Udayavni Special

ನಿರ್ವಹಣೆಯಿಲ್ಲದೆ ಸೊರಗಿದ ಕುಂಜೂರು ರೈಲ್ವೇ ಮೇಲ್ಸೇತುವೆ


Team Udayavani, Jul 14, 2018, 6:00 AM IST

1307kpe1.gif

ಕಾಪು: ರಾ.ಹೆ. 66ರ ಉಚ್ಚಿಲ-ಪಣಿಯೂರು ಸಹಿತ ಹಲವು ಊರುಗಳಿಗೆ ಸಂಪರ್ಕ ಕಲ್ಪಿಸುವ ಕುಂಜೂರು ರೈಲ್ವೇ ಮೇಲು ಸೇತುವೆಯಲ್ಲಿ ಭಾರೀ ಗಾತ್ರದ ಹೊಂಡಗಳು ಬಿದ್ದಿದ್ದು,ಸಂಚಾರಕ್ಕೆ ಅಡ್ಡಿಯಾಗಿದೆ.  

ರಸ್ತೆಯಲ್ಲಿ ಹೊಂಡ, ಇಕ್ಕೆಲಗಳಲ್ಲಿ ಪೊದೆ!
ಬೆಳಪು – ಉಚ್ಚಿಲ – ಎಲ್ಲೂರು ಗ್ರಾ. ಪಂ. ವ್ಯಾಪ್ತಿಯಲ್ಲಿ ಈ ಮೇಲ್ಸೇತುವೆ ಬರುತ್ತದೆ. ರಸ್ತೆಯಲ್ಲಿ ಹೊಂಡಗಳಿದ್ದರೆ ಇಕ್ಕೆಲಗಳಲ್ಲಿ ಪೊದೆಗಳು ಹುಲುಸಾಗಿ ಬೆಳೆದಿವೆ. ಇದರ ನಿರ್ವಹಣೆ ನಡೆಸದೇ ಹಲವು ಸಮಯವೇ ಆಗಿದೆ. 
 
ನಿತ್ಯ ಸಂಚಾರಕ್ಕೆ ದಾರಿ 
ಉಚ್ಚಿಲ – ಪಣಿಯೂರು, ಎಲ್ಲೂರು – ಮುದರಂಗಡಿ, ಬೆಳಪು – ಮಲ್ಲಾರು, ಇರಂದಾಡಿ – ಶಿರ್ವ, ಕುಂಜೂರು -ಅದಮಾರು, ಮುದರಂಗಡಿ – ಕಾಪು – ಉಡುಪಿ ಹೀಗೆ ಹಲವು ಊರುಗಳಿಗೆ ತೆರಳುವ ಜನರಿಗೆ ಕುಂಜೂರು ಮೇಲ್ಸೇತುವೆಯೇ ಮುಖ್ಯ ಆಧಾರವಾಗಿದೆ. ಇದರೊಂದಿಗೆ ಸೇತುವೆ ದಾಟಿದ ಕೂಡಲೇ ಸಿಗುವ ಎಡ ತಿರುವು ಬೆಳಪು (ಪಡುಬಿದ್ರಿ) ರೈಲ್ವೇ ಸ್ಟೇಷನ್‌ ಮತ್ತು ಬಲ ತಿರುವು ಕುಂಜೂರು ದೇವಸ್ಥಾನಕ್ಕೆ ಹೋಗುವವರಿಗೂ ಇದುವೇ ಪ್ರಮುಖ ರಸ್ತೆಯಾಗಿದೆ. ಯುಪಿಸಿಎಲ್‌, ಐಎಸ್‌ಪಿಆರ್‌ಎಲ್‌ಗೆ ತೆರಳುವವರೂ ಈ ರಸ್ತೆಯನ್ನು ಬಳಸುತ್ತಾರೆ.

