ಕುವೆಂಪು ವಿವಿ ವೆಬ್ಸೈಟ್ ಹ್ಯಾಕ್!
Team Udayavani, May 29, 2018, 6:30 AM IST
ಶಿವಮೊಗ್ಗ: ವೆಬ್ಸೈಟ್ ಹ್ಯಾಕರ್ಗಳ ಕಣ್ಣು ಇದೀಗ ಮಲೆನಾಡಿನ ಪ್ರತಿಷ್ಠಿತ ವಿಶ್ವವಿದ್ಯಾಲಯ ಎಂದೆನಿಸಿಕೊಂಡಿರುವ ಕುವೆಂಪು ವಿವಿ ವೆಬ್ಸೈಟ್ ಮೇಲೆ ಬಿದ್ದಿದೆ. ವಿವಿಯ ವೆಬ್ಸೈಟ್ನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಲ್ಲದೆ,
ಮುಖಪುಟದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಬರೆದಿರುವುದು ಸೋಮವಾರ ಬೆಳಕಿಗೆ ಬಂದಿದೆ.
ವೆಬ್ಸೈಟ್ನ ಮುಖಪುಟದಲ್ಲೇ “ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಬರೆಯಲಾಗಿದೆ. ವಿವಿಯ ಅಧಿಕೃತ ವೆಬ್
ಸೈಟ್ನ್ನು ಭಾನುವಾರ ರಾತ್ರಿ ಹ್ಯಾಕ್ ಮಾಡಿರುವ ಸಾಧ್ಯತೆ ಇದೆ. ಸೋಮವಾರ ಬೆಳಗ್ಗೆ ವೆಬ್ಸೈಟ್ ಬಳಕೆಗೆ ಮುಂದಾದ ವಿದ್ಯಾರ್ಥಿಗಳು, ಸಿಬ್ಬಂದಿಗೆ ಶಾಕ್ ಆಯಿತು. ಪ್ರತಿನಿತ್ಯ ತೆರೆದುಕೊಳ್ಳುತ್ತಿದ್ದ ವೆಬ್ಸೈಟ್ನ ಮುಖಪುಟ ಹ್ಯಾಕ್ ಆಗಿರುವುದು ಗಮನಕ್ಕೆ ಬಂತು. ತಕ್ಷಣ ಕುಲಪತಿ ಗಮನಕ್ಕೆ ತಂದರು. ಮಧ್ಯಾಹ್ನದ ಬಳಿಕ ವಿವಿ ತಾಂತ್ರಿಕ ಸಿಬ್ಬಂದಿ ವೆಬ್ಸೈಟ್ ಸರಿಪಡಿಸಿದ್ದು, ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ. ಈ ಕುರಿತು ವಿವಿ ಕುಲಪತಿ ಪ್ರೊ|
ಜೋಗನ್ ಶಂಕರ್, ವಿವಿ ವೆಬ್ಸೈಟ್ ಹ್ಯಾಕ್ ಆಗಿತ್ತು. ಭಾನುವಾರ ರಾತ್ರಿ ಚೆನ್ನಾಗಿತ್ತು. ಸೋಮವಾರ ಬೆಳಗ್ಗೆ ಹ್ಯಾಕ್
ಆಗಿರುವುದು ಗಮನಕ್ಕೆ ಬಂದಿದೆ. ತಕ್ಷಣ ನಮ್ಮ ತಾಂತ್ರಿಕ ಪರಿಣತರ ತಂಡ ವೆಬ್ಸೈಟ್ನ್ನು ರೀಸ್ಟೋರ್ ಮಾಡಿದ್ದಾರೆ. ಈ ಸಂಬಂಧ ಶಿವಮೊಗ್ಗದ ಸೈಬರ್ ಪೊಲೀಸರಿಗೆ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್ ಜಿದ್ದಾಜಿದ್ದಿ
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ
ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ
ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ
Globant; ಮನೆಯಿಂದಲೇ 30,000 ಮಂದಿ ಕೆಲಸ
MUST WATCH
ಹೊಸ ಸೇರ್ಪಡೆ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?
Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ
B. Y. Raghavendra: “ಕಾಂಗ್ರೆಸ್ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’