ಕಾರ್ಕಳ, ಹೆಬ್ರಿ: ಉತ್ತಮ ಮಳೆ, ಕೆಲವೆಡೆ ಸಂಚಾರಕ್ಕೆ ತೊಡಕು

Team Udayavani, Jul 24, 2019, 5:09 AM IST

ಹೆಬ್ರಿ: ಹೆಬ್ರಿ ಸುತ್ತಮುತ್ತ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿದ್ದು ಕುಚ್ಚಾರು ಕುಡಿಬೈಲು ಪ್ರದೇಶ ಗದ್ದೆಗಳು ಜಲಾವೃತಗೊಂಡಿದೆ.

ಹೆಬ್ರಿ, ಸೀತಾನದಿ, ಸೋಮೇಶ್ವರ, ಮುದ್ರಾಡಿ, ಬೇಳಂಜೆ, ಕಬ್ಬಿನಾಲೆ, ಪಾಡಿಗಾರ, ಪೆರ್ಡೂರು, ಹಿರಿಯಡಕ ಹಾಗೂ ಹೆಬ್ರಿ ಸುತ್ತಮುತ್ತಲಿನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ. ಮಳೆಯಿಂದ ಯಾವುದೇ ಹಾನಿ, ಅನಾಹುತಗಳು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಆದರೆ ಮುಂದಿನ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಜನರು ಮುಂಜಾಗರುಕತೆ ವಹಿಸಬೇಕು. ಏನಾದರೂ ಸಮಸ್ಯೆಗಳು ಸಂಭವಿಸಿದಲ್ಲಿ ಕೂಡಲೇ ತಾಲೂಕು ಕಂಟ್ರೋಲ್ ರೂಮ್‌ನ್ನು ಸಂಪರ್ಕಿಸಲು ತಹಶೀಲ್ದಾರ್‌ ಮಹೇಶ್ಚಂದ್ರ ಅವರು ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