ಜಾಲಿ ರೈಡ್: ಬೈಕ್ಗೆ ಢಿಕ್ಕಿ; ಗಾಯ
Team Udayavani, Jan 22, 2018, 12:11 PM IST
ಪಡುಬಿದ್ರಿ: ರಜಾದಿನದ ಮಜಾಕ್ಕಾಗಿ ಪ್ರತಿ ರವಿವಾರ ಬೆಳಗ್ಗೆ ಸುಮಾರು 10ರಿಂದ 15 ಮಂದಿ ಯುವಕರು ದುಬಾರಿ ಬೈಕ್ನಲ್ಲಿ
(35 ಲಕ್ಷ ರೂ. ಬೆಲೆಯ ಬಿಎಂಡಬ್ಲ್ಯೂ ಬೈಕ್ ಸಹಿತ) ತಾಸಿಗೆ ಸುಮಾರು 200 ಕಿ.ಮೀ. ವೇಗದಲ್ಲಿ ಸವಾರಿ ನಡೆಸುತ್ತಿದ್ದಾಗ ಮತ್ತೂಂದು ಬೈಕ್ಗೆ ಢಿಕ್ಕಿ ಹೊಡೆದ ಘಟನೆ ಜ. 21ರಂದು ಉಚ್ಚಿಲದಲ್ಲಿ ನಡೆದಿದೆ.
ಉಚ್ಚಿಲ ಮಹಾಲಕ್ಷ್ಮೀ ಸಭಾ ಭವನದ ಎದುರು ಬೈಕಿನಲ್ಲಿ ಸಾಗುತ್ತಿದ್ದ ಅದಮಾರಿನ ನಾಗರಾಜ ಅವರ ಬೈಕಿಗೆ ಹಿಂದಿನಿಂದ ಬಂದ ಬಿಎಂಡಬ್ಲ್ಯು ಬೈಕ್ ಸವಾರ ರಿಜ್ವಾನ್ ಢಿಕ್ಕಿ ಹೊಡೆದ ಪರಿಣಾಮ ನಾಗರಾಜ್ ಡಿವೈಡರ್ಗೆ ಎಸೆಯಲ್ಪಟ್ಟು ಗಾಯಗೊಂಡರು. ಅವರಿಗೆ ಕಾಪುವಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಉಡುಪಿ ಖಾಸಗಿ ಆಸ್ಪತ್ರೆಗೆ ಒಯ್ಯಲಾಗಿದೆ. ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಭೇಟಿ ನೀಡಿದ್ದು, ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಲಾಗಿದೆ.
ಬೈಕ್ ಸಾಗಿಸಲು ಯತ್ನ
ಅಪಘಾತ ಸಂಭವಿಸಿದ ಕೂಡಲೇ, ಪೊಲೀಸರಿಗೂ ಮಾಹಿತಿ ನೀಡದೆ ಟೆಸ್ಟ್ ರೈಡ್ಗೆಂದು ನೀಡಲಾಗಿದ್ದ ಬಿಎಂಡಬ್ಲ್ಯೂ ಬೈಕನ್ನು ಸಾಗಿಸಲು ಕಂಪೆನಿಯವರು ಪ್ರಯತ್ನಿಸಿದ್ದು, ಅದಕ್ಕೆ ಪೊಲೀಸರು ತಡೆಯೊಡ್ಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ
Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