ಕೋಟ: ಜೋಡಿಕೊಲೆ ಆರೋಪಿ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ


Team Udayavani, Feb 12, 2019, 1:00 AM IST

kota.jpg

ಕೋಟ: ಕೋಟದಲ್ಲಿ ನಡೆದ ಜೋಡಿ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪದಡಿ ಬಂಧನಕ್ಕೊಳಗಾಗಿ ಪೊಲೀಸ್‌ ಕಸ್ಟಡಿಯಲ್ಲಿರುವ  ಉಡುಪಿ ಜಿ.ಪಂ. ಕೋಟ ಕ್ಷೇತ್ರದ ಸದಸ್ಯ, ಬಿಜೆಪಿಯ ರಾಘವೇಂದ್ರ ಕಾಂಚನ್‌ ತತ್‌ಕ್ಷಣ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕೋಟ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಫೆ.11ರಂದು ಕೋಟ ಬಸ್ಸು ನಿಲ್ದಾಣದಲ್ಲಿ ಪ್ರತಿಭಟನೆ ನಡೆಯಿತು. ಸಭೆಯಲ್ಲಿ ಕಾಂಗ್ರೆಸ್‌ ಮುಖಂಡರು ಬಿಜೆಪಿ ವಿರುದ್ಧ ವ್ಯಾಪಕ ವಾಗ್ಧಾಳಿ ನಡೆಸಿದರು.

ಬಿಜೆಪಿ ಕೊಲೆಗಡುಕರ ಪಕ್ಷ ಸಾಬೀತು ಸೊರಕೆ
ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಮಾತನಾಡಿ, ಕಾಂಗ್ರೆಸ್‌ ಪಕ್ಷ ಕೊಲೆಗಡುಕರ ಪಕ್ಷ ಎಂದು ಅಪಪ್ರಚಾರವನ್ನು ಮಾಡಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗರು ಗೆಲುವು ಸಾಧಿಸಿದ್ದಾರೆ. ಆದರೆ  ಕೊಲೆಗಾರರಿಗೆ ಸಹಕಾರ ನೀಡುವಲ್ಲಿ ಹಾಗೂ ಪ್ರಕರಣವನ್ನು ಮುಚ್ಚಿಹಾಕುವಲ್ಲಿ ಬಿಜೆಪಿ ಎತ್ತಿದ ಕೈ ಎನ್ನುವುದು  ಈ ಪ್ರಕರಣದಿಂದ ಸಾಬೀತಾಗಿದೆ.

ಇಲ್ಲಿ ಆರೋಪಿ ತಮ್ಮದೇ ಪಕ್ಷದ ಜಿ.ಪಂ. ಸದಸ್ಯ ರಾಘವೇಂದ್ರ ಕಾಂಚನ್‌ನನ್ನು ಬಿಜೆಪಿಗರು ಕಾಪಾಡಲು ಯತ್ನಿಸುತ್ತಿದ್ದಾರೆ ಹಾಗೂ  ಕರಾವಳಿಯಲ್ಲಿ ನಡೆದ ಬಹುತೇಕ ಕೊಲೆಗಳಲ್ಲಿ ಬಿಜೆಪಿ ಮುಖಂಡರ ಪಾತ್ರವಿದೆ ಎಂದರು. ಮೃತ ಯುವಕರ ಕುಟುಂಬಕ್ಕೆ  ಸರಕಾರದಿಂದ ನೆರವು ನೀಡಲು ಒತ್ತಾಯಿಸುವುದಾಗಿ ತಿಳಿಸಿದರು.

