ಮತ್ಸ್ಯಸಮೃದ್ಧಿಗಾಗಿ ಮೀನುಗಾರರಿಂದ ಸಮುದ್ರಪೂಜೆ

Team Udayavani, Aug 16, 2019, 5:21 AM IST

ಮಲ್ಪೆ/ಸುರತ್ಕಲ್‌: ಧಾರಾಕಾರವಾಗಿ ಸುರಿಯುತ್ತಿರುವ ಗಾಳಿಮಳೆಯ ನಡುವೆಯೂ ಗುರುವಾರ ಬೆಳಗ್ಗೆ ಮಲ್ಪೆ ಮೀನುಗಾರ ಸಂಘದ ನೇತೃತ್ವದಲ್ಲಿ ವಡಭಾಂಡೇಶ್ವರ ಸಮುದ್ರತೀರದಲ್ಲಿ ಮತ್ತು ಮಂಗಳೂರು ಏಳುಪಟ್ಣ ಮೊಗವೀರ ಸಂಯುಕ್ತ ಸಭಾದ ಆಶ್ರಯದಲ್ಲಿ ತಣ್ಣೀರುಬಾವಿಯ ಕಡಲ ಕಿನಾರೆಯಲ್ಲಿ ಶ್ರದ್ಧಾ ಭಕ್ತಿಯ ಸಮುದ್ರ ಪೂಜೆ ನೆರವೇರಿತು.

ಮುಂಬರುವ ದಿನಗಳಲ್ಲಿ ಮೀನು ಗಾರಿಕೆಗೆ ಯಾವುದೇ ಅಡ್ಡಿ ಆತಂಕಗಳು ಇಲ್ಲದೆ, ಹೇರಳ ಮತ್ಸ್ಯ ಸಂಪತ್ತು ವೃದ್ಧಿಯಾಗಲಿ, ಯಾವುದೇ ಅವಘಡಗಳು, ಪ್ರಾಕೃತಿಕ ವಿಕೋಪಗಳು ಉಂಟಾಗದಿರಲಿ, ಮೀನುಗಾರರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳು ಇರದೆ ಪರಸ್ಪರ ಏಕತೆ, ಸೌಹಾರ್ದದಿಂದ ಮೀನುಗಾರಿಕೆಯನ್ನು ನಡೆಸುವಂತೆ ಗಂಗಾಮಾತೆ ಅನುಗ್ರಹಿಸಲಿ ಎಂದು ಪ್ರಾರ್ಥಿಸಿ ಹಾಲು, ಸೀಯಾಳ, ಫಲಪುಷ್ಪವನ್ನು ಸಮುದ್ರರಾಜನಿಗೆ ಅರ್ಪಿಸಿದರು.

ಮಲ್ಪೆ: ಬೆಳಗ್ಗೆ ವಡಭಾಂಡ ಬಲರಾಮ ಮತ್ತು ಬೊಬ್ಬರ್ಯ ದೇವರಿಗೆ ಸಾಮೂಹಿಕವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಶೋಭಾಯಾತ್ರೆಯಲ್ಲಿ ತೆರಳಿ ಸಮುದ್ರ ಕಿನಾರೆಗೆ ಬಂದು ಪೂಜೆ ಸಲ್ಲಿಸಲಾಯಿತು.

ಶಾಸಕ ಕೆ. ರಘುಪತಿ ಭಟ್‌, ಮಾಜಿ ಮೀನುಗಾರಿಕೆ ಸಚಿವ ಪ್ರಮೋದ್‌ ಮಧ್ವರಾಜ್‌, ಮೀನುಗಾರ ಸಂಘದ ಅಧ್ಯಕ್ಷ ಕೃಷ್ಣ ಎಸ್‌. ಸುವರ್ಣ, ಮೀನುಗಾರಿಕಾ ಉಪನಿರ್ದೇಶಕ ಗಣೇಶ್‌ ಕೆ., ಸಹಾಯಕ ನಿರ್ದೇಶಕ ಶಿವಕುಮಾರ್‌, ಮೀನುಗಾರಿಕಾ ವಿವಿಧ ಸಂಘಟನೆಗಳ ಮುಖಂಡರಾದ ಯಶ್‌ಪಾಲ್‌ ಎ. ಸುವರ್ಣ, ರಮೇಶ್‌ ಕೋಟ್ಯಾನ್‌, ನಾಗರಾಜ್‌ ಬಿ. ಕುಂದರ್‌, ವಿಟuಲ ಕರ್ಕೇರ, ಸುಭಾಸ್‌ ಮೆಂಡನ್‌, ನವೀನ್‌ ಕೋಟ್ಯಾನ್‌, ನಾಗರಾಜ್‌ ಸುವರ್ಣ, ಸತೀಶ್‌ ಕುಂದರ್‌, ಸೋಮಪ್ಪ ಕಾಂಚನ್‌, ಎಚ್‌.ಟಿ. ಕಿದಿಯೂರು, ಗೋಪಾಲ್‌ ಆರ್‌.ಕೆ., ಹರಿಯಪ್ಪ ಕೋಟ್ಯಾನ್‌, ಸುಧಾಕರ ಮೆಂಡನ್‌, ರಮೇಶ್‌ ಕೋಟ್ಯಾನ್‌, ಆನಂದ ಅಮೀನ್‌, ದಯಾನಂದ ಕುಂದರ್‌, ರತ್ನಾಕರ ಸಾಲ್ಯಾನ್‌, ಶಿವಾನಂದ, ರವಿರಾಜ್‌ ಸುವರ್ಣ, ದಯಕರ ವಿ. ಸುವರ್ಣ, ರಾಮಚಂದ್ರ ಕುಂದರ್‌, ಸಾಧು ಸಾಲ್ಯಾನ್‌, ಕಿಶೋರ್‌ ಪಡುಕರೆ, ಕೃಷ್ಣಪ್ಪ ಮರಕಾಲ, ಸುರೇಶ್‌ ಕುಂದರ್‌, ನಾರಾಯಣ ಕರ್ಕೇರ, ಗುಂಡು ಬಿ. ಅಮೀನ್‌, ಕಿಶೋರ್‌ ಡಿ. ಸುವರ್ಣ, ಜನಾರ್ದನ ತಿಂಗಳಾಯ, ಹರಿಶ್ಚಂದ್ರ ಕಾಂಚನ್‌, ರಾಘವ ಜಿ.ಕೆ., ದಯಾನಂದ ಕೆ. ಸುವರ್ಣ, ಜಗನ್ನಾಥ ಸುವರ್ಣ, ಸುಧಾಕರ ಕುಂದರ್‌, ಜಲಜ ಕೋಟ್ಯಾನ್‌, ಬೇಬಿ ಎಚ್‌. ಸಾಲ್ಯಾನ್‌ ಮೊದಲಾದವರು ಪಾಲ್ಗೊಂಡಿದ್ದರು.

