ಮೀನಿನ ಬೆಲೆ ದುಪ್ಪಟ್ಟು  ಏರಿಕೆ! ಪೂರ್ವ ಕರಾವಳಿಯಲ್ಲಿ ಮೀನುಗಾರಿಕೆಗೆ ರಜೆ

ಪ್ರತಿಕೂಲ ಹವಾಮಾನ, ಮೀನಿನ ಅಭಾವ

Team Udayavani, May 16, 2022, 7:00 AM IST

ಮೀನಿನ ಬೆಲೆ ದುಪ್ಪಟ್ಟು  ಏರಿಕೆ! ಪೂರ್ವ ಕರಾವಳಿಯಲ್ಲಿ ಮೀನುಗಾರಿಕೆಗೆ ರಜೆ

ಮಲ್ಪೆ: ಸಮರ್ಪಕವಾದ ಮೀನುಗಾರಿಕೆ ಇಲ್ಲದೆ ಮಾರುಕಟ್ಟೆಯಲ್ಲಿ ಮೀನು ಲಭ್ಯತೆ ಕಡಿಮೆಯಾಗಿದೆ; ಜತೆಗೆ ವಿಪರೀತ ದರ ಏರಿಕೆಗೂ ಕಾರಣವಾಗಿದೆ. ಪೂರ್ವ ಕರಾವಳಿಯಲ್ಲಿ ಈಗ ಮೀನುಗಾರಿಕೆ ಇಲ್ಲದಿರುವುದು, ಪ್ರತಿಕೂಲ ಹವಾಮಾನ, ಸಮುದ್ರದಲ್ಲಿ ಮೀನಿನ ಅಭಾವ ದರ ಏರಿಕೆಗೆ ಪ್ರಮುಖ ಕಾರಣ.

ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಲ್ಲಿ ಈಗ ಮೀನುಗಾರಿ ಕೆಗೆ ರಜೆ. ಕೇರಳ ರಾಜ್ಯ ವ್ಯಾಪ್ತಿಯಲ್ಲಿ ಮೀನಿನ ಪ್ರಮಾಣ ಕುಸಿದಿದೆ. ರಾಜ್ಯದ ಕರಾವಳಿಯಲ್ಲಿ ಸಿಗುವ ಅಲ್ಪ ಪ್ರಮಾಣದ ಮೀನಿಗೆ ಬೇಡಿಕೆ ಹೆಚ್ಚು.

ಲಾಭದಾಯಕಲ್ಲ
ಕೆಲವು ತಿಂಗಳಿನಿಂದ ಮೀನುಗಾರರು ಮೀನಿನ ಕೊರತೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಾರ್ಮಿಕರ ಕೊರತೆಯಿಂದ ಬಹುತೇಕ ಪಸೀನ್‌ ಮೀನುಗಾರಿಕೆ ಕೊನೆಯ ಎರಡು ತಿಂಗಳು ಸಂಪೂರ್ಣ ಸ್ಥಗಿತಗೊಂಡಂತಾಗಿದೆ. ಆಳಸಮುದ್ರ ಬೋಟುಗಳಿಗೆ ಡೀಸೆಲ್‌ ದರದ ಹೊರೆ, ಸಿಗುವ ಮೀನಿನ ಪ್ರಮಾಣ ಸರಿದೂಗದೆ ನಷ್ಟವಾಗುತ್ತಿದೆ. ಇದರಿಂದ ಶೇ. 30ರಷ್ಟು ಮೀನುಗಾರರು ಬೋಟನ್ನು ದಡ ಸೇರಿಸಿದ್ದಾರೆ. ಸಣ್ಣ ಟ್ರಾಲ್‌ದೋಣಿ, ತ್ರಿಸೆವೆಂಟಿ ಬೋಟ್‌ಗಳನ್ನು ದಡದಲ್ಲಿ ಕಟ್ಟಿಡಲಾಗಿದೆ.

