ಬಾವಿಗಳಲ್ಲಿ ಅನಿಲ ಮಿಶ್ರಿತ ಕಲುಷಿತ ನೀರು !

100ಕ್ಕೂ ಅಧಿಕ ಮನೆಗಳಿಗೆ ಪೈಪ್‌ಲೈನ್‌ ಮೂಲಕ ನೀರು ಸರಬರಾಜಿಗೆ ಆಗ್ರಹ

Team Udayavani, May 21, 2019, 6:02 AM IST

kalushita-neeru

ಕಾಪು : ಕಾಪು ಪುರಸಭೆ ವ್ಯಾಪ್ತಿಯ ಮೂಳೂರು ತೊಟ್ಟಂ ವಾರ್ಡ್‌ನ ಸುತ್ತಲಿನ 100ಕ್ಕೂ ಅಧಿಕ ಮನೆಗಳ ಜನರನ್ನು ವರ್ಷಪೂರ್ತಿ ಕೆಂಪು ನೀರಿನ ಸಮಸ್ಯೆ ಕಾಡುತ್ತಿದೆ. ಸಮರ್ಪಕ ನೀರಿನ ಪೂರೈಕೆಯಿಲ್ಲದೇ ಇಲ್ಲಿನ ಜನರು ವರ್ಷಪೂರ್ತಿ ಅನಿಲ ಮಿಶ್ರಿತ ನೀರನ್ನೇ ತಮ್ಮ ದೈನಂದಿನ ಬಳಕೆಗೆ ಉಪಯೋಗಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

ನೀರಿಗೆ ಕೊರತೆಯಿಲ್ಲ, ಆದರೆ ಬಳಸಲು ಯೋಗ್ಯವಲ್ಲ
ತೊಟ್ಟಂ ನಿವಾಸಿಗಳಿಗೆ ನೀರಿಗೇನೂ ಬರವಿಲ್ಲ. ಮನೆಯಂಗಳದಲ್ಲೇ ಇರುವ ಬಾವಿಯಲ್ಲಿ ವರ್ಷಪೂರ್ತಿ ನೀರು ದೊರಕುತ್ತದೆಯಾದರೂ ಅದನ್ನು ಬಳಸುವುದು ಹೇಗೆ ಎಂಬ ಪ್ರಶ್ನೆ ಇಲ್ಲಿನ ನಿವಾಸಿಗಳನ್ನು ಕಾಡುತ್ತಿದೆ. ಪಂಚಾಯತ್‌ ಹೋಗಿ ಪುರಸಭೆ ಬಂದರೂ ನಮ್ಮ ನೀರಿನ ಬವಣೆ ಮಾತ್ರಾ ಬಗೆಹರಿದಿಲ್ಲವಲ್ಲಾ ? ಎಂಬ ಕೊರಗು ತೊಟ್ಟಂ ವಾರ್ಡ್‌ನ ಜನರದ್ದಾಗಿದೆ.

ಎಲ್ಲೆಲ್ಲಿ ಕೆಂಪು ನೀರು
ಮೂಳೂರು ತೊಟ್ಟಂ ವಾರ್ಡ್‌ನ ಮಹಾಲಕೀÒ$¾ ನಗರ ಕಾಲೊನಿ, ವೀರ ಮಾರುತಿ ಕಾಲೊನಿ ಮತ್ತು ಫಿಶರೀಸ್‌ ಶಾಲೆಯ ಬಳಿ ಮತ್ತು ವಾರ್ಡ್‌ಗೆ ತಾಗಿಕೊಂಡಿರುವ ಕರಾವಳಿ ಪ್ರದೇಶದ ಬಹುತೇಕ ಬಾವಿಗಳಲ್ಲಿ ಎಣ್ಣೆ ಮಿಶ್ರಿತ ಕೆಂಪು ನೀರು ದೊರಕುತ್ತಿದ್ದು, ಪರ್ಯಾಯ ವ್ಯವಸ್ಥೆಗಳಿಲ್ಲದ ಕಾರಣ ಜನ ಕೆಂಪು ನೀರನ್ನೇ ದಿನಬಳಕೆಗಾಗಿ ಬಳಸಿಕೊಳ್ಳ ಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಇಲ್ಲಿನ ಎಸ್‌.ಸಿ. ಕಾಲೊನಿಯಲ್ಲಿ ಟ್ಯಾಂಕ್‌ನ ಕೊರತೆಯಿಂದಾಗಿ ನೀರಿನ ಮಸಸ್ಯೆ ಉಲ½ಣಿಸಿದೆ.

