Udayavni Special

ಕಟಪಾಡಿ : ತ್ಯಾಜ್ಯ ಸುರಿದವರ ಕೈಯಿಂದಲೇ ತೆರವು

ಸ್ಥಳೀಯರ ಆಕ್ರೋಶದ ಮೇರೆಗೆ ಟಿಪ್ಪರ್‌ ಮೂಲಕ ತೆರವು

Team Udayavani, Jun 29, 2019, 5:00 AM IST

2806KPT5E-2

ಕಟಪಾಡಿ: ಶುಭ ಕಾರ್ಯ ನಿಮಿತ್ತ ಬಳಸಲಾಗಿದ್ದ ಮಾಂಸದ ಬಿರಿಯಾನಿ ಮತ್ತು ಕುಡಿದ ನೀರಿನ ಪ್ಲಾಸ್ಟಿಕ್‌ ಬಾಟಲಿಗಳ ರಾಶಿಯನ್ನು ಕಟಪಾಡಿ ಕಲ್ಸಂಕ ಬಳಿಯ ಧಕ್ಕೆಯ ಬಳಿ ರಸ್ತೆಯ ಮೇಲೆಯೇ ಸುರಿದಿದ್ದು, ಸ್ಥಳೀಯರ ಆಕ್ರೋಶದ ಮೇರೆಗೆ ಟಿಪ್ಪರ್‌ ಮೂಲಕ ತೆರವುಗೊಳಿಸಿದ ಘಟನೆ ಶುಕ್ರವಾರ ನಡೆದಿದೆ.

ಕಟಪಾಡಿಯಲ್ಲಿನ ಧಕ್ಕೆಯ ಪಾಪನಾಶಿನಿ ಹೊಳೆಯ ಸೇತುವೆಯ ಬಳಿಯಲ್ಲಿ ಈ ತ್ಯಾಜ್ಯವು ಕಂಡು ಬಂದಿದ್ದು, ಗಬ್ಬು ವಾಸನೆಯನ್ನು ಸಹಿಸದಾದ ಸ್ಥಳೀಯರು ಕೂಡಲೇ ಗ್ರಾಮ ಪಂಚಾಯತ್‌, ವಾರ್ಡು ಸದಸ್ಯರು, ಪಂಚಾಯತ್‌ ಸದಸ್ಯರ ಗಮನಕ್ಕೆ ತಂದು ತಮ್ಮ ಅಸಹನೆಯನ್ನು ಪ್ರಕಟಿಸಿದ್ದರು. ವಾರ್ಡು ಸದಸ್ಯ ಪ್ರೇಮ್‌ ಕುಮಾರ್‌ ಕಟಪಾಡಿ ಕೂಡಲೇ ಸ್ಥಳಕ್ಕೆ ಆಗಮಿಸಿ ಈ ಬಗ್ಗೆ ಪಿಡಿಒ ಗಮನಕ್ಕೆ ತಂದು ತುರ್ತು ಕ್ರಮಕ್ಕೆ ಆಗ್ರಹಿಸಿದ್ದರು.

ಗ್ರಾಮ ಪಂಚಾಯತ್‌ ಕೂಡಲೇ ಎಚ್ಚೆತ್ತು ತ್ಯಾಜ್ಯದ ಮೂಲವನ್ನು ಕಂಡು ಹಿಡಿದು ಕೂಡಲೇ ತೆರವುಗೊಳಿಸುವಂತೆ ತ್ಯಾಜ್ಯ ಸುರಿದವರ ಗಮನಕ್ಕೆ ತಂದಿರುತ್ತಾರೆ.

ಶುಭ ಕಾರ್ಯವನ್ನು ನಡೆಸಿದ ಮನೆ ಮಾಲಕ ಕೂಡಲೇ ಜೆಸಿಬಿ ಮತ್ತು ಟಿಪ್ಪರ್‌ ಮೂಲಕ ಅಲ್ಲಿ ಸುರಿಯಲಾಗಿದ್ದ ತ್ಯಾಜ್ಯವನ್ನು ತೆರವುಗೊಳಿಸಿ ಸ್ಥಳೀಯ ನಿವಾಸಿಗರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.

