ಅಟ್ಟೆಗೆ 70 ರೂ.: ಭೀತಿಯಲ್ಲಿ ಮಲ್ಲಿಗೆ ಬೆಳೆಗಾರರು


Team Udayavani, May 8, 2021, 5:40 AM IST

ಅಟ್ಟೆಗೆ 70 ರೂ.: ಭೀತಿಯಲ್ಲಿ ಮಲ್ಲಿಗೆ ಬೆಳೆಗಾರರು

ಶಿರ್ವ:  ಕೋವಿಡ್ ದಿಂದಾಗಿ ಶಂಕರಪುರ ಮಲ್ಲಿಗೆ ದರದಲ್ಲಿ ಇಳಿಕೆಯಾಗಿದ್ದು ಇದು  ಬೆಳೆಗಾರ‌ರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಮೇ 5ರಂದು ಅಟ್ಟೆಗೆ 70 ರೂ. ಇದ್ದ ದರ ಮೇ 6ರಂದು  170 ರೂ.ಗೆ ಏರಿತ್ತು. ಬಳಿಕ ಇಳಿಕೆಯಾಗಿ ಗುರುವಾರ 130 ರೂ. ಇದ್ದು ಶುಕ್ರವಾರ ಮತ್ತೆ 70 ರೂ.ಗೆ ಇಳಿದಿದೆ.

ವರ್ಷದ ಹೆಚ್ಚಿನ ಆದಾಯ ಎಪ್ರಿಲ್‌ -ಮೇ ತಿಂಗಳಲ್ಲಿ ಸಿಗುವುದರಿಂದ ಮಲ್ಲಿಗೆ  ಕೃಷಿಯನ್ನೇ ನಂಬಿ ಜೀವನ ನಿರ್ವಹಣೆ  ಮಾಡುತ್ತಿದ್ದ ನೂರಾರು ಕುಟುಂಬಗಳು, ಬೆಳೆಗಾರರು, ಕಟ್ಟೆ ವ್ಯಾಪಾರಿಗಳು, ಮಾರಾಟಗಾರರು ಕಂಗಾಲಾಗಿದ್ದಾರೆ. ಸೀಸನ್‌ನಲ್ಲೇ ಬೆಲೆ ಪಾತಾಳಕ್ಕೆ ಕೋವಿಡ್ ಕರ್ಫ್ಯೂನಿಂದಾಗಿ ಜಾತ್ರೆ,  ಶುಭ ಸಮಾರಂಭಗಳಿಗೂ ಕಡಿವಾಣ ಬಿದ್ದ  ಕಾರಣ ಮಲ್ಲಿಗೆ ಧಾರಣೆ ಪಾತಾಳಕ್ಕೆ ಕುಸಿದಿದೆ. ಈ ಸಮಯದಲ್ಲಿ ಗರಿಷ್ಠ ದರ  1,000 ರೂ. ಆಸುಪಾಸಿನಲ್ಲಿ ಇದ್ದ ದರ, ಜಿಲ್ಲೆಯ ಮಾರುಕಟ್ಟೆ ಬಿಟ್ಟು ಬೇರೆ ಕಡೆಗೆ ರವಾನೆಯಾಗದೆ ದರದಲ್ಲಿ ಭಾರೀ ಕುಸಿತ ಕಂಡಿದೆ.  ಈ ಬಾರಿ ಮಾರ್ಚ್‌ನಿಂದ ಎಪ್ರಿಲ್‌ 3ನೇ ವಾರದವರೆಗೆ ಮೌಡ್ಯವಿದ್ದು, ಸೀಸನ್‌  ಆರಂಭವಾಗುವ ವೇಳೆಗೆ  ಕೋವಿಡ್ ಮಲ್ಲಿಗೆ ಬೆಳೆಗಾರರ ಆದಾಯದ ಮೂಲ ಕಸಿದುಕೊಂಡಿದೆ. ಹೂ ಕೊಯ್ದು  ಕಟ್ಟಿ 1 ಚೆಂಡು ಹೂವಿಗೆ 20 ರೂ.ಗೆ ನೀಡಬೇಕಾಗಿದೆ.

