Udayavni Special

1ರಿಂದ 12ನೇ ತರಗತಿ ವರೆಗೆ ಒಂದೇ ಕ್ಯಾಂಪಸ್‌ನಲ್ಲಿ ಕಲಿಕೆ


Team Udayavani, May 28, 2018, 6:00 AM IST

2705kdpp3.jpg

ಕುಂದಾಪುರ: ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಸರಕಾರ ಈ ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಎನ್ನುವ ಹೊಸ ವಿಧಾನ ಅನುಷ್ಠಾನ ಮಾಡಿದ್ದು, ಉಡುಪಿ ಜಿಲ್ಲೆಯಲ್ಲಿ 6 ಕೇಂದ್ರಗಳನ್ನು ಪಬ್ಲಿಕ್‌ ಸ್ಕೂಲ್‌ ಆಗಿ ಆಯ್ಕೆ ಮಾಡಿದೆ. ಅದರಲ್ಲಿ ಕೋಟೇಶ್ವರ ಸರಕಾರಿ ಪ.ಪೂ. ಕಾಲೇಜು ವಿಶೇಷವಾಗಿ ಗುರುತಿಸಿಕೊಂಡಿದೆ.

ವಿಶೇಷ ಯಾಕೆ ?
ಉಡುಪಿ ಜಿಲ್ಲೆಯ 6 ಪಬ್ಲಿಕ್‌ ಸ್ಕೂಲ್‌ಗ‌ಳಾದ ಕೋಟೇಶ್ವರ ಸರಕಾರಿ ಪ.ಪೂ. ಕಾಲೇಜು, ಪಡುಬಿದ್ರಿ ಸರಕಾರಿ ಪ.ಪೂ. ಕಾಲೇಜು, ಕೊಕ್ಕರ್ಣೆ ಸರಕಾರಿ ಪ.ಪೂ. ಕಾಲೇಜು, ವಂಡ್ಸೆಯ ನೆಂಪು ಸರಕಾರಿ ಪ.ಪೂ. ಕಾಲೇಜು, ಮುನಿಯಾಲು ಸರಕಾರಿ ಪ.ಪೂ. ಕಾಲೇಜುಗಳ ಪೈಕಿ ಬಾಕಿ ಉಳಿದ 5 ಕೇಂದ್ರಗಳಲ್ಲಿ 2 ಶಾಲೆ (ಪ್ರಾಥಮಿಕ-ಪ್ರೌಢ ಹಾಗೂ ಪ.ಪೂ. ಕಾಲೇಜು ಪ್ರತ್ಯೇಕ ಆವರಣ), 1 ಕ್ಯಾಂಪಸ್‌ ಆಗಿದ್ದರೆ, ಕೋಟೇಶ್ವರದಲ್ಲಿ ಮಾತ್ರ ಒಂದು ಶಾಲೆ, ಒಂದು ಕ್ಯಾಂಪಸ್‌ ಆಗಿದ್ದು, ಪ್ರಾಥಮಿಕ, ಪ್ರೌಢ ಹಾಗೂ ಪಿಯುಸಿ ಎಲ್ಲವೂ ಒಂದೇ ಆವರಣದೊಳಗೆ ಇರಲಿದೆ.

ಉದ್ದೇಶವೇನು?
ಈ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನ ಮುಖ್ಯ ಉದ್ದೇಶ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಮತ್ತು ಗ್ರಾಮೀಣ ಭಾಗದಲ್ಲೂ ಉನ್ನತ ಮಟ್ಟದ ಶಿಕ್ಷಣ ಸರಕಾರಿ ಶಾಲೆಗಳಲ್ಲಿ ಸಿಗುವಂತಾಗಬೇಕು ಎನ್ನುವುದು ಇದರ ಧ್ಯೇಯ. ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಲು ಗುಣಮಟ್ಟ ಸುಧಾರಣೆಗೆ ಅದಕ್ಕೆ ಬೇಕಾದ ಅಗತ್ಯ ಸೌಕರ್ಯ, ಸೌಲಭ್ಯಗಳನ್ನು ನೀಡಲಾಗುತ್ತಿದೆ. ಸದ್ಯದ ಮಟ್ಟಿಗೆ ಸರಕಾರದಿಂದ   5 ಲಕ್ಷ ರೂ. ವರೆಗೆ ಅನುದಾನ ಸಿಗಲಿದೆ.

