Udayavni Special

ತ್ಯಾಜ್ಯ ರಾಶಿಯಲ್ಲಿ ಮರೆಯಾದ ಕಾಂಕ್ರೀಟ್‌ ಚರಂಡಿ


Team Udayavani, May 27, 2018, 6:00 AM IST

2505udcp2a.jpg

ಉಡುಪಿ: ನಗರಸಭೆಯ ವಳಕಾಡು ವಾರ್ಡ್‌ ವ್ಯಾಪ್ತಿಗೆ ಬರುವ ಬೀಡಿನಗುಡ್ಡೆಯ ಮಹಾತ್ಮಾಗಾಂಧಿ ಬಯಲು ರಂಗಮಂದಿರದ ಮುಂಭಾಗದ ರಸ್ತೆ ತಿರುವಿನಲ್ಲಿರುವ ಕಾಂಕ್ರೀಟ್‌ ತೋಡಿನಲ್ಲಿ ತ್ಯಾಜ್ಯಗಳು ರಾಶಿಯಾಗಿದ್ದು, ಚರಂಡಿಯೇ ಮರೆಯಾಗಿ ಹೋಗಿದೆ! ವಳಕಾಡು, ಚಿಟ್ಪಾಡಿ ವಾರ್ಡ್‌ನಲ್ಲಿ  ಬದಿಯಲ್ಲಿಯೇ ಚರಂಡಿ ಅವ್ಯವಸ್ಥೆ ಎದ್ದು ಕಾಣುತ್ತಿದೆ.

ತ್ಯಾಜ್ಯ ಚರಂಡಿಗೆ!
ಬೀಡಿನಗುಡ್ಡೆ ಒಂದು ಕಾಲದಲ್ಲಿ ಮಲಿನತೆಯಿಂದ ಕಂಗೆಟ್ಟಿತ್ತು. ಈಗ ಈ ಪ್ರದೇಶ ತ್ಯಾಜ್ಯಮುಕ್ತವಾಗಿ ಸುಂದರವಾಗಿದ್ದರೂ ರಸ್ತೆ ಬದಿ ಚರಂಡಿಯಲ್ಲಿ ತ್ಯಾಜ್ಯಗಳು ಹರಡಿಕೊಂಡಿವೆ. ಮನೆ, ಅಂಗಡಿಗಳ ಮಂದಿ, ಜೋಪಡಿ ಪ್ರದೇಶದ ನಿವಾಸಿಗರು ತ್ಯಾಜ್ಯವನ್ನು ಇಲ್ಲಿ ಎಸೆದು ಹೋಗುತ್ತಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ.

ಕೆಲವೆಡೆ ಚರಂಡಿಯೇ ಇಲ್ಲ!
ಚಿಟ್ಪಾಡಿಯ ದೇವಾಡಿಗರ ಸಭಾಭವನದ ಮುಂದಿರುವ ರಸ್ತೆಯ ಪೂರ್ವ ಭಾಗದಲ್ಲಿ ಮಾತ್ರ ಚರಂಡಿ ಇದೆ. ಪಶ್ಚಿಮ ಭಾಗ ಅಂದರೆ ಸಭಾಭವನದ ಮುಂಭಾಗ ಚರಂಡಿಯೇ ಇಲ್ಲ. ಇನ್ನು ಚಿಟ್ಪಾಡಿ ಜಂಕ್ಷನ್‌ನಲ್ಲಿ ಚರಂಡಿ ಕಾಣುತ್ತಿಲ್ಲ. ಜಂಕ್ಷನ್‌ ದಾಟಿದರೆ ಚರಂಡಿ ಕಾಣಸಿಗುತ್ತದೆ. ಜಂಕ್ಷನ್‌ನಲ್ಲಿ ರಸ್ತೆಯಲ್ಲೇ ಮಳೆ ನೀರು ಸಾಗಬೇಕಾದ ಸ್ಥಿತಿ ಇಲ್ಲಿದೆ.

