ಅಮೆರಿಕ ನ್ಯೂಜೆರ್ಸಿಯಲ್ಲಿ ಕೃಷ್ಣನ ವಿಗ್ರಹ ಪ್ರತಿಷ್ಠೆ

Team Udayavani, Jun 10, 2017, 10:06 AM IST

New-Jersy-10-6.jpg

ಕಾಪು: ಅಮೆರಿಕ ನ್ಯೂಜೆರ್ಸಿಯ ಎಡಿಸನ್‌ ಮಹಾನಗರದಲ್ಲಿರುವ ಉಡುಪಿ ಶ್ರೀ ಪುತ್ತಿಗೆ ಮಠದ ಶಾಖಾ ಮಠ ಶ್ರೀ ಕೃಷ್ಣ ವೃಂದಾವನದಲ್ಲಿ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಸಂಕಲ್ಪದಂತೆ ನೂತನ ಗರ್ಭಗುಡಿ ಲೋಕಾರ್ಪಣೆ ಸಹಿತ ಕಡೆಗೋಲು ಶ್ರೀ ಕೃಷ್ಣ ದೇವರ ವಿಗ್ರಹ ಪ್ರತಿಷ್ಠಾ ಕಾರ್ಯಗಳು ಜೂ. 8ರಂದು ನಡೆದವು. ಉಡುಪಿ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಕಿರಿಯ ಯತಿಗಳಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮತ್ತು ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಂದ ಉಡುಪಿಯಲ್ಲಿ ಪೂಜೆಗೊಂಡು ಅಮೆರಿಕದ ನ್ಯೂಜೆರ್ಸಿಗೆ ತರಲಾದ ಕಡೆಗೋಲು ಶ್ರೀಕೃಷ್ಣನ ವಿಗ್ರಹ ಪ್ರತಿಷ್ಠಾಪನೆ ಮತ್ತು ಶ್ರೀ ಮುಖ್ಯಪ್ರಾಣ ದೇವರು ಹಾಗೂ ಶ್ರೀ ರಾಘವೇಂದ್ರ ಸ್ವಾಮೀಜಿ ಮೃತ್ತಿಕಾ ವೃಂದಾವನ ಪ್ರತಿಷ್ಠಾಪಿಸಲಾಯಿತು.

ಬೇಲೂರು – ಹಳೆಬೀಡು ಶಿಲೆಯ ಅದ್ಭುತ ಕೆತ್ತನೆಯ ಮಾದರಿ ಹೊಂದಿರುವ ದಾರುಮಯ ಗರ್ಭಗುಡಿಯಲ್ಲಿ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಮಾರ್ಗದರ್ಶನದೊಂದಿಗೆ ತಂತ್ರಸಾರ ಆಗಮ ರೀತಿಯಲ್ಲಿ 1,008 ಕಲಶಾಭಿಷೇಕದೊಂದಿಗೆ ಪ್ರತಿಷ್ಠಾಪನ ಕಾರ್ಯ ನೆರವೇರಿತು. ಅಮೆರಿಕದಲ್ಲಿ ನೆಲೆಸಿರುವ ಭಾರತೀಯರೂ ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದು, ಮಧ್ಯಾಹ್ನದ ಮಹಾಪೂಜೆ, ಬಳಿಕ ಮಹಾ ಅನ್ನಸಂತರ್ಪಣೆ ನಡೆಯಿತು.

ಉಡುಪಿಯಿಂದ ಪೂಜಾ ಸಾಮಗ್ರಿ
1,008 ಕಳಶ ಸಹಿತ ಪೂಜೆಗೆ ಸಂಬಂಧಿಸಿದ ವಿವಿಧ ಪರಿಕರಗಳನ್ನು ಉಡುಪಿಯಿಂದ ಅಮೆರಿಕಕ್ಕೆ ಕೊಂಡೊಯ್ಯಲಾಗಿದೆ. ಪುತ್ತಿಗೆ ಮಠಕ್ಕೆ ಸಂಬಂಧಿಸಿದ 5 ಶಾಖಾ ಮಠಗಳು ಅಮೆರಿಕದಲ್ಲಿದ್ದು ಅಲ್ಲಿಂದಲೂ ವಿವಿಧ ವಸ್ತುಗಳನ್ನು ಇಲ್ಲಿಗೆ ತರಲಾಗಿದೆ. ಯೋಗೇಂದ್ರ ಭಟ್‌ ಉಳಿ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಅಮೆರಿಕದಲ್ಲಿರುವ ಪುತ್ತಿಗೆ ವಿದ್ಯಾಪೀಠದ ವಿದ್ಯಾರ್ಥಿಗಳು ಕೂಡ ಸಹಕರಿಸಿದರು. 

