ಭತ್ತದ ಗದ್ದೆಗಳಲ್ಲೀಗ ರಾಟವಾಳ ಹಕ್ಕಿಗಳದ್ದೇ ರಾಜ್ಯಭಾರ

Team Udayavani, Jul 12, 2019, 5:46 AM IST

ಕುಂದಾಪುರ: ಈ ಬಾರಿ ಮುಂಗಾರು ನಿಧಾನ. ಇರುವ ಭೂಮಿಯಲ್ಲಿ ಒಂದಷ್ಟು ಬೇಸಾಯ ಮಾಡೋಣ ಎಂದರೆ, ವಿವಿಧ ಸಮಸ್ಯೆಗಳ ಜತೆ ಈಗ ಹಕ್ಕಿಗಳ ಕಾಟವನ್ನೂ ಎದುರಿಸಬೇಕಾದ ಸ್ಥಿತಿ ಬಂದಿದೆ.

ಪರಿಸರದ ಭತ್ತದ ಗದ್ದೆಗಳಲ್ಲಿ ರಾಟವಾಳ ಹಕ್ಕಿಗಳ ಉಪಟಳ ಸಾಕಷ್ಟಿದ್ದು ಮೊಳಕೆಗಳನ್ನು ತಿನ್ನುತ್ತಿವೆ. ಇವುಗಳನ್ನು ಓಡಿಸುವುದೇ ರೈತರಿಗೆ ಸವಾಲಾಗಿ ಪರಿಣಮಿಸಿದೆ.

ಹಕ್ಕಿಗಳ ಕಾಟ

ಮಳೆಗಾಲದ ಆರಂಭದಲ್ಲಿ ಗದ್ದೆಗಳಲ್ಲಿ ಭತ್ತದ ಬೀಜ ಬಿತ್ತನೆ ಮಾಡುತ್ತಾರೆ. ಸಾಮಾನ್ಯವಾಗಿ ಭತ್ತದ ಅಗೇಡಿಗಳಿಗೆ ಲಗ್ಗೆ ಇಡುವ ಹಕ್ಕಿಗಳೆಂದರೆ ಗೀಜುಗ, ಪಾರಿವಾಳ, ನವಿಲು, ರಾಟವಾಳ ಹಾಗೂ ಅಪರೂಪಕ್ಕೆ ಹುಂಡುಕೋಳಿಗಳು. ಯಾರೂ ಇಲ್ಲದ ಸಮಯದಲ್ಲಿ ಚೋರೆ ಹಕ್ಕಿಗಳು ಬರುವುದೂ ಉಂಟು. ಅಗೇಡಿಗಳಿಗೆ ಭತ್ತವನ್ನು ಬಿತ್ತನೆ ಮಾಡಿ, ಬೀಜ ಮೊಳಕೆಯೊಡೆದು ಸಸಿ ಆಗುವ ತನಕ ಈ ಹಕ್ಕಿಗಳು ತಿನ್ನದಂತೆ ಗದ್ದೆಗಳಲ್ಲಿ ಕುಳಿತು ಬೆಳಗ್ಗೆಯಿಂದ ಸಂಜೆಯ ತನಕ ಕಾವಲು ಕಾಯಲೇಬೇಕಾಗುತ್ತದೆ. ಹಕ್ಕಿ ಓಡಿಸುವುದಕ್ಕೆ ರೈತರು ಪಟಾಕಿ, ಬೆದರು ಬೊಂಬೆ ಇತ್ಯಾದಿ ರೀತಿಯಲ್ಲಿ ಪ್ರಯತ್ನ ಪಟ್ಟರೂ ಹಕ್ಕಿಗಳು ಮತ್ತೆ ಬರುತ್ತವೆ ಎನ್ನುತ್ತಾರೆ ಹಂಗಳೂರಿನ ಚಂದು ಅಜ್ಜಿ.

ಧೈರ್ಯಶಾಲಿಗಳಂತೆ ವರ್ತನೆ

ಹಂಗಳೂರಿನ ರೋಶನ್‌ ಡಿ’ಸೋಜಾ ಅವರು ಭತ್ತದ ಗದ್ದೆಯಲ್ಲಿ ಕುಳಿತೇ ಹಕ್ಕಿಗಳ ಕುರಿತು ಅಧ್ಯಯನ ಮಾಡಿದ್ದಾರೆ.

ಅವರು ಹೇಳುವಂತೆ ಭತ್ತದ ಬೀಜ ಗಳನ್ನು ತಿನ್ನಲು ಬರುವ ರಾಟವಾಳ ಸಮೂಹ ನಾವು ಎಷ್ಟೇ ಸದ್ದು ಮಾಡಿ ಕೂಗಿದರೂ ಕಿಂಚಿತ್ತೂ ಅಲುಗಾಡದೆ ಸುಮ್ಮನೆ ಕುಳಿತು ತಿನ್ನುತ್ತಿರುತ್ತವೆ. ಹತ್ತಿರ ಹೋಗಿ ಅಥವಾ ಮಣ್ಣನ್ನು ಎಸೆದು ಓಡಿಸ ಬೇಕಾಗುತ್ತದೆ. ಆದ್ದರಿಂದ ಸ್ಥಳೀಯರು ಈ ಹಕ್ಕಿಗಳನ್ನು ಕೆಪ್ಪಕ್ಕಿ ಎನ್ನುತ್ತಾರೆ.

