ಮಲ್ಪೆ: ಮೀನುಗಾರಿಕಾ ಬೋಟ್ ಅಪಘಾತ; 20 ಲ.ರೂ. ನಷ್ಟ
Team Udayavani, May 12, 2019, 11:30 AM IST
ಮಲ್ಪೆ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳುತ್ತಿದ್ದ ಬೋಟೊಂದು ಎಂಜಿನ್ ಕೆಟ್ಟು ಗಾಳಿಯ ರಭಸಕ್ಕೆ ಮರಳ ದಂಡೆಗೆ ಬಡಿದು ಜಖಂಗೊಂಡಿರುವ ಘಟನೆ ಮೇ 9ರಂದು ಮಲ್ಪೆ ಪಡುಕರೆ ಶಾಂತಿನಗರ ಸಮೀಪ ಸಂಭವಿಸಿದೆ.
ಅಮೃತೇಶ್ವರೀ ಹೆಸರಿನ ಬೋಟ್ ಅಪಘಾತ ಕ್ಕೀಡಾಗಿದ್ದು, ಅದು ಮರಳಿನಲ್ಲಿ ಹೂತು ಹೋದ ಪರಿಣಾಮ ಎಂಜಿನ್ ರೂಮಿನ ತಳಭಾಗದಲ್ಲಿ ಮರಳು ಮತ್ತು ನೀರು ಸೇರಿಕೊಂಡಿದೆ. ಬೋಟಿನ ತಳಭಾಗದ ಹಲಗೆ ಮತ್ತು ಫೈಬರ್ ಜಖಂಗೊಂಡಿದ್ದು, ಸುಮಾರು 20 ಲ. ರೂ. ನಷ್ಟ ಅಂದಾಜಿಸಲಾಗಿದೆ.
ಈ ಸಂಬಂಧ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.