ಕ್ರೈಸ್ತ ದೇವಾಲಯ-ಕೃಷ್ಣ ದೇವಾಲಯ 
ಕ್ರೈಸ್ತ ಧರ್ಮೀಯರೇ ನೆಲೆಸಿರುವ ಅಮೆರಿಕದಲ್ಲಿ ಹಿಂದೂ ದೇವಾಲಯಗಳ ಸಂಖ್ಯೆ ಕಡಿಮೆಯಿದ್ದು, ಇಂತಹ ಸಂದರ್ಭ ಪುತ್ತಿಗೆ ಶ್ರೀ ಅಲ್ಲಿನ ಕ್ರೈಸ್ತ ದೇವಾಲಯವೊಂದನ್ನು ಖರೀದಿಸಿ ಶ್ರೀ ಕೃಷ್ಣನ ದೇವಾಲಯವನ್ನಾಗಿ ಪರಿವರ್ತಿಸಿದ್ದಾರೆ. ಇದರೊಂದಿಗೆ ಕ್ರೈಸ್ತ ದೇವಾಲಯವೊಂದು ಶ್ರೀಕೃಷ್ಣನ ದೇವಾಲಯವಾಗಿ ಪರಿವರ್ತನೆಯಾಗಿರುವುದು ವಿಶ್ವದಲ್ಲೇ ಮೊದಲು ಎಂಬಂತಾಗಿದೆ. ಸುಮಾರು 4.50 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ನಿರ್ಮಾಣವಾಗಿರುವ ಕೃಷ್ಣ ದೇವಾಲಯದ ಒಳಗೆ 1,000 ಜನ ಕುಳಿತುಕೊಳ್ಳಲು ಅವಕಾಶವಿದೆ.

40 ಅಡಿ ಎತ್ತರದ ಗರ್ಭಗುಡಿ
ಸುಮಾರು 40 ಅಡಿ ಎತ್ತರದ ಗರ್ಭಗುಡಿಯನ್ನು ಸಂಪೂರ್ಣ ಮರದಿಂದಲೇ ನಿರ್ಮಿಸ ಲಾಗಿದೆ. ಗರ್ಭಗುಡಿಯ ಒಳಗೆ ಮತ್ತು ಸುತ್ತಲೂ ಬರ್ಮಾ ತೇಗದ ಮರದಲ್ಲಿ ಬೇಲೂರು – ಹಳೆಬೀಡಿನ ಶಿಲ್ಪಕಲೆ ಮಾದರಿಯಲ್ಲಿ ಶ್ರೀ ಕೃಷ್ಣನ ಅವತಾರ ಲೀಲೆ ಕೆತ್ತಲಾಗಿದೆ. ಮೂಡಬಿದಿರೆಯ ದಾರುಶಿಲ್ಪಿ ಹರೀಶ್‌ ಆಚಾರ್ಯ ನೇತೃತ್ವದಲ್ಲಿ ಕೆತ್ತನೆ ಕೆಲಸ ಮಾಡಿ ಹಡಗಿನ ಮೂಲಕ ಅಮೆರಿಕಕ್ಕೆ ಸಾಗಿಸಲಾಗಿದೆ. ಹರೀಶ್‌ ಆಚಾರ್ಯ ಅವರ ಸಹಾಯಕರು ಅಲ್ಲಿ ಸುಮಾರು ಒಂದು ತಿಂಗಳು ಇದ್ದು ಅದರ ಜೋಡಣೆಯನ್ನು ನಿರ್ವಹಿಸಿದ್ದಾರೆ. ಗರ್ಭಗುಡಿಯ ಮಧ್ಯದಲ್ಲಿರುವ ತಾಮ್ರದ ಹೊದಿಕೆ ಆಕರ್ಷಕವಾಗಿದ್ದು, ಉಡುಪಿಯ ಬ್ರಹ್ಮ ರಥವನ್ನು ಹೋಲುತ್ತಿದೆ. ಕಾರ್ಕಳದ ಕಪ್ಪು ಶಿಲೆಯಿಂದ ಕೃಷ್ಣನ ವಿಗ್ರಹ ಪ್ರತಿಷ್ಠಾಪನೆಗೆ ಪೀಠ ತಯಾರಿಸಲಾಗಿದೆ.

ಟಾಪ್ ನ್ಯೂಸ್

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

12-

Gangolli: ರಿಕ್ಷಾ-ಕಾರು ಢಿಕ್ಕಿ

8-shirva

Shirva: ವಾಕಿಂಗ್‌ ವೇಳೆ ಕುಸಿದು ಬಿದ್ದು ಸಾವು

5-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇವಸ್ಥಾನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.