ಕಾರ್ಕಳ, ಹೆಬ್ರಿ: 10 ತಿಂಗಳಿನಿಂದ ಬಾರದ ಮಾಸಾಶನ

ಆತಂಕಗೊಂಡ ಫಲಾನುಭವಿಗಳು; ಒಟ್ಟು 168 ಫ‌ಲಾನುಭವಿಗಳ ಸಮಸ್ಯೆ ಇತ್ಯರ್ಥ ಬಾಕಿ

Team Udayavani, Dec 6, 2019, 1:45 AM IST

ಹೆಬ್ರಿ: ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿ ಹಾಗೂ ಕಾರ್ಕಳ, ಹೆಬ್ರಿ ತಾಲೂಕಿನಲ್ಲಿ ಕಳೆದ 10 ತಿಂಗಳಿನಿಂದ ಸುಮಾರು 600 ಫಲಾನುಭವಿಗಳಿಗೆ ಮಾಸಾಶನ ಬಾರದೆ ಆತಂಕಕ್ಕೀಡಾಗಿದ್ದಾರೆ.

ವೃದ್ಧಾಪ್ಯ, ವಿಧವಾ ವೇತನ, ಅಂಗವಿಕರಿಗೆ ಸಿಗುವ ವೇತನ ಸೇರಿದಂತೆ ಹಲವು ಮಾಸಾಶನಗಳು ಬಾರದೆ ಫಲಾನುಭವಿಗಳು ಅಂಚೆಕಚೇರಿ, ಗ್ರಾಮ ಪಂಚಾಯತ್‌, ತಾಲೂಕು ಕಚೇರಿಗಳಿಗೆ ಸುತ್ತುವಂತಾಗಿದೆ. ಗ್ರಾಮೀಣ ಪ್ರದೇಶದ ಹೆಚ್ಚಿನ ಅಂಗವಿಕಲರು ಸರಕಾರದಿಂದ ಬರುವ ತಿಂಗಳ ಮಾಸಾಶನದ ಮೇಲೆ ಅವಲಂಬಿತರಾಗಿದ್ದು, ಕಳೆದ 8 ತಿಂಗಳಿನಿಂದ ಬಾರದೇ ಅವರ ದೈನಂದಿನ ಜೀವನಕ್ಕೆ ತೊಂದರೆಯಾಗಿದೆ.

ಕಾರ್ಕಳ, ಹೆಬ್ರಿ ತಾಲೂಕಿನ ಎಲ್ಲ ಗ್ರಾ.ಪಂ. ಮಟ್ಟದಲ್ಲಿ ಈ ಸಮಸ್ಯೆ ಇದೆ. ಈ ಬಗ್ಗೆ ಫಲಾನುಭವಿಗಳು ಸ್ಥಳೀಯ ಪಂಚಾಯತ್‌ ಹಾಗೂ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಸಮಸ್ಯೆ ಬಗ್ಗೆ ತಿಳಿಸಿದ್ದು ಅವರಿಂದ ಅರ್ಜಿ ಪಡೆದು ಸಂಬಂಧಪಟ್ಟವರಿಗೆ ಕಳುಹಿಸಿದ್ದಾರೆ.

