ಗಣಾಧಿಪತಿಯ ಸ್ಥಾಪಿಸಿ ಗಣತಂತ್ರರಾಗೋಣ


Team Udayavani, Aug 25, 2017, 1:45 AM IST

Ankana-25.jpg

ನೀವೊಂದು ಅಣುವನ್ನು “ನೀನು ಯಾರು?’ ಎಂದು ಪ್ರಶ್ನಿಸಿ…ಅದು ನಾನು ಅಣು ಎಂದರೇ ಸರಿಯಾದಲ್ಲಿ “ನಾನು’ ಎಂಬುದು ಒಂದು ಅಲ್ಲ, ಪ್ರೋಟಾನ್‌, ನ್ಯೂಟ್ರಾನ್‌ ಮತ್ತು ಎಲೆಕ್ಟ್ರಾನ್‌  ಸೇರಿ ಮೂರು ಆಯಿತಲ್ಲವೇ? ಒಂದು ವೇಳೆ ನಾನು ಎಂಬುದು ಪ್ರೋಟಾನ್‌ ಆದರೆ ಮತ್ತಿಬ್ಬರು ಇಲ್ಲದ ಅಣು ಅಣುವಲ್ಲ, ಮತ್ತೆ ನಾನು ಯಾರು? 

ಪ್ರೋಟಾನ್‌ ನ್ಯೂಟ್ರಾನ್‌ ಮತ್ತು ಎಲೆಕ್ಟ್ರಾನ್‌ ಈ ಮೂರರ ಅನುಸಂಧಾನವೇ ಅಣುವಾದಾಗ ಈ ಮೂರರಲ್ಲಿ ಯಾರಿಲ್ಲದಿ ದ್ದರೂ ಅಣುವೇ ಇಲ್ಲ, ಈ ಮೂರರ ಸಂವಿಧಾನದಿಂದ ಅಣು ಕಾರ್ಯನಿರ್ವಹಣೆ ಮಾಡುತ್ತಿರುತ್ತದೆ, ಆ ಪವಿತ್ರ ಸಂವಿಧಾನವನ್ನು ತುಳಿದು ಪುಟಿದೇಳುವ ಅಹಂಕಾರವೇ “ನಾನು’, ಆ ನಾನತ್ವವನ್ನು ತುಳಿದು ಸಂವಿಧಾನವನ್ನು ಬಂಧಮುಕ್ತಗೊಳಿಸಿ ಚಾಲನೆ ಮಾಡುವ ಕ್ರಿಯೆಯೇ ಸ್ವಾತಂತ್ರ್ಯ ಸಕಾರಣ ಗಣತಂತ್ರವೆಂಬ ಬೆಳೆವಣಿಗೆಗೆ “ನಾನು’ ಎಂಬ ಸರ್ವಾಧಿಕಾರತ್ವ ಪ್ರತಿರೋಧವಾಗುತ್ತದೆ. ಈಗ ನೋಡಿ ನಾನು ಇರುವಲ್ಲಿ ಗಣತಂತ್ರವಿಲ್ಲ, ಗಣತಂತ್ರವಿರುವಲ್ಲಿ ನಾನು ಇರಲಾಗುವುದಿಲ್ಲ. ಆ ನಾನತ್ವವನ್ನು ತ್ಯಜಿಸಿದಾಗ ನಮ್ಮನ್ನು ಆವರಿಸುವ ಆ ಶಕ್ತಿಯೇ ಗಣಪತಿ…

