ಕಂಬಳ ಕಣದಲ್ಲಿ ಮೇಲುಗೈಲೆಕ್ಕಾಚಾರ!

ಋತುವಿನ ಅಂತಿಮ ಕಂಬಳದಲ್ಲಿ ಚಾಂಪಿಯನ್‌ಶಿಪ್‌ ಪೈಪೋಟಿ

Team Udayavani, Mar 7, 2020, 7:15 AM IST

ಕಂಬಳ ಕಣದಲ್ಲಿ ಮೇಲುಗೈಲೆಕ್ಕಾಚಾರ!

ಮಣಿಪಾಲ: ನಾನಾ ಕಾರಣಗಳಿಂದ ಹಿಂದೆಂದಿಗಿಂತಲೂ ಹೆಚ್ಚು ಪ್ರಸಿದ್ಧಿ ಪಡೆದ ಕಂಬಳದ ಈ ಋತುವಿನ ಅಂತಿಮ ಸ್ಪರ್ಧೆಗೆ ಬಂಗಾಡಿ ಕೊಲ್ಲಿ ಸಾಕ್ಷಿಯಾಗುತ್ತಿದೆ. ಮಾ. 7 ಮತ್ತು 8ರಂದು ನಡೆಯಲಿರುವ ಜೋಡುಕರೆ ಕಂಬಳದಲ್ಲಿ ಸರಣಿಶ್ರೇಷ್ಠ ಪ್ರಶಸ್ತಿಗೆ ಪೈಪೋಟಿ ನಡೆಯಲಿದೆ.

ಪ್ರತೀ ಕಂಬಳ ಋತುವಿನ ಅಂತ್ಯದಲ್ಲಿ ಪ್ರತೀ ವಿಭಾಗದಲ್ಲಿ ಅತೀ ಹೆಚ್ಚು ಪದಕ ಪಡೆದ ಕೋಣಗಳಿಗೆ ಸರಣಿ ಶ್ರೇಷ್ಠ ಅಥವಾ ಚಾಂಪಿಯನ್‌ ಪ್ರಶಸ್ತಿ ನೀಡಲಾಗುತ್ತದೆ. ಈ ಋತುವಿನ 15ನೇ ಕಂಬಳಕ್ಕೆ ಸಿದ್ಧತೆ ಮುಗಿದಿದ್ದು, ಪ್ರಶಸ್ತಿಯ ಲೆಕ್ಕಾಚಾರ ನಡೆದಿದೆ.

ಸರಣಿ ಶ್ರೇಷ್ಠ ಲೆಕ್ಕಾಚಾರ ಹೇಗೆ?
ಜಿಲ್ಲಾ ಕಂಬಳ ಸಮಿತಿಯಡಿ ಬರುವ ಕಂಬಳಗಳಲ್ಲಿ ಫೈನಲ್‌ ತಲುಪಿದ ಕೋಣಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಪ್ರಥಮ ಸ್ಥಾನಕ್ಕೆ 5 ಅಂಕ, ದ್ವಿತೀಯಕ್ಕೆ 3 ಅಂಕ ನೀಡಲಾಗುತ್ತದೆ. ಎಲ್ಲ ಕಂಬಳ ಮುಗಿದ ಬಳಿಕ ಅಂಕಗಳ ಆಧಾರದಲ್ಲಿ ಚಾಂಪಿಯನ್‌ ನಿರ್ಧರಿಸಲಾಗುತ್ತದೆ.

ಸುಮಾರು 25 ವರ್ಷ ಗಳಿಂದ ಸರಣಿ ಶ್ರೇಷ್ಠ ಪರಂಪರೆ ಇದ್ದರೂ 2010ರ ಬಳಿಕ ಹಗ್ಗ ಹಿರಿಯ ವಿಭಾಗದಲ್ಲಿ ಮೇಲುಗೈ ಸಾಧಿಸಿರುವುದು ಮೂಡುಬಿದಿರೆ ಕರಿಂಜೆ ವಿನು ವಿಶ್ವನಾಥ ಶೆಟ್ಟರ ಕೋಣಗಳು, ನೇಗಿಲು ಹಿರಿಯ ವಿಭಾಗದಲ್ಲಿ ಬೋಳದಗುತ್ತು ಸತೀಶ್‌ ಶೆಟ್ಟರ ಕೋಣಗಳು.

