ಹೆಬ್ರಿ -ಹೊಸೂರು ರಸ್ತೆಗೆ ಬಾಗಿದ ಮರ-ಬಳ್ಳಿ

ಅಪಾಯಕಾರಿ ಸ್ಥಿತಿಯಲ್ಲಿ ವಿದ್ಯುತ್‌ ಲೈನ್‌

Team Udayavani, Jun 25, 2019, 5:44 AM IST

ಹೆಬ್ರಿ: ಹೆಬ್ರಿ-ಹೊಸೂರು ರಸ್ತೆಯ ನಾಗಬನ ಸಮೀಪವಿರುವ ಬೃಹತ್‌ ಮರ ಹಾಗೂ ಅದನ್ನು ಆವರಿಸಿರುವ ಬಿಳಲುಗಳು ರಸ್ತೆಗೆ ಬಾಗಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಇದರ ನಡುವೆ ವಿದ್ಯುತ್‌ ಲೈನ್‌ ಕೂಡ ಹಾದು ಹೋಗಿದ್ದು ತೀರಾ ಅಪಾಯ ಕಾಡಿದೆ.

ಬಿಳಲುಗಳು ರಸ್ತೆಯ ಮೇಲೆ ನೇತಾಡುತ್ತಿದೆ. ಇವುಗಳು ಪಾದಚಾರಿಗಳು ಮತ್ತು ವಾಹನಗಳಿಗೆ ತಾಗುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಇನ್ನು ಕಳೆದ ವರ್ಷ ಇಲ್ಲಿನ ನಾಗಬನ ಸಮೀಪ ಬಿದ್ದಿದ್ದ ಮರಗಳ ತುಂಡುಗಳನ್ನು ರಸ್ತೆ ಬದಿಯಿಂದ ತೆರವುಗೊಳಿ ಸದೇ ಹಾಗೇ ಬಿಡಲಾಗಿದ್ದು ಸಮಸ್ಯೆ ಯಾಗಿದೆ.

ಅಪಾಯದಲ್ಲಿ ವಿದ್ಯುತ್‌ ತಂತಿ

ಈ ಮಾರ್ಗದಲ್ಲಿ ಹಾದು ಹೋದ ವಿದ್ಯುತ್‌ ಲೈನ್‌ನ ತಂತಿಗಳಿಗೆ ಬಿಳಲುಗಳು ಆವರಿಸಿವೆ. ಮಳೆಗೆ ಮರ ಬಿದ್ದರೆ, ವಿದ್ಯುತ್‌ ಕಂಬಗಳೂ ಧರೆಗುರುಳುವ ಸಾಧ್ಯತೆ ಇದೆ. ಸಣ್ಣ ಗಾಳಿ ಬಂದರೂ ಈ ಭಾಗದ ಮನೆಗಳಿಗೆ ಪದೇ ಪದೇ ವಿದ್ಯುತ್‌ ಕಡಿತವಾಗುತ್ತಿದೆ. ತಂತಿಗಳು ಶಾರ್ಟ್‌ ಆಗಿ ಫ್ಯೂಸ್‌ ಹೋಗುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಪ್ರಯೋಜನವಾಗಿಲ್ಲ

ಕೆಲವು ತಿಂಗಳುಗಳ ಹಿಂದೆ ಸ್ಥಳೀಯರಾದ ಸೀತಾನದಿ ವಿಟuಲ ಶೆಟ್ಟಿಯವರು ಬಿಳಲುಗಳನ್ನು ತೆಗೆಯುವ ಯತ್ನ ಮಾಡಿದ್ದರು. ಆದರೆ ಈಗ ಮತ್ತೆ ಅವುಗಳು ಹಬ್ಬಿ, ಸಮಸ್ಯೆಯಾಗಿದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