ಈಗ ಅರಿವಾಯಿತು ನೋಡಿ, “ನಾನು’ ಎಂದರೆ ಎಲ್ಲರೂ ತಿಳಿದ ಹಾಗೆ ಆತ್ಮ ಅಲ್ಲ, ಅದು ಅಹಂಕಾರ. ನನ್ನ ದೇಹ, ನನ್ನ ಮನಸ್ಸು, ನನ್ನ ಕಣ್ಣು, ನನ್ನ ಕಿವಿ, ನನ್ನ ಹೆಸರು, ಬ್ಲಾ ಬ್ಲಾ ಬ್ಲಾ ಅವೆಲ್ಲ ನನ್ನದಷ್ಟೆ ಹೊರತು, ನಾನೆಂದರೆ ಅವು ಅಲ್ಲ. ಹಾಗೆಯೇ ಅವೆಲ್ಲವನ್ನು ಹೊರತುಪಡಿಸಿದರೆ ನಾನಿಲ್ಲ, ಅವೆಲ್ಲವೂ ಇದ್ದು ನಾನು ಹೊರಬಂದಾಗ ನಾನೆಲ್ಲ, ಹೀಗೆ ನಾನು ನಾನಿಲ್ಲದಾಗಿ ನಾನೆಲ್ಲವಾದಾಗ ಎಲ್ಲರ ನಲ್ಲನಾಗುತ್ತೇನೆ, ಅದಕ್ಕೆ ನಾನಿಲ್ಲವಾಗುವುದು ಪರಿಪೂರ್ಣವಾಗುವವನ ಮೊದಲ ಹೆಜ್ಜೆ…ನಾನಾದಾಗ ದೇಹ, ನಾನಿಲ್ಲವಾದಾಗ ದೇಶ, ನಾನೆಲ್ಲವಾಗು ವುದು ದೇವ. ಈ ಮೂರು ಆಯಾಮಗಳನ್ನು ಆವರಿಸಿರುವ ಆ ಶಕ್ತಿಯೇ ಓಂ ಗಣಪತಯೇ ನಮಃ, ಇದು ಈ ಮೂರ್ಖನ ಮಾತಲ್ಲ ಮೂರುಕಣ್ಣನ ಮಾತು.

ಆ ಅಣುವಿನ ಪ್ರೋಟಾನ್‌ ವಿಷ್ಣುವಾದರೆ ಅದನ್ನು ಸತತ ಸುತ್ತುವ ಎಲೆಕ್ಟ್ರಾನ್‌ ಲಕ್ಷ್ಮೀ. ಆಕೆ ಸುತ್ತುವುದು ನಿಂತಾಗ ಈ ಜಗತ್ತು ಅಂಧಕಾರವಾಗುತ್ತದೆ, ಆಕೆ ವಿಷ್ಣುವಿನ ಕಾಲೊತ್ತುವ ಸಂಕೇತವೇ ಎಲೆಕ್ಟ್ರಾನ್‌ನ ಪರಿಕ್ರಮ. ಈ ಸತತ ಸುತ್ತುವಿಕೆಯಿಂದ ಆ ಅಣು ವಿಷ್ಣುವಿನ ನಾಭಿಯಿಂದ ಹುಟ್ಟುವ ವಿದ್ಯುತ್ತೇ ಸಕಲ ಸೃಷ್ಟಿಕರ್ತ ಬ್ರಹ್ಮ. 

ಈ ನಿಯಮ ಹೀಗೆ ಅಣುರೇಣುವಿನಿಂದ ಬ್ರಹ್ಮಾಂಡದವರೆಗೂ ನಡೆಯುತ್ತಿರುತ್ತದೆ, ಚತುರ್ಮುಖ ಬ್ರಹ್ಮನಾದ ಆ ವಿದ್ಯುತ್ತು ಆಕಾಶ, ವಾಯು, ಅಗ್ನಿ, ನೀರು ಪೃಥ್ವಿ ಎಂಬ ಪಂಚ ಭೂತಗಳನ್ನು ಒಂದರಿಂದೊಂದರಂತೆ ಸೃಷ್ಟಿಸಿ, ಆ ಐದರನ್ನೂ ಒಟ್ಟುಮಾಡಿ ಇಟ್ಟ ಹೆಸರೇ ಶಿವಾಯನಮಃ ಎಂಬ ಪಂಚಾಕ್ಷರೀ. ಆ ಪಂಚ ಭೂತಗಳನ್ನು ಮಿಶ್ರಣಮಾಡಿ ವಿವಿಧ ಅಣುಗಳ ಸೇರಿಸಿ ಬಹುಕಣ ದೇಹಗಳನ್ನಾಗಿ ಎಂಬತ್ನಾಲ್ಕು ಕೋಟಿ ಯೋನಿಜರನ್ನು ತಯಾರಿ ಸುವ ಶಕ್ತಿಯೇ ಗೌರಿ, ಹಾಗೆ ಗೌರಿ ತಯಾರಿಸಿದ ಜಗತ್ತಿನ ಮೊಟ್ಟ ಮೊದಲ ಅಣುರೇಣುಗಣಗಳ ಮೂರ್ತರೂಪವೇ ಗಣೇಶ, ಅದಕ್ಕಾಗಿ ಆಕೆ ಬಳಸಿದ ಅಂಶವೂ ತನ್ನಿಂದ ವಜ್ಯìವಾದ ಮಲಿನ.