ಈ ಬಾರಿ ಪೈಪೋಟಿ ನೇಗಿಲು ಹಿರಿಯದಲ್ಲಿ
ನೇಗಿಲು ಹಿರಿಯ ಬಿಟ್ಟು ಉಳಿದೆಲ್ಲ ವಿಭಾಗಗಳಲ್ಲಿ ಈಗಾಗಲೇ ಪ್ರಶಸ್ತಿ ಬಹುತೇಕ ನಿರ್ಧಾರವಾಗಿದೆ. ಇರುವೈಲು ಪಾಣಿಲ ಬಾಡ ಪೂಜಾರಿಯವರ ಕೋಣಗಳು 5 ಪ್ರಥಮ ಮತ್ತು 4 ದ್ವಿತೀಯ ಪ್ರಶಸ್ತಿಗಳ ಸಹಿತ 37 ಅಂಕದೊಂದಿಗೆ ಅಗ್ರ ಸ್ಥಾನದಲ್ಲಿವೆ. ಕಳೆದ ಬಾರಿಯ ಚಾಂಪಿಯನ್‌ ಬೋಳದಗುತ್ತು ಸತೀಶ್‌ ಶೆಟ್ಟಿಯವರ ಕೋಣಗಳು 5 ಪ್ರಥಮ ಮತ್ತು 3 ದ್ವಿತೀಯ ಪ್ರಶಸ್ತಿಯೊಂದಿಗೆ 34 ಅಂಕ ಗಳಿಸಿದೆ. ಇವರ ಮಧ್ಯೆ ಕೇವಲ 3 ಅಂಕಗಳ ವ್ಯತ್ಯಾಸವಿದೆ.

ಕುತೂಹಲವೆಂದರೆ ಇರುವೈಲು ಪಾಣಿಲ ಕೋಣಗಳನ್ನು ಓಡಿಸುವವರು ಮಿಜಾರು ಶ್ರೀನಿವಾಸ ಗೌಡರಾದರೆ, ಬೋಳದ ಗುತ್ತುವಿನ ಓಟಗಾರ ಹಕ್ಕೇರಿ ಸುರೇಶ್‌ ಶೆಟ್ಟಿ.

ಈ ಋತುವಿನ ಸಾಧಕರು
ನೇಗಿಲು ಹಿರಿಯ ವಿಭಾಗ ಹೊರತುಪಡಿಸಿ ಉಳಿದದ್ದರ ಪ್ರಶಸ್ತಿ ನಿರ್ಧಾರವಾಗಿದೆ. ಹಗ್ಗ ಹಿರಿಯದಲ್ಲಿ ಪದವು ಕಾನಡ್ಕದ ಕೋಣಗಳು, ಕಿರಿಯ ವಿಭಾಗದಲ್ಲಿ 14 ರಲ್ಲಿ 13 ಪ್ರಥಮ, 1 ದ್ವಿತೀಯ ಪಡೆದ ಮಿಜಾರು ಶಕ್ತಿ ಪ್ರಸಾದರ ಕೋಣಗಳು. ನೇಗಿಲು ಕಿರಿಯದಲ್ಲಿ ನ್ಯೂ ಪಡಿವಾಲ್ಸ್‌ ಕೋಣಗಳು, ಅಡ್ಡ ಹಲಗೆ ವಿಭಾಗದಲ್ಲಿ ಬೋಳಾರ ತ್ರಿಶಾಲ್‌ ಪೂಜಾರಿಯವರ ಕೋಣಗಳು, ಕನೆ ಹಲಗೆ ವಿಭಾಗದಲ್ಲಿ ಬೇಲಾಡಿ ಬಾವದ ಕೋಣಗಳು ಪ್ರಶಸ್ತಿ ಪಡೆಯಲಿವೆ.