ಸಿಮೆಂಟ್‌ ಸ್ಲಾéಬ್‌ಗ ಹಾನಿ 
ಹೊಂಡದೊಂದಿಗೆ ಮೇಲ್ಸೇತುವೆಯಲ್ಲಿನ ಕಾಂಕ್ರೀಟ್‌ ಸ್ಲಾéಬ್‌ ಕಿತ್ತಿದ್ದು, ಪುಡಿಯಾಗಿವೆ. ಕಾಂಕ್ರೀಟ್‌ನ ಒಳಗಿನ ಕಬ್ಬಿಣದ ಸರಳುಗಳು ಮೇಲೆದ್ದು ಕಾಣುತ್ತಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಮತ್ತೂಂದೆಡೆ ಸೇತುವೆ ಇಕ್ಕೆಲಗಳಲ್ಲಿ ಬೆಳೆದಿರುವ ಗಿಡಗಳಿಂದ ತಿರುವು ಕಾಣದೇ ಅಪಾಯವಾಗುವ ಸಾಧ್ಯತೆ ಇದೆ.  

ಮಳೆ ಬಂದರೆ ಸಮಸ್ಯೆ ಹೆಚ್ಚು 
ಮಳೆ ಬಂದಾಗ ಮೇಲ್ಸೇತುವೆಯಲ್ಲಿರುವ ಹೊಂಡಗಳು ಗಮನಕ್ಕೆ ಬರುವುದಿಲ್ಲ. ಜತೆಗೆ ರಸ್ತೆಯಲ್ಲಿ ನಡೆದಾಡುವುದೂ ಕಷ್ಟವಾಗಿದೆ. ಸೇತುವೆ ಮೇಲಿನ ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆಗಳಿಲ್ಲದಿರುವುದರಿಂದ ಮೇಲ್ಸೇತುವೆ ಹಾಳಾಗಲು ಕಾರಣವಾಗಿದೆ. 

ದುರಸ್ತಿ, ನಿರ್ವಹಣೆ ನಡೆದಿಲ್ಲ
ಕೊಂಕಣ ರೈಲ್ವೇ ಪ್ರಾರಂಭಗೊಂಡಾಗ ನಿರ್ಮಾಣವಾಗಿದ್ದ ಸೇತುವೆ ಕರಾವಳಿಗೆ ಕೊಂಕಣ ರೈಲ್ವೇ ಕಾಲಿರಿಸಿದ ವರ್ಷವೇ ನಿರ್ಮಾಣವಾಗಿದ್ದ ಕುಂಜೂರು ರೈಲ್ವೇ ಮೇಲ್ಸೇತುವೆಯಲ್ಲಿ ಹೊಂಡ ಬಿದ್ದಾಗ ದುರಸ್ತಿಯಾಗಿದ್ದು ಬಿಟ್ಟರೆ ಬೇರೆ ಯಾವತ್ತೂ ಕೂಡಾ ಇದರ ದುರಸ್ತಿಯಾಗಲೀ, ನಿರ್ವಹಣೆಯಾಗಲೀ ನಡೆದಿಲ್ಲ.2 – 3 ಬಾರಿ ಸ್ಥಳೀಯ ಕುಂಜೂರು ನ್ಪೋರ್ಟ್ಸ್ ಕ್ಲಬ್‌ನ ವತಿಯಿಂದ ಶ್ರಮಾದಾನ ನಡೆಸಿ, ಹೊಂಡ ಬಿದ್ದಲ್ಲಿ ಕಾಂಕ್ರೀಟ್‌ ಹಾಕಲಾಗಿದ್ದು ಭಾರೀ ಮಳೆಯ ಕಾರಣದಿಂದಾಗಿ ಅದೂ ಕೂಡಾ ಕಿತ್ತು ಹೋಗಿದೆ.  
– ಇಕ್ಬಾಲ್‌ ಅಜೀಜ್‌ ಕುಂಜೂರು
ಸ್ಥಳೀಯರು