ಜೆಸಿಬಿ ಹೋಗಲು ಅಡ್ಡಿ
ವಳಕಾಡು ವಾರ್ಡಿನ ಗದ್ದೆಗಳ ನಡುವಿನ ಬೈಲಿನಲ್ಲಿ ಕಲ್ಸಂಕ ಸಂಪರ್ಕಿತ ದೊಡ್ಡ ಚರಂಡಿಯೊಂದು ಹಾದು ಹೋಗುತ್ತದೆ. ಪ್ರತಿವರ್ಷ ಜೆಸಿಬಿ ಕೊಂಡೊಯ್ದು ಅಲ್ಲಿನ ಹೂಳು ತೆಗೆಸುತ್ತಿದ್ದೆ. ಆದರೆ ಖಾಸಗಿ ಜಾಗದಲ್ಲಿ ಮನೆಗಳು ನಿರ್ಮಾಣವಾಗಿ ಈ ಸಲ ಜೆಸಿಬಿ ಹೋಗಲು ಜಾಗವಿಲ್ಲ. ಜನರಿಂದ ಮಾಡಿಸಲು ಕಷ್ಟಸಾಧ್ಯ. ಹಾಗಾಗಿ ಆ ಭಾಗದಲ್ಲಿ ಸ್ವಲ್ಪ ಸಮಸ್ಯೆ ಬರುವ ಸಾಧ್ಯತೆ ಇದೆ ಎಂದು ನಗರಸಭೆ ಸದಸ್ಯರು ಹೇಳಿದ್ದಾರೆ.  

ನಿರ್ವಹಣೆ ಇಲ್ಲ
ಚಿಟ್ಪಾಡಿಯಿಂದ ಎಂಜಿಎಂ ಕಾಲೇಜು ಮುಂಭಾಗದ ಹೆದ್ದಾರಿ ಸಂಪರ್ಕಿತ ಪ್ರಮುಖ ರಸ್ತೆ ಪಕ್ಕದಲ್ಲಿ ಗೋಣಿ ಚೀಲದಲ್ಲಿ ಕಟ್ಟಿ ಎಸೆದ ತರಕಾರಿಗಳು ಚರಂಡಿಯಲ್ಲಿ ಕೊಳೆತ ಸ್ಥಿತಿಯಲ್ಲಿವೆ. ಬಟ್ಟೆ ಇನ್ನಿತರ ವಸ್ತುಗಳು ತೋಡಿ
ನಲ್ಲಿ ಹರಡಿಕೊಂಡಿವೆ. ಕಾಂಕ್ರೀಟ್‌ ಚರಂಡಿ ಏನೂ ಪ್ರಯೋಜನವಿಲ್ಲದಂತಾಗಿದೆ. ಒಂದೆಡೆ ತ್ಯಾಜ್ಯ, ಇನ್ನೊಂದೆಡೆ ಮಣ್ಣಿನ ರಾಶಿ ಚರಂಡಿಯಲ್ಲಿದ್ದು, ಚರಂಡಿ ಸಂಪೂರ್ಣ ಮುಚ್ಚಿ ಹೋದ ಸ್ಥಿತಿ ಪಿಲಿಚಂಡಿ ರಸ್ತೆಯಲ್ಲಿದೆ. ಚರಂಡಿ ಉದ್ದಕ್ಕೂ ಸಣ್ಣ ಸಣ್ಣ ಗಿಡಗಂಟಿಬೆಳೆದಿದ್ದು, ಕಲ್ಲು ಮಣ್ಣುಗಳು ಶೇಖರಣೆಗೊಂಡು ಮಳೆ ನೀರು ಹರಿಯಲು ತೊಡಕಾಗಿದೆ.