ಇರುವೈಲು – ಬೋಳದ
ಗುತ್ತು ಪ್ರತಿಷ್ಠೆಯ ಕಣ
ಇತ್ತೀಚೆಗೆ ಅತೀ ಜನಪ್ರಿಯತೆ ಪಡೆದಿ ರುವುದು ಬೋಳ ಮತ್ತು ಇರುವೈಲು ಕೋಣಗಳ ನೇಗಿಲು ಹಿರಿಯ ಸ್ಪರ್ಧೆ. ಕಳೆದೆರಡು ವರ್ಷಗಳಲ್ಲಂತೂ ಇವೇ ಫೈನಲ್‌ ತಲುಪುತ್ತಿದ್ದವು. ಈ ವರ್ಷವೂ ಇದೇ ಸ್ಥಿತಿಯಿದೆ. ಬೋಳದಗುತ್ತುವಿನ “ಕಾಲ’ ಮತ್ತು “ಧೋನಿ’ ಹಾಗೂ ಇರುವೈಲು ಪಾಣಿಲದ “ತಾಟೆ’ ಮತ್ತು “ಹೆರ್ಮುಂಡೆ’ ಜೋಡಿ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿವೆ.

ವಿವಾದವಿಲ್ಲದೆ ಮುಗಿಯುತ್ತಿದೆ ಕಂಬಳ
ಮಂಗಳೂರು: ಕಾನೂನು ಸಮರಗಳ ಕಿರಿಕಿರಿ ಇಲ್ಲದೆ ಕಂಬಳ ಕ್ರೀಡೆ ಸಾಗಿಬಂದಿರುವ ಸಂತೃಪ್ತಿ ಕಂಬಳ ಪ್ರಿಯರಲ್ಲಿ ಮೂಡಿದೆ. ನ.30ರಂದು ಬಂಟ್ವಾಳ ತಾಲೂಕಿನ ಹೊಕ್ಕಾಡಿಗೋಳಿ ಕಂಬಳದ ಮೂಲಕ ಈ ಋತು ಆರಂಭವಾಗಿತ್ತು. ನಿಗದಿಯಾಗಿದ್ದ ಕಂಬಳಗಳ ಪೈಕಿ ಕಟಪಾಡಿ, ತಲಪಾಡಿ, ತಿರುವೈಲು ಕಂಬಳಗಳು ನಡೆದಿಲ್ಲ.
ಈ ಋತುವಿನಲ್ಲಿ ಅತಿ ಹೆಚ್ಚು ಜತೆ ಕೋಣಗಳು ಭಾಗವಹಿಸಿದ ದಾಖಲೆಯನ್ನು ಬಾರಾಡಿ ಕಂಬಳ ಹೊಂದಿದೆ. ಅಲ್ಲಿ 197 ಜತೆ ಕೋಣಗಳು ಭಾಗವಹಿಸಿದ್ದವು. ಮೂಡುಬಿದಿರೆಯಲ್ಲಿ 167 ಜತೆ ಕೋಣಗಳು ಪಾಲ್ಗೊಂಡಿದ್ದವು. ಪೈವಳಿಕೆಯ 95 ಜತೆ ಕೋಣಗಳು ಈ ಬಾರಿಯ ಕಂಬಳದಲ್ಲಿ ಕಡಿಮೆ ದಾಖಲೆ. ಆದರೆ ಪೈವಳಿಕೆ ದೂರದ ಕಾಸರಗೋಡಿನಲ್ಲಿರುವುದರಿಂದ ಇದು ಉತ್ತಮ ಸಾಧನೆ ಎನ್ನುತ್ತಾರೆ ಸಮಿತಿಯವರು.

-ಕೀರ್ತನ್‌ ಶೆಟ್ಟಿ ಬೋಳ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.

ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.

ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ

ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.