ವೈಜ್ಞಾನಿಕವಾಗಿ ಜಗದ ಜೀವಿಗಳಾಗಿರುವುದು ಹೆಣ್ಣುಗಂಡುಗಳ ಮಿಲನದಿಂದ, ಪ್ರತಿ ಹೆಣ್ಣಿನಲ್ಲೂ ಕೆಲವಂಶ ಗಂಡೂ ಹಾಗೂ ಪ್ರತಿ ಗಂಡಿನಲ್ಲೂ ಕೆಲವಂಶ ಹೆಣ್ಣು ಇರುವುದು ಸಹಜ. ಹೆಣ್ಣಿನ ಇಪ್ಪತ್ತೂಂದು ಮತ್ತು ಗಂಡಿನ ಇಪ್ಪತ್ತೂಂದು ವರ್ಣತಂತುಗಳು ಮತ್ತು ಅವರೀರ್ವರಿಂದಲೂ ಅರ್ಧರ್ಧ ಲಿಂಗನಿರ್ಧಾರಕ ವರ್ಣತಂತುಗಳು ಸೇರಿ ಮೊತ್ತ ನಲವತೂ¾ರು ವರ್ಣತಂತುಗಳ ಜೀವಿಗಳಾಗುವುದುಂಟು ಆದರಿಲ್ಲಿ ಗಣೇಶನಾಗಿರುವುದು ಸ್ತ್ರೀ ಶಕ್ತಿ ಗೌರಿಯ ಗಂಡಿನಂಶದ ಇಪ್ಪತ್ತೂಂದು ವರ್ಣತಂತುಗಳಿಂದ ಮಾತ್ರ. ಸಕಾರಣ ಗಣೇಶನಿಗೆ ಇಪ್ಪತೊಂದು ನಮಸ್ಕಾರಗಳು.

ಆದರೇ ಶಿವಶಕ್ತಿಯರಲ್ಲಿ ಐದಂಶ ಹೆಣ್ಣು ನಾಕಂಶ ಗಂಡು ಇರುವುದರಿಂದ ಅವರನ್ನು ಅರ್ಧನಾರೀಶ್ವರ ಎನ್ನುತ್ತಾರೆ. ಒಂದು ಎಂದರೆ ದೇವ, ಆ ಒಂದು ಎರಡಾಗಿ, ನಾಲ್ಕಾಗಿ, ಎಂಟಾಗಿ, ಹದಿನಾರು, ಮೂವತ್ತೆರಡು, ಅರವತ್ನಾಲ್ಕಾಗಿ…ಅಗಣಿತವಾಗಿ ಬೆಳೆಯುತ್ತಾ ಒಂದಕ್ಕಿಂತ ಹೆಚ್ಚು ಸೇರಿ ಆಗುವ ಚಲನೆಯೆಲ್ಲ “ಜೀವ’. ಆ ಒಂದು ಎಂಬುದು ಆತ್ಮ ಸ್ವರೂಪಿಯಾಗಿ ವಿಶ್ವವೆಲ್ಲಾ ವ್ಯಾಪಿಸಿರುವುದರಿಂದ ಅದನ್ನು ವಿಷ್ಣು ಎಂದು ಕರೆದರು, ಎಲ್ಲರೊಳಗಿರುವ ಆತ್ಮನೂ ಅವನೇ, ಹೊರಗಿರುವ ಪರಮಾತ್ಮನು ಅವನೇ. ಎಲ್ಲೆಲ್ಲೂ ಇರುವ ವಿದ್ಯುತ್‌ ಶಕ್ತಿ ಉಪಕರಣಗಳಲ್ಲಿ ಸೇರಿ ಬಳಕೆಯಾಗುವ ಹಾಗೆ.

