ಗಣೇಶೋತ್ಸವ ಸಂಖ್ಯೆಯಲ್ಲಿ ಹೆಚ್ಚಳ;ಉಡುಪಿ-436,ದ.ಕ.-372,ಕಾಸರಗೋಡು-21

Team Udayavani, Aug 25, 2017, 7:30 AM IST

ಉಡುಪಿ: ವರ್ಷಂಪ್ರತಿಯಂತೆ ಗಣೇಶೋತ್ಸವದ ಸಡಗರ ಬಂದಿದೆ. ಕರಾವಳಿಯಲ್ಲಿ ಗಣೇಶೋತ್ಸವಗಳ ಸಂಖ್ಯೆ ಹೆಚ್ಚಿಗೆ ಆಗಿವೆ.

ಮಹಾರಾಷ್ಟ್ರದಲ್ಲಿ ಬಾಲಗಂಗಾಧರ ತಿಲಕರಿಂದ ಆರಂಭಗೊಂಡ ಸಾರ್ವಜನಿಕ ಗಣೇಶೋತ್ಸವ ಕರಾವಳಿನಾಡಿನಲ್ಲಿ ಬಹಳ ವರ್ಷಗಳ ಬಳಿಕ ಆರಂಭವಾಯಿತು. ಪ್ರತಿಧೀ ವರ್ಷವೂ ಗಣೇಶೋತ್ಸವಗಳ ಸಂಖ್ಯೆ ಹೆಚ್ಚುತ್ತಿದೆ.

1893ರಲ್ಲಿ ಪುಣೆಯ ಮೂರು ಕಡೆ ಮತ್ತು ಮುಂಬಯಿ ಗಿರ್‌ಗಾಂವ್‌ನ ಕೇಶವ್‌ಜಿ ನಾಯಕ್‌ ಚೌಕ್‌ನಲ್ಲಿ ಆರಂಭ ಗೊಂಡ ಗಣೇಶೋತ್ಸವ ಮುಂಬಯಿ ಕರ್ನಾಟಕ, ಹೈದರಾಬಾದ್‌ ಕರ್ನಾಟಕದಲ್ಲಿ ತಳವೂರಿ ಕರಾವಳಿನಾಡಿಗೆ ಬಂದದ್ದು 1948ರಲ್ಲಿ. ಮಂಗಳೂರು ಪ್ರತಾಪನಗರದ ಸಂಘ ನಿಕೇತನದಲ್ಲಿ ಆರಂಭಿಸಿದ ಗಣೇಶೋತ್ಸವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಗಣೇಶೋತ್ಸವವಾಗಿದೆ. ಇಲ್ಲೀಗ 70ನೇ ವರ್ಷದ ಗಣೇಶೋತ್ಸವ ಸಂಪನ್ನಗೊಳ್ಳುತ್ತಿದೆ.

ಇದು ಹೊರತುಪಡಿಸಿದರೆ ಈಗಿನ ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಆರಂಭಗೊಂಡ ಅತಿ ಹಿರಿಯ ಗಣೇಶನ ಪೆಂಡಾಲ್‌ ಕಡಿಯಾಳಿಯದ್ದು. ಇಲ್ಲೀಗ 51ನೇ ವರ್ಷದ ಉತ್ಸವ ನಡೆಯಲಿದೆ. ಕಾಸರಗೋಡಿನ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಡೆಯುತ್ತಿರುವ ಗಣೇಶೋತ್ಸವ ಕಾಸರಗೋಡು ಜಿಲ್ಲೆಯಲ್ಲಿ ಅತಿ ಹಿರಿದಾದುದು. ಇಲ್ಲಿ 62ನೇ ವರ್ಷದ ಉತ್ಸವ ನಡೆಯುತ್ತಿದೆ.

