ಕೋಟ ಜೋಡಿ ಕೊಲೆ ಕೇಸ್‌ ಸೆಶನ್ಸ್‌ ಕೋರ್ಟ್‌ಗೆ: ಆರೋಪಿಗಳು ಹಿರಿಯಡಕ ಜೈಲಿಗೆ

Team Udayavani, Jun 30, 2019, 9:49 AM IST

ಸಾಂದರ್ಭಿಕ ಚಿತ್ರ

ಕುಂದಾಪುರ: ಕೋಟ ಸಮೀಪದ ಮಣೂರಿ ನಲ್ಲಿ ಜ.26ರ ತಡರಾತ್ರಿ ನಡೆದ ಭರತ್‌ ಹಾಗೂ ಯತೀಶ್‌ ಕಾಂಚನ್‌ ಅವರ ಕೊಲೆ ಪ್ರಕರಣದ ಹೆಚ್ಚಿನ ವಿಚಾರಣೆ ಗಾಗಿ ಕುಂದಾಪುರದ ಹೆಚ್ಚುವರಿ ಜೆ.ಎಂ.ಎಫ್‌. ಸಿ. ನ್ಯಾಯಾ ಲಯದಿಂದ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯ (ಸೆಶನ್ಸ್‌ ಕೋರ್ಟ್‌)ಕ್ಕೆ ರವಾನೆ ಮಾಡಿ (ಕಮಿಟ್‌) ನ್ಯಾಯಾಧೀಶೆ ನಾಗರತ್ನಮ್ಮ ಶನಿವಾರ ಆದೇಶ ನೀಡಿದ್ದಾರೆ.

ಆರೋಪಿಗಳು ಹಿರಿಯಡಕ ಜೈಲಿಗೆ
ಆರೋಪಿಗಳು ಕ್ರಿಮಿನಲ್‌ ಹಾಗೂ ರಾಜಕೀಯ ಹಿನ್ನೆಲೆಯುಳ್ಳವರಾಗಿದ್ದಾರೆ. ಉಡುಪಿಯ ಹಿರಿಯಡಕ ಸಬ್‌ ಜೈಲಿನಲ್ಲಿರುವ ಆರೋಪಿಗಳು ಒಳಸಂಚು ಮಾಡುತ್ತಾರೆ, ಕೆಲವರು ರೌಡಿ ಶೀಟರ್‌ ಆಗಿರುವುದರಿಂದ ಜೈಲಿನಲ್ಲಿ ಶಾಂತಿಭಂಗ ಮಾಡುತ್ತಾರೆ, ಕೆಲವರು ರಾಜಕೀಯ ಪ್ರಭಾವ ಬಳಸುತ್ತಾರೆ. ಸಾಕ್ಷಾಧಾರಗಳ ಮೇಲೆ ಪ್ರಭಾವ ಬೀರುತ್ತಾರೆ. ಆದ್ದರಿಂದ ಈ ಪ್ರಕರಣದ ಎಲ್ಲ ಆರೋಪಿಗಳನ್ನು ಕಾರವಾರ ಹಾಗೂ ಶಿವಮೊಗ್ಗ ಜೈಲಿಗೆ ಕಳುಹಿಸಬೇಕು ಎಂದು ಬೆಂಗಳೂರಿನ ಬಂದಿಖಾನೆ ಮಹಾನಿರೀಕ್ಷಕರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಶನಿವಾರ ನ್ಯಾಯಾಲಯದಲ್ಲಿ ಈ ಬಗ್ಗೆ ವಿಚಾರಣೆ ನಡೆದಿದ್ದು, ಆರೋಪಿಗಳ ಪರವಾಗಿ ರವಿಕಿರಣ್‌ ಮುರ್ಡೆಶ್ವರ್‌ ಸುದೀರ್ಘ‌ವಾದ ಮಂಡಿಸಿದ್ದರು. ಇದನ್ನು ಪುರಸ್ಕರಿಸಿ ಆರೋಪಿಗಳನ್ನು ಹಿರಿಯಡಕ ಸಬ್‌ ಜೈಲಿಗೆ ಕಳುಹಿಸಲಾಗಿದೆ.