ಕಾಂಚನ್‌ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೆ : ರಾಕೇಶ್‌ ಮಲ್ಲಿ
ಪ್ರಕರಣದಲ್ಲಿ ರಾಘವೇಂದ್ರ ಕಾಂಚನ್‌ ಪಾತ್ರವಿದೆ ಎಂದು ಪೊಲೀಸರಿಗೆ ಪ್ರಥಮವಾಗಿ ತಿಳಿಸಿದ್ದೇ ನಾನು. ಪೊಲೀಸರು ಈ ಮೊದಲೇ ಅವನ ಮೇಲೆ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಈಗಲೂ ಕಾಲ ಮಿಂಚಿಲ್ಲ, ಈ ಕೇಸ್‌ನಲ್ಲಿ ಅವನು ಹೊರಗೆ ಬಾರದ ರೀತಿ ಮಾಡಬೇಕು ಎಂದು ಇಂಟೆಕ್‌ ರಾಜ್ಯಾಧ್ಯಕ್ಷ ರಾಕೇಶ್‌ ಮಲ್ಲಿ ತಿಳಿಸಿದರು. ಬಿಜೆಪಿಯ ಎಲ್ಲ ಮುಖಂಡರು ಮೌನವಾಗಿರುವಾಗ  ವಿಧಾನಪರಿಷತ್‌ ವಿಪಕ್ಷ ನಾಯಕ  ಕೋಟ ಶ್ರೀನಿವಾಸ್‌ ಪೂಜಾರಿ ಅವರು ಘಟನೆಯನ್ನು ಖಂಡಿಸಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.

ಕರಾವಳಿಯಲ್ಲಿ  ಶಾಂತಿ, ನೆಮ್ಮದಿ ಹಾಳಾಗುವುದಕ್ಕೆ  ಸಂಸದೆ ಶೋಭಾ  ಪ್ರಮುಖ ಕಾರಣ ಎಂದು ಪಕ್ಷದ ಮುಖಂಡ  ಕಿಶನ್‌ ಹೆಗ್ಡೆ ಕೊಳ್ಕೆಬೈಲು ಹಾಗೂ ಗೋಪಾಲ ಭಂಡಾರಿ ಆಕ್ರೋಶ ವ್ಯಕ್ತಪಡಿಸಿದರು.

ಕಾಂಚನ್‌ ರಾಜೀನಾಮೆಗೆ ಆಗ್ರಹ
ಪ್ರಕರಣದ ಆರೋಪಿಯಾಗಿರುವ ಜಿ.ಪಂ. ಸದಸ್ಯ ರಾಘವೇಂದ್ರ ಕಾಂಚನ್‌ ತತ್‌ಕ್ಷಣ ರಾಜೀನಾಮೆ ನೀಡಬೇಕು. ಬಿಜೆಪಿಯವರಿಗೆ ನೈತಿಕತೆ ಇದ್ದರೆ ಆತನಿಂದ ರಾಜೀನಾಮೆ ಕೊಡಿಸಿ ಪಕ್ಷದಿಂದ ಉಚ್ಚಾಟಿಸಬೇಕು. ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯದ ಹರಿಕಾರ ಎಂದು ಪೋಸು ಕೊಡುವ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಕಾಂಚನ್‌ನನ್ನು ಇದುವರೆಗೆ ಬೆಂಬಲಿಸಿ, ಬೆಳೆಸಿದ್ದಕ್ಕೆ  ಸಾರ್ವಜನಿಕರಲ್ಲಿ ಕ್ಷಮೆ ಕೇಳಬೇಕು. ಇಲ್ಲವಾದರೆ  ಜಿಲ್ಲೆಯಾದ್ಯಂತ  ಈ ಕುರಿತು ಪ್ರತಿಭಟನೆ ನಡೆಸುವುದಾಗಿ ಸಭೆಯಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ ಹಾಗೂ  ಮುಖಂಡರಾದ ಗೋಪಾಲ ಭಂಡಾರಿ, ಅಮೃತ್‌ ಶೆಣೈ, ವಿಕಾಸ್‌ ಹೆಗ್ಡೆ, ತಿಮ್ಮ ಪೂಜಾರಿ ಕೋಟ, ಮಲ್ಯಾಡಿ ಶಿವರಾಮ್‌ ಶೆಟ್ಟಿ  ತಿಳಿಸಿದರು.

ಸಭೆಯಲ್ಲಿ ರಾಜಾರಾಮ್‌ ಸಾಸ್ತಾನ, ಇಸ್ಮಾಯಿಲ್‌ ಅತ್ರಾಡಿ ಹಾಗೂ ಕೊಲೆಯಾದ  ಯುವಕರ ಕುಟುಂಬದವರು ಉಪಸ್ಥಿತರಿದ್ದರು.