ಈ ರಾಟವಾಳ ಅಥವಾ ಮುನಿಯ ಗಳು ಕಿವುಡು ಪಕ್ಷಿಗಳಲ್ಲ. ಇವು ಮನುಷ್ಯನ ಚಲನವಲನಗಳನ್ನು ಗಮನಿಸಿಕೊಂಡು ಧೈರ್ಯ ಶಾಲಿ ಗಳಂತಿರುತ್ತವೆ ಎನ್ನುತ್ತಾರೆ.

ಸಮೂಹದಲ್ಲಿ ದಾಳಿ

ರಾಟವಾಳಗಳ ಸಮೂಹದಲ್ಲಿ ಎರಡು ಮೂರು ವರ್ಣಗಳ ಹತ್ತು ಹದಿನೈದು ಹಕ್ಕಿಗಳಿರುತ್ತವೆ. (ಬಿಳಿ ಪೃಷ್ಠದ ರಾಟವಾಳ ಇದನ್ನು ಇಂಗ್ಲಿಷ್‌ನಲ್ಲಿ ವೈಟ್ ರಂಪಡ್‌ ಮುನಿಯ ಎಂದು, ಗುಬ್ಬಚ್ಚಿ ಗಾತ್ರದ ಇವುಗಳ ವೈಜ್ಞಾನಿಕ ಹೆಸರು ಲೊಂಚುರ ಸ್ಟ್ರಯಟ್ ಎಂದು). ಗೀಜುಗ ಬಳಗದಿಂದ ಪ್ರತ್ಯೇಕವಾಗಿ ಕುಳಿತಿರುತ್ತವೆ.

ಅಗೇಡಿಗಳಿಗೆ ಗೀಜುಗ ಮತ್ತು ರಾಟವಾಳ ಸಮೂಹ ಬಂದು ಕುಳಿತಾಗ ನಾನು ಮತ್ತು ಚಂದು ಅಜ್ಜಿ ಚಪ್ಪಾಳೆ ತಟ್ಟಿ ಕೂಗುತ್ತಿದ್ದೆವು. ಆಗ ಗೀಜುಗಗಳು ಕೂಡಲೇ ಹಾರಿ ಹೋಗುತ್ತಿದ್ದವು. ಆದರೆ ಈ ರಾಟವಾಳಗಳು ಮಾತ್ರ ಏನೂ ಆಗದಂತೆ ಸುಮ್ಮನೆ ಕುಳಿತು ಭತ್ತದ ಬೀಜಗಳನ್ನು ತಿನ್ನುತ್ತಿದ್ದವು ಎನುತ್ತಾರೆ ರೋಶನ್‌.

– ಲಕ್ಷ್ಮೀಮಚ್ಚಿನ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಕುಂದಾಪುರ: ರಾಜ್ಯದ ನಿರ್ವಸಿತ ಮೀನುಗಾರರಿಗೆ ಆಶ್ರಯ ಕಲ್ಪಿಸುವ ಮತ್ಸ್ಯಾಶ್ರಯ ಯೋಜನೆಯನ್ನು ಮೀನುಗಾರರ ಬೇಡಿಕೆಯಂತೆ ರಾಜೀವ್‌ ಗಾಂಧಿ ವಸತಿ ನಿಗಮದ ಬದಲು ಮತ್ತೆ...

  • ಮುಖ್ಯವಾಹಿನಿ ರಾಜಕೀಯ ಪಕ್ಷಗಳಿಗೆ ಆಟದ ಮೈದಾನವಾಗುತ್ತಿರುವ ವಿದ್ಯಾರ್ಥಿಒಕ್ಕೂಟಗಳನ್ನು ಮುಂದಿನ 10 ವರ್ಷಗಳವರೆಗೆ ನಿಷೇಧಿಸಬೇಕು. ಈ ವಿದ್ಯಾರ್ಥಿ ಒಕ್ಕೂಟಗಳಿಂದಾಗಿ...

  • ನಗದು ರಹಿತ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳುವರ ಪ್ರಮಾಣ ಹೆಚ್ಚುತ್ತಿದ್ದು,ಹಣ ವರ್ಗಾವಣೆ, ಬಿಲ್‌ ಪಾವತಿ ಗಳನ್ನು ಕಾರ್ಡ್‌ ಅಥವಾ ಆ್ಯಪ್‌ಗ್ಳ ಮೂಲಕ ಮಾಡುತ್ತಿದ್ದಾರೆ....

  • ಯಾವುದೇ ಚಿತ್ರರಂಗವಿರಲಿ, ಸಾಮಾನ್ಯವಾಗಿ ಸ್ಟಾರ್‌ ನಟರು ಅಲ್ಲಿನ ಹಿರಿಯ ನಿರ್ದೇಶಕರು, ಅದರಲ್ಲೂ ಸಾಕಷ್ಟು ಹಿಟ್‌ ಚಿತ್ರಗಳನ್ನು ನಿರ್ದೇಶಿಸಿ ಜನಪ್ರಿಯವಾದ...

  • ದರ್ಶನ್‌ ನಾಯಕರಾಗಿ ನಟಿಸಿರುವ "ಒಡೆಯ' ಚಿತ್ರದ ಹಾಡು, ಟ್ರೇಲರ್‌ ಈಗಾಗಲೇ ಬಿಡುಗಡೆಯಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಿಡುಗಡೆಯ ಹಂತದಲ್ಲಿರುವ "ಒಡೆಯ' ಬಗ್ಗೆ...