ಪರ್ಕಳ: ಗಾಳಿ – ಮಳೆಯಿಂದ ಅಂಗಡಿ ಮೇಲೆ ಬಿದ್ದ ಮರ; ಅಪಾರ ನಷ್ಟ
Team Udayavani, Jun 30, 2022, 9:04 PM IST
ಉಡುಪಿ: ಗುರುವಾರ ಸುರಿದ ಧಾರಕಾರ ಮಳೆಯಿಂದ ಪರ್ಕಳದ ಮೀನು ಮಾರುಕಟ್ಟೆ ಎದುರಿನ ಅಂಗಡಿಯೊಂದರ ಮೇಲ್ಛಾವಣಿ ಮೇಲೆ ಮರ ಬಿದ್ದು ಹಾನಿಯಾಗಿರುವ ಘಟನೆ ನಡೆದಿದೆ.
ಪರ್ಕಳ ಇಲ್ಲಿನ ಮೀನು ಮಾರುಕಟ್ಟೆಯ ಎದುರಿರುವ ಆಶಾ ಜನರಲ್ ಸ್ಟೋರ್ ಮುಂಭಾಗದಲ್ಲಿ ರಸ್ತೆಯ ಅಂಚಿನಲ್ಲಿ ಬೆಳೆದ ಬಾದಾಮಿ ಮರವೊಂದು ಬುಡ ಸಮೇತವಾಗಿ ಎದ್ದು ಸ್ಟೋರ್ ಅಂಗಡಿಯ ತಗಡಿನ ಸೀಟಿನ ಮೇಲೆ ಬಿದ್ದು ನಷ್ಟವುಂಟಾಗಿದೆ.
ಅದೇ ರೀತಿ ಪರ್ಕಳ ಪೇಟೆಯಲ್ಲಿ ಉದ್ಯಮಿ ಗೋಪಾಲ್ ಆಚಾರ್ಯ ತೆಂಗಿನ ಮರ ಒಂದು ಬುಡ ಸಮೇತ ಗಾಳಿ ಮಳೆಗೆ ಪಕ್ಕದಲ್ಲಿರುವ ಪರ್ಕಳದ ಅಂಚೆ ಕಚೇರಿಯ ಕಟ್ಟಡದ ಮೇಲೆ ಬಿದ್ದು ಹಾನಿಯಾಗಿದೆ.