ರೈತರ ಮನೆಗೆ ತೆರಳಿ ಕೃಷಿಗೆ ಪ್ರೇರೇಪಿಸಿ: ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು

Team Udayavani, Jun 27, 2019, 10:18 AM IST

ಉಡುಪಿ: ಪ್ರತಿ ಹಳ್ಳಿಯ ಯುವಕರು ರೈತರ ಮನೆ ಮನೆಗೆ ತೆರಳಿ ಕೃಷಿ ಮಾಡುವಂತೆ ವಿನಂತಿಸಬೇಕಾಗಿದೆ ಎಂದು ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮನವಿ ಮಾಡಿದ್ದಾರೆ.

ಉಡುಪಿ ಜಿಲ್ಲೆಯೊಂದರಲ್ಲೆ ಸುಮಾರು 5-6 ಸಾವಿರ ಹೆಕ್ಟೇರ್‌ ಭತ್ತ ಬೆಳೆಯುವ ಭೂಮಿ ಹಡೀಲು ಬಿದ್ದಿದೆ ಎಂಬ ವರದಿ ಅತ್ಯಂತ ಕಳವಳಕಾರಿಯಾಗಿದೆ. ಈ ರೀತಿ ಮಾಡುತ್ತ ಹೋದರೆ “ಭೂಮಿ ಸಸ್ಯ ಶಾಮಲೆಯಾಗಲಿ, ದೇಶಕ್ಕೆ ಸಮೃದ್ಧಿಯಾಗಲಿ’ ಎಂದು ಪ್ರಾರ್ಥಿಸುವುದಕ್ಕೆ ಅರ್ಥವೇ ಇರುವುದಿಲ್ಲ. ಆದ್ದರಿಂದ ರೈತ ಬಂಧುಗಳು ಉಳುವ ಫ‌ಲವತ್ತಾದ ಭೂಮಿಯನ್ನು ಹಡೀಲು ಬಿಡಬಾರದು. ಕನಿಷ್ಠ ಒಂದು ಬೆಳೆಯನ್ನಾದರೂ ತೆಗೆಯಲು ಮುಂದಾಗಬೇಕು. ಸಾವಿರ ಸಮಸ್ಯೆಗಳನ್ನು (ಹವಾಮಾನ) ಸಹಿಸಿಕೊಂಡು ಸೈನಿಕರು ದೇಶದ ಸುರಕ್ಷತೆಗಾಗಿ ಬದುಕು ಸವೆಸುತ್ತಿದ್ದಾರೆ. ಅದೇರೀತಿ ಕೃಷಿಗೆ ಸಮಸ್ಯೆ ಸಾವಿರವಿದ್ದರೂ ಕೃಷಿಯಿಂದ ದೂರವಾದರೆ ಇಡೀ ದೇಶಕ್ಕೆ ಗಂಡಾಂತರ ನಿಶ್ಚಿತ. ಆದ್ದರಿಂದ ಪ್ರತೀ ಹಳ್ಳಿ, ಊರಿನ ಯುವಕರು ಗ¨ªೆ ಹಡೀಲು ಬಿಟ್ಟ ರೈತರ ಮನೆ ಮನೆಗೆ ತೆರಳಿ ಕೃಷಿ ಮಾಡುವಂತೆ ವಿನಂತಿಸಬೇಕು. ಈ ಕಾರ್ಯ ಅತ್ಯಂತ ತುರ್ತಾಗಿ ನಡೆಯಲಿ’ ಎಂದು ಶ್ರೀಗಳು ತಮ್ಮ ವಿಶೇಷ ಸಂದೇಶದಲ್ಲಿ ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