ಪುರಸಭಾ ಸದಸ್ಯೆಯ ಮನೆಯಲ್ಲೂ ಕೆಂಪು ನೀರು ಬಳಕೆ
ಮೂಳೂರು ತೊಟ್ಟಂ ವಾರ್ಡ್‌ನ ಬಹುತೇಕ ಮನೆಯಯವರು ಕುಡಿಯುವ ನೀರನ್ನು ತಮ್ಮ ಪರಿಚಿತರ ಮನೆಗಳಿಂದ ತರುತ್ತಿದ್ದರೆ, ಕೆಲವು ಮನೆಯವರು ಮನೆಯಲ್ಲೇ ನೀರು ಶುದೀªಕರಣ ಘಟಕವನ್ನು ಅಳವಡಿಸಿಕೊಂಡು ನೀರನ್ನು ಉಪಯೋಗಿಸುತ್ತಿದ್ದಾರೆ. ಕಾಪು ಪುರಸಭೆಯ 13ನೇ ತೊಟ್ಟಂ ವಾರ್ಡ್‌ನ ಸದಸ್ಯೆ ಶಾಂಭವಿ ಕುಲಾಲ್‌ ಅವರ ಮನೆಯ ಬಾವಿಯಲ್ಲೂ ಕೆಂಪು ನೀರೇ ಸಿಗುತ್ತಿದ್ದು, ಅವರು ಕೂಡಾ ಇಲ್ಲಿನ ಸಮಸ್ಯೆ ಬಗೆಹರಿಸಲಾಗದೇ ಕೆಂಪು ನೀರನ್ನೇ ಬಳಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

ತೊಟ್ಟಂ ವಾರ್ಡ್‌ನಲ್ಲಿ ಕೆಂಪು ನೀರಿನ ಸಮಸ್ಯೆ ಇರುವಲ್ಲಿಗೆಲ್ಲಾ ಪೈಪ್‌ಲೈನ್‌ ಅಳವಡಿಕೆಯಾಗಬೇಕೆನ್ನುವುದು ಇಲ್ಲಿನ ಜನರ ಆಗ್ರಹವಾಗಿದೆ. ಪುರಸಭಾ ಸದಸ್ಯೆಯ ಬಳಿ ಕೇಳಿದರೆ ನಾನು ಬಹಳಷ್ಟು ಸಾಮಾನ್ಯ ಸಭೆಗಳಲ್ಲಿ ನಮ್ಮ ವಾರ್ಡ್‌ನ ಸಮಸ್ಯೆಯನ್ನು ಕೌನ್ಸಿಲ್‌ನ ಮುಂದಿಟ್ಟಿದ್ದೇನೆ. ಸಮರ್ಪಕ ಜಾಗದ ಕೊರತೆಯಿಂದಾಗಿ ಪೈಪ್‌ಲೈನ್‌ ವಿಳಂಭವಾಗುತ್ತಿದೆ ಎಂಬ ಉತ್ತರ ದೊರಕುತ್ತಿದೆ ಎನ್ನುತ್ತಿದ್ದಾರೆ ಸ್ಥಳೀಯರು.

ವಾರದೊಳಗೆ ಕೆಲಸ ಪ್ರಾರಂಭದ ನಿರೀಕ್ಷೆ
ಮೂಳೂರು ತೊಟ್ಟಂ ವ್ಯಾಪ್ತಿಯ ಎಲ್ಲಾ ಪ್ರದೇಶಗಳಲ್ಲೂ ಪೈಪ್‌ಲೈನ್‌ ಹಾದು ಹೋಗಿದೆ. ಕೆಂಪು ನೀರು ಬರುತ್ತಿರುವ ಮನೆಯವರು ಅರ್ಜಿ ಕೊಟ್ಟರೆ ಅವರ ಮನೆಗೆ ಪೈಪ್‌ಲೈನ್‌ ಜೋಡಿಸಲಾಗುವುದು. ಪೈಪ್‌ಲೈನ್‌ ವಿಸ್ತರಣೆಗಾಗಿ 4 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ. ಅದರೊಂದಿಗೆ 4.50 ಲಕ್ಷ ರೂ. ವೆಚ್ಚದ ಕುಡಿಯುವ ಶುದೀªಕರಣ ಘಟಕ ಅಳವಡಿಕೆಗೆ ಟೆಂಡರ್‌ ಕರೆದು ಕಾರ್ಯಾದೇಶ ನೀಡಲಾಗಿದೆ. ಒಂದು ವಾರದೊಳಗೆ ಕೆಲಸ ಪ್ರಾರಂಭವಾಗುವ ನಿರೀಕ್ಷೆಯಿದೆ.
-ರಾಯಪ್ಪ ಮುಖ್ಯಾಧಿಕಾರಿ, ಕಾಪು ಪುರಸಭೆ