ಕೋಟ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶಂಕರ್‌ ಕುಂದರ್‌  ಪ್ರಾಸ್ತಾವಿಕ ಮಾತನಾಡಿದರು. ಶ್ರೀನಿವಾಸ್‌ ಅಮೀನ್‌, ಗಣೇಶ್‌ ನೆಲ್ಲಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭ ಆರೋಪಿಗಳಿಗೆ ಕಠಿನ ಶಿಕ್ಷೆಯಾಗುವ ರೀತಿ ಮುಂದಿನ ಕ್ರಮಗಳನ್ನು ಕೈಗೊಳ್ಳುವಂತೆ ಕೋಟ ಠಾಣಾಧಿಕಾರಿ ನರಸಿಂಹ ಶೆಟ್ಟಿ ಅವರ ಮೂಲಕ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು ಹಾಗೂ ಮೌನಾಚರಣೆಯ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಲಾಯಿತು.

ಪೊಲೀಸ್‌ ಇಲಾಖೆಗೆ ಅಭಿನಂದನೆಯ ಮಹಾಪೂರ
ಎಷ್ಟೇ ರಾಜಕೀಯ ಒತ್ತಡವಿದ್ದರೂ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ ಎಸ್‌.ಪಿ. ಹಾಗೂ ಅವರ ತಂಡಕ್ಕೆ ವ್ಯಾಪಕ ಅಭಿನಂದನೆಗಳು ಸಭೆಯಲ್ಲಿ ವ್ಯಕ್ತವಾಯಿತು.

ಟಾಪ್ ನ್ಯೂಸ್

1-rrr

ಕೈಗಾರಿಕೆಗಳಿಗೆ ಭೂಮಿ ನೀಡಲು ಶೀಘ್ರದಲ್ಲೇ ಹೊಸ ನೀತಿ: ಸಚಿವ ನಿರಾಣಿ

1-trtr

ಟಿಕೆಟ್ ಇಲ್ಲದೇ ಪರದಾಟ: 1300 ಭಕ್ತರಿಗೆ ತಿಮ್ಮಪ್ಪನ ದರ್ಶನ ಮಾಡಿಸಿದ ಎಸ್.ಆರ್.ವಿಶ್ವನಾಥ್

1-www

15 ಕೋಟಿ ಸದಸ್ಯರನ್ನು ಹೊಂದಿದ ಏಕೈಕ ಪಕ್ಷ ಬಿಜೆಪಿ : ಸಚಿವ ಹಾಲಪ್ಪ ಆಚಾರ್

congress

ಗೃಹಸಚಿವರ ತವರಿನಲ್ಲಿ ಪಟ್ಟಣ ಪಂಚಾಯತಿ ಕಾಂಗ್ರೆಸ್ ಪಾಲು!

ದೀಪಾವಳಿ; ನವೆಂಬರ್ 30ರವರೆಗೆ ಕೋವಿಡ್ 19 ನಿರ್ಬಂಧ ವಿಸ್ತರಿಸಿದ ಕೇಂದ್ರ ಸರ್ಕಾರ

ದೀಪಾವಳಿ; ನವೆಂಬರ್ 30ರವರೆಗೆ ಕೋವಿಡ್ 19 ನಿರ್ಬಂಧ ವಿಸ್ತರಿಸಿದ ಕೇಂದ್ರ ಸರ್ಕಾರ

mamata

ಗೋವಾದಲ್ಲಿ ಮಮತಾ ಬ್ಯಾನರ್ಜಿ ಚಿತ್ರಗಳಿದ್ದ ಬ್ಯಾನರ್ ಗಳ ವಿರೂಪ : ಟಿಎಂಸಿ ಕಿಡಿ

tiger swimming

2 ನಿಮಿಷದಲ್ಲಿ ಅರ್ಧ ಕಿ.ಮೀ. ಈಜಿದ ಹುಲಿರಾಯ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಬೆಳ್ಳೆ -ಸ್ವತ್ಛ ಬೆಳ್ಳೆ ಅಭಿಯಾನ