ನೀತಿ ಸಂಹಿತೆಯಿಂದಾಗಿ ಕೆಲಸಕ್ಕೆ ಅಡ್ಡಿ 
ದೊಡ್ಡ ದೊಡ್ಡ ಚರಂಡಿಗಳಿಗೆ ಹೂಳೆತ್ತಲು ಜೆಸಿಬಿ ನೀಡುತ್ತೇವೆ. ಟೆಂಡರ್‌ ಕರೆಯದೆ ಚರಂಡಿ ಕೆಲಸವನ್ನು ಎರಡು ಮೂರು ವರ್ಷಗಳಿಂದ ಪೌರ ಕಾರ್ಮಿಕರಿಂದ ಮಾಡಿಸುತ್ತಿದ್ದೇವೆ. ಇದು 35 ವಾರ್ಡ್‌ಗಳಿಗೂ ಅನ್ವಯ. ಪೌರ ಕಾರ್ಮಿಕರು ತಮ್ಮ ಕೆಲಸವನ್ನು ಚೆನ್ನಾಗಿ ನಿರ್ವಹಿಸುತ್ತಿದ್ದಾರೆ. ನೀತಿ ಸಂಹಿತೆಯಿಂದಾಗಿ ನಮ್ಮ ಕೆಲಸಗಳಿಗೆ ಸ್ವಲ್ಪ ಅಡಚಣೆಯಾಗಿದೆ.
– ಮೀನಾಕ್ಷಿ ಮಾಧವ ಬನ್ನಂಜೆ, 
ಅಧ್ಯಕ್ಷರು, ನಗರಸಭೆ, ಉಡುಪಿ

ಶಕ್ತಿ ಮೀರಿ ಕೆಲಸ ಮಾಡಿದ್ದೇವೆ
ಚರಂಡಿ ಹೂಳೆತ್ತಲು ಟೆಂಡರ್‌ ಕರೆಯಿರಿ, ಇಲ್ಲವೇ ಪರ್ಯಾಯ ವ್ಯವಸ್ಥೆ ಮಾಡಿ ಎಂದು ನಗರಸಭೆಯಲ್ಲಿ ಕೇಳಿಕೊಂಡರೂ ಸೂಕ್ತ ವ್ಯವಸ್ಥೆ ಮಾಡಿಲ್ಲ. ವಾರಕ್ಕೆರಡು ದಿನ ಬರುವ ಐದು ಜನರಿಂದ ಎಲ್ಲ ಕೆಲಸ ಮಾಡಿಸಲು ಅಸಾಧ್ಯ. ನಮ್ಮ ಶಕ್ತಿ ಮೀರಿ ಕೆಲಸ ಮಾಡಿದ್ದೇವೆ. ಬೀಡಿನಗುಡ್ಡೆ ರಂಗಮಂದಿರದ ಮುಂಭಾಗ ಚರಂಡಿಯಲ್ಲಿ ತ್ಯಾಜ್ಯವಿರುವುದು, ಮಣ್ಣಿನಿಂದ ಮುಚ್ಚಿರುವುದು ಗಮನಕ್ಕೆ ಬಂದಿದೆ. ಶೀಘ್ರ ಸರಿಪಡಿಸಲಾಗುವುದು.          
– ಗೀತಾ ರವಿ ಶೇಟ್‌, 
ಸದಸ್ಯರು, ವಳಕಾಡು ವಾರ್ಡ್‌

ನಗರಸಭೆ ಜೆಸಿಬಿ ಎಲ್ಲಿ ಹೋಯ್ತು?
ನಗರಸಭೆಯಿಂದ ವಾರಕ್ಕೆರಡು ದಿನ ಚರಂಡಿ ಸ್ವತ್ಛತೆಗೆಂದೇ ಜನ ಬರುತ್ತಾರೆ. ಹಿಂದೆ 8 ಜನ ಇದ್ದರು. ಈಗ 5 ಜನ ಬರುತ್ತಾರೆ. ಹಿಂದೆ ನಗರಸಭೆಯಲ್ಲಿ ಚರಂಡಿ ನಿರ್ವಹಣೆಗೆ ಜೆಸಿಬಿ, ಹಿಟಾಚಿ ಯಂತ್ರ ಕೊಡುತ್ತಿದ್ದರು. ಆದರೆ ಈಗ ಯಂತ್ರ ಎಲ್ಲಿ ಹೋಗಿದೆ ಅಂತ ಗೊತ್ತಿಲ್ಲ. ಚರಂಡಿ ಸ್ವತ್ಛತೆಗೆ ಕೆಲಸದ ಜನ ಇದ್ದರೂ, ಯಂತ್ರದಿಂದ ಮಾಡಿದಷ್ಟು ಸುಲಭ, ಉತ್ತಮ ಕೆಲಸವಾಗುತ್ತಿಲ್ಲ.
– ನವೀನ್‌ ಎನ್‌. ಭಂಡಾರಿ, 
ಸದಸ್ಯರು,ಚಿಟ್ಪಾಡಿ ವಾರ್ಡ್‌