ಕಳೆದ ವರ್ಷ ಲಾಕ್‌ಡೌನ್‌ ಹಂತದಲ್ಲಿ ಮಾ. 23ರಂದು ಅಟ್ಟೆಗೆ 50 ರೂ. ದಾಖ ಲಾಗಿತ್ತು. ಇತಿಹಾಸದಲ್ಲಿ ಮೊದಲ ಬಾರಿಗೆ 2-3 ವಾರಗಳ ಕಾಲ ಮಲ್ಲಿಗೆ ಕಟ್ಟೆ ಬಂದ್‌  ಆಗಿ ವ್ಯಾಪಾರ ಸ್ಥಗಿತಗೊಂಡು ತೀವ್ರ ಆರ್ಥಿಕ ಸಂಕಷ್ಟ ಎದುರಾಗಿತ್ತು. ಬಳಿಕ ಚೇತರಿಸಿಕೊಂಡಿದ್ದ ಮಲ್ಲಿಗೆ ಮಾರುಕಟ್ಟೆ ನವರಾತ್ರಿ ಸೇರಿ ಸತತ 19 ದಿನಗಳ ಕಾಲ 1,250 ರೂ.ಗರಿಷ್ಠ  ದರ ಮುಂದುವರಿದಿದ್ದು ದಾಖಲೆಯಾಗಿತ್ತು.

5 ಸಾವಿರಕ್ಕೂ ಹೆಚ್ಚು ಬೆಳೆಗಾರರು :

ತೋಟಗಾರಿಕೆ ಇಲಾಖೆಯ ಪ್ರಕಾರ ಉಡುಪಿ ಜಿಲ್ಲೆಯ ಕಾಪು ತಾಲೂಕಿನ 10 ಗ್ರಾಮಗಳಲ್ಲಿ ಸುಮಾರು 5,000ಕ್ಕೂ ಹೆಚ್ಚು ಮಲ್ಲಿಗೆ ಬೆಳೆಗಾರರಿದ್ದು, ಸುಮಾರು 103 ಹೆಕ್ಟೇರ್‌ ಪ್ರದೇಶದಲ್ಲಿ ಮಲ್ಲಿಗೆ ಬೆಳೆಯಲಾಗುತ್ತಿದೆ.

ಸಿಗದ ಪರಿಹಾರ, ಸಹಾಯಧನ :

ಮಲ್ಲಿಗೆ ಬೆಳೆಯನ್ನು ತೋಟಗಾರಿಕೆ ಬೆಳೆ ಎಂದು ಹೇಳಲಾಗುತ್ತಿದೆಯಾದರೂ ಹೆಚ್ಚಿನ ಕೃಷಿಕರು ಮಲ್ಲಿಗೆ ಬೆಳೆಯನ್ನು 5ರಿಂದ 10 ಸೆಂಟ್ಸ್‌ ಜಮೀನಿನಲ್ಲಿ ಬೆಳೆಯುತ್ತಿದ್ದು 1 ಎಕ್ರೆಗಿಂತ ಕಡಿಮೆ ಜಮೀನಿನಲ್ಲಿ ಕೃಷಿ ಮಾಡುವ ಬೆಳೆಗಾರರಿಗೆ ಸರಕಾರದಿಂದ ಸಬ್ಸಿಡಿ, ಕೃಷಿ ಸಲಕರಣೆಗಳಿಗೆ ಯಾವುದೇ ಸಹಾಯಧನ ಸಿಗುವುದಿಲ್ಲ.

