ನೆರೆ,ಕೊಳಚೆ ನಡುವೆ ನರಕ ಸದೃಶ ಬದುಕು


Team Udayavani, Jun 5, 2018, 6:00 AM IST

drainage-problem-800.jpg

ಉಡುಪಿ: ಉಡುಪಿ ನಗರದ ಬಹುಪಾಲು ನೀರನ್ನು ಸಮುದ್ರಕ್ಕೆ ಒಯ್ಯುವ ಕಲ್ಸಂಕ ತೋಡು ಮುಂದಕ್ಕೆ ಹರಿಯತ್ತಾ ಹೋದಂತೆ ಅದರಿಂದಾಗುವ ಅವಾಂತರಗಳೂ ಹೆಚ್ಚು. ತೋಡು ಮೂಡನಿಡಂಬೂರು ತಲುಪುವಾಗಲೂ ಅದರಿಂದ ನೆರೆ ಉಂಟಾಗುತ್ತದೆ. ಇದು ಕುದ್ರೆ ಕಲ್ಸಂಕ ಮತ್ತು ಕಲ್ಸಂಕ ಮುಖ್ಯ ತೋಡು ಸೇರುವ ಜಾಗವೂ ಹೌದು. 

ಈ ಬಾರಿ ಮೂಡನಿಡಂಬೂರಿನಲ್ಲಿ ಕುದ್ರೆ ಕಲ್ಸಂಕ ತೋಡಿನಲ್ಲಿದ್ದ ಕೆಲವು ಗಿಡಗಂಟಿಗಳನ್ನು ಅರೆಬರೆ ತೆಗೆದುಹೋಗಿದ್ದಾರೆ. ಕಸ, ಇತರ ಕರುಚಲು ಗಿಡ, ಹೂಳು ತೆಗೆಯಲೇ ಇಲ್ಲ. ಕಲ್ಸಂಕ ತೋಡಿಗೆ ಜೆಸಿಬಿ ಇಳಿಸಿಲ್ಲ ಎಂಬ ದೂರು ಸ್ಥಳೀಯರದ್ದು.

“ಮೊನ್ನೆ ಒಂದೇ ಮಳೆಗೆ ತೋಡು ತುಂಬಿ ನಮ್ಮ ಮನೆ ಹೊಸ್ತಿಲಿಗೆ ನೀರು ಬಂದಿದೆ. ರಾತ್ರಿ ನಿದ್ದೆಯಿಲ್ಲದಂತಾಯಿತು. ಈ ಹಿಂದೆ ತೋಡನ್ನು ಸ್ವಲ್ಪವಾದರೂ ಕ್ಲೀನ್‌ ಮಾಡುತ್ತಿದ್ದರು. ಈಗ ಬಿದಿರು, ಪೀಳಿ, ಇತರ ಗಿಡಗಳು ಬೆಳೆದಿವೆ’ ಎನ್ನುತ್ತಾರೆ ಮೂಡನಿಡಂಬೂರು ಗರೋಡಿ ಪರಿಸರದ ನಿವಾಸಿಗಳಾದ ಕುಸುಮಾ ಮತ್ತು ಗುಲಾಬಿ ಅವರು.

ಯುವಕರ ಪ್ರಯತ್ನ
ಮೂಡನಿಡಂಬೂರು ಗರೋಡಿ ಪರಿಸರದ ಹಿಂಭಾಗದ ಕಲ್ಸಂಕ ತೋಡಿನಲ್ಲಿ ನಿಂತಿದ್ದ ಭಾರೀ ಕಸವನ್ನು ತೆರವುಗೊಳಿಸಲು ರವಿವಾರ ಸ್ಥಳೀಯ ಯುವಕರು ಪ್ರಯತ್ನಿಸಿದರು. ಸ್ವಲ್ಪ ಮಾತ್ರ ತೆಗೆಯಲು ಸಾಧ್ಯವಾಯಿತು. ಉಳಿದದ್ದು ಹಾಗೆಯೇ ಇದೆ. ಮಳೆ ಬಂದ ಅನಂತರ ಇದೇ ಭಾಗದಲ್ಲಿ ಕಲ್ಸಂಕ ಮುಖ್ಯ ತೋಡಿನಲ್ಲಿ ಅಡ್ಡಲಾಗಿ ಬಿದ್ದಿದ್ದ ತೆಂಗಿನ ಮರ ಮತ್ತು ಇತರ ಕೊಂಬೆಗಳನ್ನು ನಗರಸಭೆಯವರು ತೆಗೆದು ಪಕ್ಕಕ್ಕೆ ಹಾಕಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ ಎಂಬ ದೂರು ಇಲ್ಲಿನ ಜನರದ್ದು. 