ಈ ಭಾಗದಲ್ಲಿ ಹಸಿ ತ್ಯಾಜ್ಯವನ್ನೂ ಬಿಸಾಡುತ್ತಿದ್ದು, ಕಟಪಾಡಿ ಧಕ್ಕೆಯಲ್ಲಿ ಐಶಾರಾಮಿ ಕಾರುಗಳಲ್ಲಿ ಆಗಮಿಸಿ ತ್ಯಾಜ್ಯವನ್ನು ಬಿಸಾಡಿ ಹೋಗುವುದು ಮಾಮೂಲಾಗಿದೆ. ಕಟಪಾಡಿ ಪೇಟೆಯಲ್ಲಿನ ಕಟ್ಟಡಗಳ ಮಲಿನ ತ್ಯಾಜ್ಯವೂ ಇದೇ ಪಾಪನಾಶಿನಿ ಹೊಳೆಗೆ ಈ ಭಾಗದಿಂದಲೇ ಸೇರುತ್ತಿದೆ. ಇಲ್ಲಿನ ನಿವಾಸಿಗಳಾದ ನಮಗೆ ನಿತ್ಯ ನರಕ ಯಾತನೆಯಾಗಿದೆ. ಈ ಬಗ್ಗೆ ಶಾಶ್ವತ ಪರಿಹಾರ ಕ್ರಮಕ್ಕೆ ಕಟಪಾಡಿ ಗ್ರಾಮ ಪಂಚಾಯತ್‌ ಮುಂದಾಗಬೇಕಿದೆ ಎಂದು ಆಗ್ರಹಿಸುವ ಸ್ಥಳೀಯರಾದ ಕ್ಯಾಥರಿನ್‌ ರೊಡ್ರಿಗಸ್‌, ಕಮಲ ಕೋಟ್ಯಾನ್‌ ಮೊದಲಾದವರು ತಮ್ಮ ಆಕ್ರೋಶವನ್ನು ಹೊರಗೆಡಹಿದ್ದಾರೆ.

ಕ್ರಮ ಕೈಗೊಳ್ಳಲಾಗಿದೆ
ತ್ಯಾಜ್ಯ ಸುರಿದ ವಿಷಯ ಗಮನಕ್ಕೆ ಬಂದ ಕೂಡಲೇ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಸುರಿದವರ ಗಮನಕ್ಕೆ ತರಲಾಗಿದ್ದು, ಅವರೇ ಸ್ವ ಇಚ್ಛೆಯಿಂದ ತೆರವುಗೊಳಿಸಿದ್ದು, ದಂಡ ವಿಧಿಸಲಾಗಿದೆ.
-ಇನಾಯತುಲ್ಲಾ ಬೇಗ್‌, ಪಿ.ಡಿ.ಒ. ಕಟಪಾಡಿ ಗ್ರಾ.ಪಂ.

ಟಾಪ್ ನ್ಯೂಸ್

ಹುಟ್ಟುಹಬ್ಬದ ದಿನವೇ ವಿಷ ಸೇವಿಸಿ ಯುವಕ ಆತ್ಮಹತ್ಯೆ: ಈ ಹಿಂದೆ ಎರಡು ಬಾರಿ ಪ್ರಯತ್ನ ಮಾಡಿದ್ದ!

ಹುಟ್ಟುಹಬ್ಬದ ದಿನವೇ ವಿಷ ಸೇವಿಸಿ ಯುವಕ ಆತ್ಮಹತ್ಯೆ: ಈ ಹಿಂದೆ ಎರಡು ಬಾರಿ ಪ್ರಯತ್ನ ಮಾಡಿದ್ದ!