ಪ್ರಾಂಶುಪಾಲರೇ ಮುಖ್ಯಸ್ಥರು
1ರಿಂದ 12ನೇ ತರಗತಿವರೆಗಿನ ಇಡೀ ಕ್ಯಾಂಪಸ್‌ಗೆ ಆಯಾಯ ಪ.ಪೂ. ಕಾಲೇಜಿನ ಪಾಂಶುಪಾಲರೇ ಮುಖ್ಯಸ್ಥರಾಗಲಿದ್ದಾರೆ. ಶಿಕ್ಷಕರ ವೇತನ, ಇನ್ನಿತರ ಎಲ್ಲ ತೀರ್ಮಾನಗಳ ಜವಾಬ್ದಾರಿ ಅವರದ್ದೇ ಆಗಿರಲಿದೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗೂ ಹೊಣೆಗಾರಿಕೆ ಇದ್ದರೂ, ಹೆಚ್ಚಿನೆಲ್ಲ ಅಧಿಕಾರ ಪ್ರಾಂಶುಪಾಲರದ್ದೇ ಆಗಿರಲಿದೆ. ಇದರೊಂದಿಗೆ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಹೊಂದಾಣಿಕೆ ಮಾಡಿ, ಅಲ್ಲಿನ ಮಕ್ಕಳಿಗೆ ವಾಹನ ವ್ಯವಸ್ಥೆ ಮಾಡಿ ಶಿಕ್ಷಕರನ್ನು ಇಲ್ಲಿಗೆ ನಿಯೋಜಿಸುವ ಯೋಜನೆಯು ಇಲಾಖೆಯ ಮುಂದಿದೆ.

ಪ್ರಯೋಜನಗಳೇನು?
-  1 ರಿಂದ 12ನೇ ತರಗತಿವರೆಗೆ ಒಂದೇ ಆವರಣ
-  ಪ್ರೌಢ, ಪಿಯುಗೆ ಪ್ರತ್ಯೇಕ ದಾಖಲಾತಿ ಬೇಡ 
-  1 ರಿಂದ 5, 6 ರಿಂದ 8 ಹಾಗೂ 9 ರಿಂದ 12 ನೇ ತರಗತಿಗಳಾಗಿ ವಿಂಗಡಣೆ
-  ಪ್ರಾಥಮಿಕದಲ್ಲಿ ಶಿಕ್ಷಕರ ಕೊರತೆಯಾದರೆ ಪ್ರೌಢ ಶಾಲಾ ಶಿಕ್ಷಕರಿಂದ ಪಾಠ 
-  ಇದರೊಂದಿಗೆ ಎರಡಂಕಿ ವಿದ್ಯಾರ್ಥಿಗಳಿರುವ ಶಾಲೆಗಳೊಂದಿಗೆ ಹೊಂದಾಣಿಕೆ.

ವಲಯದ ಮಾದರಿ ಶಾಲೆ
ಪಬ್ಲಿಕ್‌ ಸ್ಕೂಲ್‌ಗ‌ಳನ್ನು ಆರಂಭಿಸಿರುವ ಮೂಲ ಉದ್ದೇಶವೆಂದರೆ ಶೇ.75ರರಷ್ಟಿರುವ ಫಲಿತಾಂಶವನ್ನು ಶೇ. 80ಕ್ಕೆ ಏರಿಸುವುದು. ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತಹ ಶಿಕ್ಷಣ ವ್ಯವಸ್ಥೆ ಅಳವಡಿಸುವುದು ಗುರಿಯಾಗಿದೆ. ಕುಂದಾಪುರ ವಲಯದ ಮಾದರಿ ಶಾಲೆಯಾಗಿ ಇದನ್ನು ರೂಪಿಸುವ ಗುರಿಯಿದೆೆ.
– ಅಶೋಕ ಕಾಮತ್‌,

ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಪ್ರತ್ಯೇಕ ವಾಹನ ವ್ಯವಸ್ಥೆ
ಪಬ್ಲಿಕ್‌ ಸ್ಕೂಲ್‌ನಿಂದಾಗಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಸುಧಾರಿಸುತ್ತದೆ. ಸರಕಾರದ ನಿಯಮದಂತೆ ತರಗತಿಗೊಬ್ಬ ಶಿಕ್ಷಕರನ್ನು ಕೊಡಲು ಸಾಧ್ಯವಾಗುತ್ತದೆ. ಕಡಿಮೆ ಮಕ್ಕಳಿದ್ದು, ಮುಚ್ಚುವ ಭೀತಿಯಲ್ಲಿರುವ ಶಾಲೆಗಳ ಮಕ್ಕಳನ್ನು ಇಲ್ಲಿಗೆ ಸೇರಿಸಿ, ಅವರಿಗೆ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡುವ ಯೋಜನೆಯು ಇದೆ.
– ಶೇಷಶಯನ ಕಾರಿಂಜ, 
ಉಪನಿರ್ದೇಶಕರು, ಸಾ. ಶಿಕ್ಷಣ ಇಲಾಖೆ ಉಡುಪಿ

