
ಕಾರ್ಕಳ: ಓಟ ನಿಲ್ಲಿಸಿದ ತೆಳ್ಳಾರಿನ ಮೋಡೆ!
Team Udayavani, Sep 18, 2022, 7:24 AM IST

ಕಾರ್ಕಳ: ಎರಡು ದಿನಗ ಳಿಂದ ಅನಾರೋಗ್ಯ ಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ತೆಳ್ಳಾರಿನ ಮೋಡೆ ಹೆಸರಿನ ಕಂಬಳದ ಕೋಣ ಚಿಕಿತ್ಸೆಗೆ ಸ್ಪಂದಿಸದೇ ಶನಿವಾರ ಮೃತಪಟ್ಟಿದೆ.
ಕಂಬಳದಲ್ಲಿ ಗಣನೀಯ ಸಾಧನೆಗೈದಿದ್ದ ಮೋಡೆ ಹಗ್ಗ ಹಿರಿಯ, ಕಿರಿಯ, ನೇಗಿಲು ಹಿರಿಯ, ಕಿರಿಯ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಗಳಿಸಿತ್ತು. ಅಡ್ಡ ಹಲಗೆಯಲ್ಲಿ ಪ್ರತೀ ಬಾರಿಯೂ ಸರಣಿ ಪ್ರಶಸ್ತಿ ಗೆಲ್ಲುವ ಮೂಲಕ ಕಂಬಳ ಕ್ಷೇತ್ರದಲ್ಲಿ ಜನಮನ್ನಣೆ ಗಳಿಸಿತ್ತು. ಪ್ರಸ್ತುತ ಮಂಗಳೂರಿನ ಬೋಳಾರದ ತ್ರಿಶಲ್ ಕೆ. ಪೂಜಾರಿ ಮಾಲಕತ್ವದಲ್ಲಿ ಕಂಬಳದಲ್ಲಿ ಭಾಗವಹಿಸುತ್ತಿತ್ತು.
ಕಾರ್ಕಳ ತೆಳ್ಳಾರು ನೇರೋಳ್ಳಪಲ್ಕೆ ಬರ್ಕೆ ಮನೆಯ ಕೋಣ ಇದಾಗಿದ್ದರಿಂದ ದುರ್ಗ-ತೆಳ್ಳಾರು ಹೆಸರು ಕಂಬಳ ಕ್ಷೇತ್ರದಲ್ಲಿ ಜನಪ್ರಿಯವಾಗಿತ್ತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