ರಾಣಿ ಮೀನು ಕುಸಿತ
ಈ ಹಿಂದೆ ಋತುವಿನ ಅಂತ್ಯದ ಎರಡು ತಿಂಗಳಲ್ಲಿ ಹೆಚ್ಚಾಗಿ ರಾಣಿಮೀನು ಬಹುತೇಕ ಆಳಸಮುದ್ರ ಬೋಟುಗಳಿಗೆ ಟನ್‌ಗಟ್ಟಲೆ ಸಿಗುತ್ತಿತ್ತು. ಇದರಿಂದಲೇ ಹೆಚ್ಚಿನ ಬೋಟುಗಳಿಗೆ ಕೊನೆಯ ಎರಡು ತಿಂಗಳು ಮೀನುಗಾರಿಕೆ ಲಾಭದಾಯಕವಾಗಿತ್ತು. ಈ ಬಾರಿ ರಾಣಿ ಮೀನಿನ ಪ್ರಮಾಣ ತೀವ್ರ ಕುಸಿತ ಕಂಡಿದೆ ಎಂದು ಕನ್ನಿ ಮೀನುಗಾರ ಸಂಘದ ಅಧ್ಯಕ್ಷ ದಯಾಕರ ವಿ. ಸುವರ್ಣ ಅವರು ತಿಳಿಸಿದ್ದಾರೆ.

ಬೆಲೆ ಏರಿಕೆಗೆ ಕಾರಣವೇನು?
ಪೂರ್ವ ಕರಾವಳಿಯಲ್ಲಿ ಮೀನುಗಾರಿಕೆ ಇಲ್ಲಿದಿರುವುದ ರಿಂದ ಇಲ್ಲಿನ ಮೀನುಗಳು ಅಲ್ಲಿಗೆ ಸಾಗಾಟವಾಗುತ್ತಿವೆ. ಮಾತ್ರವಲ್ಲದೆ ಹವಾಮಾನದ ವೈಪರೀತ್ಯದಿಂದಲೂ ಸಮುದ್ರದಲ್ಲಿ ಮೀನಿನ ಪ್ರಮಾಣ ಕುಸಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಮೀನಿನ ಬೆಲೆ ಹೆಚ್ಚಾಗಲು ಕಾರಣ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ ಅವರು ತಿಳಿಸಿದ್ದಾರೆ.

ಮೀನಿನ ಅಭಾವ ಒಂದೆಡೆಯಾದರೆ, ಇಂಧನ ದರ ಏರಿಕೆಯ ಹೊರೆಯೂ ಏರುತ್ತಿದೆ. ಒಂದು ಪ್ರಯಾಣ (ಸುಮಾರು 10 ದಿನ)ದಲ್ಲಿ ಕನಿಷ್ಠ 6 ಲಕ್ಷ ರೂ. ಸಂಪಾದನೆ ಆದರೂ ಅಲ್ಲಿಂದಲ್ಲಿಗೆ ಆಗುತ್ತದೆ. ಕೆಲವೂ ಬೋಟ್‌ಗಳು ಕನಿಷ್ಠ ಸಂಪಾದನೆಯೂ ಇಲ್ಲದೆ ನಷ್ಟ ಅನುಭವಿಸುತ್ತಿವೆ. ಇಳುವರಿ ಕಡಿಮೆಯಾಗಿರುವುದರಿಂದ ಸಣ್ಣಪುಟ್ಟ ಮೀನಿಗೂ ಬೇಡಿಕೆ ಬಂದಿದೆ.
– ಸತೀಶ್‌ ಕುಂದರ್‌, ಮೀನುಗಾರ ಮುಖಂಡ,
ಬೋಟ್‌ ಮಾಲಕ