ಈ ವರ್ಷ ಉಡುಪಿ ಜಿಲ್ಲೆಯಲ್ಲಿ ಒಟ್ಟು 436 ಸಾರ್ವಜನಿಕ ಗಣೇಶೋತ್ಸವಗಳಿವೆ. ದ.ಕ. ಜಿಲ್ಲೆಯಲ್ಲಿ ಒಟ್ಟು 372 ಗಣೇಶೋತ್ಸವಗಳಿವೆ. ಇದರಲ್ಲಿ ಮಂಗಳೂರು ಕಮಿಷನರೆಟ್‌ ವ್ಯಾಪ್ತಿಯಲ್ಲಿ (ಮೂಲ್ಕಿ, ಮೂಡಬಿದಿರೆ, ಉಳ್ಳಾಲ, ಸುರತ್ಕಲ್‌, ಪಣಂಬೂರು ಸೇರಿ) 158, ದ.ಕ. ಜಿಲ್ಲೆ ಯ ಗ್ರಾಮಾಂತರದಲ್ಲಿ 214 ಗಣೇಶೋತ್ಸವಗಳು.

ಕೇರಳ: ಕನ್ನಡಿಗರಲ್ಲಿ ಜನಪ್ರಿಯ
ಕಾಸರಗೋಡು ಜಿಲ್ಲೆಯಲ್ಲಿ ಮೆರವಣಿಗೆ ನಡೆಯುವ 21 ಗಣೇಶೋತ್ಸವಗಳಿವೆ. ವಿಶೇಷವೆಂದರೆ ಕಾಸರ ಗೋಡು ಜಿಲ್ಲೆಯಲ್ಲಿ ಕನ್ನಡಿಗರ ಪ್ರದೇಶದಲ್ಲಿ ಗಣೇಶೋತ್ಸವ ಜನಪ್ರಿಯ.

ಉಡುಪಿ ಜಿಲ್ಲೆ: 16 ಉತ್ಸವ ಹೆಚ್ಚಳ
ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ 16 ಉತ್ಸವಗಳು ಹೆಚ್ಚಿಗೆ ಆಗಿ 436ಕ್ಕೆ ಏರಿದೆ. ಉಡುಪಿ ನಗ ರ ಠಾಣಾ ವ್ಯಾಪ್ತಿಯಲ್ಲಿ 25, ಮಲ್ಪೆ- 19, ಮಣಿಪಾಲ -15, ಬ್ರಹ್ಮಾವ ರ-37, ಕೋಟ -42, ಹಿರಿಯ ಡ ಕ-11, ಕುಂದಾಪುರ ನಗರ-33, ಕುಂದಾಪುರ ಗ್ರಾಮಾಂತರ -20. ಬೈಂದೂರು -38, ಕೊಲ್ಲೂರು-14, ಗಂಗೊಳ್ಳಿ- 27, ಶಂಕರನಾರಾಯಣ- 27, ಅಮಾಸೆ ಬೈಲು- 8, ಕಾರ್ಕಳ ನಗರ – 22, ಕಾರ್ಕಳ ಗ್ರಾಮಾಂತರ- 25, ಹೆಬ್ರಿ- 20, ಅಜೆಕಾರು- 11, ಶಿರ್ವ- 14, ಕಾಪು-14, ಪಡುಬಿದ್ರಿಯಲ್ಲಿ 14 ಗಣೇ ಶೋತ್ಸವಗಳಿವೆ. 

ಮಂಗಳೂರು ನಗರ: 3 ಹೆಚ್ಚಳ
ಮಂಗಳೂರು ಕಮಿಷನರೆಟ್‌ ವ್ಯಾಪ್ತಿಯಲ್ಲಿ ಉತ್ಸವಗಳ ಸಂಖ್ಯೆ ಮೂರು ಹೆಚ್ಚಿಗೆಯಾಗಿವೆ. ಇಲ್ಲಿ ಒಟ್ಟು 158 ಗಣೇಶೋತ್ಸವಗಳು ನಡೆಯಲಿವೆ. ಇದರಲ್ಲಿ ಮಂಗಳೂರು ಕೇಂದ್ರ ಉಪ ವಿಭಾಗದಲ್ಲಿ 26, ಮಂಗಳೂರು ಉತ್ತರ (ಪಣಂಬೂರು) ಉಪವಿಭಾಗದಲ್ಲಿ  88, ಮಂಗಳೂರು ದಕ್ಷಿಣ ಉಪ ವಿಭಾಗದಲ್ಲಿ 44 ಉತ್ಸವಗಳು ಇವೆ.