ಹುಟ್ಟು ಇಲ್ಲ, ಸಾವು ಇಲ್ಲ, ಹುಟ್ಟು ಹುಟ್ಟಲು ಸಾವು ಹುಟ್ಟಲೇಬೇಕು, ಹುಟ್ಟಿರುವುದೆಲ್ಲಾ ಸಾಯುವುದಾದರೆ ಸಾವಿಗೂ ಹುಟ್ಟಿಗೂ ಸಾವಿರಲೇಬೇಕು, ಸಾವು ಹುಟ್ಟು ಸಾಯುವುದೆಂದರೇ ಹುಟ್ಟೂಸಾವಿಲ್ಲವೆಂದರ್ಥವಲ್ಲವೇ? ಇದು ನಿಜ ಮಿತ್ರರೇ, ತಲೆ ಕೆರೆದುಕೊಳ್ಳುವ ವಿಷಯವಲ್ಲ, ನಿಮಗೆಲ್ಲಾ ಗೊತ್ತಿದೆ, ಎರೆಹುಳ, ಮೊಟ್ಟೆಯಿಂದಲೂ ಹುಟ್ಟುತ್ತೆ, ಎರಡು ತುಂಡಾದರೆ ಎರಡೂ ಜೀವಂತವಾಗುತ್ತೆ, ಅನೇಕ ತುಂಡಾದರೆ ಎಲ್ಲಾ ಹೊಸಹುಳಗಳಾಗುತ್ತೆ ಹಾಗಾದರೇ ಅತ್ಮ ಒಂದೇ ಅನೇಕ ಹೇಗಾಯಿತು ಯೋಚಿಸಿ ನೋಡಿ?  

ಇಲ್ಲಿ ಸಾವು ಇಲ್ಲ ಹುಟ್ಟೂ ಇಲ್ಲ ಅಂದರೆ, ಎರೆಹುಳದ ಕಣಕಣದಲ್ಲಿ ಅತ್ಮವಿರಬೇಕು, ನಮ್ಮಲ್ಲಿರುವ ಆ ಕಣಗಳು ಆಗಸದ ಅಗಣಿತ ತಾರೆಗಳಷ್ಟು, ಆ ಪ್ರತಿ ಕಣಗಳಿಗೂ ಹುಟ್ಟು ಸಾವುಗಳು ಇದ್ದು ಅತ್ಮವನ್ನು ಆವರಿಸಿರುತ್ತವೆ. ದೇಹದ ಎಲ್ಲಾ ಕೆಲಸಗಳನ್ನು ಹಂಚಿಕೊಂಡು ಅವರವರ ಕೆಲಸಗಳನ್ನು ಶ್ರದ್ಧೆ ಯಿಂದ ಮಾಡುತ್ತಿರುತ್ತವೆ, ಪ್ರತಿ ದೇಹದಲ್ಲೂ ಪ್ರತಿ ಕ್ಷಣ ದಲ್ಲೂ ಹುಟ್ಟುಸಾಯುವ ಕಣಗಳು ಕೋಟ್ಯಂತರ, ಅವುಗಳ ಕೆಲಸಕ್ಕನುಸಾರವಾಗಿ ಅವು ಹೆಚ್ಚು ಕಾಲ, ಕಡಿಮೆ ಕಾಲ ಬದುಕಿ ರುತ್ತವೆ, ಇವೆಲ್ಲ ಕೆಲಸ ಮಾಡುವುದೂ ದೇಹದ ಒಳಿತಿಗಾಗಿಯೇ, ಅದಕ್ಕೆಂದೇ ಈ ದೇಹವನ್ನು ನಿತ್ಯಸ್ಮಶಾನ ಎನ್ನುವುದು, ಅದಕ್ಕಾ ಗಿಯೇ ನಾವು ನಿತ್ಯಸ್ನಾನಾದಿಗಳನ್ನು ಆಚರಿಸಬೇಕು, ಈ ದೇಹದ ಅಣುಗಣಗಳ ಅಧಿಪತಿ ಗಣಪತಿಯ ನಾನತ್ವದ ಸ್ವಾರ್ಥ ಕಡಿಮೆಯಾದಾಗ ಸ್ವಾತಂತ್ರ್ಯವೆಂಬ ಸುಖಕೊಟ್ಟು ಸಲಹುತ್ತಾ, ನಾನು ಎಂಬ ಅಹಂ ಮಿತಿಮೀರಿದಾಗ ದುಃಖವೆಂಬ ಬಂಧನಕ್ಕೆ ನಮ್ಮನ್ನು ನೂಕುತ್ತಾ ತನ್ನ ನಿಷ್ಕಾಮಕರ್ಮವನ್ನು ಸಾರುತ್ತಿರುವನು. 