ಕೋವಿಡ್ ದಿಂದಾಗಿ ಮಲ್ಲಿಗೆ ಬೆಳೆಗಾರ ರಿಗೆ ಸೀಸನ್‌ನ ಆದಾಯಕ್ಕೆ ಕತ್ತರಿ ಬಿದ್ದಿದೆ. ಕಳೆದ ವರ್ಷ ಮುಖ್ಯಮಂತ್ರಿಯವರ ಪರಿಹಾರ ಧನ ಆರ್‌ಟಿಸಿಯಲ್ಲಿ ಮಲ್ಲಿಗೆ ಕೃಷಿ ಎಂದು ನಮೂದಿಸಿದವರಿಗೆ ಮಾತ್ರ ದೊರೆತಿದ್ದು, ಶೇ. 99 ಫಲಾನುಭವಿಗಳಿಗೆ ದೊರೆತಿಲ್ಲ. ಸರಕಾರ ಗಿಡವೊಂದಕ್ಕೆ ಕನಿಷ್ಠ 500 ರೂ.ನಂತೆ ಪರಿಹಾರ ನೀಡಿ ಕೃಷಿಕರ ಹಿತ ಕಾಯಬೇಕಿದೆ.  –ಬಂಟಕಲ್ಲು ರಾಮಕೃಷ್ಣ ಶರ್ಮ, ಅಧ್ಯಕ್ಷರು, ಮಲ್ಲಿಗೆ ಬೆಳೆಗಾರರ ಸಂಘ

ಟಾಪ್ ನ್ಯೂಸ್

Gyanvapi mosque committee Shivling as fountain.

ಜ್ಞಾನವಾಪಿ ಮಸೀದಿಯಲ್ಲಿ ಸಿಕ್ಕಿದ್ದು ಶಿವಲಿಂಗವಲ್ಲ; ಅದು ಫೌಂಟನ್: ಮಸೀದಿಯ ಆಡಳಿತ ಮಂಡಳಿ ವಾದ

1sucide

ಬೇಲ್‌ಗೆ ಕುಟುಂಬ ಸಹಕರಿಸದಿದ್ದಕ್ಕೆ ಕೈದಿ ಜೈಲಿನಲ್ಲಿ ಆತ್ಮಹತ್ಯೆ

ಮಾಜಿ ಕೇಂದ್ರ ಸಚಿವ ಚಿದಂಬರಂ ಆಸ್ತಿ ಮೇಲೆ ಸಿಬಿಐ ದಾಳಿ; ಪುತ್ರನ ವಿರುದ್ಧ ಹೊಸ ಕೇಸ್

ಮಾಜಿ ಕೇಂದ್ರ ಸಚಿವ ಚಿದಂಬರಂ ಆಸ್ತಿ ಮೇಲೆ ಸಿಬಿಐ ದಾಳಿ; ಪುತ್ರನ ವಿರುದ್ಧ ಹೊಸ ಕೇಸ್

777 charlie

‘777 ಚಾರ್ಲಿ’…. ಮನಮುಟ್ಟುವ ಅನುಬಂಧ ಅನಾವರಣ

Mehbooba Mufti,

ಜಮ್ಮು ಕಾಶ್ಮೀರ ಹಿಂಸಾಚಾರಕ್ಕೆ ದಿ ಕಾಶ್ಮೀರ ಫೈಲ್ ಚಿತ್ರವೇ ಕಾರಣ: ಮೆಹಬೂಬಾ ಮುಫ್ತಿ

thumb 2

ಭಾರತ-ನೇಪಾಲ ಸ್ನೇಹ ಹಿಮಾಲಯದಷ್ಟು ಗಾಢ; ಬುದ್ಧನ ನಾಡಿನಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ

ರಾಜ್ಯ ವಿಪತ್ತು ಸ್ಪಂದನ ದಳಕ್ಕೆ ಮಾಜಿ ಸೈನಿಕರೇ ಗತಿ

ರಾಜ್ಯ ವಿಪತ್ತು ಸ್ಪಂದನ ದಳಕ್ಕೆ ಮಾಜಿ ಸೈನಿಕರೇ ಗತಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೌಹಾರ್ದದಿಂದ ಮಂದಿರ ಬಿಟ್ಟುಕೊಡಲಿ : ಪೇಜಾವರ ಶ್ರೀ