– ಪ್ರಶಾಂತ್‌ ಪಾದೆ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ತನ್ನ ಅಂಗಡಿ ಮುಂದೆ ಉಗುಳಿದ ಎಂಬ ಕ್ಷುಲ್ಲಕ ಕಾರಣಕ್ಕೆ ಇರಿದು ವ್ಯಕ್ತಿಯ ಕೊಲೆ

ತನ್ನ ಅಂಗಡಿ ಮುಂದೆ ಉಗುಳಿದ ಎಂಬ ಕ್ಷುಲ್ಲಕ ಕಾರಣಕ್ಕೆ ಇರಿದು ವ್ಯಕ್ತಿಯ ಕೊಲೆ

ದಟ್ಟ ಕಾಡಿನಲ್ಲಿ ತಡರಾತ್ರಿ ಕಾರಿನೊಳಗೆ 6 ತಾಸು ಕಳೆದ ಮೂವರನ್ನು ರಕ್ಷಿಸಿದ ಪೊಲೀಸ್‍ ಅಧಿಕಾರಿ

ತಡರಾತ್ರಿ ದಟ್ಟ ಕಾಡಿನಲ್ಲಿ ಕಾರಿನೊಳಗೆ 6 ತಾಸು ಕಳೆದ ಮೂವರನ್ನು ರಕ್ಷಿಸಿದ ಪೊಲೀಸ್‍ ಅಧಿಕಾರಿ

ಹೊಸ ಶಿಕ್ಷಣ ನೀತಿ ಯಶಸ್ವಿ ಅನುಷ್ಠಾನದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಪಾತ್ರ ಪ್ರಮುಖ

ಹೊಸ ಶಿಕ್ಷಣ ನೀತಿ ಯಶಸ್ವಿ ಅನುಷ್ಠಾನದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಪಾತ್ರ ಪ್ರಮುಖ

ರಸ್ತೆ ದುರಸ್ತಿಗೆ ಆಗ್ರಹಿಸಿ ಪಟ್ಟಣ ಪಂಚಾಯತ್ ಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

ರಸ್ತೆ ದುರಸ್ತಿಗೆ ಆಗ್ರಹಿಸಿ ಪಟ್ಟಣ ಪಂಚಾಯತ್ ಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

ಬಿಲ್ ಪಾವತಿಸಿ ಕೋವಿಡ್ ಸೋಂಕಿತನ ಶವ ಪಡೆಯಲು ಆಸ್ಪತ್ರೆ ತಾಕೀತು! ಸಂಬಂಧಿಕರ ಪ್ರತಿಭಟನೆ

ಬಾಕಿ ಬಿಲ್ ಪಾವತಿಸಿ ಕೋವಿಡ್ ಸೋಂಕಿತನ ಶವ ಪಡೆಯಲು ಆಸ್ಪತ್ರೆ ತಾಕೀತು! ಸಂಬಂಧಿಕರ ಪ್ರತಿಭಟನೆ

ಸೆ.28 ರಂದು ಕರ್ನಾಟಕ ಬಂದ್ ವಿಚಾರ: ಪರಿಸ್ಥಿತಿ ನೋಡಿ ಬಂದ್ ಗ್ಗೆ ನಿರ್ಧಾರ : ಶಾಂತಕುಮಾರ್

ಕರ್ನಾಟಕ ಬಂದ್ ಗೆ ರೈತ ಸಂಘಗಳ ನಡುವೆ ಮೂಡದ ಒಮ್ಮತ

News-tdy-01

ಅಂಪೈರ್ ವಿರುದ್ಧ ಮತ್ತೆ ಗರಂ ಆದ ಕ್ಯಾಪ್ಟನ್ ಕೂಲ್ ಧೋನಿ : ಆಗಿದ್ದೇನು ಗೊತ್ತಾ ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಿವೃತ್ತರನ್ನು ಸರಕಾರಿ ವಾಹನದಲ್ಲೇ ಮನೆಗೆ ಬಿಟ್ಟು ಶುಭ ವಿದಾಯ

