚಾಯತ್‌ ಅಧ್ಯಕ್ಷ ಡೇವಿಡ್‌ ಡಿ’ ಸೋಜಾ (49) ಎಂಬಾತನನ್ನು ಪ್ರಕರಣದ ತನಿಖಾಧಿಕಾರಿಯಾಗಿರುವ ಕಾಪು ಸಿಐ ಮಹೇಶ್‌ ಪ್ರಸಾದ್‌ ಅವರ ನಿರ್ದೇಶನದಂತೆ ಶಿರ್ವ ಠಾಣಾಧಿಕಾರಿ ಶ್ರೀಶೈಲಂ ಅವರ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾ. 11ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಫಾ| ಮಹೇಶ್‌ ಡಿ’ ಸೋಜಾ ಅವರು 2019ರ ಅ. 11ರಂದು ರಾತ್ರಿ ತನ್ನ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿ ಕೊಂಡಿದ್ದರು. ಇದಕ್ಕೆ ಡೇವಿಡ್‌ ಡಿ’ ಸೋಜಾನ ದುಷೆøàರಣೆ ಹಾಗೂ ಬೆದರಿಕೆಯೇ ಕಾರಣ ಎಂಬುದು ಫಾ| ಮಹೇಶ್‌ಅವರ ಮೊಬೈಲ್‌ನ ವಿಧಿವಿಜ್ಞಾನ ಪರೀಕ್ಷೆಯ ವರದಿಯಿಂದ ತಿಳಿದು ಬಂದಿದೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.

ತನಿಖೆಯ ವಿವರ
ಫಾದರ್‌ ಮಹೇಶ್‌ ಡಿ’ ಸೋಜಾ ಅವರ ಮೊಬೈಲ್‌ನಿಂದ ಡೇವಿಡ್‌ನ‌ ಪತ್ನಿ ಪ್ರಿಯಾ ಡಿ’ ಸೋಜಾರಿಗೆ ಮೆಸೇಜ್‌ ಹೋಗಿತ್ತು. ಇದನ್ನು ಆಕ್ಷೇಪಿಸಿ ಡೇವಿಡ್‌ ಮೊಬೈಲ್‌ ಮೂಲಕವೇ ಮಹೇಶ್‌ ಡಿ’ಸೋಜಾರಿಗೆ ಹಾಗೂ ಅವರ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದ. ಅಲ್ಲದೆ ಅರ್ಧ ಗಂಟೆಯ ಒಳಗೆ ಚರ್ಚ್‌ಗೆ ನುಗ್ಗಿ ನಿನ್ನನ್ನು ಕತ್ತರಿಸಿ ಹಾಕುತ್ತೇನೆ, ಜನ ಸೇರಿಸಿ ಮರ್ಯಾದೆ ತೆಗೆಯುತ್ತೇನೆ ಎಂದೆಲ್ಲ ಬೆದರಿಕೆ ಒಡ್ಡಿದ್ದ. ಜತೆಗೆ ಇವತ್ತೇ ನೇಣು ಬಿಗಿದುಕೊಳ್ಳಬೇಕು ಎಂದು ಆತ್ಮಹತ್ಯೆ ಮಾಡಿಕೊಳ್ಳಲು ದುಷೆøàರಣೆ ನೀಡಿದ್ದಾನೆ. ಇದೇ ಕಾರಣದಿಂದ ಮಹೇಶ್‌ ಡಿ’ ಸೋಜಾ ಅವರು ಶಾಲೆಯ ಪ್ರಾಂಶುಪಾಲರ ಕೊಠಡಿಯ ಸೀಲಿಂಗ್‌ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೆ ಆರೋಪಿಯು ಘಟನೆ ಬಳಿಕ ಈ ಪ್ರಕರಣಕ್ಕೆ ಸಂಬಂಧಪಟ್ಟು ತನ್ನ ಪತ್ನಿಯ ಮೊಬೈಲ್‌ನಲ್ಲಿದ್ದ ಸಂದೇಶಗಳನ್ನು ಅಳಿಸಿ ಸಾಕ್ಷ್ಯ ನಾಶ ಮಾಡಿದ್ದಾನೆ ಎಂಬುದು ತನಿಖೆಯಿಂದ ತಿಳಿದು ಬಂದಿರುವುದಾಗಿ ತನಿಖಾಧಿಕಾರಿ ತಿಳಿಸಿದ್ದಾರೆ.