ಹೊಂಡ ಮುಚ್ಚಲು ಕ್ರಮ
ಉಚ್ಚಿಲ – ಪಣಿಯೂರು ರಸ್ತೆ ಅಗಲೀಕರಣ ಕಾಮಗಾರಿಗಾಗಿ ಈಗಾಗಲೇ ಟೆಂಡರ್‌ ಆಗಿದೆ. ವರ್ಕ್‌ ಆರ್ಡರ್‌ ಆಗುವುದು ಮಾತ್ರಾ ಬಾಕಿಯುಳಿದಿದ್ದು, ಮಳೆಗಾಲ ಮುಗಿದ ನಂತರ ರಸ್ತೆ ಡಾಮರೀಕರಣ ಕಾಮಗಾರಿ ಪ್ರಾರಂಭಿಸಲಾಗುವುದು. ಕುಂಜೂರು ರೈಲ್ವೇ ಮೇಲ್ಸೇತುವೆಯಲ್ಲಿ ಹೊಂಡ ಬಿದ್ದಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಕೂಡಲೇ ಹೊಂಡ ಮುಚ್ಚಿ, ಸೇತುವೆ ಮೇಲಿನ ಪೈಪ್‌ ಬಿಡಿಸಿಕೊಡುವ ವ್ಯವಸ್ಥೆ ಮಾಡಿಕೊಡಲಾಗುವುದು. ಸೇತುವೆ ದಂಡೆಯಲ್ಲಿ ಬೆಳೆದಿರುವ ಮರ ಕಟ್ಟಿಂಗ್‌ ಮಾಡಲು ಕೂಡಾ ವ್ಯವಸ್ಥೆ ಮಾಡಲಾಗುವುದು.
– ಉದಯ್‌ ಕುಮಾರ್‌, ಸಹಾಯಕ ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ

ಟಾಪ್ ನ್ಯೂಸ್

ದೇಶಕ್ಕೆ ಲಸಿಕೆ; ಪಕ್ಷಕ್ಕೆ ಜ್ವರ 

ದೇಶಕ್ಕೆ ಲಸಿಕೆ; ಪಕ್ಷಕ್ಕೆ ಜ್ವರ 

ವಿದೇಶಿ ಮಕ್ಕಳ ದತ್ತು ಸ್ವೀಕಾರ ಇನ್ನು ಸುಲಭ?

ವಿದೇಶಿ ಮಕ್ಕಳ ದತ್ತು ಸ್ವೀಕಾರ ಇನ್ನು ಸುಲಭ?

ಫೋರ್ಡ್‌ ಉತ್ಪಾದನಾ ಘಟಕಗಳು ಎಂಜಿ ತೆಕ್ಕೆಗೆ?

ಫೋರ್ಡ್‌ ಉತ್ಪಾದನಾ ಘಟಕಗಳು ಎಂಜಿ ತೆಕ್ಕೆಗೆ?

ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಅಂತಿಮ

ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಅಂತಿಮ

gfjfytfyjt

ಬೆಳಗಾವಿ:  ಕೊಳವೆ ಬಾವಿಗೆ ಬಿದ್ದಿದ್ದ ಮಗು ಸಾವು

ವಿಶ್ವಸಂಸ್ಥೆಯ ಎಸ್‌ಡಿಜಿ ವಕೀಲರಾಗಿ ನೋಬೆಲ್‌ ಶಾಂತಿ ಪುರಸ್ಕೃತ ಕೈಲಾಶ್‌ ಸತ್ಯಾರ್ಥಿ ನೇಮಕ

ವಿಶ್ವಸಂಸ್ಥೆಯ ಎಸ್‌ಡಿಜಿ ವಕೀಲರಾಗಿ ನೋಬೆಲ್‌ ಶಾಂತಿ ಪುರಸ್ಕೃತ ಕೈಲಾಶ್‌ ಸತ್ಯಾರ್ಥಿ ನೇಮಕ

gfgrr

ತಾಂತ್ರಿಕ ದೋಷ : ರನ್‍ವೇನಲ್ಲೆ ನಿಂತ ಏರ್‌ ಇಂಡಿಯಾ ವಿಮಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಂಪರ್ಕ ರಸ್ತೆಯಿಲ್ಲದೆ ಬಳ‌ಕೆಯಾಗದ ಸೇತುವೆ