ನಗರಸಭೆಯಿಂದಲೇ ತಡೆ!
ಗರೋಡಿ ಹಿಂಭಾಗದ ಸೇತುವೆಯ ಕೆಳಗೆ ಕಲ್ಸಂಕ ತೋಡಿಗೆ ಅಡ್ಡವಾಗಿ ಒಳಚರಂಡಿಯ ಪೈಪ್‌ನ್ನು ಅಡ್ಡವಾಗಿ ಹಾಕಲಾಗಿದೆ. ಬಹಳ ವರ್ಷಗಳ ಹಿಂದೆಯೇ ಅಳವಡಿಸಿರುವ ಈ ಬೃಹತ್‌ ಕೊಳವೆಯಲ್ಲಿ ಸೋಗೆ, ಕೊಂಬೆಗಳು, ಇತರ ಕಸದ ರಾಶಿ ತುಂಬಿ ನೀರು ಹರಿಯಲು ಅಡ್ಡಿಯಾಗಿದೆ. ಇಲ್ಲಿ ನೆರೆ ಉಂಟಾಗಲು ಇದು ಕೂಡ ಒಂದು ಕಾರಣ ಎನ್ನುತ್ತಾರೆ ಸ್ಥಳೀಯ ಯುವಕರು. ಮಳೆ ಬಂದರೆ ನೆರೆ, ಬಿಸಿಲು ಬಂದರೆ ಸೊಳ್ಳೆಗಳ ಉಪಟಳದಿಂದ ಬದುಕೇ ಕಷ್ಟವಾಗಿದೆ ಎಂಬ ಗೋಳು ಇಲ್ಲಿನವರದ್ದು. ಇಲ್ಲಿನ ತೋಡಿನ ನೀರು ಮಳೆಗಾಲದಲ್ಲಿಯೂ ಕಡುಕಪ್ಪು ಬಣ್ಣದಲ್ಲಿರುತ್ತದೆ. ನಗರ ಮೇಲಾºಗದ ಎಲ್ಲಾ ಕಶ್ಮಲಗಳು ಕೂಡ ಇಲ್ಲಿ ಹರಿಯುತ್ತದೆ.
 
ಕೊಳಚೆಗಿಲ್ಲ ಮುಕ್ತಿ
ಸಾಮಾಜಿಕ ಜಾಲತಾಣಗಳಲ್ಲಿಯೂ ಸಾಕಷ್ಟು ಸುದ್ದಿ ಮಾಡಿದ ಮೂಡ ನಿಡಂಬೂರು-ನಿಟ್ಟೂರು ಮುಖ್ಯ ಸಂಪರ್ಕ ರಸ್ತೆಯ ನಡುವೆಯೇ ಹರಿ ದಾಡುವ ಕೊಳಚೆ ಸಮಸ್ಯೆಗೆ ಮುಕ್ತಿ ಯಾವಾಗ ಸಿಗುತ್ತದೆ ಎಂಬುದನ್ನು ಇಲ್ಲಿನ ನಿವಾಸಿಗಳು ನಿರೀಕ್ಷಿಸುತ್ತಿದ್ದಾರೆ. ರಸ್ತೆಯ ನಡುವೆ ಇರುವ ಡ್ರೈನೇಜ್‌ ಪಿಟ್‌ಗಳಿಂದ ಬೇಸಗೆ – ಮಳೆಗಾಲ ಎನ್ನದೆ ನಿರಂತರ ಕೊಳಚೆ ನೀರು ಹರಿಯುತ್ತಲೇ ಇರುತ್ತದೆ. ಇದರ ಮೇಲೆಯೇ ಪಾದಚಾರಿಗಳು, ವಾಹನಗಳು ಸಂಚರಿಸಬೇಕಾಗಿದೆ. ಇಲ್ಲಿ ಸದಾ ರೋಗಭೀತಿ. ಮಳೆಗಾಲಕ್ಕೆ ನೆರೆ ನೀರು ಮತ್ತು ಕೊಳಚೆ ನೀರು ಎರಡೂ ಒಟ್ಟಾಗಿ ಮನೆಗಳಿಗೆ ನುಗ್ಗುತ್ತದೆ. 

