ಕಾರಂತರ ನೆನಪು ಬಿಚ್ಚಿಡುವ ಕೋಟದ ಕಾರಂತ ಕಲಾಭವನ


Team Udayavani, Apr 14, 2019, 6:30 AM IST

kota-shivaram-karanta

ಕೋಟ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ, ಕಡಲತಡಿಯ ಭಾರ್ಗವ ಡಾ| ಶಿವರಾಮ ಕಾರಂತರು ಕಲೆ, ಸಾಹಿತ್ಯ, ಸಂಸ್ಕೃತಿ, ವಿಜ್ಞಾನ ಹೀಗೆ ಹತ್ತು-ಹಲವು ರಂಗದಲ್ಲಿ ಎತ್ತರದ ಸಾಧನೆಗೈದ ವಿಶ್ವ ವಂಧ್ಯರು. ಈ ಮಹಾನ್‌ ಚೇತನದ ನೆನಪಿಗಾಗಿ ಹುಟ್ಟೂರು ಕೋಟದಲ್ಲಿ ಕಾರಂತ ಥೀಮ್‌ ಪಾರ್ಕ್‌ ಎಂಬ ಸಾಂಸ್ಕೃತಿಕ ಲೋಕ ಕಾರ್ಯನಿರ್ವಹಿಸುತ್ತಿದ್ದು ಸಾವಿರಾರು ಮಂದಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಇಲ್ಲಿಗೆ ಒಮ್ಮೆ ಭೇಟಿ ನೀಡಿದರೆ ಕಾರಂತರ ಹಲವಾರು ನೆನಪುಗಳು ನಮ್ಮ ಮುಂದೆ ಅನಾವರಣಗೊಳ್ಳುತ್ತವೆ.

ಕಾರಂತ ಕಲಾಭವನದಲ್ಲಿ ಕಾರಂತ ಲೋಕ
ಕೋಟ್ಯಂತರ ವೆಚ್ಚದಲ್ಲಿ ಈ ಸುಂದರವಾದ ಕಾರಂತ ಕಲಾಭವನ ನಿರ್ಮಿಸಲಾಗಿದ್ದು, ಕೋಟತಟ್ಟು ಗ್ರಾ.ಪಂ., ಕಾರಂತ ಟ್ರಸ್ಟ್‌ ಆಶ್ರಯದಲ್ಲಿ ನಿರ್ವಹಣೆಗೊಳ್ಳುತ್ತಿದೆ. ಇಲ್ಲಿನ ಪ್ರವೇಶದ್ವಾರದಲ್ಲಿ ಒಳಹೊಕ್ಕುತ್ತಿದ್ದಂತೆ ಮರದ ಕಟ್ಟೆಯ ಮೇಲೆ ನಿರ್ಮಿಸಿದ ಮೂಕಜ್ಜಿಯ ಕನಸು ಕಾದಂಬರಿಯ ಚಿತ್ರಣದಂತಿರುವ ಚಿಕ್ಕ ಮಕ್ಕಳಿಗೆ ಕಥೆ ಹೇಳುವ ಅಜ್ಜಿಯ ಸಿಮೆಂಟಿನ ಕಲಾಕೃತಿ ನಮ್ಮನ್ನು ಸ್ವಾಗತಿಸುತ್ತದೆ. ಅಲ್ಲೇ ಪಕ್ಕದಲ್ಲಿ ಕಟ್ಟಡದ ಮಹಡಿಯ ಮೇಲೆ ಯಕ್ಷಗಾನದ ಜಟಾಯು ಮೋಕ್ಷದ ಚಿತ್ರಣದ ಸುಂದರ ಕಲಾಕೃತಿ ಇದೆ ಹಾಗೂ ಮೂರ್‍ನಾಲ್ಕು ದಶಕದ ಹಿಂದಿನ ಗ್ರಾಮೀಣ ಜೀವನ ಕ್ರಮದ ಗಾಡಿಕೂಸಣ್ಣನ ಜೋಡೆತ್ತಿನ ಗಾಡಿಯ ಫೈಬರ್‌ ಕಲಾಕೃತಿ ಇದೆ. ಪ್ರವೇಶ ದ್ವಾರದಲ್ಲಿ ತೆಂಕು-ಬಡಗಿನ ಪುಂಡುವೇಷದ ಸುಂದರವಾದ ಯಕ್ಷಗಾನದ ಮೂರ್ತಿಗಳಿವೆ.