– ನಟರಾಜ್‌ ಮಲ್ಪೆ

ಟಾಪ್ ನ್ಯೂಸ್

1-dsfdsfsd

ಎರಡು ಸಾವಿರ ಅಗ್ನಿಶಾಮಕ ಹುದ್ದೆಗಳ ಭರ್ತಿ: ಗೃಹ ಸಚಿವ ಆರಗ ಜ್ಞಾನೇಂದ್ರ

ಸಂಪಾಜೆ ಭೂಕಂಪ ಪೀಡಿತ ಪ್ರದೇಶದ ಮನೆಗಳಿಗೆ ಸಹಾಯಕ ಕಮಿಷನರ್ ಗಿರೀಶ್ ನಂದನ್ ಭೇಟಿ

ಸಂಪಾಜೆ ಭೂಕಂಪ ಪೀಡಿತ ಪ್ರದೇಶದ ಮನೆಗಳಿಗೆ ಸಹಾಯಕ ಕಮಿಷನರ್ ಗಿರೀಶ್ ನಂದನ್ ಭೇಟಿ

siddaramaiah

ಸರಕಾರ ಎಂಟು ವರ್ಷ ಪೂರೈಕೆ: ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ಪುಸ್ತಕ

ಶಿರಚ್ಛೇದನ ಪ್ರಕರಣ: ಆರೋಪಿಗಳನ್ನು ನಡುರಸ್ತೆಯಲ್ಲಿ ಗಲ್ಲಿಗೇರಿಸಿ; ಮಾಜಿ ಸಿಎಂ ಮಾಂಝಿ

ಶಿರಚ್ಛೇದನ ಪ್ರಕರಣ: ಆರೋಪಿಗಳನ್ನು ನಡುರಸ್ತೆಯಲ್ಲಿ ಗಲ್ಲಿಗೇರಿಸಿ; ಮಾಜಿ ಸಿಎಂ ಮಾಂಝಿ

cm-bomm

ಸದ್ಯದಲ್ಲೇ ಸಂಪುಟ ವಿಸ್ತರಣೆ; ನಿಗಮ ಮಂಡಳಿಗಳಿಗೆ ಪಟ್ಟಿಯೂ ಅಂತಿಮ?

ವಿಶ್ವಾಸಮತ…ಮಹಾರಾಷ್ಟ್ರ ಗವರ್ನರ್ ಆದೇಶದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಶಿವಸೇನೆ

ವಿಶ್ವಾಸಮತ…ಮಹಾರಾಷ್ಟ್ರ ಗವರ್ನರ್ ಆದೇಶದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಶಿವಸೇನೆ

1-df-df-g

ಗೋವಾದತ್ತ ಬಂಡಾಯ ಶಿವಸೇನೆ ಶಾಸಕರು; ನಾಳೆ ನೇರವಾಗಿ ಸದನಕ್ಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಕ್ಕಳಿಗೆ ಕೃಷಿ ಕಾರ್ಯ ಕಲಿಸಿ: ಡಾ| ವೀರೇಂದ್ರ ಹೆಗ್ಗಡೆ

ಮಕ್ಕಳಿಗೆ ಕೃಷಿ ಕಾರ್ಯ ಕಲಿಸಿ: ಡಾ| ವೀರೇಂದ್ರ ಹೆಗ್ಗಡೆ

ಸಾಲ ನೀಡುವ ಪ್ರಮಾಣ ಹೆಚ್ಚಿಸಿ: ಬ್ಯಾಂಕ್‌ಗಳಿಗೆ ಜಿ.ಪಂ. ಸಿಇಒ ಸೂಚನೆ

ಸಾಲ ನೀಡುವ ಪ್ರಮಾಣ ಹೆಚ್ಚಿಸಿ: ಬ್ಯಾಂಕ್‌ಗಳಿಗೆ ಜಿ.ಪಂ. ಸಿಇಒ ಸೂಚನೆ

ಉಡುಪಿ : ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ : ಆರೋಪಿಗೆ 10 ವರ್ಷ ಜೈಲು

ಉಡುಪಿ : ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ : ಆರೋಪಿಗೆ 10 ವರ್ಷ ಜೈಲು

ಪಡುಬಿದ್ರಿಯಲ್ಲಿ ಕೊನೆಗೂ ಹೆದ್ದಾರಿ ‘ದೀಪ ಮೋಕ್ಷ’

ಪಡುಬಿದ್ರಿಯಲ್ಲಿ ಕೊನೆಗೂ ಹೆದ್ದಾರಿ ‘ದೀಪ ಮೋಕ್ಷ’