ದೇಹವನ್ನೇ ಒಂದು ದೇಶವೆಂದುಕೊಳ್ಳೋಣ, ನಾವೆಲ್ಲಾ ಆ ಕಣಗಳೆಂದುಕೊಳ್ಳೊಣ, ಎಷ್ಟು ಜನ ಹುಟ್ಟಿದರೂ ಸತ್ತರೂ ದೇಶ ಇದ್ದೇ ಇದೆ, ದೇಶಕ್ಕೆ ಹೇಗೆ ಸರಕಾರವಿದೆಯೋ ಹಾಗೆಯೇ ದೇಹದಲ್ಲೂ ಸೂಕ್ಷ ದೇಹವೆಂಬ ಸರಕಾರವಿದೆ, ಅದರ ನಾಯಕರಾಗಿಯೂ ಅದೇ ದೇಹದ ಒಂದು ಕಣ ಕೆಲಸ ಮಾಡುತ್ತಿರುತ್ತದೆ. ಹಾಗೆ ದೇಶದ ಜನಗಣಮನಗಳ ಆಡಳಿತ ಪ್ರಜಾತಂತ್ರ ಪ್ರಜಾಪ್ರಭುತ್ವ ಪ್ರಜಾನೀತಿಗಳಿಂದ ಯಾವುದೇ ದುರಾಡಳಿತವಿಲ್ಲದೇ ಸರ್ವಾಧಿಕಾರಿಗಳಿಲ್ಲದೇ ಸರ್ವ ಸ್ವಾತಂತ್ರ್ಯವಾಗಿ ಗಣರಾಜ್ಯವೆಂದೆನಿಸುವ ಸೂತ್ರವೇ ಗಣಪತಿ. ಹೆಸರಿಗೆ ಗಣರಾಜ್ಯವೆಂದೆನಿಸಿ ಅಲ್ಲಿ ಸರ್ವಾಧಿಕಾರ ದುರಾಡಳಿತವಿ ದ್ದಲ್ಲಿ ಅಲ್ಲಿ ಗಣೇಶೋತ್ಸವ ಇದ್ದರೂ ಗಣಪತಿಯಿರುವುದಿಲ್ಲ. ಆ ಕಾರಣಕ್ಕಾಗಿಯೇ ತಿಲಕರು ಸ್ವಾತಂತ್ರ್ಯಸಂಗ್ರಾಮಕ್ಕೆ ಗಣೇಶೋತ್ಸವಗಳನ್ನು ಬಳಸಿದ್ದು. 
ಒಂದು ದೇಶಕ್ಕೆ ಪ್ರಧಾನಿಯಾಗುವುದೆಂದರೆ ಎಷ್ಟು ಶ್ರಮಾನು ಭವಗಳು, ತ್ಯಾಗ ಸಂಯಮಗಳು ಬೇಕೆಂದು ನಿಮಗೆ ಗೊತ್ತಿದೆ. ಅದಕ್ಕೆ ಎಲ್ಲರ, ಅಂದರೆ ಕನಿಷ್ಠಪಕ್ಷ ಮುಕ್ಕಾಲು ಪ್ರಜೆಗಳ ಮನಗೆದ್ದಿರಬೇಕು, ಹಾಗೆಯೇ ಪ್ರತಿದೇಹದಲ್ಲೂ ಎಲ್ಲಕಣಗಳ ಮನಗೆದ್ದವರೇ ಆ ದೇಹವನ್ನು ನಡೆಸುತ್ತಾರೆ, ಹಾಗೆ ನಾವು ನಮ್ಮ ದೇಹಗಳನ್ನು ನಡೆಸುತ್ತಿದ್ದೇವೆ. 

