ಕಾಪು: ಮೀನುಗಾರರಿಗೆ ಗಿಲ್ ನೆಟ್ ಬೊಟ್ ಹಸ್ತಾಂತರ
Team Udayavani, Jun 24, 2022, 1:15 PM IST
ಕಾಪು: ಮೀನುಗಾರಿಕಾ ಇಲಾಖೆಯ ರಾಜ್ಯ ವಲಯ ಯೋಜನೆಯಡಿ 2021-22ನೇ ಸಾಲಿನ ಕಾಪು ತಾಲೂಕಿನ ಮೂವರು ಫಲಾನುಭವಿಗಳಿಗೆ ಎಫ್.ಆರ್.ಪಿ ದೋಣಿ, ಇಂಜಿನ್, ಬಲೆ ಸಹಿತ ಸಲಕರಣೆಗಳನ್ನು ಶಾಸಕ ಲಾಲಾಜಿ ಆರ್. ಮೆಂಡನ್ ಅವರು ಹಸ್ತಾಂತರಿಸಿದರು.
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಅವರ ಶಿಫಾರಸ್ಸಿನ ಮೇರೆಗೆ ತಲಾ ರೂ. 3,60,000/- ರಂತೆ ಒಟ್ಟು ರೂ. 10,80,000/- ವೆಚ್ಚದಲ್ಲಿ ಮೂರು ಎಫ್.ಆರ್.ಪಿ ದೋಣಿ, ಇಂಜಿನ್, ಬಲೆ, ಸಲಕರಣೆ, ಲೈಪ್ ಬಾಯ್, ಲೈಫ್ ಜಾಕೆಟ್ ಹಾಗೂ ಐಸ್ ಬಾಕ್ಸ್ ಗಳು ಮಂಜೂರಾಗಿದ್ದವು. ಇದನ್ನು ಅರ್ಹ ಫಲಾನುಭವಿಗಳಾದ ಗೋಪಾಲ ಕಾಪು ಪಡು, ಶ್ರೀ ರತ್ನಾಕರ ಸ್ವಾಮಿಲ್ ತೋಟ ಕಾಪು ಪಡು, ಶಮಿತ್ ಕೈಪುಂಜಾಲು ಅವರುಗಳಿಗೆ ಗಿಲ್ ನೆಟ್ ಬೋಟ್ ಗಳನ್ನು ವಿತರಿಸಲಾಯಿತು.
ಈ ವೇಳೆ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ದಿವಾಕರ ಖಾರ್ವಿ, ಇಲಾಖಾ ಸಿಬ್ಬಂದಿಗಳಾದ ರವಿ ಕುಮಾರ್, ಸುನಿಲ್ ಎಚ್. ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