ಶಿರ್ವ: ರಸ್ತೆಗೆ ಉರುಳಿ ಬಿದ್ದ ಮರ, ಬೈಕ್ ಸವಾರನಿಗೆ ಗಾಯ
Team Udayavani, May 19, 2022, 10:34 AM IST
ಶಿರ್ವ: ಇಲ್ಲಿನ ಮುಖ್ಯರಸ್ತೆಯ ಸಂತ ಮೇರಿ ಪ.ಪೂ. ಕಾಲೇಜು ಬಳಿ ಭಾರೀ ಗಾತ್ರದ ಮರವೊಂದು ಹೈಟೆನ್ಶನ್ ತಂತಿಯ ಮೇಲಿನಿಂದ ರಸ್ತೆಗೆ ಬಿದ್ದು ದ್ವಿಚಕ್ರ ವಾಹನ ಸವಾರರೋರ್ವರು ಗಾಯಗೊಂಡ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
ಬೆಳ್ಮಣ್ ನ ರಮೇಶ್ ಗಾಯಗೊಂಡವರು. ಸಹಸವಾರ ಸಣ್ಣಪುಟ್ಟ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಬೆಳ್ಮಣ್ ನಿಂದ ಸಹೋದರರಿಬ್ಬರು ಕೆಲಸಕ್ಕೆಂದು ಉಡುಪಿ ಕಡೆಗೆ ತೆರಳುತ್ತಿದ್ದ ವೇಳೆ ಭಾರೀ ಗಾತ್ರದ ಮರವೊಂದು ಹೈಟೆನ್ಶನ್ ತಂತಿಯ ಮೇಲೆ ಬಿದ್ದು ರಸ್ತೆಗೆ ಉರುಳಿ ಬಿದ್ದಿದೆ. ವಿದ್ಯುತ್ ಟ್ರಾನ್ಸ್‌ಫಾರ್ಮರ್ ಗೂ ಹಾನಿಯಾಗಿದ್ದು, ಇತರೆ ಮೂರು ವಿದ್ಯುತ್ ಕಂಬಗಳು ವಾಲಿ ನಿಂತಿದ್ದು, ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ಸ್ವಲ್ಪದರಲ್ಲಿಯೇ ತಪ್ಪಿದೆ.
ಗಾಯಗೊಂಡವರನ್ನು ಶಿರ್ವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ:ಶಿರ್ವ: ತಂದೆ -ತಾಯಿಯ ವಿವಾಹ ವಾರ್ಷಿಕೋತ್ಸವಕ್ಕೆ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಿದ ಮಕ್ಕಳು
ಸುಮಾರು ಒಂದು ಗಂಟೆಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಶಿರ್ವ ಗ್ರಾ. ಪಂ. ಅಧ್ಯಕ್ಷ ಕೆ.ಆರ್. ಪಾಟ್ಕರ್ ನೇತೃತ್ವದಲ್ಲಿ ರಸ್ತೆಗೆ ಬಿದ್ದಿದ್ದ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.