ನಾವು ಸರ್ವಾಧಿಕಾರಿಯಾದೊಡೆ ದೇಹದ ಅನೇಕ ಕಣಗಳು ಮನಸ್ಸಿಲ್ಲದ ಮನಸ್ಸಿನಿಂದ ಕೆಲಸ ನಿರ್ವಹಿಸುತ್ತವೆ ಅದರ ಪರಿಣಾಮ ನಮಗೆ ಅನಾರೋಗ್ಯ ಉಂಟಾಗುತ್ತದೆ. ಯಾರಲ್ಲಿ ಗಣತಂತ್ರವಿದೆಯೋ ಅವರಿಗೆ ಎಂದಿಗೂ ರೋಗಭಾದೆಯಿಲ್ಲ, ಅದಕ್ಕಾಗಿ ದೇಹಾಧಿಪತಿ ದೇಹದ ಸ್ವತ್ಛತೆಯ ಬಗ್ಗೆ ಗಮನವಿಡಬೇಕು, ಪ್ರತಿನಿತ್ಯ ವ್ಯಾಯಾಮಕ್ಕೆಂದು ತನಗೆ ಸಿಕ್ಕ ದಿನದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಒಂದು ಗಂಟೆಯನ್ನು ಅರ್ಪಿಸಬೇಕು, ದೇಶದ ಪ್ರಧಾನಿ ದೇಶದ ಎಲ್ಲ ಹಳ್ಳಿ ಪಟ್ಟಣ, ಕಾಡುಮೇಡು, ಸುತ್ತಿ ಕ್ಷೇಮವನ್ನು ಅರಿತು ನಡೆಯುವ ಹಾಗೆ, ನಾವು ಒಂದು ಕಡೆ ಕುಳಿತು ದೇಹದಲ್ಲೆಲ್ಲ ಸುತ್ತಾಡಬೇಕು, ಈ ಕ್ರಿಯೆ ಧ್ಯಾನದ ಒಂದು ಭಾಗ, ನಮ್ಮ ಊರು ಮನೆಗೆ ನಮ್ಮ ಪ್ರಧಾನಿ ಬಂದರೆ ನಮಗೆ ಹೇಗೆ ಹಬ್ಬವೋ ಹಾಗೆ ನಾವು ದೇಹದಲ್ಲಿ ಎಲ್ಲ ಭಾಗಗಳಲ್ಲಿ ಸುತ್ತುವಾಗ ಆ ಎಲ್ಲ ಅಂಗಗಳು ಲವಲವಿಕೆ ತೋರುತ್ತವೆ. 

