ಶಿರ್ವ ಭೂತಬೆಟ್ಟು ಬಳಿ ಮೈದಾನಕ್ಕೆ ಬೆಂಕಿ

Team Udayavani, Mar 28, 2019, 6:30 AM IST

ಶಿರ್ವ: ಶಿರ್ವ ಭೂತಬೆಟ್ಟು ಲಚ್ಚಿಲ್‌ನ ಮೈದಾನದ ಬಳಿ ಬುಧವಾರ ಮಧ್ಯಾಹ್ನ ಬೆಂಕಿ ತಗಲಿದ್ದು ಉಡುಪಿ ಅಗ್ನಿಶಾಮಕ ದಳದವರ ಸಕಾಲಿಕ ಕಾರ್ಯಾಚರಣೆಯಿಂದ ಬೆಂಕಿ ಹತೋಟಿಗೆ ಬಂದಿದೆ.

ಉರಿಬಿಸಿಲಿನ ತಾಪಕ್ಕೆ ವಿದ್ಯುತ್‌ ಶಾರ್ಟ್‌ ಸರ್ಕಿಟ್‌ನಿಂದ ಕಾಣಿಸಿಕೊಂಡ ಬೆಂಕಿಯಿಂದಾಗಿ ಹಲವು ಎಕರೆ ಪ್ರದೇಶಕ್ಕೆ ಬೆಂಕಿ ತಗಲಿ ಪ‌ರಿಸರದ ಗಿಡ ಮರಗಳು ಬೆಂಕಿಗಾಹುತಿಯಾಗಿವೆ.

ಉಡುಪಿ ಅಗ್ನಿಶಾಮಕ ದಳದ ಅಧಿಕಾರಿ ಎಂ.ಗೋಪಾಲ್‌ ನೇತೃತ್ವದಲ್ಲಿ ಸಿಬಂದಿಗಳಾದ ವಿ.ಎಲ್‌.ನಾಯಕ್‌, ಕುಮಾರ ಗೌಡ, ಉಮೇಶ್‌,ಸುಜೇಶ್‌, ವಿನಾಯಕ, ಶಂಕರ್‌ ಮತ್ತು ಶಿರ್ವ ಪೊಲೀಸ್‌ ಠಾಣೆಯ ಸಿಬಂದಿ, ಶಿರ್ವ ಗ್ರಾ.ಪಂ.ಸದಸ್ಯ ಪ್ರವೀಣ್‌ ಸಾಲಿಯಾನ್‌,ಗ್ರಾಮಸ್ಥರಾದ ಆನಂದ ಶೆಟ್ಟಿ ಭೂತ‌ಬೆಟ್ಟು, ನೆಲ್ಸನ್‌ ಡಿ‡ಸೋಜಾ, ಪ್ರೇಮನಾಥ ಶೆಟ್ಟಿ,ಭಾಸ್ಕರ ಶೆಟ್ಟಿ, ನಾರಾಯಣ ಶೆಟ್ಟಿ,ದಯಾನಂದ, ಮಾಜಿ ಗ್ರಾ.ಪಂ. ಸದಸ್ಯೆ ಮೇರಿ ಡಿ’ಸೋಜಾ ಮೊದಲಾದವರು ಬೆಂಕಿ ನಂದಿಸುವಲ್ಲಿ ಸಹಕರಿಸಿದ್ದರು.

ಬೇಕಿದೆ ಶಿರ್ವಕ್ಕೆ ಅಗ್ನಿ ಶಾಮಕ ಠಾಣೆ
ಶಿರ್ವವನ್ನು ಕೇಂದ್ರೀಕರಿಸಿಕೊಂಡು ಸುತ್ತಮುತ್ತಲಿನ ಮಜೂರು,
ಕುತ್ಯಾರು,ಕಳತ್ತೂರು,ಮುದರಂಗಡಿ, ಬೆಳ್ಮಣ್‌, ಸೂಡ, ಪಳ್ಳಿ, ಬೆಳ್ಳೆ ಪ್ರದೇಶಗಳಿಗೆ ಅನುಕೂಲವಾಗುವಂತೆ ಅಗ್ನಿಶಾಮಕ ದಳದ ಠಾಣೆಯ ಅಗತ್ಯವಿದೆ. ಶಿರ್ವ ಆಸುಪಾಸಿನ ಪ್ರದೇಶದಲ್ಲಿ ಬೆಂಕಿ ಅನಾಹುತ ಸಂಭವಿಸಿದರೆ 25 ಕಿ.ಮೀ. ದೂರದ ಉಡುಪಿಯಿಂದ ಅಗ್ನಿಶಾಮಕದಳದವರು ಬರುವಾಗ ಎಲ್ಲವೂ ಸುಟ್ಟು ಹೋಗಿರುತ್ತದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಗಿದ್ದು ತುರ್ತು ಅಗ್ನಿಶಾಮಕ ದಳದ ಅವಶ್ಯಕತೆಯಿದೆ ಎಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