ಬ್ಯಾಂಕ್‌ ಖಾತೆ ನಂಬರ್‌ ವ್ಯತ್ಯಯ
ಫಲಾನುಭವಿಗಳು ಹಣ ವರ್ಗಾವಣೆ ಮಾಡಲು ನೀಡಿದ ಬ್ಯಾಂಕ್‌ ಖಾತೆ ಸಂಖ್ಯೆಯಲ್ಲಿ ವ್ಯತ್ಯಯಗೊಂಡು ಕೆಲವೊಂದು ಜನರಿಗೆ ಹಣ ವರ್ಗಾವಣೆಯಾಗಿಲ್ಲ. ಅಲ್ಲದೆ ಕೆಲವೊಂದು ಹೆಸರು ಒಂದೇ ರೀತಿ ಇರುವುದರಿಂದ ಒಂದೇ ಖಾತೆಗೆ ಇನ್ನೊಬ್ಬರ ಮಾಸಾಶನ ವರ್ಗಾವಣೆಯಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಲಾಖೆಯಿಂದಲೇ ಆದ ತೊಂದರೆ : ದೂರು
ನಾವು ಸರಿಯಾಗಿ ಬ್ಯಾಂಕ್‌ ಖಾತೆ ಸಂಖ್ಯೆ ನೀಡಿದ್ದೇವೆ. ಆದರೆ ಇಲಾಖೆಯಲ್ಲಿ ಎಂಟ್ರಿ ಮಾಡುವಾಗ ಖಾತೆಯನ್ನು ತಪ್ಪಾಗಿ ನಮೂದು ಮಾಡಿದ ಪರಿಣಾಮ ಸಮಸ್ಯೆಯಾಗಿದೆ. ಇದು ಇಲಾಖೆಯಿಂದ ಆದ ತೊಂದರೆ ಎಂದು ಫಲಾನುಭವಿಗಳು ದೂರಿದ್ದಾರೆ.

ಔಷಧಕ್ಕೂ ಹಣವಿಲ್ಲ
ಅನಾರೋಗ್ಯದಿಂದ ಬಳಲುತ್ತಿರುವ ಮುದ್ರಾಡಿ ನಿವಾಸಿ ಸುಂದರಿ ಪ್ರತಿ ತಿಂಗಳು ಮಾಸಾಶನಕ್ಕೆ ಕಾದು ಅದರಿಂದ ತನಗೆ ಬೇಕಾದ ಔಷಧ ಪಡೆಯುತ್ತಿದ್ದರು. ಇದೀಗ 10 ತಿಂಗಳಿಂದ ಮಾಸಾಶನ ಬಾರದೆ ಇರುವುದರಿಂದ ಕಾರ್ಕಳ ತಹಶೀಲ್ದಾರ್‌ ಅವರಿಗೆ ಅರ್ಜಿ ಸಲ್ಲಿಸಿದ್ದೇನೆ. ಆದರೂ ಇದುವರೆಗೂ ಬಂದಿಲ್ಲ. ಬಡತನದಿಂದ ಜೀವನ ಸಾಗಿಸುವ ನಾನು ಇನ್ನೊಬ್ಬರಲ್ಲಿ ಸಾಲ ಮಾಡಿ ಔಷಧ ಪಡೆಯುತ್ತಿದ್ದೇನೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ತಪ್ಪು ಅಕೌಂಟ್‌ ನಂಬರ್‌ನ ಸಮಸ್ಯೆ
ಈಗ ನಮ್ಮಲ್ಲಿ ಬ್ರಹ್ಮಾವರ -15, ಬೈಂದೂರು-39, ಕಾರ್ಕಳ-64,  ಕುಂದಾಪುರ-22, ಉಡುಪಿ-28 ಸೇರಿದಂತೆ ಒಟ್ಟು 168 ಫಲಾನುಭವಿಗಳ ಸಮಸ್ಯೆಗಳು ಇತ್ಯರ್ಥವಾಗಲು ಬಾಕಿ ಇವೆ. ಈ ಫೈಲ್‌ಗ‌ಳನ್ನು ಬೆಂಗಳೂರಿನ ಸಾಮಾಜಿಕ ಭದ್ರತಾ ನಿರ್ದೇಶನಾಲಯಕ್ಕೆ ಕಳುಹಿಸಲಾಗಿದೆ. ಈ ತಿಂಗಳ
ಅಂತ್ಯದೊಳಗೆ ಬಾಕಿ ಇರುವ ಎಲ್ಲರಿಗೂ ಮಾಸಾಶನ ಬಂದು ಸಮಸ್ಯೆ ಬಗೆಹರಿಯಲಿದೆ.
-ರವಿಶಂಕರ್‌, ಉಡುಪಿ ಜಿಲ್ಲಾ ಕಚೇರಿಯ ಮಾಸಾಶನ ವಿಭಾಗದ ಮುಖ್ಯಸ್ಥರು

