“ಏಕ್‌ ಮಿನಿಟ್‌ ಕಾ’ ಪೊಲೀಸ್‌ ಆದ ಕುಂದಾಪುರ ಎಸಿ ಪುತ್ರ

Team Udayavani, Jan 26, 2020, 9:29 PM IST

ಕುಂದಾಪುರ: ಇಲ್ಲಿನ ಗಾಂಧಿ ಮೈದಾನದಲ್ಲಿ ರವಿವಾರ ನಡೆದ ಗಣರಾಜ್ಯೋತ್ಸವ ಆಚರಣೆ ವೇಳೆ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ರಾಜು ಕೆ. ಅವರ ಪುತ್ರ 8ರ ಹರೆಯದ ಶ್ರೀ ಹರ್ಷ ಕುಂದಾಪುರ ಎಎಸ್‌ಪಿ ಹರಿರಾಂ ಶಂಕರ್‌ ಅವರ ಪೊಲೀಸ್‌ ಕ್ಯಾಪ್‌ ತೊಟ್ಟು, ಕೈಯಲ್ಲಿ ಲಾಠಿ (ದಂಡ) ಹಿಡಿದು ಛೋಟಾ ಪೊಲೀಸ್‌ ಆಗಿ ಸಂಭ್ರಮಿಸಿದರು. 

ತನ್ನ ತಂದೆಯೊಂದಿಗೆ ಬಂದಿದ್ದ ಶ್ರೀ ಹರ್ಷ ಗಣರಾಜ್ಯೋತ್ಸವ ಪರೇಡ್‌ ಮುಗಿದ ಬಳಿಕ ಅಲ್ಲಿಯೇ ಇದ್ದ ಎಎಸ್ಪಿ ಹರಿರಾಂ ಶಂಕರ್‌ ಅವರನ್ನು ಕಂಡು ಕೈಕುಲುಕಿ ಮಾತನಾಡಿದ್ದು, ಟೋಪಿ ಧರಿಸುವ ಇಂಗಿತ ವ್ಯಕ್ತಪಡಿಸಿದ್ದ.

ಇದಕ್ಕೆ ಪೂರಕವಾಗಿ ಸ್ಪಂದಿಸಿದ ಎಎಸ್ಪಿ ಹರಿರಾಂ ಶಂಕರ್‌ ಅವರು ತನ್ನ ಪೊಲೀಸ್‌ ಕ್ಯಾಪ್‌ ಹಾಗೂ ಲಾಠಿ (ಪೊಲೀಸ್‌ ಸ್ಟಿಕ್‌) ನೀಡಿ ಆತನ ಜತೆ ಫೋಟೋ ತೆಗೆಸಿಕೊಂಡರು.ಈ ಬಗ್ಗೆ ಶ್ರೀ ಹರ್ಷನೊಂದಿಗೆ ಮಾತನಾಡಿದಾಗ ನಾನು ಕೂಡ ಚೆನ್ನಾಗಿ ಓದಿ ತಂದೆಯಂತೆ ದೊಡ್ಡ ಅಧಿಕಾರಿಯಾಗಬೇಕು ಎನ್ನುವ ಮನದಾಸೆಯನ್ನು ವ್ಯಕ್ತಪಡಿಸಿದ್ದಾನೆ .

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