– ಚೇತನ್‌ ಪಡುಬಿದ್ರಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಳೆ ಹಾನಿ – ಪ್ರಾಥಮಿಕ ಅಂದಾಜು; ಉಡುಪಿ ಜಿಲ್ಲೆಯಲ್ಲಿ 290 ಕೋ.ರೂ. ನಷ್ಟ

ಮಳೆ ಹಾನಿ – ಪ್ರಾಥಮಿಕ ಅಂದಾಜು; ಉಡುಪಿ ಜಿಲ್ಲೆಯಲ್ಲಿ 290 ಕೋ.ರೂ. ನಷ್ಟ

3 ದಿನಗಳಲ್ಲಿ ಮೆಸ್ಕಾಂಗೆ 42 ಲಕ್ಷ ರೂ. ನಷ್ಟ!

3 ದಿನಗಳಲ್ಲಿ ಮೆಸ್ಕಾಂಗೆ 42 ಲಕ್ಷ ರೂ. ನಷ್ಟ!

ಆಹಾರ ಉತ್ಪಾದನೆ ಗುರಿ ಹೆಚ್ಚಿಸಲು ಕೇಂದ್ರ ನಿರ್ಧಾರ

ಆಹಾರ ಉತ್ಪಾದನೆ ಗುರಿ ಹೆಚ್ಚಿಸಲು ಕೇಂದ್ರ ನಿರ್ಧಾರ

ಧರಣಿನಿರತರಿಗೆ ಚಹಾ ತಂದ ವಿಶೇಷ ಅತಿಥಿ!

ಧರಣಿನಿರತರಿಗೆ ಚಹಾ ತಂದ ವಿಶೇಷ ಅತಿಥಿ!

ಅಸಾಂಜ್‌ಗೆ ಕೇಳುತ್ತಿದೆಯಂತೆ ಅನಾಮಿಕ ಧ್ವನಿ

ಅಸಾಂಜ್‌ಗೆ ಕೇಳುತ್ತಿದೆಯಂತೆ ಅನಾಮಿಕ ಧ್ವನಿ

ಕೃಷಿ ಹೊಂಡಕ್ಕೆ ಬಿದ್ದು ಮೂವರು ಮಕ್ಕಳ ದುರ್ಮರಣ

ಕೃಷಿ ಹೊಂಡಕ್ಕೆ ಬಿದ್ದು ಮೂವರು ಮಕ್ಕಳ ದುರ್ಮರಣ

ರಾಯಲ್ಸ್ ಪರಾಕ್ರಮಕ್ಕೆ ತಲೆಬಾಗಿದ ಸೂಪರ್ ಕಿಂಗ್ಸ್

ರಾಯಲ್ಸ್ ಪರಾಕ್ರಮಕ್ಕೆ ತಲೆಬಾಗಿದ ಸೂಪರ್ ಕಿಂಗ್ಸ್






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ ಹಾನಿ – ಪ್ರಾಥಮಿಕ ಅಂದಾಜು; ಉಡುಪಿ ಜಿಲ್ಲೆಯಲ್ಲಿ 290 ಕೋ.ರೂ. ನಷ್ಟ

ಮಳೆ ಹಾನಿ – ಪ್ರಾಥಮಿಕ ಅಂದಾಜು; ಉಡುಪಿ ಜಿಲ್ಲೆಯಲ್ಲಿ 290 ಕೋ.ರೂ. ನಷ್ಟ

3 ದಿನಗಳಲ್ಲಿ ಮೆಸ್ಕಾಂಗೆ 42 ಲಕ್ಷ ರೂ. ನಷ್ಟ!