ಇನ್ನು ನಿಮಗನಿಸಬಹುದು, ಈ ದೇಹ ಹೇಗೆ ಸಾಯುತ್ತದೆಂದು? ಈ ಸ್ಥೂಲ ದೇಹ ಸಾಯುತ್ತದೆ, ಇದರೊಳಗೆ ಇರುವ ಸೂಕ್ಷ್ಮದೇಹ ಸರಕಾರವಾದಲ್ಲಿ ಅದರೊಳಗೊಂದು ಅತ್ಮವನ್ನು ಸುತ್ತುವರಿದಿರುವ ಕಾರಣ ದೇಹವಿರುತ್ತದೆ, ಇದರ ಕೆಲಸವೇ ಮಂಥನ, ಕಾಲಕ್ಕೆ ತಕ್ಕಹಾಗೆ ದೇಹವನ್ನು ನವೀಕರಣಗೊಳಿಸುವುದು, ಕಾಲ ದೇಹಗಳನ್ನು ಸ್ವತ್ಛಗೊಳಿಸುತ್ತದೆ, ಅಂದರೆ ಹಳೆ ದೇಹದಿಂದ ಹೊಸ ದೇಹದ ಹುಟ್ಟು ಮತ್ತು ಹಳೆ ದೇಹದ ಸಾವು, ಈ ಕಾರ್ಯವನ್ನು ಲಿಂಗಭಾಗಗಳು ನಿರ್ವಹಿಸುತ್ತವೆ, ಈ ಲಿಂಗ ಭಾಗಗಳು ದೇಹದ ಅತ್ಯಂತ ಸುಂದರ, ಗೌರವಾನ್ವಿತ ಮುಖ್ಯಭಾಗಗಳಾಗಿರುತ್ತವೆ. ಅದಕ್ಕಾಗಿಯೇ ಈ ಲಿಂಗಭಾಗಗಳನ್ನು ಗಣೇಶನ ತಂದೆತಾಯಿ ಯರೆಂದು ಕರೆದರು. 

ದೇಶದ ರಾಜ್ಯಗಳ ಹಾಗೆ, ದೇಹದ ಅನೇಕ ಮಕ್ಕಳ ಹುಟ್ಟಿಗೆ ಕಾರಣವಾಗುತ್ತವೆ. ಹೇಗೆ ಒಂದು ಗಿಡದ ಪುಷ್ಪವು ಸರ್ವರಿಗೂ ಪ್ರಿಯವೋ, ದೇವನಾಂಪ್ರಿಯವೋ ಹಾಗೇ ಈ ಲಿಂಗಭಾಗಗಳು ಅಶ್ಲೀಲವಲ್ಲ, ಅಸಭ್ಯವೂ ಅಲ್ಲ, ಅಕ್ರಮಣಕಾರರ ಕಾರಣದಿಂದ ಗುಪ್ತಾಂಗವಾಗಿರಬಹುದಷ್ಟೆ. 