ದ.ಕ. ಗ್ರಾಮಾಂತರ: 5 ಹೆಚ್ಚಳ
ದ.ಕ. ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ 5 ಉತ್ಸವಗಳು ಹೆಚ್ಚಿಗೆ ಯಾಗಿ ಒಟ್ಟು 214 ಗಣೇಶೋತ್ಸವಗಳು ನಡೆಯಲಿವೆ. ವಿವರ ಇಂತಿ ವೆ: ಬಂಟ್ವಾಳ ನಗರ-10, ಬಂಟ್ವಾಳ ಗ್ರಾಮಾಂತರ- 17, ವಿಟ್ಲ-21, ಪುತ್ತೂರು ನಗರ -15, ಪುತ್ತೂರು ಗ್ರಾಮಾಂತರ – 16, ಉಪ್ಪಿನಂಗಡಿ-17, ಬೆಳ್ತಂಗ ಡಿ- 23, ಪುಂಜಾಲಕಟ್ಟೆ-5, ವೇಣೂರು-17, ಸುಬ್ರಹ್ಮಣ್ಯ- 10, ಸುಳ್ಯ-15, ಕಡಬ -12, ಧರ್ಮಸ್ಥಳ 18, ಬೆಳ್ಳಾರೆ 18.

ದ.ಕ. ಜಿಲ್ಲೆಯಲ್ಲಿ ಪ್ರಮುಖವಾದುದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ಕಿಲ್ಲೆ ಮೈದಾನ, ಫರಂಗಿಪೇಟೆ, ಸುಳ್ಯ ಗಣೇಶೋತ್ಸವ ಕಾಸರಗೋಡು ಜಿಲ್ಲೆಯಲ್ಲಿ ಕಾಸರಗೋಡು, ಕುಂಬಳೆ, ಮಂಜೇಶ್ವರ, ಬದಿ ಯಡ್ಕ, ಮುಳ್ಳೇರಿಯ, ಪೆರ್ಲದ ಉತ್ಸವ ಪ್ರಮುಖವಾದುದು. ಉಡುಪಿ ಜಿಲ್ಲೆಯಲ್ಲಿ ಪರ್ಕಳ ಮತ್ತು ಬಾರಕೂರು ಗಣೇ ಶೋತ್ಸವಗಳು ಸುವರ್ಣ ಮಹೋತ್ಸವ ಆಚರಿಸುತ್ತಿವೆ.

ಪೊಲೀಸ್‌ ಬಂದೋಬಸ್ತ್
ವಿವಿಧ ಗಣೇಶೋತ್ಸವಗಳಲ್ಲಿ ಪೊಲೀಸ್‌ ಬಂದೋ ಬಸ್ತ್ ಒದಗಿಸಲು ಪೊಲೀಸ್‌ ಇಲಾಖೆ ಸಜ್ಜಾಗಿದೆ. ಸೂಕ್ಷ್ಮ, ಅತಿ ಸೂಕ್ಷ್ಮ, ಸಾಮಾನ್ಯ ಎಂಬ ವಿಭಾಗ ಮಾಡಿ ಅಲ್ಲಿಗೆ ಬಂದೋಬಸ್ತ್ ಒದಗಿಸಲಾಗುತ್ತದೆ. ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶಗಳಿಗೆ ಹೆಚ್ಚಿನ ಗಮನ ಹರಿಸ ಲಾಗುತ್ತದೆ.

