ಮೂಳೂರಿನಲ್ಲಿ ಕಡಲ್ಕೊರೆತ ತೀವ್ರ: ತುರ್ತು ಕಾಮಗಾರಿ
Team Udayavani, Jul 7, 2022, 1:46 AM IST
ಕಾಪು: ಕಾಪು ಪುರಸಭೆ ವ್ಯಾಪ್ತಿಯ ಮೂಳೂರು ತೊಟ್ಟಂ ಪರಿಸರದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಕಳೆದ ಎರಡು ದಿನಗಳಲ್ಲಿ ಮತ್ತೆ ನಾಲ್ಕು ತೆಂಗಿನ ಮರಗಳು ಸಮುದ್ರ ಪಾಲಾಗಿವೆ.
ಮೂಳೂರು ತೊಟ್ಟಂ ವಾರ್ಡ್‌ನ ಬಾಬು ಶೆಟ್ಟಿ, ಸುನಂದಾ ಪೂಜಾರ್ತಿ ಅವರ ಜಾಗ ಮತ್ತು ಖಾಸಗಿ ಗೆಸ್ಟ್ ಹೌಸ್ ಪರಿಸರದಲ್ಲಿ ಆಗುತ್ತಿದ್ದ ಕಡಲ್ಕೊರೆತ ಸಮಸ್ಯೆ ದಿನೇಶ್ ಪೂಜಾರಿ, ಪದ್ಮಾವತಿ, ಡೇಲಿಯಾ, ಮಹಾಲಿಂಗ ಅಂಚನ್ ಅವರ ಜಾಗಕ್ಕೂ ವಿಸ್ತರಿಸಿದೆ. ಸ್ಥಳೀಯರಾದ ಪದ್ಮಾವತಿ, ದಿನೇಶ್ ಪೂಜಾರಿ ಅವರಿಗೆ ಸೇರಿದ ನಾಲ್ಕೈದು ತೆಂಗಿನ ಮರಗಳು ಉರುಳುವ ಭೀತಿ ಎದುರಾಗಿದೆ.
ಈ ಹಿಂದೆ ಹಾಕಲಾಗಿದ್ದ ತಡೆಗೋಡೆ ಯನ್ನು ಕೊರೆದುಕೊಂಡು ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು, ಅಪಾರ ಪ್ರಮಾಣದ ಕಲ್ಲುಗಳು ಸಮುದ್ರ ಪಾಲಾಗುತ್ತಿವೆ.
ಕಾಮಗಾರಿ ಆರಂಭ
ಶಾಸಕ ಲಾಲಾಜಿ ಆರ್. ಮೆಂಡನ್ ಮತ್ತು ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರು ಅಧಿಕಾರಿಗಳ ಜತೆಗೂಡಿ ಮಂಗಳವಾರ ಮೂಳೂರು ತೊಟ್ಟಂನ ಕಡಲ್ಕೊರೆತದ ಪ್ರದೇಶಕ್ಕೆ ಭೇಟಿ ನೀಡಿ ಹಾನಿ ಪರಿಶೀಲನೆ ನಡೆಸಿದ್ದರು. ಈ ವೇಳೆ ನೀಡಿದ್ದ ಭರವಸೆಯಂತೆ ತುರ್ತಾಗಿ ತಾತ್ಕಾಲಿಕ ತಡೆಗೋಡೆ ರಚನೆ ಕಾಮಗಾರಿಗೆ ಬುಧವಾರ ಚಾಲನೆ ದೊರಕಿದ್ದು ಈಗಾಗಲೇ ಟಿಪ್ಪರ್‌ಗಳಲ್ಲಿ ಕಲ್ಲುಗಳು ಸ್ಥಳಕ್ಕೆ ಬಂದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆ.21 : ಕಟಪಾಡಿಯಲ್ಲಿ ಯುವವಾಹಿನಿ ಡೆನ್ನಾನ ಡೆನ್ನಾನ ಸಾಂಸ್ಕೃತಿಕ ಸ್ಪರ್ಧೆ
ಉಡುಪಿಯಲ್ಲಿ ನಾಳೆ ಕೃಷ್ಣಾಷ್ಟಮಿ, ನಾಡಿದ್ದು ವಿಟ್ಲ ಪಿಂಡಿ
ಶಿರ್ವ: ಮನೆಗೆ ನುಗ್ಗಿ ಹಲ್ಲೆ, ಹಾನಿ;ಮೂವರ ವಿರುದ್ಧ ಪ್ರಕರಣ ದಾಖಲು
ಉಡುಪಿ: ಕಾನೂನು ಬಾಹಿರ ಚಟುವಟಿಕೆಗಳಿಗೆ ಬ್ರೇಕ್, ಕೋಮು ಸೌಹಾರ್ದತೆಗೆ ಆದ್ಯತೆ; ನೂತನ ಎಸ್ಪಿ
ಉಡುಪಿ: ಸಾರ್ವಕರ್ ಫ್ಲೆಕ್ಸ್: ಬಿಜೆಪಿ ಯುವ ಮೋರ್ಚದಿಂದ ಕಾಂಗ್ರೆಸ್ ಕಚೇರಿ ಮುತ್ತಿಗೆ ಯತ್ನ