ಕೊಡವೂರು ದೇಗುಲ: ಪ್ರದಕ್ಷಿಣೆ ನಮಸ್ಕಾರದ ಕರಪತ್ರ, ದಿನಚರಿ ಪುಸ್ತಕ ಲೋಕಾರ್ಪಣೆ

Team Udayavani, Apr 20, 2019, 6:33 AM IST

ಮಲ್ಪೆ: ಸುಖ ಶಾಂತಿ ಲಭಿಸಿ ಮೋಕ್ಷಕ್ಕೆ ದಾರಿ ತೋರಬಲ್ಲ ಪ್ರದಕ್ಷಿಣೆ ಎಲ್ಲರೂ ಮಾಡಬಹುದಾದ ಸುಲಭ ಸಾಧ್ಯ ಅತ್ಯುತ್ತಮ ಸೇವೆ.

ದೇವರಿಗೆ ಸುತ್ತು ಬರುವುದರಿಂದ ಗುರುತ್ವಾಕರ್ಷಣ ಶಕ್ತಿ ನಮ್ಮ ನರನಾಡಿಗಳಲ್ಲಿ ಪಸರಿಸಿ ಹೊಸ ಚೆ„ತನ್ಯ ಮೂಡುವುದು. ಧನಾತ್ಮಕ ಶಕ್ತಿಯ ಅಯಸ್ಕಾಂತೀಯ ಕಂಪನಗಳು ನಮ್ಮನ್ನಾವರಿಸಿ ಮೈಮನಗಳೆರಡೂ ಆರೋಗ್ಯಪೂರ್ಣವಾಗುತ್ತವೆ ಎಂದು ಉದ್ಯಮಿ ಮಂಜನಾಥ್‌ ಭಟ್‌ ಮೂಡುಬೆಟ್ಟು ಹೇಳಿದರು.

ಅವರು ಎ. 15ರಂದು ಕೊಡವೂರು ಶಂಕರನಾರಾಯಣ ದೇಗುಲದಲ್ಲಿ ಪ್ರದಕ್ಷಿಣೆ ನಮಸ್ಕಾರದ ದಿನಚ‌ರಿ ಪುಸ್ತಕ ಲೋಕಾರ್ಪಣೆಗೆಗೊಳಿಸಿ ಮಾತನಾಡಿದರು.

ದೇವಸ್ಥಾನದ ಪ್ರಧಾನ ತಂತ್ರಿ ವೇ| ಮೂ| ಪುತ್ತೂರು ಹಯವದನ ತಂತ್ರಿ ಅವರು ಪ್ರದಕ್ಷಿಣೆ ನಮಸ್ಕಾರದ ಸಂಕ್ಷಿಪ್ತ ಮಾಹಿತಿ ನೀಡುವ ಆಶಯ ಪತ್ರವನ್ನು ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಧಾರ್ಮಿಕ ಚಿಂತಕ ವಿಜಯ ಕೆದ್ಲಾಯ ವಡಭಾಂಡೇಶ್ವರ, ಭಕ್ತವೃಂದ ಅಧ್ಯಕ್ಷ ರವಿರಾಜ ಹೆಗ್ಡೆ, ಸೇವಾ ಸಮಿತಿಯ ಗೌರವ ಅಧ್ಯಕ್ಷ ಆನಂದ ಪಿ, ಸುವರ್ಣ, ವ್ಯವಸ್ಥಾಪನಾ ಸಮಿತಿ ಸದಸ್ಯ ಭಾಸ್ಕರ ಬಾಚನಬೆ„ಲು, ಅಡಿಗ ಕೃಷ್ಣ ಮೂರ್ತಿ ಭಟ್‌, ಎ. ರಾಜ ಸೇರಿಗಾರ, ಬಾಬ ಕೆ., ಚಂದ್ರಕಾಂತ ಪುತ್ರನ್‌, ಸುದಾ ಎನ್‌.ಶೆಟ್ಟಿ, ಬೇಬಿ ಎಸ್‌. ಮೆಂಡನ್‌ ಉಪಸ್ಥಿತರಿದ್ದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್‌ ಜಿ. ಕೊಡವೂರು ಸ್ವಾಗತಿಸಿ ದರು. ಜನಾರ್ದನ್‌ ಕೊಡವೂರು ಪ್ರಸ್ತಾಪಿಸಿದರು. ಪೂರ್ಣಿಮಾ ಜೆ. ವಂದಿಸಿದರು. ಸತೀಶ್‌ ಕೊಡವೂರು ಕಾರ್ಯಕ್ರಮ ನಿರೂಪಿಸಿದರು. ವಿದ್ವಾನ್‌ ಅನಂತಕೃಷ್ಣ ಆಚಾರ್‌ ಯುಗಾದಿ ಹಾಗೂ ಪ್ರದಕ್ಷಿಣೆ ನಮಸ್ಕಾರದ ಬಗ್ಗೆ ಪ್ರವಚನ ನೀಡಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