ಸಂಪರ್ಕ ರಸ್ತೆಯಿಲ್ಲದೆ ಬಳ‌ಕೆಯಾಗದ ಸೇತುವೆ

ಪಾರಂಪರಿಕ ತಾಣ ಕಾಪು ಲೈಟ್‌ಹೌಸ್‌ಗೆ 120 ವರ್ಷ

ಪಾರಂಪರಿಕ ತಾಣ ಕಾಪು ಲೈಟ್‌ಹೌಸ್‌ಗೆ 120 ವರ್ಷ

ಭತ್ತ ಖರೀದಿ ಕೇಂದ್ರ ತೆರೆಯಲು ಸೂಚನೆ : ಉಡುಪಿಯಲ್ಲಿ ಸಚಿವೆ ಶೋಭಾ ಕರಂದ್ಲಾಜೆ

ಭತ್ತ ಖರೀದಿ ಕೇಂದ್ರ ತೆರೆಯಲು ಸೂಚನೆ : ಉಡುಪಿಯಲ್ಲಿ ಸಚಿವೆ ಶೋಭಾ ಕರಂದ್ಲಾಜೆ

ಹೊಂಡ ಗುಂಡಿಗಳದ್ದೇ ಕಾರುಬಾರು

ಹೊಂಡ ಗುಂಡಿಗಳದ್ದೇ ಕಾರುಬಾರು

Untitled-2

18ರ ಕೆಳಗಿನವರಿಗೆ 3 ಡೋಸ್‌ ಲಸಿಕೆ ನಿರೀಕ್ಷೆ 

MUST WATCH

udayavani youtube

ರೆಡ್ ಸಿಗ್ನಲ್ ಬೀಳುತ್ತಿದ್ದಂತೆ ನಡು ರಸ್ತೆಯಲ್ಲಿ ಡ್ಯಾನ್ಸ್ ಮಾಡಿದ ಮಾಡೆಲ್

udayavani youtube

ಕ್ಯಾಪ್ಟನ್ ಅಭಿಮನ್ಯು ಮೊಮ್ಮಗನ ಜೊತೆಗೆ ಸಿಹಿ ತಿನಿಸಿ ಶುಭ ಹಾರೈಸಿದ ಮೋದದೇವಿ ಒಡೆಯರ್

udayavani youtube

ಕಾಲ ಅಂದ್ರೇನು?

udayavani youtube

ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ

udayavani youtube

ಸರ್ವೇ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ರೈತನ ಏಕಾಂಗಿ ಪ್ರತಿಭಟನೆ

ಹೊಸ ಸೇರ್ಪಡೆ

ದೇಶಕ್ಕೆ ಲಸಿಕೆ; ಪಕ್ಷಕ್ಕೆ ಜ್ವರ 

ದೇಶಕ್ಕೆ ಲಸಿಕೆ; ಪಕ್ಷಕ್ಕೆ ಜ್ವರ 

ವಿದೇಶಿ ಮಕ್ಕಳ ದತ್ತು ಸ್ವೀಕಾರ ಇನ್ನು ಸುಲಭ?

ವಿದೇಶಿ ಮಕ್ಕಳ ದತ್ತು ಸ್ವೀಕಾರ ಇನ್ನು ಸುಲಭ?

ಫೋರ್ಡ್‌ ಉತ್ಪಾದನಾ ಘಟಕಗಳು ಎಂಜಿ ತೆಕ್ಕೆಗೆ?

ಫೋರ್ಡ್‌ ಉತ್ಪಾದನಾ ಘಟಕಗಳು ಎಂಜಿ ತೆಕ್ಕೆಗೆ?

ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಅಂತಿಮ

ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಅಂತಿಮ

xfser4er4

ಪಾಕ್ ಪಿಎಂ ಈತನಿಗೆ ಗುಡ್ ಫ್ರೆಂಡ್|ಸಿಎಂ ಸ್ಥಾನಕ್ಕೆ ಸಿಧು ಆಯ್ಕೆಗೆ ನನ್ನ ವಿರೋಧ ಇದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.