Udayavni Special

ರಾಜ್ಯದಲ್ಲಿ ಬರ; ರೆಸಾರ್ಟ್‌ನಲ್ಲಿ ಸಿಎಂ: ಕೋಟ ಟೀಕೆ

Team Udayavani, May 17, 2019, 12:17 PM IST

kota

ಕುಂದಾಪುರ: ಚುನಾವಣೆ ಗುಂಗಿನಿಂದ ಹೊರಬಾರದೇ ಮುಖ್ಯ ಮಂತ್ರಿಗಳು ರೆಸಾರ್ಟ್‌ ವಾಸ್ತವ್ಯ ಮಾಡುತ್ತಿದ್ದು ರಾಜ್ಯದ 126ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದ್ದರೂ ನಿರ್ವಹಣೆ ಮಾಡುವಲ್ಲಿ ಸರಕಾರ ಪೂರ್ಣ ವಿಫ‌ಲವಾಗಿದೆ. ರಾಜ್ಯದ ಬರ ಸ್ಥಿತಿ ಕುರಿತು ಎಲ್ಲ ಬಿಜೆಪಿ ಶಾಸಕ ರಿಂದ ರಾಜ್ಯಾಧ್ಯಕ್ಷ ಬಿ.ಎಸ್‌. ಯುಡಿಯೂರಪ್ಪ ಅವರು ವರದಿ ಕೇಳಿದ್ದು ಬರದ ತೀವ್ರತೆಯನ್ನು ಸರಕಾರಕ್ಕೆ ಮಂಡಿಸಲಾಗುವುದು ಎಂದು ವಿಧಾನಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದರು. ಅವರು ಇಲ್ಲಿನ ಬಿಜೆಪಿ ಕಚೇರಿಗೆ ಗುರುವಾರ ಭೇಟಿ ನೀಡಿದ ಸಂದರ್ಭ ಮಾಧ್ಯಮದ ಜತೆ ಮಾತನಾಡಿದರು.

ಗೋಳು ಕೇಳುವವರಿಲ್ಲ
ಇಡೀ ಸರಕಾರ ಹಣಬಲದ ಮೇಲೆ ಚುನಾವಣೆ ಎದುರಿಸಿದೆ. ರಾಜ್ಯದಲ್ಲಿರುವ ಬಡವರ ಗೋಳು ಕೇಳುವವರಿಲ್ಲ ಎಂದಾಗಿದೆ. ಚಿತ್ರದುರ್ಗ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಜಾನುವಾರುಗಳು ಸಾಮೂಹಿಕವಾಗಿ ಸಾಯುತ್ತಿವೆ. ಜನ ಗುಳೆ ಹೋಗುವ ಸ್ಥಿತಿಯಲ್ಲಿದ್ದಾರೆ. ಮೇವು ಬ್ಯಾಂಕ್‌ಗಳನ್ನಾಗಲೀ, ಗೋ ಶಾಲೆಗಳನ್ನಾಗಲೀ ತೆರೆಯಬೇಕೆಂಬ ಉದ್ದೇಶ ಯಾವುದೇ ಜಿಲ್ಲಾಡಳಿತಕ್ಕೆ ಇದ್ದಂತಿಲ್ಲ. ಮುಖ್ಯ ಮಂತ್ರಿಗಳು ಹೋಮ, ಹವನ, ಪಂಚಕರ್ಮ ಚಿಕಿತ್ಸೆ ಯಲ್ಲಿಯೇ ತಲ್ಲೀನ ರಾಗಿ ಕಾಲ ಕಳೆಯುತ್ತಿದ್ದು ಪ್ರಭಾವಿ ಸಚಿವ ಎಚ್‌.ಡಿ. ರೇವಣ್ಣ ಅವರು ಬೊಗಸೆ ತುಂಬಾ ನಿಂಬೆ ಹಣ್ಣು ಹಿಡಿದು ಮೆರವಣಿಗೆ ಮಾಡುತ್ತಿದ್ದಾರೆ.

