ಫಿಶ್‌ಮೀಲ್‌ ಅವಘಡ: ಇನ್ನೆರಡು ದಿನಗಳಲ್ಲಿ ವರದಿ

Team Udayavani, Aug 14, 2019, 7:04 AM IST

ಕುಂದಾಪುರ: ಕಟ್‌ಬೆಲೂ¤ರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ದೇವಲ್ಕುಂದದಲ್ಲಿರುವ ಮಲ್ಪೆ ಫ್ರೆಶ್‌ ಎಕ್ಸ್‌ಪೋರ್ಟ್‌ ಮರೈನ್‌ ಮೀನು ಸಂಸ್ಕರಣಾ ಘಟಕ (ಫಿಶ್‌ಮೀಲ್‌)ದಲ್ಲಿ ಸೋಮವಾರ ಸಂಭವಿಸಿದ ಅಮೋನಿಯ ಅನಿಲ ಸೋರಿಕೆ ದುರಂತದಿಂದ ಅಸ್ವಸ್ಥರಾದ 79 ಮಂದಿ ಕಾರ್ಮಿಕರ ಪೈಕಿ 77 ಮಂದಿ ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇಬ್ಬರಿಗೆ ಚಿಕಿತ್ಸೆ ಮುಂದುವರಿದಿದೆ.

ಗಂಭೀರ ಅಸ್ವಸ್ಥರಾಗಿದ್ದ ಇಬ್ಬರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಮಂಗಳ ವಾರ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಬಿಡುಗಡೆ ಗೊಂಡವರಿಗೆ ವಾರಗಳ ಕಾಲ ಎಚ್ಚರಿಕೆಯಿಂದ ಇರುವಂತೆ ಸೂಚಿಸ ಲಾಗಿದೆ ಎಂದು ಆದರ್ಶ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ಆದರ್ಶ ಹೆಬ್ಟಾರ್‌ ತಿಳಿಸಿದ್ದಾರೆ.

ಕುಂದಾಪುರ ತಾಲೂಕು ಆರೋಗ್ಯಾ ಧಿಕಾರಿ ಡಾ| ನಾಗಭೂಷಣ ಉಡುಪ ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥರ ಯೋಗಕ್ಷೇಮ ವಿಚಾರಿಸಿದರು.

ಕಾರ್ಯಚಟುವಟಿಕೆ ಸ್ಥಗಿತ
ತನಿಖಾ ತಂಡದ ವರದಿ ಬರುವವರೆಗೆ ಮೀನು ಸಂಸ್ಕರಣ ಘಟಕದಲ್ಲಿ ಯಾವುದೇ ಕಾರ್ಯ ಚಟುವಟಿಕೆ ನಡೆಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿ ಸೂಚಿಸಿದ್ದು, ಅದರಂತೆ ಘಟಕವನ್ನು ಮುಚ್ಚಲಾಗಿದೆ. ಕಾರ್ಮಿಕರಿಗೆ ಉಳಿದುಕೊಳ್ಳಲು ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

ತನಿಖೆ ಆರಂಭ ಗೊಂಡಿದೆ.ಘಟಕದ ಮುಖ್ಯಸ್ಥರು, ಕಾರ್ಮಿಕರು, ಸ್ಥಳೀಯರ ವಿಚಾರಣೆ ಮಾಡಲಾಗಿದೆ. ಮೇಲ್ನೋಟಕ್ಕೆ ನಿರ್ಲಕ್ಷé ಹಾಗೂ ಕೆಲ ಸುರಕ್ಷಾ ಕ್ರಮಗಳನ್ನು ಕೈಗೊಳ್ಳದೇ ಇರುವುದರಿಂದ ಈ ಘಟನೆ ಸಂಭವಿಸಿರುವುದು ಅರಿವಿಗೆ ಬಂದಿದೆ. ಮಂಗಳೂರಿನ (ಎಂಸಿಎಫ್‌)ನ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದು, ಅವರ ವರದಿಯನ್ನೂ ಆಧರಿಸಿ, ಸಮಗ್ರ ವರದಿ ತಯಾರಿಸಿ ಆ. 16ರೊಳಗೆ ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು.
– ಡಾ| ಎಸ್‌.ಎಸ್‌. ಮಧುಕೇಶ್ವರ್‌, ಕುಂದಾಪುರ ಉಪವಿಭಾಗಾಧಿಕಾರಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