ಕಂದಾವರ: ಶಿಲಾಶಾಸನ ಪತ್ತೆ

Team Udayavani, May 16, 2019, 6:10 AM IST

ಕುಂದಾಪುರ: ಬಸೂÅರು ಸಮೀಪದ ಕಂದಾವರದಲ್ಲಿ ವಿಜಯನಗರ ಕಾಲದ ಶಿಲಾ ಶಾಸನವೊಂದು ಪತ್ತೆಯಾಗಿದ್ದು, ಸೂರ್ಯ, ಚಂದ್ರ, ಶಿವಲಿಂಗ, ದೀಪ ಹಾಗೂ ಬಸವನ ಕೆತ್ತನೆಯಿದೆ. ವಿಶೇಷವೆಂದರೆ ಮೇಲ್ಭಾಗದ ಪ್ರಭಾವಳಿಯಲ್ಲಿ ವೀರಭದ್ರ, ಬೊಬ್ಬರ್ಯನಂತೆ ಕಾಣುತ್ತದೆ.

ಈ ಕೆತ್ತನೆಯಲ್ಲಿನ ಆಕೃತಿ ಖಡ್ಗವನ್ನು ಹೊಂದಿದ್ದು, ಮೇಲ್ಭಾಗದ ಪ್ರಭಾವಳಿಯಲ್ಲಿದೆ. ಶಾಸನ ದೊರಕಿದ ಪಕ್ಕದಲ್ಲೇ ಒಂದು ಶಿವಲಿಂಗದ ಕೆತ್ತನೆ ಇರುವ ಶೈವ ಮುದ್ರಾ ಕಲ್ಲು (ಲಿಂಗ ಮುದ್ರಾ ಕಲ್ಲು)ದೊರೆತಿದ್ದು, ಇದು ಶೈವರ ಆರಾಧನಾ ವ್ಯಾಪ್ತಿಯ ಗಡಿಯನ್ನು ಸೂಚಿಸುತ್ತದೆ.

ಸದ್ಯ ಈ ಶಾಸನ ಅಧ್ಯಯನದ ಹಂತದಲ್ಲಿದ್ದು, ಪೂರ್ಣವಾದ ಮೇಲೆ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.

ಪ್ರದೀಪ ಕುಮಾರ್‌ ಬಸೂÅರು ಅವರು ಶಶಿಕಾಂತ್‌ ಎಸ್‌ .ಕೆ ಸಹಕಾರದಲ್ಲಿ, ಶ್ರೀ ಶಾರದಾ ಕಾಲೇಜಿನ ಉಪನ್ಯಾಸಕ ಪುರುಷೋತ್ತಮ ಬಲ್ಯಾಯ ಅವರ ಮಾರ್ಗದರ್ಶನದಲ್ಲಿ ಪತ್ತೆ ಹಚ್ಚಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