ಕಂದಾಯ ಸಚಿವರು ಬರ ಎದುರಿಸುವ ಸ್ಥಿತಿಯಲ್ಲಿ ಇಲ್ಲ. ಇಡೀ ಆಡಳಿತ ಯಂತ್ರ ಕುಸಿದಿದೆ. ಯಾವ ಅಧಿಕಾರಿಯೂ ಮುಖ್ಯಮಂತ್ರಿ ಹಾಗೂ ಸಚಿವರ ಮಾತು ಕೇಳುತ್ತಿಲ್ಲ. ಆಯ ಕಟ್ಟಿನ ಜಾಗದಲ್ಲಿ ಕುಳಿತ ಉನ್ನತ ಅಧಿಕಾರಿಗಳು ಮಂತ್ರಿಗಳನ್ನು ತೃಪ್ತಿಪಡಿಸುವ ಭರದಲ್ಲಿದ್ದಾರೆ ಎಂದರು.

ಆಡಳಿತ ಪಕ್ಷದ ಪಾಲಿಗೆ ಗುತ್ತಿಗೆದಾರರೇ ಎಟಿಎಂಗಳಾಗಿದ್ದು ಕುಡಿಯುವ ನೀರಿಲ್ಲದೇ ಜನ ರೋಸಿ ಹೋಗು ತ್ತಿದ್ದು ಸರಕಾರ ಬರದ ಸವಾಲು ಸ್ವೀಕರಿಸುವ ಸ್ಥಿತಿಯಲ್ಲಿ ಇಲ್ಲ. ಇಡೀ ರಾಜ್ಯವೇ ಬರಗಾಲಕ್ಕೆ ತುತ್ತಾಗಿ ಹಾಹಾಕಾರ ಎಬ್ಬಿಸಿದ ಮೇಲೆ ಮುಖ್ಯಮಂತ್ರಿಗಳು ಅಧಿಕಾರಿಗಳ ಸಭೆ ನಡೆಸಲು ಮುಂದಾಗುತ್ತಾರೆ. ದಿಕ್ಕೆಟ್ಟ ಆಡಳಿತದಲ್ಲಿ ಉಂಡವನೇ ಜಾಣ ಎಂಬ ಸ್ಥಿತಿಗೆ ರಾಜ್ಯದ ಆಡಳಿತ ತಲುಪಿದೆ. ವಿಫ‌ಲವಾದ ಸರಕಾರವೊಂದು ಇನ್ನೂ ಗೌರವ ಉಳಿಸಿಕೊಳ್ಳ
ಬೇಕಾದರೆ ಸಮರೋಪಾದಿಯಲ್ಲಿ ಬರ ಎದುರಿಸ ಬೇಕು. ಇಲ್ಲವಾದರೆ ಕುರ್ಚಿ ಬಿಟ್ಟು ಕೆಳಗಿಳಿಯಬೇಕು ಎಂದು ಹೇಳಿದ್ದಾರೆ.

ವಾರಾಹಿ ಹಣ ಮಾಡುವ ಯೋಜನೆ
ವಾರಾಹಿ ಯೋಜನೆ ಗುತ್ತಿಗೆದಾರರ ಸಂತೃಪ್ತಿಗೆ ಸೀಮಿತ ವಾಗಿದೆ. ಇಡೀ ಉಡುಪಿ ಜಿಲ್ಲೆಗೆ ನೀರು ಕೊಡಬಹುದಾದ ಯೋಜನೆಯೊಂದು ಕೇವಲ ಹಣ ಮಾಡುವ ಯೋಜನೆಯಾಗಿದೆ. ಟೆಂಡರ್‌ಗಿಂತ ಹೆಚ್ಚು ಹಣವನ್ನು ಸಂಪುಟ ಸಭೆ ಮೂಲಕ ಅನುಮೋದನೆ ಮಾಡುವ ಸರಕಾರ ಕಾಮಗಾರಿ ಅನುಷ್ಠಾನಕ್ಕೆ ಒತ್ತು ನೀಡಿಲ್ಲ. ಕೊಟ್ಟ ಹಣ ಸದುದ್ದೇಶಕ್ಕೆ ಬಳಕೆಯಾಗಿಲ್ಲ ಎಂದು ಹೇಳಿದರು.