ಕಾರಂತರ ಕಂಚಿನ ಪುತ್ಥಳಿ
ಕಲಾಭವನಕ್ಕೆ ಸಾಗುವ ದಾರಿಯ ಎಡಭಾಗದ ಕೆರೆಯ ಮಧ್ಯೆ ಶಿವರಾಮ ಕಾರಂತರ ಐದು ಅಡಿ ಎತ್ತರದ ಕಂಚಿನ ಪ್ರತಿಮೆ ಇದೆ. ಕಲಾಭವನಕ್ಕೆ ಆಗಮಿಸುವ ಗಣ್ಯರೆಲ್ಲರೂ ಕಾರಂತರ ಈ ಮೂರ್ತಿಗೆ ಪುಷ್ಪಾರ್ಚಣೆಗೈದು ಒಳಪ್ರವೇಶಿಸುತ್ತಾರೆ ಹಾಗೂ ಕೆರೆಯ ಮಗ್ಗಲಲ್ಲಿ 4 ವಿಶ್ರಾಂತಿ ದಿಬ್ಬಗಳಲ್ಲಿದ್ದು, ಮೊದಲ ದಿಬ್ಬದಲ್ಲಿ ಕಾರಂತರು ಕುಳಿತ ಭಂಗಿಯಲ್ಲಿರುವ ಶಿಲ್ಪಾಕೃತಿ ಇದೆ. ಕಾರಂತರಿಗೆ ಜ್ಞಾನಪೀಠ ಪ್ರಶಸ್ತಿ ತಂದಿಟ್ಟ ಮೂಕಜ್ಜಿಯ ಕನಸುಗಳು ಕೃತಿಯ ಪುಸ್ತಕ ಕಾರಂಜಿ ಗಮನಸೆಳೆಯುತ್ತದೆ. ಅಲ್ಲಿಂದ ಎಡಗಡೆಯಲ್ಲಿ ಡೋಲು ಹಿಡಿದು ನಿಂತ ಚೋಮನದುಡಿಯ ಚೋಮನ ಕಲಾಕೃತಿ ಹಾಗೂ ಪಕ್ಕದಲ್ಲೇ ಊಯ್ನಾಲೆಯಲ್ಲಿ ಕುಳಿತ ಯಕ್ಷಗಾನದ ರಾಧಾ-ಕೃಷ್ಣರ ಶಿಲ್ಪಕಲಾಕೃತಿ ಗಮನಸೆಳೆಯುತ್ತದೆ. ಕಲಾಭವನದ ಎದುರಿನ ಗೋಡೆಯಲ್ಲಿ ಹುಚ್ಚು ಮನಸ್ಸಿನ ಹತ್ತು ಮುಖಗಳ ಕಲಾಕೃತಿ ಇದೆ.

