ಮಲ್ಪೆ, ಉಡುಪಿ, ಮಣಿಪಾಲದಲ್ಲಿ ಹೆಲಿಟೂರಿಸಂ ಹಾರಾಟ

Team Udayavani, Jan 10, 2019, 8:25 PM IST

ಮಲ್ಪೆ: ಹೆಲಿಕಾಪ್ಟರ್‌ನಲ್ಲಿ ಕುಳಿತುಕೊಳ್ಳಬೇಕು, ಬಾನಂಗಳದಲ್ಲಿ ಹಾರಾಡಬೇಕು ಎಂಬ ತುಡಿತ ಇದ್ದವರು ಜ. 11ರಿಂದ ಆದಿವುಡುಪಿ ಹೆಲಿಪ್ಯಾಡ್‌ ಹೋದರೆ ಹೆಲಿಕಾಪ್ಟರ್‌ ಏರಿ ಒಂದು ಸುತ್ತ ಪ್ರಯಾಣ ಬೆಳಸಬಹುದು. ಬಾನಂಗಳದಲ್ಲಿ ಹಕ್ಕಿಯಂತೆ ಹಾರಾಡಿ, ಉಡುಪಿ ಸುತ್ತ ಮತ್ತಲಿನ ಸೌಂದರ್ಯವನ್ನು ಮೇಲಿಂದ ವೀಕ್ಷಿಸಿ ಕಣ್ತುಂಬಿಕೊಳ್ಳಬಹುದು.

ಜ.11, 12 ಮತ್ತು 13ರಂದು ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಆದಿವುಡುಪಿ ಎನ್‌ಸಿಸಿ ಮೈದಾನದಲ್ಲಿ  ಹಾರಾಟ ನಡೆಯಲಿದೆ. ಉಡುಪಿಯನ್ನು ಕೆಳಗಿನಿಂದ ನೋಡುವುದಕ್ಕೂ ಮೇಲಿನಿಂದ ಹಾರಾಡಿಕೊಂಡು ಸವಿಯುದಕ್ಕೂ ವ್ಯತ್ಯಾಸ ಇದೆ. ಪ್ರವಾಸೋದ್ಯಮವನ್ನು ಇನ್ನಷ್ಟು ಆಕರ್ಷಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಮಂತ್ರ ಟೂರಿಸಂ ಡವೆಲಪ್‌ಮೆಂಟ್‌ ಕಂಪೆನಿ, ಮತ್ತು ಚಿಪ್ಸನ್‌ ಕಂಪೆನಿ ಕಳೆದ ವರ್ಷವೇ ಹೆಲಿಟೂರಿಸಂನ್ನು ಆರಂಭಿಸಿವೆ.

ಕುಂದಾಪುರದಲ್ಲಿ 3 ದಿನಗಳ ಕಾಲ ಹೆಲಿಟೂರಿಸಂ ನಡೆಸಲಾಗಿದೆ. ಹೆಲಿಕಾಪ್ಟರ್‌ನಲ್ಲಿ ಉಡುಪಿ, ಮಲ್ಪೆ ಮೀನುಗಾರಿಕೆ ಬಂದರು, ಸೈಂಟ್‌ಮೇರಿಸ್‌, ಹೂಡೆ, ಮಣಿಪಾಲ ಸುತ್ತಮುತ್ತಲ ಪರಿಸರವನ್ನು ಬಾನಂಗಳದಲ್ಲಿ ಹಾರಾಟ ನಡೆಸಿ ಪ್ರದರ್ಶನ ಮಾಡುತ್ತಿದೆ.

ಜಾಲಿರೈಡ್‌, ಅಡ್ವೆಂಚರ್‌ ರೈಡ್‌
ಹೆಲಿಕಾಪ್ಟರ್‌ನಲ್ಲಿ ಹಾರಬಯಸುವವ ರಿಗೆ ಜಾಲಿರೈಡ್‌, ಅಡ್ವೆಂಚರ್‌ ರೈಡ್‌ ಎಂದು ಎರಡು ಬಗೆಯ ಪ್ಯಾಕೇಜ್‌ ಇದೆ. ಜಾಲಿರೈಡ್‌ನ‌ಲ್ಲಿ ಉಡುಪಿ ಅಥವಾ ಮಣಿಪಾಲ ಯಾವುದಾದರೂ ಒಂದನ್ನು ಅಯ್ಕೆ ಮಾಡಬೇಕು. ಇದರಲ್ಲಿ 8 ನಿಮಿಷದ ಹಾರಾಟವಿದೆ. ಆಡ್ವೆಂಚರ್‌ ರೈಡ್‌ನ‌ಲ್ಲಿ ಸೈಂಟ್‌ಮೇರಿಸ್‌ ಅಥವಾ ಉಡುಪಿ ಮಣಿಪಾಲದಲ್ಲಿ ಹಾರಾಟ ನಡೆಸುತ್ತದೆ. ಇದರಲ್ಲಿ 10 ನಿಮಿಷ ತಿರುಗಾಟದ ಅವಕಾಶವಿದ್ದು, ಅಲ್ಪ ಸ್ವಲ್ಪ ಸ್ಟಂಟ್‌ ಕೂಡ ಇದೆ. ಒಮ್ಮೆ ಗೆ 6 ಮಂದಿಗೆ ಪ್ರಯಾಣಿಸುವ ಅವಕಾಶವಿದೆ. ಜಾಲಿರೈಡ್‌ಗೆ ರೂ. 2,500, ಅಡ್ವೆಂಚರ್‌ ರೈಡ್‌ಗೆ 3,000 ನಿಗದಿಪಡಿಸಲಾಗಿದ್ದು, ಎರಡು ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶವಿದೆ.

ಮೆಡಿಕಲ್‌ ಟೂರಿಸಂಗೂ ವಿಸ್ತರಣೆ ಉದ್ದೇಶ
ಹೆಲಿ ಟೂರಿಸಂ ಉಡುಪಿಯಲ್ಲಿ ಶಾಶ್ವತವಾಗಿ ಆರಂಭಿಸುವ ಯೋಜನೆ ಇದ್ದು, ಜಿಲ್ಲೆಯ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಸಂದರ್ಶನಕ್ಕಾಗಿ ರಿಲೀಜಿಯಸ್‌ ಟೂರಿಸಂ, ತುರ್ತು ಆರೋಗ್ಯ ಸೇವೆಗಾಗಿ ಮೆಡಿಕಲ್‌ ಟೂರಿಸಂಗೂ ವಿಸ್ತರಿಸುವ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ.
– ಸುದೇಶ್‌ ಶೆಟ್ಟಿ, ಮಂತ್ರ ಟೂರಿಸಂ ಡೆವೆಲಪ್‌ಮೆಂಟ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