ಉಡುಪಿ: ಪೋಷಕರಲ್ಲಿ ಅಪಹರಣದ ನಾಟಕವಾಡಿ 5 ಲಕ್ಷಕ್ಕೆ ಬೇಡಿಕೆ ಇಟ್ಟ ಮಗ: ಕೊನೆಗೆ ಆಗಿದ್ದೇ ಬೇರೆ

ಉಡುಪಿ: ಪೋಷಕರಲ್ಲಿ ಅಪಹರಣದ ನಾಟಕವಾಡಿ 5 ಲಕ್ಷಕ್ಕೆ ಬೇಡಿಕೆ ಇಟ್ಟ ಮಗ: ಕೊನೆಗೆ ಆಗಿದ್ದೇ ಬೇರೆ

MUST WATCH

udayavani youtube

ಚಿತ್ರದುರ್ಗದ ಕೋಟೆ ಗೋಡೆ ಏರಿದ ಮಂಗಳೂರು ಪೊಲೀಸ್‌ ಕಮಿಷನರ್‌!

udayavani youtube

ತಂದೆ ಮೇಣದ ಪ್ರತಿಮೆ ಮುಂದೆ ಹಸೆಮಣೆಯೇರಿದ ಮಗಳು

udayavani youtube

ಸುಳ್ಯ – ಮಡಿಕೇರಿ ಭಾಗದಲ್ಲಿ ಮತ್ತೆ ಕಂಪಿಸಿದ ಭೂಮಿ : ಆತಂಕದಲ್ಲಿ ಜನತೆ

udayavani youtube

ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ : ಸುಟ್ಟು ಕರಕಲಾಯ್ತು ಮನೆ

udayavani youtube

ಭಾಗಮಂಡಲ ಸೇರಿದಂತೆ ವಿವಿಧ ಕಡೆ ಭೂಮಿ ಕಂಪಿಸಿದ ಅನುಭವ

ಹೊಸ ಸೇರ್ಪಡೆ

1-dsfdsfsd

ಎರಡು ಸಾವಿರ ಅಗ್ನಿಶಾಮಕ ಹುದ್ದೆಗಳ ಭರ್ತಿ: ಗೃಹ ಸಚಿವ ಆರಗ ಜ್ಞಾನೇಂದ್ರ

ಸಂಪಾಜೆ ಭೂಕಂಪ ಪೀಡಿತ ಪ್ರದೇಶದ ಮನೆಗಳಿಗೆ ಸಹಾಯಕ ಕಮಿಷನರ್ ಗಿರೀಶ್ ನಂದನ್ ಭೇಟಿ

ಸಂಪಾಜೆ ಭೂಕಂಪ ಪೀಡಿತ ಪ್ರದೇಶದ ಮನೆಗಳಿಗೆ ಸಹಾಯಕ ಕಮಿಷನರ್ ಗಿರೀಶ್ ನಂದನ್ ಭೇಟಿ

5

ನೀರಿನ ಪೈಪ್‌ಲೈನ್‌ಗೆ ಹಾನಿ: ರಸ್ತೆ ಬಿರುಕು

siddaramaiah

ಸರಕಾರ ಎಂಟು ವರ್ಷ ಪೂರೈಕೆ: ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ಪುಸ್ತಕ

ಶಿರಚ್ಛೇದನ ಪ್ರಕರಣ: ಆರೋಪಿಗಳನ್ನು ನಡುರಸ್ತೆಯಲ್ಲಿ ಗಲ್ಲಿಗೇರಿಸಿ; ಮಾಜಿ ಸಿಎಂ ಮಾಂಝಿ

ಶಿರಚ್ಛೇದನ ಪ್ರಕರಣ: ಆರೋಪಿಗಳನ್ನು ನಡುರಸ್ತೆಯಲ್ಲಿ ಗಲ್ಲಿಗೇರಿಸಿ; ಮಾಜಿ ಸಿಎಂ ಮಾಂಝಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.