ಅರುಣಾಚಲ ಗಡಿ ಸಮೀಪ…ಟಿಬೆಟ್ ನಲ್ಲಿ ಮೊದಲ ಬುಲೆಟ್ ರೈಲಿಗೆ ಚಾಲನೆ ಕೊಟ್ಟ ಚೀನಾ

ಅರುಣಾಚಲ ಗಡಿ ಸಮೀಪ…ಟಿಬೆಟ್ ನಲ್ಲಿ ಮೊದಲ ಬುಲೆಟ್ ರೈಲಿಗೆ ಚಾಲನೆ ಕೊಟ್ಟ ಚೀನಾ

ಸಹೋದರ-ಅಳಿಯನೊಂದಿಗೆ ರಮೇಶ್ ಜಾರಕಿಹೊಳಿ‌ ಸುತ್ತೂರು ಮಠಕ್ಕೆ ಪ್ರಯಾಣ

ಸಹೋದರ-ಅಳಿಯನೊಂದಿಗೆ ರಮೇಶ್ ಜಾರಕಿಹೊಳಿ‌ ಸುತ್ತೂರು ಮಠಕ್ಕೆ ಪ್ರಯಾಣ

ಸಿದ್ದರಾಮಯ್ಯನವರೇ, ಜಮೀರ್ ನ ಮುಂದಿಟ್ಟುಕೊಂಡು ಹೋಗಬೇಡಿ, ಒಳ್ಳೆದಾಗಲ್ಲ: ವಿಶ್ವನಾಥ್ ಕಿಡಿ

ಸಿದ್ದರಾಮಯ್ಯನವರೇ, ಜಮೀರ್ ನ ಮುಂದಿಟ್ಟುಕೊಂಡು ಹೋಗಬೇಡಿ, ಒಳ್ಳೆದಾಗಲ್ಲ: ವಿಶ್ವನಾಥ್ ಕಿಡಿ

ತುರ್ತು ಪರಿಸ್ಥಿತಿಯ ಕರಾಳ ದಿನ ಎಂದಿಗೂ ಮರೆಯಲು ಸಾಧ್ಯವಿಲ್ಲ: ಪ್ರಧಾನಿ ಮೋದಿ

ತುರ್ತು ಪರಿಸ್ಥಿತಿಯ ಕರಾಳ ದಿನ ಎಂದಿಗೂ ಮರೆಯಲು ಸಾಧ್ಯವಿಲ್ಲ: ಪ್ರಧಾನಿ ಮೋದಿ

kodagu

ಕೊಡಗಿನ ಎಸ್ಟೇಟ್‌ನಲ್ಲಿ ಕಾರ್ಮಿಕನ ಮೇಲೆ ಹಲ್ಲೆ ಪ್ರಕರಣ; ಗಾಯಾಳು ಯುವಕ ಸಾವು

tekkate

ತೆಕ್ಕಟ್ಟೆ: ಬಾವಿಗೆ ಬಿದ್ದ ಪುನುಗಿನ ಬೆಕ್ಕು; ರಕ್ಷಿಸಿದ ಸ್ಥಳೀಯರುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜುಲೈ 1ರಿಂದ ಟಿವಿ ಮುಂದೆ ಮಕ್ಕಳಿಗೆ ಪಾಠ!

ಜುಲೈ 1ರಿಂದ ಟಿವಿ ಮುಂದೆ ಮಕ್ಕಳಿಗೆ ಪಾಠ!