ಸೌಹಾರ್ದದಿಂದ ಮಂದಿರ ಬಿಟ್ಟುಕೊಡಲಿ : ಪೇಜಾವರ ಶ್ರೀ

ಕರಾವಳಿಯಾದ್ಯಂತ ಸಿಡಿಲು ಸಹಿತ ಭಾರೀ ಮಳೆ; ಹಲವೆಡೆ ಕೃತಕ ನೆರೆ ಸೃಷ್ಟಿ

ಕರಾವಳಿಯಾದ್ಯಂತ ಸಿಡಿಲು ಸಹಿತ ಭಾರೀ ಮಳೆ; ಹಲವೆಡೆ ಕೃತಕ ನೆರೆ ಸೃಷ್ಟಿ

ಕಲ್ಸಂಕ : ಆ್ಯಂಬುಲೆನ್ಸ್‌ನಲ್ಲಿ ಬೆಂಕಿ, ವಾಹನ ಸಂಚಾರ ಅಸ್ತವ್ಯಸ್ತ

ಕಲ್ಸಂಕ : ಆ್ಯಂಬುಲೆನ್ಸ್‌ನಲ್ಲಿ ಬೆಂಕಿ, ವಾಹನ ಸಂಚಾರ ಅಸ್ತವ್ಯಸ್ತ

ಕಟಪಾಡಿ : ರಿಯಲ್‌ ಎಸ್ಟೇಟ್‌ ವ್ಯವಹಾರಸ್ಥ ನಾಪತ್ತೆ

ಕಟಪಾಡಿ : ದೇವಸ್ಥಾನಕ್ಕೆಂದು ಹೋದ ರಿಯಲ್‌ ಎಸ್ಟೇಟ್‌ ಉದ್ಯಮಿ ನಾಪತ್ತೆ

ಎಸೆಸೆಲ್ಸಿ ಅನಂತರ ಮುಂದೇನು? ವಿದ್ಯಾರ್ಥಿಗಳ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಿದ ಕಾರ್ಯಕ್ರಮ

ಕಾಲೇಜು ಆಕಾಂಕ್ಷಿಗಳ ಪ್ರಶ್ನೆಗಳಿಗೆ ಪರಿಣತರ ಉತ್ತರ

MUST WATCH

udayavani youtube

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ

udayavani youtube

ದತ್ತ ಜಯಂತಿ ಸಮಯದಲ್ಲಿ ಹೋಮದ ಹೊಗೆ.. ಬೇರೆ ಸಮಯದಲ್ಲಿ ಮಾಂಸದ ಹೊಗೆ

udayavani youtube

ಶಾಲಾ ಪ್ರಾರಂಭೋತ್ಸವ ಹಿರಿಯಡ್ಕ ಸರಕಾರಿ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳಿಗೆ ಸಂಭ್ರಮದ ಸ್ವಾಗತ

udayavani youtube

ಶಂಕರನಾರಾಯಣ : ಶಾಲಾರಂಭದ ದಿನದಂದೇ ಸರಕಾರಿ ಶಾಲೆಯಲ್ಲಿ ಪ್ರತಿಭಟನೆ ಬಿಸಿ

udayavani youtube

ಫಲಜ್ಯೋತಿಷ್ಯದಲ್ಲಿ ದೀರ್ಘಕಾಲೀನ ಫಲಾದೇಶ ಮಾಡುವುದು ಹೇಗೆ ?

ಹೊಸ ಸೇರ್ಪಡೆ

kudu-road

ಸರ್ವಿಸ್‌ ರಸ್ತೆಯ ಕೂಡು ರಸ್ತೆಗಳಿಗಾಯ್ತು ಡಾಮರು

2

ವಿಶ್ವಶ್ರಮ ನೆಲದಲ್ಲಿ ಬೇಂದ್ರೆ ಕಂಡ ಬೆನಕ

Gyanvapi mosque committee Shivling as fountain.

ಜ್ಞಾನವಾಪಿ ಮಸೀದಿಯಲ್ಲಿ ಸಿಕ್ಕಿದ್ದು ಶಿವಲಿಂಗವಲ್ಲ; ಅದು ಫೌಂಟನ್: ಮಸೀದಿಯ ಆಡಳಿತ ಮಂಡಳಿ ವಾದ

dam

ಬೇಸಗೆಯಲ್ಲಿ ವರ್ಷಧಾರೆ; ತುಂಬೆಯಲ್ಲಿ ತುಂಬಿ ಹರಿಯುವ ನೀರು!

1sucide

ಬೇಲ್‌ಗೆ ಕುಟುಂಬ ಸಹಕರಿಸದಿದ್ದಕ್ಕೆ ಕೈದಿ ಜೈಲಿನಲ್ಲಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.