ನಿವೃತ್ತರನ್ನು ಸರಕಾರಿ ವಾಹನದಲ್ಲೇ ಮನೆಗೆ ಬಿಟ್ಟು ಶುಭ ವಿದಾಯ

1982: ಸಹಾಯವೇ ಎಲ್ಲವೂ ಆಗಿದ್ದ ಆ ಕಾಲ…

1982: ಸಹಾಯವೇ ಎಲ್ಲವೂ ಆಗಿದ್ದ ಆ ಕಾಲ…

ಮೂರು ತಿಂಗಳಿಂದ ಆ್ಯಂಬುಲೆನ್ಸ್‌ ಸೇವೆ ಇಲ್ಲ

ಮೂರು ತಿಂಗಳಿಂದ ಆ್ಯಂಬುಲೆನ್ಸ್‌ ಸೇವೆ ಇಲ್ಲ

KUDನಿವೃತ್ತ ಬಿಸಿಎಂ ಅಧಿಕಾರಿಯಿಂದ ಭ್ರಷ್ಟಾಚಾರ: ತನಿಖೆಗೆ ನಿರ್ಣಯ

ನಿವೃತ್ತ ಬಿಸಿಎಂ ಅಧಿಕಾರಿಯಿಂದ ಭ್ರಷ್ಟಾಚಾರ: ತನಿಖೆಗೆ ನಿರ್ಣಯ

ಮಳೆ ಹಾನಿ – ಪ್ರಾಥಮಿಕ ಅಂದಾಜು; ಉಡುಪಿ ಜಿಲ್ಲೆಯಲ್ಲಿ 290 ಕೋ.ರೂ. ನಷ್ಟ

ಮಳೆ ಹಾನಿ – ಪ್ರಾಥಮಿಕ ಅಂದಾಜು; ಉಡುಪಿ ಜಿಲ್ಲೆಯಲ್ಲಿ 290 ಕೋ.ರೂ. ನಷ್ಟ

MUST WATCH

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ

udayavani youtube

District Excise Department seized Millions worth of Marijuana | Udayavani

udayavani youtube

Hospet : Tungabhadra Dam Gates Are Opened | TB Dam | Udayavani

udayavani youtube

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

udayavani youtube

Manipal: Multi-storey building in danger | inspection by DC Jagadeeshಹೊಸ ಸೇರ್ಪಡೆ

ಸಿಎಂ ಸ್ಥಾನದಲ್ಲಿರಲು ಅನಂತ್‌ ಕಾರಣ

ಸಿಎಂ ಸ್ಥಾನದಲ್ಲಿರಲು ಅನಂತ್‌ ಕಾರಣ

ರೌಡಿ ಫೆಲೋ ಜೊತೆ ಪ್ರೇಮ್‌

ರೌಡಿ ಫೆಲೋ ಜೊತೆ ಪ್ರೇಮ್‌

ತನ್ನ ಅಂಗಡಿ ಮುಂದೆ ಉಗುಳಿದ ಎಂಬ ಕ್ಷುಲ್ಲಕ ಕಾರಣಕ್ಕೆ ಇರಿದು ವ್ಯಕ್ತಿಯ ಕೊಲೆ

ತನ್ನ ಅಂಗಡಿ ಮುಂದೆ ಉಗುಳಿದ ಎಂಬ ಕ್ಷುಲ್ಲಕ ಕಾರಣಕ್ಕೆ ಇರಿದು ವ್ಯಕ್ತಿಯ ಕೊಲೆ

ಸೆನ್ಸಾರ್‌ ಮುಂದೆ ಹೊಸಬರ ದಂಡು

ಸೆನ್ಸಾರ್‌ ಮುಂದೆ ಹೊಸಬರ ದಂಡು

ದಟ್ಟ ಕಾಡಿನಲ್ಲಿ ತಡರಾತ್ರಿ ಕಾರಿನೊಳಗೆ 6 ತಾಸು ಕಳೆದ ಮೂವರನ್ನು ರಕ್ಷಿಸಿದ ಪೊಲೀಸ್‍ ಅಧಿಕಾರಿ

ತಡರಾತ್ರಿ ದಟ್ಟ ಕಾಡಿನಲ್ಲಿ ಕಾರಿನೊಳಗೆ 6 ತಾಸು ಕಳೆದ ಮೂವರನ್ನು ರಕ್ಷಿಸಿದ ಪೊಲೀಸ್‍ ಅಧಿಕಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.