ಮುಂಡ್ಕೂರು: ಕಾರ್ಕಳ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಮತಯಾಚನೆ
Team Udayavani, Apr 18, 2018, 7:45 AM IST
ಬೆಳ್ಮಣ್: ಕಾರ್ಕಳ ತಾಲೂಕಿನಲ್ಲಿ ಕಳೆದ 5 ವರ್ಷದ ಶಾಸಕತ್ವದ ಅವಧಿಯಲ್ಲಿ ಮಾಡಿದ ಅಭಿವೃದ್ಧಿಗಾಗಿ ಮುಂದೆಯೂ ತನ್ನ ಗೆಲುವಿಗೆ ಮತ ನೀಡಬೇಕು ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಮತಯಾಚನೆ ಸಂದರ್ಭ ತಿಳಿಸಿದರು.
ಅವರು ಸೋಮವಾರ ಮುಂಡ್ಕೂರು, ಸಂಕಲಕರಿಯ, ಸಚ್ಚೇರಿಪೇಟೆಯಲ್ಲಿ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಮತಯಾಚನೆಗೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್‌ನ ದುರಾಡಳಿತಕ್ಕೆ ಬೇಸತ್ತ ಮತದಾರರು ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುವ ನಿಟ್ಟಿನಲ್ಲಿ ಜನತೆ ಬಿಜೆಪಿ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದರು.
ಜಿ.ಪಂ. ಸದಸ್ಯೆ ರೇಶ್ಮಾ ಉದಯ ಶೆಟ್ಟಿ, ಮುಂಡ್ಕೂರು ಗ್ರಾ.ಪಂ. ಅಧ್ಯಕ್ಷೆ ಶುಭಾ ಪಿ. ಶೆಟ್ಟಿ, ಮುಂಡ್ಕೂರು ಗ್ರಾ. ಪಂ. ಉಪಾಧ್ಯಕ್ಷ ರವೀಂದ್ರ ಶೆಟ್ಟಿ, ಸತ್ಯಶಂಕರ್‌ಶೆಟ್ಟಿ, ಜಯ ಶೆಟ್ಟಿ ಪೊಸ್ರಾಲು, ಸೋಮನಾಥ ಪೂಜಾರಿ ಸಂಕಲಕರಿಯ, ಸಂದೀಪ್ ಶೆಟ್ಟಿ ಸಚ್ಚರಪರಾರಿ, ಜಿತೇಂದ್ರ , ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜನರ ಸಮಸ್ಯೆಗೆ ತತ್ಕ್ಷಣ ಸ್ಪಂದನೆ: ಸ್ಥಳೀಯ ಅಧಿಕಾರಿಗಳಿಗೆ ಕೂರ್ಮಾರಾವ್ ಸೂಚನೆ
ಉದಯವಾಣಿ-ಎಂಐಟಿ ಮಳೆ ನೀರು ಕೊಯ್ಲು ಕಾರ್ಯಾಗಾರ: ಸಮಸ್ಯೆಗೆ ಮೊದಲೇ ಪರಿಹಾರ: ಡಾ| ರಾಣ ಕರೆ
ಮದುವೆ ಹಾಲ್ನಲ್ಲಿ ಕಣ್ಮರೆಯಾದ ಚಿನ್ನದ ಸರ ದೈವ ಸನ್ನಿಧಿಯಲ್ಲಿ ಪತ್ತೆ!
ಅಗರಬತ್ತಿ ಉದ್ಯಮಕ್ಕೆ ಅಗತ್ಯದ ವಿನಾಯಿತಿ: ಶೋಭಾ ಕರಂದ್ಲಾಜೆ
ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ: ಉಜ್ವಲ ಭವಿಷ್ಯಕ್ಕಾಗಿ T.A.T