ಕಡೆಕಾರ್: ಕೆರೆಯಲ್ಲಿ ಮುಳುಗಿ 8 ವರ್ಷದ ಬಾಲಕ ಸಾವು
Team Udayavani, May 22, 2022, 5:17 PM IST
ಸಾಂದರ್ಭಿಕ ಚಿತ್ರ.
ಮಲ್ಪೆ: ಶನಿವಾರ ಸಂಜೆ ಮನೆಯಿಂದ ಆಟವಾಡಲು ಹೋದ ಬಾಲಕ ಕೆರೆಯಲ್ಲಿ ಮುಳುಗಿ ಸಾವನ್ನಪಿದ ಘಟನೆ ಕಡೆಕಾರಿನ ಭಜನಾ ಮಂದಿರದ ಬಳಿ ನಡೆದಿದೆ.
ಕಡೆಕಾರು ನಿವಾಸಿ ಗಿರೀಶ್ ಉಪಾಧ್ಯಾಯ ಎಂಬವರ ಪುತ್ರ ರಾಘವ (8) ಮೃತಪಟ್ಟ ಬಾಲಕ. ಈತ ಕಿದಿಯೂರು ಆಂಗ್ಲಮಾದ್ಯಮ ಶಾಲೆಯ 3ನೇ ತರಗತಿಯ ವಿದ್ಯಾರ್ಥಿ.
ಶನಿವಾರ ಸಂಜೆ ಮನೆ ಬಳಿ ಆಟವಾಡಲು ಜಾರು ಬಂಡಿಗೆ ಹೋಗಿದ್ದ ಈತ ಕೈಕಾಲು ತೊಳೆಯಲು ಕೆರೆಗೆ ಇಳಿದ ಸಂದರ್ಭದಲ್ಲಿ ಕಾಲು ಜಾರಿ ಬಿದ್ದಿದ್ದು ಈಜಾಡಲು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ:ಪ್ರವಾಹ ತಡೆಗೆ ಸಕಲ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ
ಶನಿವಾರ ರಾತ್ರಿ 12 ಗಂಟೆಯವರೆಗೂ ಹುಡುಕಾಟ ನಡೆಸಿದರೂ ಪತ್ತೆಯಾಗದ ಕಾರಣ ಬೆಳಗ್ಗೆ ಮುಳುಗು ತಜ್ಞ ಈಶ್ವರ ಮಲ್ಪೆ ಅವರು ನೀರಿನಾಳದಲ್ಲಿರುವ ಬಾಲಕನ ಮೃತದೇಹವನ್ನು ಪತ್ತೆ ಹಚ್ಚಿ ಮೇಲೆತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಧಾರಾಕಾರ ಮಳೆ; ಬಂಟ್ವಾಳದಲ್ಲಿ ಅಪಾಯದ ಮಟ್ಟ ತಲುಪದ ನೇತ್ರಾವತಿ
ವಿಟ್ಲ: ಮಳೆ ಅಬ್ಬರ- ಹಲವು ಮನೆಗಳು ಜಲಾವೃತ-ಜನ ಜೀವನ ಅಸ್ತವ್ಯಸ್ತ
ಹರ್ಷ ಹತ್ಯೆ ಪ್ರಕರಣ: ಶಿವಮೊಗ್ಗದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಎನ್ ಐಎ ತಂಡ
ಕುಣಿಗಲ್: ಕೆಂಪೇಗೌಡರಿಗೆ ಅಪಮಾನವಾದ ಸ್ಥಳದಲ್ಲಿ ಪ್ರತಿಮೆ ನಿರ್ಮಾಣ: ಕೆಂಪೇಗೌಡ ಸೇನೆ ತಿರ್ಮಾನ
ಉದಯಪುರ ಮತ್ತೆ ಉದ್ವಿಗ್ನ: ಶಿರಚ್ಛೇದನ ಘಟನೆ ಖಂಡಿಸಿ ಬೃಹತ್ ಪ್ರತಿಭಟನೆ, ಕಲ್ಲುತೂರಾಟ