ಕುಂದಾಪುರ: ಉಪಯೋಗ ಶೂನ್ಯವಾದ ರಂಗಮಂದಿರ


Team Udayavani, Dec 28, 2018, 5:49 PM IST

2612kdlm10ph.jpg

ಕುಂದಾಪುರ: ಶಾಸ್ತ್ರಿ ಪಾರ್ಕ್‌ ಸಮೀಪ ಕುಂದಾಪುರಕ್ಕೆ ಭಂಡಾರ್‌ಕಾರ್ಸ್‌ ಕ್ರೀಡಾಂಗಣ, ನೆಹರೂ ಮೈದಾನ, ಗಾಂಧಿ ಮೈದಾನ ಎಂದು ವಿವಿಧ ಚಟುವಟಿಕೆಗಳಿಗೆ ಯೋಗ್ಯವಾದ ಮೂರು ಮೈದಾನಗಳಿವೆ. ಇಲ್ಲಿ  ಕಲಾ-ಕ್ರೀಡಾ ಕಾರ್ಯಕ್ರಮಗಳ ನಡೆದಿದ್ದಕ್ಕೆ ಲೆಕ್ಕವಿಲ್ಲ. ಇವುಗಳ ಪೈಕಿ ನೆಹರೂ ಮೈದಾನದ ರಂಗಮಂದಿರ ಈಗ ಇದ್ದೂ ಇಲ್ಲದಂತಾಗಿದೆ.  

ಬಯಲು ನುಂಗಿದ ಪೈಪು
ನೆಹರೂ ಮೈದಾನದ ಬಯಲಿನಲ್ಲಿ ಒಂದು ಸುಂದರ ರಂಗ ಮಂದಿರವನ್ನು ಪುರಸಭೆ ಸುವರ್ಣ ಮಹೋತ್ಸವ ನೆನಪಿಗೆ ಕಟ್ಟಿಸಿದೆ. ಈ ಮೈದಾನದಲ್ಲಿ  ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ ಇಲ್ಲಿ ಯುಜಿಡಿ ಕಾಮಗಾರಿಗಾಗಿ ತಂದು ಹಾಕಿದ್ದ ಭೀಕರ ಗಾತ್ರದ ಪೈಪುಗಳಿಂದಾಗಿ ಮೈದಾನ ಪಾಳು ಬೀಳಲಾರಂಭಿಸಿತು. ಮೈದಾನದ ಸುತ್ತ ಮಳೆಗಾಲದ ಕಳೆ ಬೆಳೆಯತೊಡಗಿತು. ಕಾಮಗಾರಿಯ ಸಾಮಾಗ್ರಿ ಸಂಗ್ರಹಣೆಯ ಘನಲಾರಿಗಳು ಮೈದಾನದೆಲ್ಲೆಡೆ ಎಗ್ಗಿಲ್ಲದೆ ಸಂಚರಿಸಿದ ಪರಿಣಾಮ ಹೊಂಡಗುಂಡಿಗಳು ಬಿದ್ದವು.
 
ಮೈದಾನದಲ್ಲಿರುವ ರಂಗಮಂದಿರ ಉಪಯೋಗಶೂನ್ಯವಾಗಿದೆ. ಮುಚ್ಚಿದ‌ ಕಬ್ಬಿಣದ ಗೇಟು ತುಕ್ಕು ಹಿಡಿಯತೊಡಗಿದೆ. ಅದೆಷ್ಟೋ ಸಮಯದಿಂದ ತೆರೆಯದ ಕಾರಣದಿಂದ ಇನ್ನು ತೆರೆಯುವ ಪ್ರಯತ್ನ ಮಾಡಿದರೆ ಕೈಯಲ್ಲೇ ಮಣ್ಣ ಲೇಪನದ ಕಬ್ಬಿಣದ ತುಂಡುಗಳು ಬರಬಹುದೇನೋ ಎಂಬ ಅನುಮಾನ ಮೂಡಿಸುವಂತಿದೆ. ಸಾಂಸ್ಕೃತಿಕ ಚಟುವಟಿಕೆಗೆ ಇಂಬು ನೀಡಬೇಕಿದ್ದ ಈ ರಂಗಮಂದಿರದ ಈಗ ದಿಕ್ಕುದೆಸೆಯಿಲ್ಲದಂತಾಗಿದೆ.
 