3 ದಿನಗಳಲ್ಲಿ ಮೆಸ್ಕಾಂಗೆ 42 ಲಕ್ಷ ರೂ. ನಷ್ಟ!

ಶಿರೂರು ಸಮುದ್ರ ತೀರಕ್ಕೆ ತೇಲಿ ಬಂತು ಕ್ಷಿಪಣಿ ಮಾದರಿಯ ವಸ್ತು!

ಶಿರೂರು ಸಮುದ್ರ ತೀರಕ್ಕೆ ತೇಲಿ ಬಂತು ಕ್ಷಿಪಣಿ ಮಾದರಿಯ ವಸ್ತು!

ಮಣಿಪಾಲ: ಅಪಾಯದಲ್ಲಿ ಬಹುಮಹಡಿ ಕಟ್ಟಡ, ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ

ಮಣಿಪಾಲ: ಅಪಾಯದಲ್ಲಿ ಬಹುಮಹಡಿ ಕಟ್ಟಡ, ಜಿಲ್ಲಾಧಿಕಾರಿಯಿಂದ ಪರಿಶೀಲನೆ

ಮಳೆ: ಉಡುಪಿ ಜಿಲ್ಲೆಯಲ್ಲಿ ರೂ 100 ಕೋಟಿಗೂ ಹೆಚ್ಚು ಹಾನಿ

ಮಳೆ: ಉಡುಪಿ ಜಿಲ್ಲೆಯಲ್ಲಿ ರೂ 100 ಕೋಟಿಗೂ ಹೆಚ್ಚು ಹಾನಿ

MUST WATCH

udayavani youtube

District Excise Department seized Millions worth of Marijuana | Udayavani

udayavani youtube

Hospet : Tungabhadra Dam Gates Are Opened | TB Dam | Udayavani

udayavani youtube

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

udayavani youtube

Manipal: Multi-storey building in danger | inspection by DC Jagadeesh

udayavani youtube

ಗೇರು ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ



ಹೊಸ ಸೇರ್ಪಡೆ

ಕೊಂಕಣ ರೈಲ್ವೇಯಲ್ಲಿ ಅಡಿಕೆ ಸಾಗಾಟ: ಇಂದು ಸಾಂಕೇತಿಕ ಚಾಲನೆ

ಕೊಂಕಣ ರೈಲ್ವೇಯಲ್ಲಿ ಅಡಿಕೆ ಸಾಗಾಟ: ಇಂದು ಸಾಂಕೇತಿಕ ಚಾಲನೆ

ಮಳೆ ಹಾನಿ – ಪ್ರಾಥಮಿಕ ಅಂದಾಜು; ಉಡುಪಿ ಜಿಲ್ಲೆಯಲ್ಲಿ 290 ಕೋ.ರೂ. ನಷ್ಟ

ಮಳೆ ಹಾನಿ – ಪ್ರಾಥಮಿಕ ಅಂದಾಜು; ಉಡುಪಿ ಜಿಲ್ಲೆಯಲ್ಲಿ 290 ಕೋ.ರೂ. ನಷ್ಟ

3 ದಿನಗಳಲ್ಲಿ ಮೆಸ್ಕಾಂಗೆ 42 ಲಕ್ಷ ರೂ. ನಷ್ಟ!

3 ದಿನಗಳಲ್ಲಿ ಮೆಸ್ಕಾಂಗೆ 42 ಲಕ್ಷ ರೂ. ನಷ್ಟ!

ಆಹಾರ ಉತ್ಪಾದನೆ ಗುರಿ ಹೆಚ್ಚಿಸಲು ಕೇಂದ್ರ ನಿರ್ಧಾರ

ಆಹಾರ ಉತ್ಪಾದನೆ ಗುರಿ ಹೆಚ್ಚಿಸಲು ಕೇಂದ್ರ ನಿರ್ಧಾರ

ಧರಣಿನಿರತರಿಗೆ ಚಹಾ ತಂದ ವಿಶೇಷ ಅತಿಥಿ!

ಧರಣಿನಿರತರಿಗೆ ಚಹಾ ತಂದ ವಿಶೇಷ ಅತಿಥಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.