ವಕೀಲರ ವಾದವೇನು?
ಆರೋಪಿಗಳನ್ನು ಬೇರೆ ಜೈಲಿಗೆ ಹಂಚಿಕೆ ಮಾಡಬೇಕು ಎಂಬ ಮನವಿಯಲ್ಲಿರುವ ಅಂಶ ಸರಿಯಲ್ಲ. ಅವರನ್ನು ಹಿರಿಯಡಕದಲ್ಲಿಯೇ ಇರಿಸಬೇಕು ಎಂದು ಆರೋಪಿ ಪರ ವಕೀಲರು ವಾದಿಸಿದರು. ಕಳೆದ ಹದಿನೈದು ದಿನಗಳ ಅಂತರದಲ್ಲಿ ಆರೋಪಿಗಳು ಜೈಲಿನಲ್ಲಿ ಯಾವುದೇ ಗಲಾಟೆ ಮಾಡಿಲ್ಲ, ಆರೋಪಿಗಳ ಕುಟುಂಬಿಕರು ಕೂಡ ಸ್ಥಳೀಯರಾಗಿದ್ದಾರೆ. ಕೆಲವು ಆರೋಪಿಗಳಿಗೆ ಆರೋಗ್ಯ ಸಮಸ್ಯೆಯಿದೆ. ಕುಂದಾಪುರ ನ್ಯಾಯಾಲಯ ಹಾಗೂ ಪ್ರಕರಣ ನಡೆದ ಕೋಟ ಪೊಲೀಸ್‌ ಠಾಣೆ ವ್ಯಾಪ್ತಿಗೆ ಹಿರಿಯಡಕ ಸಬ್‌ ಜೈಲನ್ನು ನೀಡಲಾಗುತ್ತದೆ. ಆರೋಪಿಗಳನ್ನು ಬೇರೆ ಕಡೆಗೆ ರವಾನಿಸುವುದು ಅಸ್ವಾಭಾವಿಕವಾಗುತ್ತದೆ. ಇದಕ್ಕೆ ಸಮರ್ಪಕ ಕಾರಣವನ್ನೂ ಅಧಿಕಾರಿಗಳು ನೀಡಿಲ್ಲ. ಅದಕ್ಕಾಗಿ ಆರೋಪಿಗಳನ್ನು ಹಿರಿಯಡಕ ಜೈಲಿನಲ್ಲೇ ಇರಿಸಬೇಕು ಎಬ ವಾದವನ್ನು ನ್ಯಾಯಾಧೀಶರು ಪುರಸ್ಕರಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಉಡುಪಿ: ಕೋವಿಡ್‌- 19 ಸೋಂಕು ಲಕ್ಷಣ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಗುರುವಾರ ಮೂವರು ಐಸೋಲೇಶನ್‌ ವಾರ್ಡ್‌ಗೆ ದಾಖಲಾಗಿದ್ದಾರೆ. ಈ ಪೈಕಿ ಒರ್ವ ಮಹಿಳೆ ಹಾಗೂ...

  • ಉಡುಪಿ: ಇಡೀ ಜಗತ್ತನ್ನೇ ಸಂಕಷ್ಟಕ್ಕೆ ತಳ್ಳಿರುವ ಕೋವಿಡ್‌- 19 ನಿವಾರಣೆ ಅತ್ಯಂತ ಭಯಾನಕ ಸವಾಲಾಗಿದ್ದು, ಅದನ್ನು ಎದುರಿಸಲು ವಿಶ್ವಶಾಂತಿ ಧರ್ಮಸಂಸ್ಥೆಯ ಪ್ರತಿನಿಧಿಗಳು...

  • ಉಡುಪಿ/ಮಂಗಳೂರು: ಶ್ರೀರಾಮ ನವಮಿ ಮಹೋತ್ಸವವನ್ನು ಕೋವಿಡ್‌- 19 ಭೀತಿ ಹಿನ್ನೆಲೆಯಲ್ಲಿ ಕರಾವಳಿಯಾದ್ಯಂತ ಗುರುವಾರ ಸರಳವಾಗಿ ಆಚರಿಸಲಾಯಿತು. ಪ್ರತಿವರ್ಷ ವಿಜೃಂಭಣೆಯಿಂದ...

  • ಕುಂದಾಪುರ: ಕುಂದಾಪುರ ಉಪವಿಭಾಗದ ಪೊಲೀಸ್‌ ಸಹಾಯಕ ಅಧೀಕ್ಷಕ ಹರಿರಾಮ್‌ ಶಂಕರ್‌ ಅವರ ಸೂಚನೆಯಂತೆ ಕುಂದಾಪುರ, ಬೈಂದೂರು ತಾಲೂಕಿನ ಠಾಣೆಗಳ ಪೊಲೀಸರು ಎಸ್‌ಸಿ, ಎಸ್‌ಟಿ...

  • ಉಡುಪಿ: ಕೋವಿಡ್ ಸೋಂಕಿನ ಶಂಕೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಬುಧವಾರ ಆಸ್ಪತ್ರೆಗಳ ಐಸೊಲೇಶನ್‌ ವಾರ್ಡುಗಳಲ್ಲಿ 13 ಮಂದಿ ದಾಖಲಾಗಿದ್ದಾರೆ. ಉಸಿರಾಟದ ಸಮಸ್ಯೆ ಹೊಂದಿರುವ...

ಹೊಸ ಸೇರ್ಪಡೆ