ಉಡುಪಿಯಲ್ಲಿ  ಬೆಳಗ್ಗೆ ಖರೀದಿಗೆ ಅವಕಾಶ

ಉಡುಪಿಯಲ್ಲಿ  ಬೆಳಗ್ಗೆ ಖರೀದಿಗೆ ಅವಕಾಶ

ಸಮಯದ ಮಿತಿಯಲ್ಲಿ ತುರ್ತು ದುರಸ್ತಿಗೆ ಶ್ರಮ: ಗ್ಯಾರೇಜುಗಳಲ್ಲಿ ವಾಹನಗಳ ದಂಡು

ಸಮಯದ ಮಿತಿಯಲ್ಲಿ ತುರ್ತು ದುರಸ್ತಿಗೆ ಶ್ರಮ: ಗ್ಯಾರೇಜುಗಳಲ್ಲಿ ವಾಹನಗಳ ದಂಡು

ಎರ್ಮಾಳು ರೈಲ್ವೇ ಗೇಟು ಲಾಕ್: ಮುಕ್ಕಾಲು ಗಂಟೆ ರಸ್ತೆ ಸಂಚಾರ ಬಂದ್

ಎರ್ಮಾಳು ರೈಲ್ವೇ ಗೇಟು ಲಾಕ್: ಮುಕ್ಕಾಲು ಗಂಟೆ ರಸ್ತೆ ಸಂಚಾರ ಬಂದ್

udupi dc jagadish

ಕಾನೂನು ಎಲ್ಲರಿಗೂ ಒಂದೇ,ಎಷ್ಟೇ ದೊಡ್ಡವನಾದರೂ ಕಾನೂನು ಪಾಲನೆ ಮಾಡಬೇಕು: ಉಡುಪಿ DC ವಾರ್ನಿಂಗ್

MUST WATCH

udayavani youtube

ಕೊಮೆ : ಮೀನುಗಾರರಿಂದ ಸಮುದ್ರ ಪೂಜೆ

udayavani youtube

ನಾನು ಸೋತು ಹೋಗಿದ್ದೇನೆ ಸ್ವಾಮಿ; ಜವಳಿ ವ್ಯಾಪಾರಿಯ ನೋವಿನ ಮಾತು

udayavani youtube

ಕಾನೂನು ಎಲ್ಲರಿಗೂ ಒಂದೇ,ಎಷ್ಟೇ ದೊಡ್ಡವನಾದರೂ ಕಾನೂನು ಪಾಲನೆ ಮಾಡಬೇಕು: ಉಡುಪಿ DC ವಾರ್ನಿಂಗ್

udayavani youtube

ನೇಗಿಲು ಹಿಡಿದು ಉಳುಮೆ ಮಾಡಿದ ಶಾಸಕ ರೇಣುಕಾಚಾರ್ಯ

udayavani youtube

ಖಾಸಗಿ TECHIE, ದೇಸಿ ದನ ಸಾಕಣೆಯಲ್ಲಿ ಯಶಸ್ಸು ಕಂಡಿದ್ದು ಹೇಗೆ ?

ಹೊಸ ಸೇರ್ಪಡೆ

ಹುಟ್ಟುಹಬ್ಬದ ದಿನವೇ ವಿಷ ಸೇವಿಸಿ ಯುವಕ ಆತ್ಮಹತ್ಯೆ: ಈ ಹಿಂದೆ ಎರಡು ಬಾರಿ ಪ್ರಯತ್ನ ಮಾಡಿದ್ದ!

ಹುಟ್ಟುಹಬ್ಬದ ದಿನವೇ ವಿಷ ಸೇವಿಸಿ ಯುವಕ ಆತ್ಮಹತ್ಯೆ: ಈ ಹಿಂದೆ ಎರಡು ಬಾರಿ ಪ್ರಯತ್ನ ಮಾಡಿದ್ದ!

ಅರುಣಾಚಲ ಗಡಿ ಸಮೀಪ…ಟಿಬೆಟ್ ನಲ್ಲಿ ಮೊದಲ ಬುಲೆಟ್ ರೈಲಿಗೆ ಚಾಲನೆ ಕೊಟ್ಟ ಚೀನಾ

ಅರುಣಾಚಲ ಗಡಿ ಸಮೀಪ…ಟಿಬೆಟ್ ನಲ್ಲಿ ಮೊದಲ ಬುಲೆಟ್ ರೈಲಿಗೆ ಚಾಲನೆ ಕೊಟ್ಟ ಚೀನಾ

mysore

ಮೈಸೂರು: ಲಾಕ್‌ಡೌನ್‌ನಿಂದ ಕೆಲಸ ಇಲ್ಲದೇ ಮನನೊಂದ ಯುವಕ ಆತ್ಮಹತ್ಯೆ

ಸಹೋದರ-ಅಳಿಯನೊಂದಿಗೆ ರಮೇಶ್ ಜಾರಕಿಹೊಳಿ‌ ಸುತ್ತೂರು ಮಠಕ್ಕೆ ಪ್ರಯಾಣ

ಸಹೋದರ-ಅಳಿಯನೊಂದಿಗೆ ರಮೇಶ್ ಜಾರಕಿಹೊಳಿ‌ ಸುತ್ತೂರು ಮಠಕ್ಕೆ ಪ್ರಯಾಣ

ಸಿದ್ದರಾಮಯ್ಯನವರೇ, ಜಮೀರ್ ನ ಮುಂದಿಟ್ಟುಕೊಂಡು ಹೋಗಬೇಡಿ, ಒಳ್ಳೆದಾಗಲ್ಲ: ವಿಶ್ವನಾಥ್ ಕಿಡಿ

ಸಿದ್ದರಾಮಯ್ಯನವರೇ, ಜಮೀರ್ ನ ಮುಂದಿಟ್ಟುಕೊಂಡು ಹೋಗಬೇಡಿ, ಒಳ್ಳೆದಾಗಲ್ಲ: ವಿಶ್ವನಾಥ್ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.