ಉಡುಪಿ: ಟೈಮಿಂಗ್ಸ್ ವಿಚಾರದಲ್ಲಿ ಸಿಟಿ ಬಸ್ ಕಂಡಕ್ಟರ್ಗಳ ಹೊಡೆದಾಟ: ವಿಡಿಯೋ ವ್ಯೆರಲ್
Team Udayavani, Apr 6, 2022, 11:52 AM IST
ಉಡುಪಿ: ಟೈಮಿಂಗ್ ವಿಷಯದಲ್ಲಿ ಪ್ರತಿನಿತ್ಯ ಜಗಳ ಮಾಡುವ ಖಾಸಗಿ ಬಸ್ ನಿರ್ವಾಹಕರು ನಡುರಸ್ತೆಯಲ್ಲೇ ಹೊಡೆದಾಡಿಕೊಂಡ ಘಟನೆ ಉಡುಪಿಯ ಸಿಟಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಟೈಮಿಂಗ್ಸ್ ವಿಚಾರವಾಗಿ ಮಾತಿಗೆ ಮಾತು ಬೆಳೆದು ಇವರಿಬ್ಬರು ಉಡುಪಿ ಸಿಟಿ ಬಸ್ ನಿಲ್ದಾಣದಲ್ಲೇ ಹೊಡೆದಾಡಿಕೊಂಡಿದ್ದಾರೆ.
ಹೂಡೆ ಕೆಮ್ಮಣ್ಣು ಕಡೆ ತೆರಳುವ ಈ ಎರಡು ಬಸ್ಗಳ ಕಂಡಕ್ಟರ್ಗಳು ಟೈಮಿಂಗ್ಸ್ ವಿಚಾರದಲ್ಲಿ ಹೊಡೆದಾಡಿಕೊಂಡಿದ್ದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ. ಈ ಬೀದಿ ಜಗಳದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯೆರಲ್ ಆಗುತ್ತಿದೆ.