ಆರಂಭದಲ್ಲೇ ಆರೋಪಿ ಬಗ್ಗೆ ಅನುಮಾನ ಮೂಡಿದ್ದ ರಿಂದ ಮೊಬೈಲ್‌ ಫೋನ್‌ ಹಾಗೂ ಇತರ ಕೆಲವು ಸೊತ್ತುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸ ಲಾಗಿತ್ತು. ಅದರ ವರದಿಯಲ್ಲಿ ಆರೋಪಿಯು ಫಾದರ್‌ಗೆ ಬೆದರಿಕೆ ಹಾಕಿದ್ದ ವಿಷಯಗಳೆಲ್ಲವೂ ದಾಖಲಾಗಿವೆೆ.

ಆರೋಪಿ ಹಲವರ ಮೇಲೆ ಕೇಸು ದಾಖಲಿಸಿದ್ದ
ಇದೇ ಪ್ರಕರಣದಲ್ಲಿ ಆರೋಪಿಯೂ ಕೆಲವರ ವಿರುದ್ಧ ಕೇಸು ದಾಖಲಿಸಿದ್ದಾನೆ. ಫಾದರ್‌ ಆತ್ಮಹತ್ಯೆ ಪ್ರಕರಣದಲ್ಲಿ ತನ್ನ ಪಾತ್ರವಿಲ್ಲದಿದ್ದರೂ, ಕೆಲವರು ತನ್ನ ವಿರುದ್ಧ ಮಾನಹಾನಿ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ್ದರು ಎಂದು ಆರೋಪಿಸಿ ಕೋರ್ಟ್‌ ಮೆಟ್ಟಿಲೇರಿದ್ದ. ಈ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಉಡುಪಿ: ಕೋವಿಡ್‌- 19 ಸೋಂಕು ಲಕ್ಷಣ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಗುರುವಾರ ಮೂವರು ಐಸೋಲೇಶನ್‌ ವಾರ್ಡ್‌ಗೆ ದಾಖಲಾಗಿದ್ದಾರೆ. ಈ ಪೈಕಿ ಒರ್ವ ಮಹಿಳೆ ಹಾಗೂ...

  • ಉಡುಪಿ: ಇಡೀ ಜಗತ್ತನ್ನೇ ಸಂಕಷ್ಟಕ್ಕೆ ತಳ್ಳಿರುವ ಕೋವಿಡ್‌- 19 ನಿವಾರಣೆ ಅತ್ಯಂತ ಭಯಾನಕ ಸವಾಲಾಗಿದ್ದು, ಅದನ್ನು ಎದುರಿಸಲು ವಿಶ್ವಶಾಂತಿ ಧರ್ಮಸಂಸ್ಥೆಯ ಪ್ರತಿನಿಧಿಗಳು...

  • ಉಡುಪಿ/ಮಂಗಳೂರು: ಶ್ರೀರಾಮ ನವಮಿ ಮಹೋತ್ಸವವನ್ನು ಕೋವಿಡ್‌- 19 ಭೀತಿ ಹಿನ್ನೆಲೆಯಲ್ಲಿ ಕರಾವಳಿಯಾದ್ಯಂತ ಗುರುವಾರ ಸರಳವಾಗಿ ಆಚರಿಸಲಾಯಿತು. ಪ್ರತಿವರ್ಷ ವಿಜೃಂಭಣೆಯಿಂದ...

  • ಕುಂದಾಪುರ: ಕುಂದಾಪುರ ಉಪವಿಭಾಗದ ಪೊಲೀಸ್‌ ಸಹಾಯಕ ಅಧೀಕ್ಷಕ ಹರಿರಾಮ್‌ ಶಂಕರ್‌ ಅವರ ಸೂಚನೆಯಂತೆ ಕುಂದಾಪುರ, ಬೈಂದೂರು ತಾಲೂಕಿನ ಠಾಣೆಗಳ ಪೊಲೀಸರು ಎಸ್‌ಸಿ, ಎಸ್‌ಟಿ...

  • ಉಡುಪಿ: ಕೋವಿಡ್ ಸೋಂಕಿನ ಶಂಕೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಬುಧವಾರ ಆಸ್ಪತ್ರೆಗಳ ಐಸೊಲೇಶನ್‌ ವಾರ್ಡುಗಳಲ್ಲಿ 13 ಮಂದಿ ದಾಖಲಾಗಿದ್ದಾರೆ. ಉಸಿರಾಟದ ಸಮಸ್ಯೆ ಹೊಂದಿರುವ...

ಹೊಸ ಸೇರ್ಪಡೆ