ತೋಡು ತೆರವು ನಡೆಯುತ್ತಿದೆ
ಕಲ್ಸಂಕ ತೋಡಿನ ಹೂಳೆತ್ತಿ ಸ್ವತ್ಛಗೊಳಿಸುವ ಕೆಲಸ ಪ್ರತಿವರ್ಷ ಎಪ್ರಿಲ್‌-ಮೇ ನಲ್ಲಿ  ನಡೆಯುತ್ತದೆ. ಚುನಾವಣೆ ಮುಗಿದ ಕೂಡಲೇ ಹಿಟಾಚಿ ಮೂಲಕ ಹೂಳೆತ್ತುವ ಕೆಲಸವನ್ನು ಇಂದ್ರಾಳಿಯಲ್ಲಿ ಆರಂಭಿಸಿದ್ದೆವು. ಆದರೆ ಅನಂತರ ಮಳೆ ಬಂದದ್ದರಿಂದ ಅದನ್ನು ನಿಲ್ಲಿಸಬೇಕಾಯಿತು. ಇತರ ಚರಂಡಿಗಳ ಹೂಳೆತ್ತಿ ಸ್ವತ್ಛಗೊಳಿಸುವ ಕೆಲಸ ವರ್ಷವಿಡೀ ನಡೆಯುತ್ತಿರುತ್ತದೆ. ಪ್ರತಿ ವಾರ್ಡ್‌ಗೆ ವಾರಕ್ಕೆ ಎರಡು ದಿನ 6 ಮಂದಿ ಕಾರ್ಮಿಕರು ತೆರಳಿ ಕೆಲಸ ಮಾಡುತ್ತಿದ್ದಾರೆ. ಕಲ್ಸಂಕ ತೋಡು ಭೌಗೋಳಿಕವಾಗಿ ತುಂಬಾ ತಗ್ಗುಪ್ರದೇಶದಲ್ಲಿದೆ. ಅಲ್ಲಿ ಬೇಗನೆ ನೀರು ಮೇಲೇರುತ್ತದೆ. ಇದರಿಂದ ಸಮರ್ಪಕವಾಗಿ ಕೆಲಸ ಮಾಡುವುದು ಕೂಡ ಸವಾಲು. ಸಾಧ್ಯವಾಗುವಲ್ಲಿ ಈಗಲೂ ಕೆಲಸ ಮಾಡಿಸುತ್ತಿದ್ದೇವೆ. ಕುರುಚಲು ಗಿಡ, ಕಸ ತೆಗೆಯುವ ಕೆಲಸ ನಡೆಯುತ್ತಿದೆ. 
– ಜನಾರ್ದನ ಭಂಡಾರ್‌ಕರ್‌,ನಗರಸಭಾ ಸದಸ್ಯರು 

ಓಟು ಬಂದಾಗ ನೋಡಿ ಹೋದರು
ಮೊನ್ನೆ ಓಟು ಬಂದಾಗ ತೋಡನ್ನು ನೋಡಿ “ಸರಿಮಾಡುತ್ತೇವೆ’ ಎಂದು ಬರೆದುಕೊಂಡು ಹೋಗಿದ್ದಾರೆ. ಸರಿ ಮಾಡಲೇ ಇಲ್ಲ. ಈಗ ಇತ್ತ ಕಡೆ ಯಾರೂ ತಲೆ ಹಾಕುತ್ತಿಲ್ಲ. ತೋಡಿನಲ್ಲಿ ಪೊದೆ, ಕಸ ರಾಶಿಯಿಂದ ಇಲ್ಲಿ ಹೆಬ್ಟಾವುಗಳು ಕೂಡ ಬರುತ್ತವೆ. ಇನ್ನು ಈ ವರ್ಷಕ್ಕೆ ಜೆಸಿಬಿಯಿಂದ ಸ್ವತ್ಛ ಮಾಡುವುದು ಸಾಧ್ಯವಾಗದು. ಕನಿಷ್ಠ ಪೊದೆಗಳನ್ನಾದರೂ ತೆಗೆದರೆ ನೀರು ಹರಿಯಬಹುದು.
– ವೀಣಾ,ಮೂಡನಿಡಂಬೂರು ಗರೋಡಿ ನಿವಾಸಿ

