ಕೋಟ ಸಹಕಾರಿ ಬ್ಯಾಂಕ್ ಕಳವು ಯತ್ನ
Team Udayavani, Nov 12, 2018, 1:25 PM IST
ತೆಕ್ಕಟ್ಟೆ: ಕೋಟ ಸಹಕಾರಿ ಬ್ಯಾಂಕ್ ನ ಬೇಳೂರು ಶಾಖೆಯಲ್ಲಿ ರವಿವಾರ ತಡರಾತ್ರಿ ಕಳ್ಳತನ ಯತ್ನ ನಡೆಸಲಾಗಿದೆ . ಬ್ಯಾಂಕ್ ನ ಬೀಗ ಮುರಿದು ವಿದ್ಯುತ್ ಫ್ಯೂಸ್ ತೆಗೆದ ಕಳ್ಳರು ವಿಫಲ ಯತ್ನ ನಡೆಸಿದ್ದಾರೆ .
ಕುಂದಾಪುರ ತಾಲೂಕಿನ ಬೇಳೂರು ಎಂಬಲ್ಲಿ ಈ ಘಟನೆ ನಡೆದಿದೆ. ರವಿವಾರ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಸಿಸಿ ಕೆಮರವನ್ನುಹಾನಿ ಮಾಡಲಾಗಿದೆ. ಕಳೆದ 2 ತಿಂಗಳಿನಿಂದಲೂ ಡಿವಿಆರ್ ಫ್ಯೂಸ್ ಹೋಗಿದ್ದು ಕಳವು ಯತ್ನದ ದೃಶ್ಯಾವಳಿಗಳು ದಾಖಲಾಗಲಿಲ್ಲ.
ಸಹಕಾರಿ ಸೌಧ ಕಟ್ಟಡವನ್ನು ನೂತನವಾಗಿ ನಿರ್ಮಿಸಲಾಗಿತ್ತು. ಇದು ಜನವಸತಿ ಪ್ರದೇಶವಾಗಿದ್ದು, ಜನರು ಆತಂಕ ವ್ಯಕ್ತ ಪಡಿಸಿದ್ದಾರೆ.
ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