ಉಡುಪಿ ಜಿಲ್ಲೆ  ವಾರ್ಷಿಕ ಏರಿಕೆ
ಉಡು ಪಿ ಜಿಲ್ಲೆ ಯಲ್ಲಿ 2008ರಲ್ಲಿದ್ದ 331 ಗಣೇ ಶೋ ತ್ಸವ 2009ರಲ್ಲಿ 338, 2010ರಲ್ಲಿ 353, 2011ರಲ್ಲಿ 363, 2012ರಲ್ಲಿ 379, 2013ರಲ್ಲಿ 392, 2014ರಲ್ಲಿ 403, 2015ರಲ್ಲಿ 406, 2016ರಲ್ಲಿ 420ಕ್ಕೇರಿತು. ಈ ವರ್ಷದ ಸಂಖ್ಯೆ 436.
 
ದ.ಕ. ಜಿಲ್ಲೆ  ವಾರ್ಷಿಕ ಏರಿಕೆ
ದ.ಕ. ಜಿಲ್ಲೆ ಯಲ್ಲಿ 2008ರಲ್ಲಿದ್ದ 296 ಗಣೇ ಶೋ ತ್ಸ ವ ಗಳು 2009ರಲ್ಲಿ 298, 2010ರಲ್ಲಿ 305 (ಮಂಗ ಳೂರು ನಗ ರ ದಲ್ಲಿ 140, ಗ್ರಾಮಾಂತ ರ ದಲ್ಲಿ 165), 2011ರಲ್ಲಿ 332 (ನಗರ 139, ಗ್ರಾಮಾಂತರ 193), 2012ರಲ್ಲಿ 335 (ನಗರ 143, ಗ್ರಾಮಾಂತರ 192), 2013ರಲ್ಲಿ 334 (ನಗರ 145, ಗ್ರಾಮಾಂತರ 189), 2014ರಲ್ಲಿ 350 (ನಗರ 145, ಗ್ರಾಮಾಂತರ 205), 2015ರಲ್ಲಿ 354 (ನಗರ 151, ಗ್ರಾಮಾಂತರ 203), 2016ರಲ್ಲಿ 364 (ನಗರ 155, ಗ್ರಾಮಾಂತರ 209) ಇದ್ದವು. ಈ ವರ್ಷದ ಉತ್ಸವಗಳ ಸಂಖ್ಯೆ 372 (ನಗರ 158, ಗ್ರಾಮಾಂತರ 214).

ಲೆಕ್ಕಕ್ಕೆ  ಸಿಗದ ಉತ್ಸವ
ಕೆಲವು ಪ್ರದೇಶಗಳಲ್ಲಿ ಉತ್ಸವಗಳ ಸಂಖ್ಯೆ ಕಡಿಮೆಯಾದರೆ ಕೆಲವು ಕಡೆ ಹೆಚ್ಚಿಗೆ ಆಗುತ್ತವೆ. ಗ್ರಾಮಾಂತರ ಪ್ರದೇಶಗಳಲ್ಲಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗುವುದೂ ಇಲ್ಲ. ಕೆಲವು ಕಡೆ ಸಮಿತಿಯವರು ವಿಳಂಬವಾಗಿ ಪೊಲೀಸ್‌ ಠಾಣೆಗೆ ತಿಳಿಸಿದ ಕಾರಣ ಧ್ವನಿವರ್ಧಕದ ಅನುಮತಿ ಸಿಕ್ಕಿಲ್ಲ. ಇಂತಹ ಗಣೇಶೋತ್ಸವಗಳು ಬಂದೋಬಸ್ತ್ ಲೆಕ್ಕಕ್ಕೆ ಬರುವುದಿಲ್ಲ. ದೇವಸ್ಥಾನ ಗಳಲ್ಲಿಡುವ ಮತ್ತು ಮನೆಗಳಲ್ಲಿಯೂ ಸಾರ್ವಜನಿಕ ರೂಪದಲ್ಲಿ  ಪೂಜಿಸುವ ಗಣೇಶನ ಮೂರ್ತಿಗಳು ಈ ಲೆಕ್ಕದಲ್ಲಿ  ಬರುವುದಿಲ್ಲ.

– ಮಟಪಾಡಿ ಕುಮಾರಸ್ವಾಮಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