– ಸಂತೋಷ್‌ ಬೊಳ್ಳೆಟ್ಟು 

ಟಾಪ್ ನ್ಯೂಸ್

ಸಂಸತ್ ಕಲಾಪಕ್ಕೆ ಗೈರು;ನಿಮ್ಮ ನಡವಳಿಕೆ ಮಕ್ಕಳೂ ಇಷ್ಟಪಡಲ್ಲ:ಬಿಜೆಪಿ ಸಂಸದರಿಗೆ ಪ್ರಧಾನಿ ಮೋದಿ

ಸಂಸತ್ ಕಲಾಪಕ್ಕೆ ಗೈರು;ನಿಮ್ಮ ನಡವಳಿಕೆ ಮಕ್ಕಳೂ ಇಷ್ಟಪಡಲ್ಲ:ಬಿಜೆಪಿ ಸಂಸದರಿಗೆ ಪ್ರಧಾನಿ ಮೋದಿ

20deer

ಜಿಂಕೆ ಮಾಂಸ ಹಂಚುವ ವೇಳೆ ಅರಣ್ಯಾಧಿಕಾರಿಗಳ ದಾಳಿ; ಓರ್ವ ಬಂಧನ

hfhjhgjhgfd

ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಬಿಡುಗಡೆ ದಿನಾಂಕ ಘೋಷಣೆ

ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲವಿಲ್ಲ:  ಹೆಚ್ ಡಿಕೆ ಸ್ಪಷ್ಟನೆ

ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲವಿಲ್ಲ: ಹೆಚ್ ಡಿಕೆ ಸ್ಪಷ್ಟನೆ

rAmbhat

ಸಕಲ ಸರಕಾರಿ ಗೌರವಗಳೊಂದಿಗೆ ರಾಮ ಭಟ್ಟರ ಅಂತಿಮ ಯಾತ್ರೆ

ಒಂದು ಮತಕ್ಕೆ 50 ಸಾವಿರ ಆಮಿಷ: ಪರಿಷತ್ ಕಣದಲ್ಲಿ ಕಾಂಚಾಣದ ಕಾರುಬಾರು ಜೋರು; ವಿಡಿಯೋ ವೈರಲ್

ಒಂದು ಮತಕ್ಕೆ 50 ಸಾವಿರ ಆಮಿಷ: ಪರಿಷತ್ ಕಣದಲ್ಲಿ ಕಾಂಚಾಣದ ಕಾರುಬಾರು ಜೋರು; ವಿಡಿಯೋ ವೈರಲ್

death of soldeir

ನಿಂತಿದ್ದ ಕಾರಲ್ಲಿ ಮಾಜಿ ಸೈನಿಕ ಶವಪತ್ತೆ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಯ್ಯಪ್ಪ ಸ್ವಾಮಿ ದರ್ಶನಕ್ಕೂ ಆನ್‌ಲೈನ್‌ ಬುಕ್ಕಿಂಗ್‌!

ಅಯ್ಯಪ್ಪ ಸ್ವಾಮಿ ದರ್ಶನಕ್ಕೂ ಆನ್‌ಲೈನ್‌ ಬುಕ್ಕಿಂಗ್‌!