ಟಾಪ್ ನ್ಯೂಸ್

ವಾಣಿಜ್ಯ ಟ್ರಕ್‌ ಚಾಲಕರಿಗೂ ಚಾಲನಾ ಅವಧಿ ನಿಗದಿಯಾಗಲಿ: ಗಡ್ಕರಿ

ವಾಣಿಜ್ಯ ಟ್ರಕ್‌ ಚಾಲಕರಿಗೂ ಚಾಲನಾ ಅವಧಿ ನಿಗದಿಯಾಗಲಿ: ಗಡ್ಕರಿ

ವನಿತಾ ಏಕದಿನ: ಆಸ್ಟ್ರೇಲಿಯಕ್ಕೆ ಸತತ 25ನೇ ಗೆಲುವು

ವನಿತಾ ಏಕದಿನ: ಆಸ್ಟ್ರೇಲಿಯಕ್ಕೆ ಸತತ 25ನೇ ಗೆಲುವು

ಕೃಷಿ ಉತ್ಪನ್ನಗಳ ರಫ್ತಿಗೆ ಆದ್ಯತೆ ಅಗತ್ಯ: ಸಚಿವೆ ಶೋಭಾ ಕರಂದ್ಲಾಜೆ

ಕೃಷಿ ಉತ್ಪನ್ನಗಳ ರಫ್ತಿಗೆ ಆದ್ಯತೆ ಅಗತ್ಯ: ಸಚಿವೆ ಶೋಭಾ ಕರಂದ್ಲಾಜೆ

xfdrete

ವಾಯುಪಡೆ ಮುಖ್ಯಸ್ಥರಾಗಿ ಏರ್‌ ಮಾರ್ಷಲ್‌ ವಿ.ಆರ್‌. ಚೌಧರಿ ನೇಮಕ

ಇ-ಟಿಕೆಟ್‌ ಬುಕಿಂಗ್‌ ಲೋಪ ಪತ್ತೆ ಹಚ್ಚಿದ ಬಾಲಕ!

ಇ-ಟಿಕೆಟ್‌ ಬುಕಿಂಗ್‌ ಲೋಪ ಪತ್ತೆ ಹಚ್ಚಿದ ಬಾಲಕ!

cfgbdstre

ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ಭಟ್ಕಳದ ಮನೋಜ ನಾಯ್ಕ ಇನ್ನಿಲ್ಲ

ಗ್ಯಾಂಬ್ಲಿಂಗ್‌: ಪೊಲೀಸ್‌ ಕಾಯ್ದೆಗೆ ತಿದ್ದುಪಡಿಗೆ ಕ್ರಮ: ಗೃಹ ಸಚಿವ

ಗ್ಯಾಂಬ್ಲಿಂಗ್‌: ಪೊಲೀಸ್‌ ಕಾಯ್ದೆಗೆ ತಿದ್ದುಪಡಿಗೆ ಕ್ರಮ: ಗೃಹ ಸಚಿವ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಪು ಪಡು ಬೀಚ್‌ನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಕಾಪು ಪಡು ಬೀಚ್‌ನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಬಾಲ್ಯ ವಿವಾಹ: ಉಡುಪಿ ರಾಜ್ಯಮಟ್ಟದಲ್ಲಿ ಶೂನ್ಯ ಪ್ರಕರಣ ಹೊಂದಿರುವ ಏಕೈಕ ಜಿಲ್ಲೆ  