ಇಲಾಖಾಧಿಕಾರಿಗಳು ಸ್ಪಂದಿಸಿಲ್ಲ
8 ತಿಂಗಳ ಹಿಂದೆ ಮಾಸಾಶನದ ಹಣ ಕೈಗೆ ಸಿಗುತ್ತಿದ್ದು , ಅಂಚೆಕಚೇರಿಯ ಪಾಸ್‌ಬುಕ್‌ ನೀಡಿದ ಅನಂತರ ಖಾತೆಗೆ ಹಣ ಜಮೆಯಾಗುತ್ತಿಲ್ಲ . ಪಂಚಾಯತ್‌ನಿಂದ ಎಲ್ಲ ರೀತಿಯ ಅರ್ಜಿಯನ್ನು ಸಲ್ಲಿಸಿದ್ದರೂ ಸಂಬಂಧಪಟ್ಟ ಇಲಾಖಾಧಿಕಾರಿಗಳಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ .
-ಕಮಲ ನಾಯ್ಕ,, ಮುದ್ರಾಡಿ

– ಹೆಬ್ರಿ ಉದಯಕುಮಾರ್‌ ಶೆಟ್ಟಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಮೈಸೂರು: "ಸಾಲ ತಂದಾದರೂ ಸರ್ಕಾರ ರೈತರ ನೆರವಿಗೆ ಬರಲಿದೆ. ರೈತರ ಜೀವನದಲ್ಲಿ ಬದಲಾವಣೆ ತರಲು ಎಲ್ಲ ರೀತಿಯ ಯತ್ನ ಮಾಡಲಾಗುವುದು' ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ...

  • ಬೆಂಗಳೂರು: "ಪ್ರಯೋಜನಕ್ಕೆ ಬಾರದ ಕಲ್ಪನೆಗಳು ಮತ್ತು ಮೂಢನಂಬಿಕೆಗಳನ್ನು ತ್ಯಜಿಸಿ, ವೈಜ್ಞಾನಿಕ ಮನೋಭಾವದಿಂದ ದೇಶದ ಪ್ರಗತಿಗೆ ಶ್ರಮಿಸಬೇಕು' ಎಂದು ನಾಡಿನ ಜನತೆಗೆ...

  • ಮಂಡಲವಾಸ್‌(ರಾಜಸ್ಥಾನ): ಹನಿ ನೀರಿಗೂ ಪರದಾಡಿದ್ದೆವು, ಕಿಮೀಗಟ್ಟಲೇ ದೂರ ಸಾಗಿ ನೀರು ತರಲು ಹಲವು ತಾಸುಗಳನ್ನೇ ಮೀಸಲಿಡುತ್ತಿದ್ದೆವು, ಮಳೆ ಬಂದ ಎರಡೇ ತಾಸಿಗೆ...

  • ಬೆಂಗಳೂರು: ಬಿಜೆಪಿ ಹಾಗೂ ಸಂಘ ಪರಿವಾರದಿಂದ ಸಂವಿಧಾನ ರಕ್ಷಿಸುವ ಹೊಣೆಯನ್ನು ಕಾಂಗ್ರೆಸ್‌ ಮಾಡಬೇಕಿದೆ ಎಂದು ಕಾಂಗ್ರೆಸ್‌ ಹಿರಿಯ ನಾಯಕರು ಶಪಥಗೈಯುವ ಮೂಲಕ 71ನೇ...

  • ವಿಜಯಪುರ: "ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಸಿ.ಸಿ. ಪಾಟೀಲ ಅವರನ್ನು ಬಲಿಕೊಟ್ಟು ಸಚಿವನಾಗುವ ದುರಾಸೆ ನನಗಿಲ್ಲ. ಒಂದೊಮ್ಮೆ ಪಕ್ಷ ನನಗೆ ಅಧಿಕಾರ ನೀಡಬಯಸಿದರೆ...