ಪಣಂಬೂರು: ತಣ್ಣೀರುಬಾವಿಯ ಕಡಲ ಕಿನಾರೆಯಲ್ಲಿ ಕದ್ರಿ ಸುವರ್ಣ ಕದಳೀ ಮಠದ ರಾಜಾ ಯೋಗಿ ನಿರ್ಮಲನಾಥಜೀ ಮಹಾರಾಜರು ಸಮುದ್ರದ ಮಡಿಲಿಗೆ ಹಾಲು, ಸೀಯಾಳ, ಫಲಪುಷ್ಪಗಳನ್ನು ಅರ್ಪಿಸಿ ಪ್ರಾರ್ಥಿಸಿದರು. ಸಮುದ್ರ ತೀರದಲ್ಲಿ ವಿವಿಧ ಭಜನ ಮಂಡಳಿಗಳಿಂದ ಭಜನೆ, ಸಂಕೀರ್ತನೆ ಬಳಿಕ ವಿಶೇಷ ಪೂಜೆ ನೆರವೇರಿತು.

ಸಮುದ್ರಪೂಜೆಗೆ ಪೂರ್ವದಲ್ಲಿ ಶ್ರೀ ಬ್ರಹ್ಮ ಬಬ್ಬರ್ಯ ಬಂಟ ದೈವಸ್ಥಾನದಿಂದ ತಣ್ಣೀರು ಬಾವಿ ಸಮುದ್ರ ಕಿನಾರೆ ವರೆಗೆ ಶೋಭಾಯಾತ್ರೆ ನಡೆಯಿತು.

ಬೋಳೂರು ಮೊಗವೀರ ಮಹಾಸಭಾದ ಅಧ್ಯಕ್ಷ ರಾಜಶೇಖರ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು. ಕರಾವಳಿ ಸೊಸೈಟಿಯ ಉಮೇಶ್‌ ಜೋಗಿ ಕದ್ರಿ, ಮೊಗವೀರ ಮಹಾಜನ ಸಂಘದ ಉಪಾಧ್ಯಕ್ಷ ದೇವದಾಸ ಬೋಳೂರು, ಉದ್ಯಮಿ ಪ್ರಸಾದ್‌ ರಾಜ್‌ ಕಾಂಚನ್‌, ಮತೊÕéàದ್ಯಮಿ ಲೋಕನಾಥ ಪುತ್ರನ್‌ ಪಡುಹೊಗೆ, ಮಂಗಳೂರು ಏಳುಪಟ್ಣ ಮೊಗವೀರ ಸಂಯುಕ್ತ ಮಹಾ ಸಭಾದ ಅಧ್ಯಕ್ಷ ಸುಭಾಶ್‌ಚಂದ್ರ ಕಾಂಚನ್‌,ಉಪಾಧ್ಯಕ್ಷ ಹೇಮಚಂದ್ರ ಸಾಲ್ಯಾನ್‌, ತಾರಾನಾಥ ಪುತ್ರನ್‌, ದೇವಾನಂದ ಗುಜರನ್‌, ನಾರಾಯಣ್‌ ಕೋಟ್ಯಾನ್‌, ಪ್ರಕಾಶ್‌ ಕರ್ಕೇರ, ಮೋಹನ್‌ದಾಸ್‌ ಸುವರ್ಣ, ಜನಾರ್ದನ ಸುವರ್ಣ, ಮೋಹನ ಗುರಿಕಾರ, ಬಾಲಕೃಷ್ಣ ತಿಂಗಳಾಯ ಹೊಗೆಬಜಾರ್‌, ನಾರಾಯಣ ಗುರಿಕಾರ ಬೋಳಾರ, ಶರತ್‌ ತಿಂಗಳಾಯ ಜಪ್ಪು, ಗಂಗಾಧರ ಶ್ರೀಯಾನ್‌, ರಂಜನ್‌ ಕಾಂಚನ್‌, ಮೀನುಗಾರರು ಭಾಗವಹಿಸಿದ್ದರು.ಆರ್‌.ಪಿ. ಬೋಳೂರು ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಶ್ಯಾಮಸುಂದರ ಕಾಂಚನ್‌ ಕುದ್ರೋಳಿ ವಂದಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