ಬೆಳ್ಳೆ: ಸ್ವಚ್ಛ ಗ್ರಾಮದತ್ತ ವಿದ್ಯಾರ್ಥಿಗಳ ಚಿತ್ತ

ಕಾಪು‌ ಬೀಚ್ ನಲ್ಲಿ ಕನ್ನಡಕ್ಕಾಗಿ ನಾವು ಗೀತ ಗಾಯನ ಕಾರ್ಯಕ್ರಮ ಸಂಪನ್ನ

ಕಾಪು ಕಡಲ ಕಿನಾರೆಯಲ್ಲಿ ‘ಕನ್ನಡಕ್ಕಾಗಿ ನಾವು ಗೀತ ಗಾಯನ’ ಕಾರ್ಯಕ್ರಮ ಸಂಪನ್ನ

ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆದೇಶ

ಕನ್ನಡ ರಾಜ್ಯೋತ್ಸವ ವಿಶೇಷ – ಕನ್ನಡ ಗೀತ ಗಾಯನ

ಪಡುಬಿದ್ರಿ: ಜಾನುವಾರು ಅಕ್ರಮ ಸಾಗಾಟ; ಇಬ್ಬರ ಬಂಧನ

ಪಡುಬಿದ್ರಿ: ಜಾನುವಾರು ಅಕ್ರಮ ಸಾಗಾಟ; ಇಬ್ಬರ ಬಂಧನ

ಅಡುಗೆ ಅನಿಲ ಕೊರತೆಯಿಂದ ಮಕ್ಕಳಿಗೆ “ಹಸಿಯೂಟ’!

ಅಡುಗೆ ಅನಿಲ ಕೊರತೆಯಿಂದ ಮಕ್ಕಳಿಗೆ “ಹಸಿಯೂಟ’!

MUST WATCH

udayavani youtube

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡಿಗೆ ಹೆಜ್ಜೆ ಹಾಕಿದ ಸಿಎಂ ಬೊಮ್ಮಾಯಿ

udayavani youtube

ಕಾಪು ಕಡಲ ಕಿನಾರೆಯಲ್ಲಿ ‘ಕನ್ನಡಕ್ಕಾಗಿ ನಾವು ಗೀತ ಗಾಯನ’ ಕಾರ್ಯಕ್ರಮ ಸಂಪನ್ನ

udayavani youtube

ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೊಳಗಿದ ಬಾರಿಸು ಕನ್ನಡ ಡಿಂಡಿಮವ

udayavani youtube

ಕಬಿನಿ ಹಿನ್ನೀರಿನಲ್ಲಿ ಈಜಿದ ಹುಲಿ

udayavani youtube

ಎತ್ತಿನಭುಜ ಪ್ರವಾಸಿ ತಾಣಕ್ಕೆ ಭೇಟಿ ನೀಡುವ ಪ್ರವಾಸಿಗರೇ ಎಚ್ಚರ

ಹೊಸ ಸೇರ್ಪಡೆ

sagara news

ಧರ್ಮ ಕಾರ್ಯಗಳಿಂದ ರಕ್ಷಣೆ: ಡಾ|ಭಾನುಪ್ರಕಾಶ್‌ ಶರ್ಮ

1-rrr

ಕೈಗಾರಿಕೆಗಳಿಗೆ ಭೂಮಿ ನೀಡಲು ಶೀಘ್ರದಲ್ಲೇ ಹೊಸ ನೀತಿ: ಸಚಿವ ನಿರಾಣಿ

ballari news

ಅಭಿವೃದ್ಧಿಗೆ ರೆರಾ ಕಾಯ್ದೆ ಪಾಲನೆ ಕಡ್ಡಾಯ

ನಮ್ಮ ಕೃಷಿ-ಜೀವನ ಶೈಲಿ ಹದ ತಪ್ಪಿದೆ; ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ

ನಮ್ಮ ಕೃಷಿ-ಜೀವನ ಶೈಲಿ ಹದ ತಪ್ಪಿದೆ; ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ

davanagere news

ವಾಯುಮಾಲಿನ್ಯ ತಡೆಗಟ್ಟಲು ಶ್ರಮಿಸಿ: ಕವಿತಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.