ಸುತ್ತ-ಮುತ್ತ ವಿವಿಧ ಪ್ರವಾಸಿ ತಾಣಗಳು
ಕಾರಂತ ಕಲಾಭವನ ಬೇಸಗೆ ರಜೆಯಲ್ಲಿ ಮಕ್ಕಳೊಂದಿಗೆ ಭೇಟಿ ನೀಡಲು ಉತ್ತಮ ತಾಣವಾಗಿದೆ. ಇಲ್ಲಿನ ಶಿಲ್ಪ ಕಲಾಕೃತಿ ಹಾಗೂ ಸುತ್ತಲಿನ ವಾತಾವರಣಗಳು ಮಕ್ಕಳಿಗೆ ಖುಷಿ ನೀಡುತ್ತವೆೆ. ಇಲ್ಲಿನ 2 ಕಿ.ಮೀ. ಆಸುಪಾಸಿನಲ್ಲಿ ಪಡುಕರೆ ಸಮುದ್ರ ಕಿನಾರೆ, ಅಮೃತೇಶ್ವರೀ ದೇವಸ್ಥಾನ ಹಾಗೂ ಐತಿಹಾಸಿಕ ಹಿರೇ ಮಹಾಲಿಂಗೇಶ್ವರ ದೇವಸ್ಥಾನವಿದ್ದು ಎಲ್ಲವೂ ಒಂದಕ್ಕೊಂದು ಹೊಂದಿಕೊಂಡಂತಿವೆ. ಸಂಜೆ ವೇಳೆ ಭೇಟಿ ನೀಡಿದರೆ ಪಡುಕರೆ ಕಡಲ ಕಿನಾರೆಯಲ್ಲಿ ಸಂಜೆಯ ಸೂರ್ಯಾಸ್ತಮಾನವನ್ನು ಕಣ್ತುಂಬಿಕೊಳ್ಳಬಹುದು.

ಕಲಾಭವನದೊಳಗೆ “ಆರ್ಟ್‌ ಗ್ಯಾಲರಿ’
ಕಲಾಭವನದ ಒಳಗಡೆ ಚೋಮನ ದುಡಿ ಎನ್ನುವ ಕಿರು ಸಭಾಂಗಣವಿದ್ದು ಇಲ್ಲಿ ಮಕ್ಕಳ ಬೇಸಗೆ ಶಿಬಿರ, ಯಕ್ಷಗಾನ ತರಬೇತಿ, ಪ್ರವಾಸಿಗರಿಗೆ ಕಾರಂತರ ಸಾಕ್ಷ್ಯ ಚಿತ್ರಗಳ ಪ್ರದರ್ಶನ ವ್ಯವಸ್ಥೆ ಇದೆ. ಇದರ ಮಗ್ಗುಲಲ್ಲೆ “ಕುಡಿಯರ ಕೂಸು’ ಅಂಗನವಾಡಿ ಇದೆ. ಜತೆಗೆ “ಆರ್ಟ್‌ ಗ್ಯಾಲರಿ ಇದ್ದು ಇಲ್ಲಿ ಕಾರಂತರ ಅಮೂಲ್ಯ ಕಪ್ಪು ಬಿಳುಪಿನ ಫೂಟೋಗಳು ಹಾಗೂ ಖ್ಯಾತ ಚಿತ್ರಕಾರರು ಕಾರಂತರು ಮತ್ತು ಕಾರಂತರ ವಿಷಯಾಧಾರಿತವಾಗಿ ರಚಿಸಿದ ಚಿತ್ರಗಳನ್ನು ಪ್ರದರ್ಶನಗೊಳಿಸಲಾಗಿದೆ. ಪಕ್ಕದಲ್ಲಿ ರಂಗ ಮಂದಿರವಿದ್ದು ಇಲ್ಲಿ ವರ್ಷದ ಬಹುತೇಕ ದಿನಗಳಲ್ಲಿ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮ ನಡೆಯುತ್ತಿದೆ ಹಾಗೂ ಕಾರಂತ ಹುಟ್ಟೂರು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇಲ್ಲಿಯೇ ನಡೆಯುತ್ತದೆ.

ಮಹಡಿಯ ವೆರಾಂಡದಲ್ಲಿ 8 ಮಂದಿ ಜ್ಞಾನಪೀಠ ಪುರಸ್ಕೃತರ ಪ್ರತಿಮೆಗಳಿವೆ ಹಾಗೂ ಕಾರಂತರು ಕ್ಯಾಮರಾ ಹಿಡಿದು ಕುಳಿತ ಕಲಾಕೃತಿ ಮತ್ತು ಮಕ್ಕಳಿಗೆ ಕಥೆ ಹೇಳುತ್ತಿರುವ ಮೂರ್ತಿ ಗಮನ ಸೆಳೆಯುತ್ತವೆ.

ಟಾಪ್ ನ್ಯೂಸ್

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

18

Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್‌

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.