ಫೋಲ್ಡೆಬಲ್‌ ಸ್ಮಾರ್ಟ್‌ ಫೋನ್‌

Team Udayavani, Feb 24, 2019, 1:00 AM IST

ಮಣಿಪಾಲ: ಫೋಲ್ಡೆಬಲ್‌ ಸ್ಮಾರ್ಟ್‌ ಫೋನ್‌, 5ಜಿ ಬಗ್ಗೆ ಬಿಸಿ ಬಿಸಿ ಚರ್ಚೆಗಳು ಮೊಬೈಲ್‌ ಪ್ರಿಯರ ಮಧ್ಯೆ ನಡೆಯುತ್ತಿರುವಾಗಲೇ ದ.ಕೊರಿಯಾದ ಸ್ಮಾಟ್‌ಫೋನ್‌ ತಯಾರಿಕಾ ಕಂಪೆನಿ ಸ್ಯಾಮ್ಸಂಗ್‌ ಹೊಸ 5ಜಿ, ಫೋಲ್ಡೆಬಲ್‌ ಫೋನನ್ನು ಜಗತ್ತಿನೆದುರು ತೆರೆದಿಟ್ಟಿದೆ.  

ಮಲ್ಟಿ ಟಾಸ್ಕಿಂಗ್‌
ಈ ಫೋಲ್ಡೆಬಲ್‌ ಫೋನ್‌ ಮಲ್ಟಿ ಟಾಸ್ಕಿಂಗ್‌ (ಏಕಕಾಲಕ್ಕೆ ವಾಟ್ಸಾಪ್‌ ನೋಡಿಕೊಂಡು, ಬ್ರೌಸಿಂಗ್‌ ಕೂಡ ಮಾಡ ಬಹುದು) ಗೆ ಪೂರಕವಾಗಿದೆ. ಉತ್ತಮ ಡಿಸ್‌ಪ್ಲೇ ಹೊಂದಿದ್ದು, ವೀಡಿಯೋ ನೋಡಲು, ಕಚೇರಿ ಕೆಲಸ ಮಾಡಲು ಅನುಕೂಲವಾಗಿದೆ. ಫೋನ್‌ ಮಡಚುವ ಸ್ಕ್ರೀನ್‌ ಹೊಂದಿದ್ದರೂ, ಬಾಗುವಿಕೆ, ದೃಶ್ಯ ವಕ್ರವಾಗಿ ಕಾಣಲು ಅವಕಾಶವಿಲ್ಲ. ಅಷ್ಟು ಅತ್ಯುನ್ನತ ಮಟ್ಟದ ತಂತ್ರಜ್ಞಾನದಿಂದ ಸ್ಕ್ರೀನ್‌ ರೂಪಿಸಲಾಗಿದೆ. 

ಮೊದಲ 5 ಜಿ ಫೋನ್‌ 
5ಜಿ ಎಂದರೆ 5ನೇ ತಲೆಮಾರಿನ ಸೆಲ್ಯುಲರ್‌ ನೆಟ್‌ವರ್ಕ್‌ ತಂತ್ರಜ್ಞಾನ. ಇದು ಅಪ್‌ಲೋಡ್‌, ಡೌನ್‌ಲೋಡ್‌ ವೇಗ ಹೆಚ್ಚಿಸಲಿದೆ. 4ಜಿಗೆ ಹೋಲಿಸಿದರೆ 5ಜಿ ನೂರು ಪಟ್ಟು ವೇಗ ಹೊಂದಿದೆ. ಜತೆಗೆ ಸ್ಪಷ್ಟ ಧ್ವನಿ ಸಂದೇಶ ಉತ್ತಮ ಇಂಟರ್ನೆಟ್‌ ಸ್ಪೀಡ್‌ಗೆ ನೆರವಾಗುತ್ತದೆ.  

5ಜಿಗೆ ಸಿದ್ಧತೆ ಹೇಗಿದೆ?
ಅಮೆರಿಕಾ ಹೊರತಾಗಿ ದ. ಕೊರಿಯಾ, ಜಪಾನ್‌ನಲ್ಲಿ ಇದರ ಕಾರ್ಯ ಸದ್ಯ ಆರಂಭವಾಗಿದ್ದು 2019ರಲ್ಲಿ  ಫೋನ್‌ ಮತ್ತು ನೆಟ್‌ವರ್ಕ್‌ ಬರಲಿದೆ. ಭಾರತ ಕೂಡ 5ಜಿ ತಂತ್ರಜ್ಞಾನ ಸ್ವೀಕರಿಸಲು ಸಿದ್ಧವಾಗಿದೆ. ಈ ಬಗ್ಗೆ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (5ಜಿ) ಕುರಿತ ಕಾನೂನು, ತರಂಗಾಂತರದ ಹರಾಜಿಗೆ ಸಿದ್ಧವಾಗುತ್ತಿದೆ.

ಇಂಟರ್ನೆಟ್‌ ಸಖತ್‌ ಸ್ಪೀಡ್‌ 
5ಜಿ ಯುಗದಲ್ಲಿ ಇಂಟರ್ನೆಟ್‌ ಅತ್ಯಧಿಕ ವೇಗ ಇರಲಿದೆ. ಸದ್ಯ ನಾವು 4ಜಿಯನ್ನು ಬಳಸುತ್ತಿದ್ದು, ಇದರ ಗರಿಷ್ಠ ವೇಗ 100 ಎಂಬಿಪಿಎಸ್‌ ಇದ್ದರೆ, 5ಜಿ ಯದ್ದು 10  ಜಿಬಿಪಿಎಸ್‌ ಇರಲಿದೆ. ಅಂದರೆ ಆಪರೇಟರ್‌ ಸಿಗ್ನಲ್‌ ಸರಿಯಾಗಿ ಇದೆ ಎಂದಾದರೆ, ಕೇವಲ 10 ಸೆಕೆಂಡ್‌ನ‌ಲ್ಲಿ ವೀಡಿಯೋಗಳು ಡೌನ್‌ಲೋಡ್‌ ಆಗಬಹುದು. ಯಾವುದೇ ಅಡೆತಡೆ ಇಲ್ಲದೆ 1080 ವಿಡಿಯೋಗಳು ಪ್ಲೇ ಆಗಬಹುದು. ಇದರೊಂದಿಗೆ ಸಂಪರ್ಕವೂ ಸುಧಾರಣೆ ಯಾಗಲಿದ್ದು, ಹೆಚ್ಚು ಸಂಪರ್ಕ ಇರುವ ಸ್ಥಳಗಳಲ್ಲೂ ನೆಟ್‌ವರ್ಕ್‌ ಸಮಸ್ಯೆ ಕಾಡದು.  

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