ಪೈಪ್‌ಲೈನ್‌ ಜೋಡಣೆಯಾಗಿಲ್ಲ
ಮೂಳೂರು ವೀರ ಮಾರುತಿ ಕಾಲೊನಿಯಲ್ಲಿ ಮನೆ ಕಟ್ಟಿ 8 ವರ್ಷ ಕಳೆದಿದೆ. ಅಂದಿನಿಂದ ಇಂದಿನವರೆಗೂ ನಮ್ಮ ಬಾವಿಯಲ್ಲಿ ಕೆಂಪು ನೀರೇ ದೊರಕುತ್ತಿದೆ. ನೀರನ್ನು ಸಿಂಟೆಕ್ಸ್‌ನಲ್ಲಿ ತುಂಬಿಸಿಟ್ಟರೆ ಹಲವು ಗಂಟೆಗಳ ಬಳಿಕ ತಿಳಿ ಬಣ್ಣಕ್ಕೆ ತಿರುಗುತ್ತದೆ. ನಮಗೆ ಪುರಸಭೆಯ ಪೈಪ್‌ಲೈನ್‌ ಬೇಕೆಂಬ ಬೇಡಿಕೆಯನ್ನು ಜನಪ್ರತಿನಿಧಿಗಳ ಮೂಲಕವಾಗಿ ಪುರಸಭೆಗೆ ಪ್ರಸ್ತಾವನೆ ಇಟ್ಟಿದ್ದೇವೆ. ಆದರೆ ಇದುವರೆಗೂ ಪೈಪ್‌ಲೈನ್‌ ಜೋಡಣೆಯಾಗಿಲ್ಲ. ಈ ಭಾಗದ ಎಲ್ಲಾ ಮನೆಗಳ ಜನರಿಗೂ ಕೆಂಪು ನೀರೇ ದೊಡ್ಡ ಸಮಸ್ಯೆಯಾಗಿ ಬಿಟ್ಟಿದೆ. ಮಳೆಗಾಲದಲ್ಲಂತೂ ಈ ಸಮಸ್ಯೆ ಉಲ½ಣಗೊಳ್ಳುತ್ತದೆ. ಪುರಸಭೆ ಶೀಘ್ರ ಸ್ಪಂಧಿಸಬೇಕಿದೆ.
-ಸದಾಶಿವ ಸಾಲ್ಯಾನ್‌ ವೀರಮಾರುತಿ ಕಾಲನಿ, ಮೂಳೂರು

ಅನುಷ್ಟಾನ ವಿಳಂಭವಾಗುತ್ತಿದೆ
ತೊಟ್ಟಂ ವಾರ್ಡ್‌ನ್ನು ಕಾಡುತ್ತಿರುವ ಕೆಂಪು ನೀರಿನ ಸಮಸ್ಯೆಯ ಬಗ್ಗೆ ಪ್ರತೀ ಸಾಮಾನ್ಯ ಸಭೆಯಲ್ಲೂ ವಿಷಯ ಪ್ರಸ್ತಾಪಿಸುತ್ತಾ ಬಂದಿದ್ದೇನೆ. ಪುರಸಭೆ ಕೂಡಾ ಅದಕ್ಕೆ ಪೂರಕವಾಗಿ ಸ್ಪಂಧಿಸುವ ಪ್ರಯತ್ನ ಮಾಡುತ್ತಿದೆ.
ಮೂಳೂರು ಫಿಶರೀಸ್‌ ಶಾಲೆಯ ಬಳಿಯ ಟ್ಯಾಂಕ್‌ನಿಂದ ನೀರು ಪೂರೈಸಲು ಯೋಜನೆ ರೂಪಿಸಲಾಗಿದ್ದು, ಪೈಪ್‌ಲೈನ್‌ಗಾಗಿ ಪುರಸಭೆ 4.90 ಲಕ್ಷ ರೂ.
ಅನುದಾನವನ್ನು ಮೀಸಲಿಟ್ಟಿದೆ. ಆದರೆ ಜಾಗದ ಕೊರತೆಯಿಂದ ಯೋಜನೆ ಅನುಷ್ಟಾನಕ್ಕೆ ವಿಳಂಭವಾಗುತ್ತಿದೆ. ಸ್ಥಳೀಯರೊಂದಿಗೆ
ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು.
ಶಾಂಭವಿ ಕುಲಾಲ್‌ ಸದಸ್ಯರು, ಕಾಪು ಪುರಸಭೆ

ವಾರ್ಡ್‌ನವರ ಬೇಡಿಕೆಯೇನು ?
– ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸುವುದು
– ಅನಿಲ ಮಿಶ್ರಿತ ಕೆಂಪು ನೀರಿನ ಮೂಲ ಹುಡುಕುವುದು
– ಟ್ಯಾಂಕರ್‌ ಮೂಲಕ ನೀರು ಪೂರೈಕೆ
– ಪೈಪ್‌ಲೈನ್‌ ಜೋಡಣೆಗೆ ಅವಶ್ಯಕ ಕ್ರಮ ತೆಗೆದುಕೊಳ್ಳುವುದು
– ಮನೆಮನೆಗೆ ಪೈಪ್‌ಲೈನ್‌ ಜೋಡಣೆ

– ರಾಕೇಶ್‌ ಕುಂಜೂರು

ಟಾಪ್ ನ್ಯೂಸ್

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ ಅಡಿಗೆ ಸಿಲುಕಿದ ಬೈಕ್; ಯಕ್ಷಗಾನ ಕಲಾವಿದ ಸ್ಥಳದಲ್ಲೇ ಮೃತ್ಯು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.