ಲಾಡ್ಜ್ ನಲ್ಲಿ ಜುಗಾರಿ: ಐವರ ಬಂಧನ
Team Udayavani, Aug 11, 2022, 7:34 PM IST
ಬ್ರಹ್ಮಾವರ: ಯಡ್ತಾಡಿಯ ಲಾಡ್ಜ್ ನಲ್ಲಿ ಬುಧವಾರ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ ಐವರನ್ನು ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾರ್ತಿಕ್, ಕಿರಣ್, ವಿಟ್ಠಲ, ಸಂದೇಶ, ಶರಣ್ ಬಂಧಿತರು. ಕಿರಣ್ ಮೊಗವೀರ ಪರಾರಿಯಾಗಿದ್ದಾನೆ.
ಆರೋಪಿಗಳಿಂದ 23,500 ರೂ. ನಗದು ಸ್ವಾಧೀನಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.