ಅದೇ ಕಾರಣಕ್ಕೆ ಶಿವಪುರಾಣದಲ್ಲಿ ನಮ್ಮ ಮೂರುಕಣ್ಣ ಕೂಡಾ ತನ್ನನ್ನು ಪೂಜಿಸುವವರಿಗೆ ಬೇಡವೆಂದು ವಿರೋಧಿಸಿ ಜಗತ್ತಿನ ಮೂಲವಾದ ಲಿಂಗವು ಪೂಜಾರ್ಹವೆಂದು, ಅದು ಹುಟ್ಟು ಸಾವಿನ ಪ್ರತೀಕವೆಂದೂ, ಆದಿ ಅನಾದಿಯೆಂದು, ಸರ್ವವೂ ಐಕ್ಯವಾಗುವ, ಲೀನವಾಗುವ ಲಿಂಗರೂಪವೆಂದು ಸರ್ವರಿಗೂ ಆಧಾರಪ್ರಾಯವೆಂದು ವರ್ಣಿಸುತ್ತಾರೆ. ಸಕಾರಣದಿಂದ ಸಾವಾ ಗಲಿ ಹುಟ್ಟಾಗಲಿ ಭಯಾನಕವಲ್ಲ, ಅದು ಇರುವುದು ಭೌತಿಕ, ರಾಸಾಯನಿಕ ಮೇಲ್ಪದರವಾದ ಶರೀರಗಳಿಗೆ ಮಾತ್ರ. ಈ ಸಾವಿನ ಭಯ ಬಿಟ್ಟವರಿಗೆ ದುಃಖಗಳಿರುವುದಿಲ್ಲ, ದುಃಖವಿರದ ಜಾಗದಲ್ಲಿ ಶಾಂತಿನೆಲೆಗೊಳ್ಳುತ್ತದೆ, ಆ ಶಾಂತಿಯೇ ನಾವು ಹುಡುಕುತ್ತಿರುವ ಕಣ್ಣಿಗೆ ಕಾಣದ ದೇವರು. ಆ ದೇವರ ಲೋಕವಾದ ಬ್ರಹ್ಮಾಂಡವೂ ಇದೇ ರೀತಿಯ ಗಣತಂತ್ರದಿಂದ ಆವರಿಸಿಕೊಂಡಿದೆ. ಅದಕ್ಕಾಗಿ ಗಣಪತಿಯ ಒಂದು ಜನಪ್ರಿಯ ಮಂತ್ರದಲ್ಲಿ ಆತನನ್ನು ಕೋಟಿಸೂರ್ಯ ಸಮಪ್ರಭ ಎಂದು ಕರೆಯುತ್ತಾರೆ. ನಮ್ಮ ಸೂರ್ಯನ ಹೆಸರು ಆರ್ಯಮನ್‌ ಅಂತ, ಆ ಸೂರ್ಯನಲ್ಲಿ ನಮ್ಮ ಭೂಮಿಯಂತಹವನ್ನು ಹುಂಡಿಯಲ್ಲಿ ನಾಣ್ಯದ ಹಾಗೆ ತುಂಬಬಹುದು, ಅಂತಹ ಸೂರ್ಯರು ಸಾವಿರದ ಐನೂರು ಸೂರ್ಯರನ್ನು ಮೇಖಲಾ ಎಂಬ ಸೂರ್ಯನಲ್ಲಿ ತುಂಬಬಹುದು, ಹೀಗೆ ಕೋಟ್ಯಂತರ ಸೂರ್ಯರು ಸೇರಿ ಗಣಪತಿಯಾಗುವನು ಎನ್ನುವುದು  ಮಂತ್ರ. ಹಾಗಿದ್ದಲ್ಲಿ ಈ ಬ್ರಹ್ಮಾಂಡದ ಗಣತಂತ್ರ ನಾವು ಊಹಿಸಲಹುದೇ ಹೇಳಿ ಗೆಳೆಯರೇ? ಹಾಗಾಗಿ ಇವೆಲ್ಲ ಯೋಚನೆಯನ್ನು ಬಿಟ್ಟು ಜಾತಿ ಮತ ಕುಲಗಳನ್ನು ಲೆಕ್ಕಿಸದೇ, ಮಿತ್ರಶತ್ರುಗಳನ್ನು ಸಮವಾಗಿ ಕಾಣುತ್ತಾ, ಎಲ್ಲ ಜೀವಿಗಳನ್ನು ಪ್ರೀತಿಸುತ್ತಾ ಈ ಜಗದ ದೃಶ್ಯಗಳನ್ನು ಸಾಕ್ಷಿ ಭಾವದಿಂದ ಕಾಣುತ್ತಾ ನಾನತ್ವವೆಂಬ ಅಹಂಕಾರವನ್ನು ತೊರೆದು ಗಣಾಧಿಪತಿಯನ್ನು ನಮ್ಮಲ್ಲಿ ಸ್ಥಾಪಿಸಿ ಗಣತಂತ್ರರಾಗೋಣ.

– ಅಹೋರಾತ್ರ

ಟಾಪ್ ನ್ಯೂಸ್

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.