ಬಾಲ್ಯ ವಿವಾಹ: ಉಡುಪಿ ರಾಜ್ಯಮಟ್ಟದಲ್ಲಿ ಶೂನ್ಯ ಪ್ರಕರಣ ಹೊಂದಿರುವ ಏಕೈಕ ಜಿಲ್ಲೆ  

Untitled-1

ಪ್ರವಾಸಿಗರಿಗೆ ಮಲ್ಪೆ  ಬೀಚ್‌ ಮುಕ್ತ : ವಾಟರ್‌ ಸ್ಪೋರ್ಟ್ಸ್ ಆರಂಭ

ಪ್ರಮೋದ್‌ ಮಧ್ವರಾಜ್‌ ವಿರುದ್ಧ ಅರ್ಜಿ: ದೂರುದಾರರಿಗೆ ದಂಡ   

ಪ್ರಮೋದ್‌ ಮಧ್ವರಾಜ್‌ ವಿರುದ್ಧ ಅರ್ಜಿ: ದೂರುದಾರರಿಗೆ ದಂಡ   

Untitled-1

ಕೊಠಡಿ, ಶಿಕ್ಷಕರು ದೊರೆತರೆ ಶತಮಾನ ಸಂಭ್ರಮ ಇಮ್ಮಡಿ

MUST WATCH

udayavani youtube

ಸೀತಾಫಲದ ಸಿಹಿ ಹಂಚುತ್ತಿವೆ ಚಿತ್ತಾಪುರದ ಗುಡ್ಡಗಳು

udayavani youtube

ವೀಳ್ಯದೆಲೆಯಿಂದ ಸುಂದರ ಹಾರ ತಯಾರಿಸಿ – ಈ ವಿಧಾನ ಅನುಸರಿಸಿ

udayavani youtube

ಬೆಂಗಳೂರಿನ ವಸತಿ ಸಮುಚ್ಚಯದಲ್ಲಿ ಬೆಂಕಿ ಅವಘಡ : ಕಣ್ಣೆದುರೇ ಮಹಿಳೆ ಸಜೀವ ದಹನ

udayavani youtube

ಮೈಮೇಲೆ ಕೊಚ್ಚೆ ಸುರಿದುಕೊಂಡು ಸಫಾಯಿ ಕರ್ಮಚಾರಿಗಳ ಪ್ರತಿಭಟನೆ

udayavani youtube

ವಿಧಾನಸಭೆ​ ಕಲಾಪ ನೇರ ಪ್ರಸಾರ : 21-09-2021| Afternoon Session

ಹೊಸ ಸೇರ್ಪಡೆ

ವಾಣಿಜ್ಯ ಟ್ರಕ್‌ ಚಾಲಕರಿಗೂ ಚಾಲನಾ ಅವಧಿ ನಿಗದಿಯಾಗಲಿ: ಗಡ್ಕರಿ

ವಾಣಿಜ್ಯ ಟ್ರಕ್‌ ಚಾಲಕರಿಗೂ ಚಾಲನಾ ಅವಧಿ ನಿಗದಿಯಾಗಲಿ: ಗಡ್ಕರಿ

ವನಿತಾ ಏಕದಿನ: ಆಸ್ಟ್ರೇಲಿಯಕ್ಕೆ ಸತತ 25ನೇ ಗೆಲುವು

ವನಿತಾ ಏಕದಿನ: ಆಸ್ಟ್ರೇಲಿಯಕ್ಕೆ ಸತತ 25ನೇ ಗೆಲುವು

ಕೃಷಿ ಉತ್ಪನ್ನಗಳ ರಫ್ತಿಗೆ ಆದ್ಯತೆ ಅಗತ್ಯ: ಸಚಿವೆ ಶೋಭಾ ಕರಂದ್ಲಾಜೆ

ಕೃಷಿ ಉತ್ಪನ್ನಗಳ ರಫ್ತಿಗೆ ಆದ್ಯತೆ ಅಗತ್ಯ: ಸಚಿವೆ ಶೋಭಾ ಕರಂದ್ಲಾಜೆ

xfdrete

ವಾಯುಪಡೆ ಮುಖ್ಯಸ್ಥರಾಗಿ ಏರ್‌ ಮಾರ್ಷಲ್‌ ವಿ.ಆರ್‌. ಚೌಧರಿ ನೇಮಕ

Untitled-1

ಏಕದಿನ ಬ್ಯಾಟಿಂಗ್‌ ಶ್ರೇಯಾಂಕ: ಮಿಥಾಲಿ ವಿಶ್ವ ನಂ.1

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.