1-sdsad

ಕಾರ್ಕಳ : ಖ್ಯಾತ ಜ್ಯೋತಿಷಿ ರಾಜಗೋಪಾಲ್ ಭಟ್ ವಿಧಿವಶ

ಸಿ.ಎ. ಸೈಟ್‌ಗೆ ಸಂಘ-ಸಂಸ್ಥೆಗಳ ನಿರಾಸಕ್ತಿ

ಸಿ.ಎ. ಸೈಟ್‌ಗೆ ಸಂಘ-ಸಂಸ್ಥೆಗಳ ನಿರಾಸಕ್ತಿ

“ಸುಭಿಕ್ಷೆಯ ನಾಡಿಗೆ ಧರ್ಮ, ರಾಜಕೀಯ ಅಗತ್ಯ’

“ಸುಭಿಕ್ಷೆಯ ನಾಡಿಗೆ ಧರ್ಮ, ರಾಜಕೀಯ ಅಗತ್ಯ’

ವಿದ್ಯಾಪೋಷಕ್‌ನಿಂದ 74.1 ಲಕ್ಷ ರೂ. ಸಹಾಯಧನ

ವಿದ್ಯಾಪೋಷಕ್‌ನಿಂದ 74.1 ಲಕ್ಷ ರೂ. ಸಹಾಯಧನ

MUST WATCH

udayavani youtube

ದಾಂಡೇಲಿ : ಅರಣ್ಯ ಇಲಾಖೆಯಿಂದ ಏಕಾಏಕಿ ಬ್ರಿಟಿಷ್ ರಸ್ತೆ ಬಂದ್, ವ್ಯಾಪಕ ಆಕ್ರೋಶ

udayavani youtube

‘ಮರದ ಅರಶಿನ’ದ ವಿಶೇಷತೆ !

udayavani youtube

ಪುನೀತ್ ರಾಜ್ ಕುಮಾರ್ ಕನಸಿನ ‘ಗಂಧದಗುಡಿ’ ಟೀಸರ್ ಬಿಡುಗಡೆ

udayavani youtube

ತಾಯಿ, ಮಗ ಆರಂಭಿಸಿದ ತಿಂಡಿ ತಯಾರಿ ಘಟಕ ಇಂದು 65 ಮಂದಿಗೆ ಉದ್ಯೋಗ !

udayavani youtube

ಕಳವಾದ ವೈದ್ಯರ ನಾಯಿಯನ್ನು ಗಂಟೆಗಳೊಳಗೆ ಪತ್ತೆ ಹಚ್ಚಿದ ಶಿವಮೊಗ್ಗ ಪೊಲೀಸರು

ಹೊಸ ಸೇರ್ಪಡೆ

ಸಂಸತ್ ಕಲಾಪಕ್ಕೆ ಗೈರು;ನಿಮ್ಮ ನಡವಳಿಕೆ ಮಕ್ಕಳೂ ಇಷ್ಟಪಡಲ್ಲ:ಬಿಜೆಪಿ ಸಂಸದರಿಗೆ ಪ್ರಧಾನಿ ಮೋದಿ

ಸಂಸತ್ ಕಲಾಪಕ್ಕೆ ಗೈರು;ನಿಮ್ಮ ನಡವಳಿಕೆ ಮಕ್ಕಳೂ ಇಷ್ಟಪಡಲ್ಲ:ಬಿಜೆಪಿ ಸಂಸದರಿಗೆ ಪ್ರಧಾನಿ ಮೋದಿ

ಸುಧಾಕರ್‌ ಪ್ರೆಸ್‌ ಮೀಟ್‌

ರಮೇಶ್‌ಕುಮಾರ್‌ ಮೇಲೆ ಅವ್ಯವಹಾರ ಆರೋಪ

20deer

ಜಿಂಕೆ ಮಾಂಸ ಹಂಚುವ ವೇಳೆ ಅರಣ್ಯಾಧಿಕಾರಿಗಳ ದಾಳಿ; ಓರ್ವ ಬಂಧನ

hfhjhgjhgfd

ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಬಿಡುಗಡೆ ದಿನಾಂಕ ಘೋಷಣೆ

ಒಂದಾನೊಂದು ಕಾಲದಲ್ಲಿ

“ಒಂದಾನೊಂದು ಕಾಲದಲ್ಲಿ” ಹೊಸಬರು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.