ಮುಂಡ್ಕೂರು: ಶಾಲಾ ವಾಹನ ಸೌಕರ್ಯಕ್ಕೆ ನೆರವು
Team Udayavani, Jun 2, 2019, 11:55 AM IST
ಬೆಳ್ಮಣ್: ಮುಂಡ್ಕೂರಿನ ನಮ್ಮ ಫ್ರೆಂಡ್ಸ್ ಬಳಗ ಹುಟ್ಟೂರಿನ ಮುಂಡ್ಕೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಉಳಿವಿಗೆ ನಿರಂತರವಾಗಿ ಸಹಕರಿಸುತ್ತಿದ್ದು ದೂರದೂರಿನಿಂದ ಈ ಶಾಲೆಗೆ ಬರುವ ವಿದ್ಯಾರ್ಥಿಗಳ ವಾಹನ ಸೌಕರ್ಯಕ್ಕಾಗಿ 25,000ರೂ. ದೇಣಿಗೆಯನ್ನು ಘೋಷಿಸಿ ಈಗಾಗಲೇ 10,000 ರೂ. ನೀಡಿತ್ತು. ಉಳಿದ 15,000 ರೂ. ಹಸ್ತಾಂತರ ಶನಿವಾರ ನಡೆಯಿತು.
ಬಳಗದ ಗೌರವ ಸಲಹೆಗಾರರಾದ ರಾಜಮುಗುಳಿ ಲಲಿತಾ ಮೂಲ್ಯ ಅವರು ಶಾಲೆಯ ಮುಖ್ಯ ಶಿಕ್ಷಕಿ ಪೂರ್ಣಿಮಾ ಭಟ್ ಅವರಿಗೆ ದೇಣಿಗೆ ಹಸ್ತಾಂತರಿಸಿದರು.
ಶಾಲೆಯ ಸಹ ಶಿಕ್ಷಕಿಯರಾದ ಹಿಲ್ಡಾ ಸಿಕ್ವೇರ, ಅಶ್ವಿನಿ, ಶ್ಯಾಮಲಾ, ದೈಹಿಕ ಶಿಕ್ಷಣ ಶಿಕ್ಷಕಿ ಮಮತಾ ಶೆಟ್ಟಿ, ಗೌರವ ಶಿಕ್ಷಕಿ ಬಿಂದಿಯಾ ಉಪಸ್ಥಿತರಿದ್ದರು.
ಅರುಣ್ ರಾವ್ ಸ್ವಾಗತಿಸಿ, ಪ್ರಕಾಶ್ ನಾೖಕ್ ವಂದಿಸಿದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444