ಬೇರೆ ಮೈದಾನಕ್ಕೆ ಶಿಫ್ಟ್ 
ಮೈದಾನದ ಅವ್ಯವಸ್ಥೆಯಿಂದಾಗಿ 30ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಯಕ್ಷಗಾನವೇ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಂಘಟಕರು ಈಗ ಅನಿವಾರ್ಯವಾಗಿ ಬೇರೆ ಮೈದಾನಗಳಿಗೆ ವಲಸೆ ಹೋಗತೊಡಗಿದ್ದಾರೆ.
  
ಸರಕಾರಿ ಕಾರ್ಯಕ್ರಮಗಳು ಕೂಡ ಭಂಡಾರ್‌ಕಾರ್ಸ್‌ ಕಾಲೇಜಿನ ಕ್ರೀಡಾಂಗಣದಲ್ಲಿಯೇ ನಡೆಯುತ್ತವೆ. ನೆಹರೂ ಮೈದಾನದಲ್ಲಿ ಸೀಮಿತ ಪ್ರದರ್ಶನಗಳು ಮಾತ್ರ ನಡೆಯುತ್ತಿವೆ. ಅದರ ಪಕ್ಕ ಹಾದು ಹೋದ ಸರ್ವಿಸ್‌ ರಸ್ತೆಯೇ ಈಗ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾದ ಕಾರಣ ಕಾರ್ಯಕ್ರಮ ಮಾಡುವುದು, ಕಾರ್ಯಕ್ರಮಕ್ಕಾಗಿ ಸಣ್ಣಪುಟ್ಟ ಸಂತೆ ವ್ಯಾಪಾರ ನಡೆಸುವವರು ಅಂಗಡಿ ಹಾಕುವುದು ಕಷ್ಟವಾಗಿದೆ. ಜೂನಿಯರ್‌ ಕಾಲೇಜು ಮೈದಾನ ಸೇರಿದಂತೆ ಬೇರೆ ಕಡೆ ಕಾರ್ಯಕ್ರಮ ನಡೆಸುವ ಅನಿವಾರ್ಯ ಸ್ಥಿತಿ ಬಂದಿದೆ ಎನ್ನುತ್ತಾರೆ ಸಂಘಟಕರು. 

ವಲಸೆ ಕಾರ್ಮಿಕರ ಬೀಡು
ರಂಗಮಂದಿರ ವಲಸೆ ಕಾರ್ಮಿಕರ ಅಡ್ಡೆಯಾಗಿದೆ. ಕುಡುಕರ ವಿಶ್ರಾಂತಿ ತಾಣವಾಗಿದೆ. ಬೀಡಾಡಿಗಳ ತಾಣವಾಗಿದೆ. ಹಳೆಬಟ್ಟೆ, ಬಾಟಲಿಗಳನ್ನು ತಂದು ಹಾಕುವವರಿಗೆ ಅನುಕೂಲವಾಗಿದೆ. ನೆಹರೂ ಮೈದಾನ ತಾಲೂಕು ಆಡಳಿತ ವ್ಯಾಪ್ತಿಗೆ ಬರುತ್ತದೆ, ಗಾಂಧಿ ಮೈದಾನ ಸಹಾಯಕ ಕಮಿಷನರ್‌ ಅವರ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಪುರಸಭೆ ಇಲ್ಲಿ ಮೂಕಪ್ರೇಕ್ಷಕನಾಗಿದೆ. 

ಜಿಲ್ಲಾಧಿಕಾರಿಗಳಿಗೆ ಪತ್ರ
ರಂಗಮಂದಿರವನ್ನು ಪರಿಶೀಲಿಸಿ ಅಗತ್ಯಕ್ರಮ ಹಾಗೂ ನಿರ್ವಹಣೆಗೆ ಬೇಕಾದ ವ್ಯವಸ್ಥೆ ಕುರಿತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು. 
– ತಿಪ್ಪೆಸ್ವಾಮಿ,
ತಹಶೀಲ್ದಾರ್‌, ಕುಂದಾಪುರ

ರಂಗಮಂದಿರ ಸರಿಪಡಿಸಲಿ
ರಂಗಮಂದಿರ ಉಪಯೋಗಕ್ಕೆ ಇಲ್ಲದಂತಾಗಿದೆ. ಆಡಳಿತ ವ್ಯವಸ್ಥೆಯವರು ಆದಷ್ಟು ಶೀಘ್ರ ಇದನ್ನು ಜನರಿಗೆ ದೊರೆಯುವಂತೆ ಮಾಡಲಿ.  
– ಸಂತೋಷ್‌ ಸುವರ್ಣ
ಸಂಗಮ್‌ ನಿವಾಸಿ

– ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.